ETV Bharat / sukhibhava

ಬೈಪೋಲಾರ್​ ಸಮಸ್ಯೆ ಇದ್ರೆ ಅಕಾಲಿಕವಾಗಿ ಸಾವನ್ನಪ್ಪುವವರ ಸಂಖ್ಯೆ 6ಪಟ್ಟು ಹೆಚ್ಚು; ಅಧ್ಯಯನ

author img

By

Published : Jul 19, 2023, 4:13 PM IST

ಬೈಪೋಲಾರ್​​ ಸಮಸ್ಯೆ ಹೊಂದಿರುವ ಜನರು ಅಕಾಲಿಕ ಸಾವಿನ ಸಂಖ್ಯೆ ಹೆಚ್ಚಾಗಿ ಹೊಂದಿರುತ್ತಾರೆ. ಆದಾಗ್ಯೂ, ದೈಹಿಕ ಅನಾರೋಗ್ಯದಂತಹ ವಿಚಾರಗಳು ಅಸ್ಪಷ್ಟವಾಗಿದೆ

People with bipolar disorder are 6 times more likely to die prematurely

ನವದೆಹಲಿ: ಮಾನಸಿಕ ಗೊಂದಲದಂತಹ ಬೈಪೋಲಾರ್​ ಸಮಸ್ಯೆ ಹೊಂದಿರುವ ಜನರು ಅಪಘಾತ, ಹಿಂಸೆ ಮತ್ತು ಆತ್ಮಹತ್ಯೆಯಂತಹ ಕಾರಣಗಳಿಂದಾಗಿ ಅಕಾಲಿಕವಾಗಿ ಸಾವನ್ನಪ್ಪುವ ಸಂಖ್ಯೆ 6 ಪಟ್ಟು ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ಬಿಎಂಜೆ ಮೆಂಟಲ್​ ಹೆಲ್ತ್​​ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ. ಜೊತೆಗೆ ಹೃದಯ ಅಥವಾ ಶ್ವಾಸಕೋಶ ಅಥವಾ ಕ್ಯಾನ್ಸರ್​​​ನಂತಹ ದೈಹಿಕ ಅನಾರೋಗ್ಯ ಸಮಸ್ಯೆಗಳಿಂದ ಬೈಪೋಲಾರ್​ ಸಮಸ್ಯೆ ಹೊಂದಿರುವವರು ಸಾಯುವ ಸಂಖ್ಯೆ ದುಪ್ಪಟ್ಟಾಗಿದ್ದು, ಇದರಲ್ಲಿ ಆಲ್ಕೋಹಾಲ್​ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಲಾಗಿದೆ. ಪಿನಿಷ್​​ ಜನಸಂಖ್ಯೆ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ.

ಬೈಪೋಲಾರ್​​ ಸಮಸ್ಯೆ ಹೊಂದಿರುವ ಜನರು ಅಕಾಲಿಕ ಸಾವನ್ನು ಹೆಚ್ಚಾಗಿ ಕಾಣುತ್ತಾರೆ. ಆದಾಗ್ಯೂ, ದೈಹಿಕ ಅನಾರೋಗ್ಯದಂತಹ ವಿಚಾರಗಳು ಅಸ್ಪಷ್ಟವಾಗಿದೆ. ಈ ಅಧ್ಯಯನವೂ ಹೆಚ್ಚಿನದನ್ನು ಅರ್ಥ ಮಾಡಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಫಿನ್​ಲ್ಯಾಂಡ್​ ಮತ್ತು ಸ್ವೀಡನ್​ ಹಾಗೂ ಯುಕೆ ಸಂಶೋಧಕರು ತಿಳಿಸಿದ್ದಾರೆ. ಈ ಅಧ್ಯಯನಕ್ಕಾಗಿ ಬೈಪೋಲಾರ್​ ಸಮಸ್ಯೆ ಹೊಂದಿರುವ 47,0187 ಜನರನ್ನು 2014 ರಿಂದ 2018ರ ವರೆಗೆ ಸರಾಸರಿ 38 ವರ್ಷದ ವಯೋಮಾನದ ಜನರನ್ನು ಟ್ರ್ಯಾಕ್​​ ಮಾಡಲಾಗಿದೆ. ಅವರ ದತ್ತಾಂಶವನ್ನು ರಾಷ್ಟ್ರಮಟ್ಟದ ವೈದ್ಯಕೀಯ ಮತ್ತು ಸಾಮಾಜಿಕ ವಿಮಾ ದಾಖಲಾತಿಗಳನ್ನು ಪಡೆಯಲಾಗಿದೆ. ಇದರಲ್ಲಿ ಅರ್ಧದಷ್ಟು ಮಹಿಳೆಯರು (ಶೇ 57ರಷ್ಟು) ಎಂಬುದು ಪತ್ತೆಯಾಗಿದೆ.

