ETV Bharat / sukhibhava

ಡೆಲ್ಟಾ ರೂಪಾಂತರಿ ವಿರುದ್ಧ ಫೈಝರ್ ಲಸಿಕೆ ಕಡಿಮೆ ಪ್ರತಿಕಾಯ ಉತ್ಪಾದಿಸುತ್ತದೆ: ಲ್ಯಾನ್ಸೆಟ್​ ವರದಿ

ಫೈಝರ್ ಲಸಿಕೆಯು ಕೋವಿಡ್ ಮೂಲ ವೈರಸ್ ವಿರುದ್ಧ ಉತ್ಪಾದಿಸಿದಷ್ಟು ಪ್ರತಿಕಾಯಗಳನ್ನು ರೂಪಾಂತರಿ ವಿರುದ್ಧ ಉತ್ಪಾದಿಸುವುದಿಲ್ಲ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.

Pfizer jab produces less antibodies against Delta variant: Lancet
ಕೋವಿಡ್ ರೂಪಾಂತರಿ ವೈರಸ್
author img

By

Published : Jun 5, 2021, 11:33 AM IST

ಫೈಝರ್ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದವರಲ್ಲಿ ಕೋವಿಡ್ ಮೂಲ ವೈರಸ್​ ವಿರುದ್ಧ ಉತ್ಪತಿಯಾಗುವ ಪ್ರತಿಕಾಯಗಳಿಗಿಂತ (Neutralising antibodies) ಐದು ಪಟ್ಟು ಕಡಿಮೆ ಪ್ರತಿಕಾಯ ರೂಪಾಂತರಿ ವೈರಸ್​ ಡೆಲ್ಟಾ ( ಬಿ16172) ಬಂದರೆ ಉಂಟಾಗುತ್ತದೆ ಎಂದು ಫೈಝರ್ ಲಸಿಕೆಗೆ ಸಂಬಂಧಪಟ್ಟ ಸಂಶೋಧನಾ ವರದಿಯೊಂದು ತಿಳಿಸಿದೆ.

ಫೈಝರ್ ಲಸಿಕೆಯ ಒಂದು ಡೋಸ್​ ಪಡೆದ ಬಳಿಕ ಶೇ. 79ರಷ್ಟು ಜನರಲ್ಲಿ ಮೂಲ ವೈರಸ್​ ವಿರುದ್ಧ ಉತ್ತಮವಾದ ಪ್ರತಿಕಾಯಗಳು ಉತ್ಪತಿಯಾಗಿದ್ದವು. ಆದರೆ, ರೂಪಾಂತರಿ ವೈರಸ್​ಗೆ ಹೋಲಿಸಿ ನೋಡಿದಾಗ ಮೂಲ ವೈರಸ್​ ವಿರುದ್ಧ ಉತ್ಪತಿಯಾಗಿದ್ದ ಪ್ರತಿಕಾಯುಗಳಲ್ಲಿ ಅಲ್ಫಾ ( ಬಿ117) ವಿರುದ್ಧ ಶೇ. 50, ಡೆಲ್ಟಾ (ಬಿ16172) ವಿರುದ್ಧ ಶೇ. 32 ಮತ್ತು ಬೀಟಾ (ಬಿ1351) ವಿರುದ್ಧ ಶೇ. 25ರಷ್ಟು ಪ್ರತಿಕಾಯ ಪ್ರಮಾಣ ಕಡಿಮೆಯಾಗಿದೆ ಎಂದು ಲ್ಯಾನ್ಸೆಟ್​ನಲ್ಲಿ ಪ್ರಕಟಗೊಂಡ ವರದಿ ಹೇಳಿದೆ.

ವಯಸ್ಸು ಹೆಚ್ಚಾದಂತೆ ಪ್ರತಿಕಾಯಗಳು ಕಡಿಮೆಯಾಗುತ್ತಾ ಹೋಗುತ್ತವೆ. ಆದರೆ ಇದಕ್ಕೂ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರದಿ ತಿಳಿಸಿದೆ. ರೂಪಾಂತರಿ ವೈರಸ್ ಮೊದಲ ಡೋಸ್​ ಲಸಿಕೆಯ ಪರಿಣಾಮಕತ್ವ ಮತ್ತು ಪ್ರತಿಕಾಯಗಳನ್ನು ಹೇಗೆ ಕಡಿಮೆ ಮಾಡಿದೆ ಎಂಬುವುದರ ಬಗ್ಗೆ ತಿಳಿಸಲು ಪ್ರಯೋಗಾಲಯದ ಈ ವರದಿ ಅಗತ್ಯವಾಗಿದೆ ಎಂದು ಯುಕೆಯ ಫ್ರಾನ್ಸಿಸ್ ಕ್ರಿಕ್ ಇನ್ಸ್​ಟಿಟ್ಯೂಟ್, ನ್ಯಾಷನಲ್ ಇನ್ಸ್​ಟಿಟ್ಯೂಟ್​ ಫಾರ್ ಹೆಲ್ತ್ ರಿಸರ್ಚ್ (ಎನ್ಐಹೆಚ್ಆರ್) ಯುಸಿಎಲ್​ಹೆಚ್​ ಬಯೋಮೆಡಿಕಲ್ ರಿಸರ್ಚ್ ಸೆಂಟರ್ ಸಂಶೋಧಕರು ಹೇಳಿದ್ದಾರೆ.

