ಬೆಂಗಳೂರು: ಫಿಸಿಯೋಥೆರಪಿಸ್ಟ್ಗಳು ಸಂಧೀವಾತ ಸಮಸ್ಯೆಯಿಂದ ಬಳಲುತ್ತಿರುವರಿಗೆ ವಿಶ್ರಾಂತಿ ಮತ್ತು ಚಟುವಟಿಕೆಯ ಚಿಕಿತ್ಸೆ ನೀಡುವ ಮೂಲಕ ಅವರ ಒಟ್ಟಾರೆ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಆರೋಗ್ಯ ಕಾರ್ಯಕರ್ತರು ತಿಳಿಸಿದ್ದಾರೆ.
ಸಂಪ್ರದಾಯಿಕವಾಗಿ ಪಿಸಿಯೋಥೆರಪಿಸ್ಟ್ಗಳು ಸಲಹೆ ನೀಡುವಂತೆ ಸಂಧೀವಾತ ಸಮಸ್ಯೆ ಈಗಾಗಲೇ ಪತ್ತೆಯಾಗಿರುವ ರೋಗಿಗಳು ಸೂಚಿಸಿದ ಆಧಾರದ ಮೇಲೆ ವ್ಯಾಯಾಮದಲ್ಲಿ ತೊಡಗುವುದು ಉತ್ತಮ ಎನ್ನುತ್ತಾರೆ. ಆದಾಗ್ಯೂ ಜೀವನಸೈಲಿ ಬದಲಾವಣೆ ಮತ್ತು ಸ್ವಯಂ ವ್ಯಾಯಾಮ ಚಿಕಿತ್ಸೆ ಮೂಲಕ ಪಿಸಿಯೋಥೆರಪಿಸ್ಟ್ಗಳು ಸಂಧೀವಾತ ತಡೆಯಲು ಸಹಾಯ ಮಾಡುತ್ತಾರೆ. ಈ ಬದಲಾವಣೆಯು ಸಾಮಾನ್ಯವಾಗಿ ಗಾಯ ತಡೆಗಟ್ಟುವಿಕೆ. ಕೀಲು ಊತದಂತಹ ನೋವಿನ ಮುನ್ಸೂಚನೆ ನಿರ್ವಹಣೆ ಸೇರಿದಂತೆ ಹಲವು ಒಳಗೊಂಡಿರುತ್ತದೆ.
ಸಂಪ್ರದಾಯಿಕವಾಗಿ, ಫಿಜಿಯೋಥೆರಪಿಸ್ಟ್ ಮೂಳೆ, ಕೀಲು ಮತ್ತು ಸ್ನಾಯು ಸಮಸ್ಯೆ ರೋಗಿಗಳು ಮಿತಿಯನ್ನು ಹೊಂದಿರುತ್ತಾರೆ. ನರ ಸಮಸ್ಯೆ ಹೊಂದಿರುವಂತಹ ಪಾರ್ಶ್ವವಾಯು ಮತ್ತು ಪಾರ್ಕಿನ್ಸನ್, ಹೃದಯ ಮತ್ತು ಶ್ವಾಸಕೋಶ ಸೇರಿದಂತೆ ಹಲವು ಸಮಸ್ಯೆ ಹೊಂದಿರುವ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಯಲ್ಲಿ ಅವರು ಪ್ರಮುಖ ಪಾತ್ರ ಹೊಂದಿರುತ್ತಾರೆ. ಸರ್ಜರಿಗೆ ಒಳಗಾದ ಪ್ರತಿ ರೋಗಿ ಸೂಚಿಸಿದಂತೆ ಪಿಜಿಯೋಥೆರಪಿಗೆ ಒಳಗಾದವರಲ್ಲಿ ಉತ್ತಮ ಫಲಿತಾಂಶ ಹೊಂದಿದ್ದಾರೆ.