ನಿರ್ವಹಣೆ ಅವಧಿಯಲ್ಲೇ ಸಾಮಾನ್ಯ ಆರೋಗ್ಯದ ಜನಸಂಖ್ಯೆ ಸಾವಿನ ಸಂಖ್ಯೆಗೆ ಹೋಲಿಕೆ ಮಾಡಿದರೆ, ಈ ಸಮಸ್ಯೆ ಹೊಂದಿರುವ ಒಟ್ಟಾರೆ 3,300 (ಶೇ 7ರಷ್ಟು) ಮಂದಿ ಸಾವನ್ನಪ್ಪಿದ್ದಾರೆ. ಬಾಹ್ಯ ಕಾರಣಗಳಿಂದ ಸಾವಿನ ಅಪಾಯವು 6 ಪಟ್ಟು ಮತ್ತು ದೈಹಿಕ ಕಾಯಿಲೆಗಳಿಂದ 2 ಪಟ್ಟು ಹೆಚ್ಚಾಗುತ್ತದೆ. ಸಾವನ್ನಪ್ಪಿದವರ ಸರಾಸರಿ ವಯೋಮಿತಿ 50 ವರ್ಷ ಆಗಿದ್ದು, ಮೂರರಲ್ಲಿ ಎರಡು ಸಾವುಗಳಲ್ಲಿ ಪುರುಷರಾಗಿದ್ದಾರೆ. 3,300 ಸಾವಿನದಲ್ಲಿ ಶೇ 61ರಷ್ಟು ಅಂದರೆ 2027 ಮಂದಿ ದೈಹಿಕ ಕಾರಣದಿಂದ ಶೇ 39ರಷ್ಟು ಅಂದರೆ 1273 ಮಂದಿ ಇತರೆ ಕಾರಣದಿಂದ ಸಾವನ್ನಪ್ಪಿದ್ದಾರೆ.

ದೈಹಿಕ ಕಾರಣದ ಸಾವುಗಳಲ್ಲಿ ಆಲ್ಕೋಹಾಲ್​ ಪ್ರಮುಖ ಕಾರಣವಾಗಿದ್ದು, ಇದರಿಂದ 595 ಮಂದಿ ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ ಯಕೃತ್​​ ಸಮಸ್ಯೆ ಹೊಂದಿದವರು ಅರ್ಧದಷ್ಟಿದ್ದಾರೆ. ಉಳಿದ ಮಂದಿ ದೈಹಿಕ ಕಾರಣದಿಂದ ಅಂದರೆ ಹೃದಯ, ಪಾರ್ಶ್ವವಾಯು, ಕ್ಯಾನ್ಸರ್​ ಮತ್ತು ಶ್ವಾಸಕೋಶ ಸಮಸ್ಯೆ, ಮಧುಮೇಹ ಮತ್ತು ಇತರೆ ಕಾರಣದಿಂದ ಸಾವನ್ನಪ್ಪಿದ್ದಾರೆ. ಇತರೆ ಕಾರಣದ ಸಾವಿನಲ್ಲಿ ಆತ್ಮಹತ್ಯೆ ಶೇ 58ರಷ್ಟು ಮಂದಿಯ ಉದ್ದೇಶವಾಗಿದೆ. ಇದರಲ್ಲಿ ಅರ್ಧದಷ್ಟು ಮಂದಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀಡಲಾದ ಔಷಧಗಳ ಓವರ್​​ಡೋಸ್​ ಕೂಡ ಕಾರಣವಾಗಿದೆ.

ಮಾದಕ ವ್ಯಸನಕ್ಕಾಗಿ ತಡೆಗಟ್ಟುವ ಮಧ್ಯಸ್ಥಿಕೆಗಳನ್ನು ಗುರಿಯಾಗಿಸುವುದು ಬಾಹ್ಯ ಕಾರಣಗಳು ಮತ್ತು ದೈಹಿಕ ಕಾರಣಗಳಿಂದ ಮರಣದ ಅಂತರವನ್ನು ಕಡಿಮೆ ಮಾಡುತ್ತದೆ. ಆತ್ಮಹತ್ಯೆ ತಡೆಗಟ್ಟುವಿಕೆ ಒಂದು ಆದ್ಯತೆಯಾಗಿ ಉಳಿದಿದೆ ಮತ್ತು ಮಿತಿ ಮೀರಿದ ಮದ್ಯ ಸೇವನೆ ಮತ್ತು ಇತರ ವಿಷಗಳ ಅಪಾಯದ ಬಗ್ಗೆ ಉತ್ತಮ ಅರಿವು ಅಗತ್ಯವಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಆತ್ಮಹತ್ಯೆ ಪರಿಹಾರವಲ್ಲ: ಆತ್ಮಹತ್ಯೆಯಂತಹ ಆಲೋಚನೆ ಅಥವಾ ಸ್ನೇಹಿತರ ಬಗ್ಗೆ ಕಾಳಜಿ ಅಥವಾ ಭಾವನಾತ್ಮಕ ಬೆಂಬಲಕ್ಕೆ ಅದನ್ನು ಕೇಳಲು ಯಾರೋ ಒಬ್ಬರು ಕೇಳುಗರಿದ್ದಾರೆ ಎಂಬುದನ್ನು ಮರೆಯಬೇಡಿ. ಇಂತಹ ಸಮಯದಲ್ಲಿ ಸ್ನೇಹ ಫೌಂಡೇಷನ್​- 04424640050 (available 24x7)ಗೆ ಕರೆ ಮಾಡಿ. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10ರ ವರೆಗೆ ಕರೆ ಮಾಡಬಹುದಾಗಿದೆ.

ಇದನ್ನೂ ಓದಿ: ಪಾರ್ಕಿನ್ಸನ್​ ಕಾಯಿಲೆ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿ ಇದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.