ಲಖನೌ( ಉತ್ತರಪ್ರದೇಶ): ಮಗುವು ಸೊಂಟದ ಬಳಿ ಅಥವಾ ತೊಡೆಸಂದು ಅಥವಾ ಕಾಲಿನ ಇತರ ಭಾಗಗಳಾದ ಮಂಡಿ ಅಥವಾ ತೊಡೆಯಲ್ಲಿ ನೋವಿನ ಅನುಭವವನ್ನು ಎದುರಿಸುತ್ತಿದ್ದರೆ, ಈ ನೋವು ಅವರ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದ್ದು, ವಿಶ್ರಾಂತಿ ಬಳಿಕವೂ ಈ ನೋವಿನ ಅನುಭವವನ್ನು ಅವರು ಎದುರಿಸುತ್ತಿದ್ದರೆ ಇದು ಪರ್ತೆಸ್ ರೋಗದ ಲಕ್ಷಣ.
ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ಈ ಪರ್ತೆಸ್ ರೋಗಕ್ಕೆ ಪ್ರಮುಖ ಕಾರಣ ತೊಡೆಯೆಲುಬಿನ ತಲೆಯ ಮೂಳೆ ಅಂದರೆ ಸೊಂಟದ ಬಾಲ್ ಮತ್ತು ಸೊಂಟದ ಸಾಕೆಟ್ ಜಂಟಿ ಕುಸಿಯುವುದು. ಇದಕ್ಕೆ ಚಿಕಿತ್ಸೆ ವಿಳಂಬವಾದರೆ, ಶಸ್ತ್ರ ಚಿಕಿತ್ಸೆ ಅಗತ್ಯ ಇರುತ್ತದೆ ಎಂದು ಮಕ್ಕಳ ಮೂಳೆ ತಜ್ಞರು ತಿಳಿಸಿದ್ದಾರೆ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂಳೆ ಚಿಕಿತ್ಸಾ ವಿಭಾಗ ಆಯೋಜಿಸಿದ್ದ POSUPCON-2023 ಕಾನ್ಫರೆನ್ಸ್ನಲ್ಲಿ ಈ ಕುರಿತು ಗಹನವಾದ ಚರ್ಚೆ ಮಾಡಲಾಗಿದೆ.
ಈ ರೋಗಕ್ಕೆ ಸಂಬಂದಪಟ್ಟಂತೆ ಪ್ರತಿ ತಿಂಗಳು 15 ರಿಂದ 20 ರೋಗಿಗಳನ್ನು ಕಾಣುತ್ತಿರುವುದಾಗಿ ಕೊಲ್ಕತ್ತಾ ಮೆಡಿಕಲ್ ಕಾಲೇಜಿನ ಡಾ ಅಭಿಷೇಕ್ ಸಹ ತಿಳಿಸಿದ್ದಾರೆ. ಮೂರರಿಂದ 11 ವರ್ಷದ ಮಕ್ಕಳು ಆಟವಾಡುವಾಗ ಗಾಯಗೊಂಡು ಇದು ಸಂಭವಿಸಬಹುದು. ಇದರ ಲಕ್ಷಣವನ್ನು ಅನೇಕ ಪೋಷಕರು ನಿರ್ಲಕ್ಷ್ಯಿಸುತ್ತಾರೆ. ಕ್ರಮೇಣವಾಗಿ ತೊಡೆಮೂಳೆಗೆ ರಕ್ತ ಪೂರೈಕೆಯಲ್ಲಿ ಅಡ್ಡಿಯುಂಟಾಗಬಹುದು. ಇದರಿಂದ ಮೂಳೆ ಕೋಶವೂ ಸಾಯುತ್ತದೆ. ನಂತರದಲ್ಲಿ ಈ ಸಮಸ್ಯೆಯೊಂದಿಗೆ ಪೋಷಕರು ನಮ್ಮ ಬಳಿ ಬರುತ್ತಾರೆ. ಆಗ ಶಸ್ತ್ರಚಿಕಿತ್ಸೆ ಒಂದೇ ಅವಕಾಶ ಇರುತ್ತದೆ. 8 ವರ್ಷದ ಮೇಲ್ಪಟ್ಟ ಮಕ್ಕಳಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಿದರೆ ಪರಿಣಾಮಕಾರಿಯಾಗಿ ಇರದು ಎಂದಿದ್ದಾರೆ.