ಪ್ರತಿ ವರ್ಷ ಸೆಪ್ಟೆಂಬರ್ 8ರಂದು ಪಿಜಿಯೋಥೆರಪಿ ದಿನವನ್ನಾಗಿ ಆಚರಿಸಲಾಗುವುದು. ಈ ಮೂಲಕ ರೋಗಿಳ ಆರೈಕೆಯಲ್ಲಿ ತೊಡಗಿರುವ ಚಿಕಿತ್ಸಕರಿಗೆ ಸಮರ್ಪಣೆ ಮಾಡಲಾಗುವುದು. ಈ ವರ್ಷ ಸಂಧೀವಾತ ಮತ್ತು ಎಲ್ಲ ರೀತಿಯ ಊರಿಯುತದ ಸಂಧೀವಾತಗಳಿಗೆ ಗಮನ ನೀಡಲಾಗಿದೆ.
ಅಮೊರ್ ಆಸ್ಪತ್ರೆಯ ಅರ್ಥೋಪೆಡಿಯಕ್ ಮತ್ತು ಅರ್ಥೋಪೆಡಿಯಕ್ ಅನ್ಕೊಲಾಜಿ ವೈದ್ಯ ಡಾ ಕಿಶೋರ್ ಬಿ ರೆಡ್ಡಿ ಪ್ರಕಾರ, ಸಂಧೀವಾತ ಶೇ 15ರಷ್ಟು ಜನರನ್ನು ಬಾಧಿಸುತ್ತಿದೆ. ಜಾಗತಿಕವಾಗಿ ಭಾರತದ ಕೊಡಗೆ ಇದರಲ್ಲಿ ಶೇ 22-39ರಷ್ಟಿದೆ. ಕೀಲುಗಳ ಪರಿಣಾಮ ಹೊಂದಿರುವವರಲ್ಲಿ ಇದು ಸಾಮಾನ್ಯವಾಗಿದೆ. ಪುರುಷರಿಗೆ ಹೋಲಿಕೆ ಮಾಡಿದಾಗ ಮಹಿಳೆಯರ ಸಂಖ್ಯೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿದೆ. ಸಾಮಾನ್ಯವಾಗಿ ಇದು 35 ರಿಂದ 55 ವರ್ಷದಲ್ಲಿ ಆಗುತ್ತದೆ. ಪುರಷರಲ್ಲಿ ಊರಿಯೂತದ ಸಂಧೀವಾತ 50 ವರ್ಷದ ಬಳಿಕ ಸ್ಥೂಲಕಾಯದವರಲ್ಲಿ ಸಾಮಾನ್ಯವಾಗಿದೆ.
ಫಿಜಿಯೋಥೆರಪಿ ಸಂಧೀವಾತದಿಂದ ಕಾಡುವ ನೋವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದು ಚಲನೆ ಸುಧಾರಿಸುತ್ತದೆ. ಜಾಗತಿಕವಾಗಿ ಭಾರತ ಎರಡನೇ ಸ್ಥಾನವನ್ನು ಹೊಂದಿದ್ದು, ರೋಗಿಗಳು ಶಿಫಾರಸು ಮಾಡಿದ ಉಪಚಾರ, ವಿಶೇಷ ವ್ಯಾಯಾಮ ಮತ್ತು ಸ್ವಯಂ ಆರೈಕೆಗೆ ಕೀಲು ರಕ್ಷಣೆ ಪಡೆಯುತ್ತಿದ್ದಾರೆ. ಇದು ಎಲ್ಲಾ ವಯೋಮಾನದವರ ಮೇಲೆ ಪರಿಣಾಮ ಬೀರಬಹುದು. ಊರಿಯೂತ ಸಂದೀವಾತದಲ್ಲಿ ನಿಯಮಿತ ಪಿಜಿಯೋಥೆರಪಿ ಪ್ರಮುಖವಾಗಿದ್ದು, ಇದು ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿದೆ. (ಐಎಎನ್ಎಸ್)
ಇದನ್ನೂ ಓದಿ: ವಿಶ್ವ ಭೌತಿಕ ಚಿಕಿತ್ಸಾ ದಿನ: ಉತ್ತಮ ಆರೋಗ್ಯಕ್ಕೆ ಬೇಕು ಫಿಜಿಯೋಥೆರಪಿ ಉಪಚಾರ