ರೂಪಾಂತರಿ ವೈರಸ್ ಹರಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಸಾಂಕ್ರಾಮಿಕ ರೋಗದಲ್ಲಿನ ಬದಲಾವಣೆಗಳಿಗೆ ಸ್ಪಂದಿಸುವಂತೆ ನಮ್ಮ ಅಧ್ಯಯನವನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಬದಲಾವಣೆಗೊಳ್ಳುತ್ತಾ ಎದುರಾಗುವ ಅಪಾಯ ಮತ್ತು ಅದರಿಂದ ರಕ್ಷಣೆ ಹೊಂದುವ ಬಗ್ಗೆ ತಕ್ಷಣ ಪುರಾವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಯುಸಿಎಲ್​​ಹೆಚ್​ನ ಸಾಂಕ್ರಾಮಿಕ ರೋಗಗಳ ಸಲಹೆಗಾರ್ತಿ ಎಮ್ಮಾ ವಾಲ್​ ತಿಳಿಸಿದ್ದಾರೆ.

ಪ್ರಮುಖ ವಿಷಯವೆಂದರೆ, ಲಸಿಕೆಯೂ ಹೆಚ್ಚಿನ ಜನರನ್ನು ಆಸ್ಪತ್ರೆಯಿಂದ ಹೊರಗಿಟ್ಟಿದೆ. ಆದ್ದರಿಂದ ನಾವು ಎರಡನೇ ಡೋಸ್​ ಲಸಿಕೆಯನ್ನು ಅತ್ಯಂತ ತುರ್ತಾಗಿ ನೀಡಿ ಹೊಸ ವೈರಸ್​ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಯಾರು ಕಳೆದುಕೊಂಡಿದ್ದಾರೋ ಅವರಲ್ಲಿ ಪ್ರತಿಕಾಯ ಸೃಷ್ಟಿಸುವ ಕೆಲಸ ಮಾಡಬೇಕು ಎಂದು ಎಮ್ಮಾ ಅಭಿಪ್ರಾಯಪಟ್ಟಿದ್ದಾರೆ.

ಫೈಝರ್-ಬಯೋಟೆಕ್ ಲಸಿಕೆಯ ಒಂದು ಡೋಸ್​ ಮಾತ್ರ ಪಡೆದವರಲ್ಲಿ ರೂಪಾಂತರಿ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ ಕಡಿಮೆಯಾಗುತ್ತಿರುವುದು ಕಂಡು ಬಂದ ಹಿನ್ನೆಲೆ ಮೊದಲ ಡೋಸ್ ಮತ್ತು ಎರಡನೇ ಡೋಸ್​ ನಡುವಿನ ಲಸಿಕೆಯ ಅಂತರವನ್ನು ಕಡಿಮೆ ಮಾಡಲು ತಜ್ಞರು ಸಲಹೆ ನೀಡಿದ್ದಾರೆ.

ಪ್ರತಿಕಾಯಗಳ ಕುಸಿತದ ಬಗ್ಗೆ ಮಾಹಿತಿ ಕಲೆಹಾಕಿದ ಸಂಶೋಧನಾ ತಂಡವು, ಮೂರು ತಿಂಗಳ ಅವಧಿಯಲ್ಲಿ ಫೈಝರ್ ಬಯೋಟೆಕ್ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದ ಸುಮಾರು 250 ಆರೋಗ್ಯವಂತ ಜನರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದೆ.

ಸಂಶೋಧಕರು, ಚೀನಾದ ವುಹಾನ್​ನಲ್ಲಿ ಪತ್ತೆಯಾದ ಕೋವಿಡ್ ಮೂಲ ವೈರಸ್, ಮೊದಲನೇ ಅಲೆಯ ಅವಧಿ 2020 ಏಪ್ರಿಲ್​ನಲ್ಲಿ ಯುರೋಪ್​ನಲ್ಲಿ ಪತ್ತೆಯಾದ ರೂಪಾಂತರಿ ವೈರಸ್ ಡಿ614ಜಿ ಮತ್ತು ಎರಡನೇ ಅಲೆಯಲ್ಲಿ ಪತ್ತೆಯಾದ ರೂಪಾಂತರಿ ವೈರಸ್​ಗಳಾದ ಆಲ್ಫಾ, ಬೀಟಾ ಮತ್ತು ಡೆಲ್ಟಾಗಳ ವಿರುದ್ಧ ಹೋರಾಡುವ ಪ್ರತಿಕಾಯಗಳ (neutralising antibodies) ಸಾಮರ್ಥ್ಯವನ್ನು ಪರೀಕ್ಷಿಸಿದ್ದಾರೆ. ಆಕ್ಸ್​ಫರ್ಡ್/ ಆಸ್ಟ್ರಾನೆಕಾ ಲಸಿಕೆ ಪಡೆದವರ ಮೇಲೂ ಈ ಅಧ್ಯಯನ ಮಾಡಲಾಗುತ್ತದೆ.

ಸಂಶೋಧಕರು ತಮ್ಮ ಅಧ್ಯಯನ ವರದಿಯನ್ನು ಜೀನೋಟೈಪ್ ಟು ಫೋನೋಟೈಪ್ ನ್ಯಾಷನಲ್ ವೈರಾಲಜಿ ಕನ್​ಸೋರ್ಟಿಯಂ ( ಜಿ2ಕೆ-ಯುಕೆ) ದಿ ನ್ಯೂ ಅಂಡ್ ಎಮರ್ಜಿಂಗ್ ರೆಸಿಪರೇಟರಿ ವೈರಸ್ ತ್ರೆಟ್ ಅಡ್ವೈಸರಿ ಗ್ರೂಪ್ ( ಎನ್​ಇಆರ್​ವಿಟಿಎಜಿ) ಮತ್ತು ಲಸಿಕೆ ಮತ್ತು ರೋಗನಿರೋಧಕದ ಜಂಟಿ ಸಮಿತಿ ( ಜೆಸಿವಿಐ)ಗಳಿಗೆ ಒಪ್ಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.