ಏನಿದು ಡಿಸ್ಪ್ಲಾಸಿಯಾ?: ಹುಟ್ಟಿನಿಂದಲೇ ಮಕ್ಕಳಲ್ಲಿ ಕಂಡು ಬರುವ ಮತ್ತೊಂದು ಸೊಂಟದ ಸ್ಥಿತಿಯನ್ನು ಬೆಳವಣಿಗೆಯ ಡಿಸ್ಪ್ಲಾಸಿಯಾ ಆಗಿದ್ದು, 1,000 ಮಕ್ಕಳಲ್ಲಿ ಒಬ್ಬರು ಇದರ ಪರಿಣಾಮಕ್ಕೆ ಒಳಗಾಗುತ್ತಾರೆ. ಈ ಸಂದರ್ಭದಲ್ಲಿ ಮಗುವಿನ ಸೊಂಟವು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಎಂದು ಆರ್ಎಂಎಲ್ಐಎಂಎಸ್ನ ಮಕ್ಕಳ ಮೂಳೆ ರೋಗ ತಜ್ಞ ಡಾ ಪ್ರಭಾತ್ ತಿಳಿಸಿದ್ದಾರೆ
ಈ ಲಕ್ಷಣ ಕಂಡು ಬಂದರೆ ತಕ್ಷಣ ವ್ಯದ್ಯರನ್ನು ಸಂಪರ್ಕಿಸಿ: ಪೋಷಕರು ಮಗುವಿನ ಸೊಂಟವು ಕ್ಲಿಕ್ ಎಂಬ ರೀತಿ ಶಬ್ದವನ್ನು ಕೇಳುತ್ತದೆ ಅಥವಾ ಅನುಭವಿಸುತ್ತದೆ ಎಂದು ಕಂಡುಕೊಳ್ಳುವುದು. ಎರಡು ಕಾಲಿನ ಉದ್ದಗಳು ಸಮನಾಗಿ ಇಲ್ಲದಿರುವುದು. ಒಂದು ಸೊಂಟ ಅಥವಾ ಒಂದು ಕಾಲು ಸಮವಾಗಿ ಚಲಿಸುವುದಿಲ್ಲ ಎಂಬ ಲಕ್ಷಣಗಳು ಕಂಡು ಬಂದರೆ, ಅವರು ತಕ್ಷಣ ಮೂಳೆ ವೈದ್ಯರನ್ನು ಭೇಟಿ ಮಾಡಬೇಕು. ಕಾರಣ ಸಮಸ್ಯೆ ಕಂಡು ಬಂದ ತಕ್ಷಣಕ್ಕೆ ಅಂದರೆ ಆರು ತಿಂಗಳೊಳಗೆ ಬೆಲ್ಟ್ ಸಹಾಯದಿಂದ 18 ತಿಂಗಳ ಕಾಲ ಪ್ಲಾಸ್ಟರ್ ಅನ್ನು ಹಾಕುವ ಮೂಲಕ ಗುಣಪಡಿಸಬಹುದು. ನಂತರದಲ್ಲಿ ಅದಕ್ಕೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ.
ಕಡಿಮೆ ತೂಕದ ಮಕ್ಕಳು ವಿಶೇಷವಾಗಿ ಅವಳಿ ಜವಳಿ ಅಥವಾ ತ್ರಿವಳಿಗಳು, ಐಸಿಯುನಲ್ಲಿ ಚಿಕಿತ್ಸೆಗೆ ಒಳಗಾಗುವ ಮಕ್ಕಳಲ್ಲಿ ಸೆಪ್ಟಿಕ್ ಅರ್ಥರಿಟಿಸ್ ಎಂಬ ಸೊಂಟದ ಸೋಂಕು ಅಭಿವೃದ್ಧಿಯಾಗುತ್ತದೆ. ದೇಹದ ಇಮ್ಯೂನಿಟಿ ವ್ಯವಸ್ಥೆಯಲ್ಲಿನ ದುರ್ಬಲತೆಯಿಂದ ಅವರಲ್ಲಿ ಈ ರೋಗ ಅಭಿವೃದ್ಧಿ ಆಗುತ್ತದೆ ಎಂದು ಡಾ ಅಮರ್ ಅಸ್ಲಮ್ ತಿಳಿಸಿದ್ದಾರೆ.
ಸೆಪ್ಟಿಕ್ ಅರ್ಥರಿಟಿಸ್ಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ, ಮಕ್ಕಳು ಸೊಂಟದ ಚಲನೆ ಕುಂಠಿತವಾಗುತ್ತದೆ. 2 ವರ್ಷದ ಒಳಗಿನ ಮಕ್ಕಳಲ್ಲಿ ಇದು ಸಾಮಾನ್ಯವಾಗಿದೆ ಎಂದರು.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ - ಸಾವಿನ ಅಪಾಯ ಹೆಚ್ಚಿಸಬಹುದು!