ನವದೆಹಲಿ: ಕೋವಿಡ್ 19 ಸಾಂಕ್ರಾಮಿಕತೆ ಅನೇಕ ರೀತಿಯ ಗಂಭೀರ ಪರಿಣಾಮದ ಕುರಿತು ಈಗಾಗಲೇ ಅನೇಕ ವರದಿಗಳು ತಿಳಿಸಿವೆ. ಇದೀಗ ಹೊಸ ಅಧ್ಯಯನವೊಂದು ಈ ಕೋವಿಡ್ 19 ಒತ್ತಡ ಹೇಗೆ ಮಹಿಳೆಯರ ಪ್ಲೆಸೆಂಟಾ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ತಿಳಿಸಿದೆ.
ಗರ್ಭಧಾರಣೆ ಸಮಯದಲ್ಲಿ ಹೊಟ್ಟೆಯಲ್ಲಿನ ಮಗುವಿಗೆ ಪೋಷಕಾಂಶ ಮತ್ತು ರಕ್ಷಣೆಯನ್ನು ಒದಗಿಸುವುದು ಈ ಪ್ಲೆಸೆಂಟಾ ಆಗಿದೆ. ಈ ಪ್ಲೆಸೆಂಟಾದ ರಚನೆ, ವಿನ್ಯಾಸ ಮತ್ತಿತರ ಗುಣಮಟ್ಟದ ಮೇಲೆ ಕೋವಿಡ್ 19 ಒತ್ತಡ ಪರಿಣಾಮ ಬೀರಿದೆ ಎಂದು ತಿಳಿಸಿದೆ. ಗರ್ಭಿಣಿ ಮಹಿಳೆಯ ಮಾನಸಿಕ ಆರೋಗ್ಯ ಮತ್ತು ಪ್ಲೆಸೆಂಟಾ ನಡುವಿನ ಸಂಬಂಧವು ಕಡಿಮೆ ಮೌಲ್ಯಯುತವಾಗಿದೆ ಎಂದು ಅಧ್ಯಯನ ತಿಳಿಸಿದೆ. ಈ ಕುರಿತು ಅಮೆರಿಕದ ಚಿಲ್ಡ್ರನ್ ನ್ಯಾಷನಲ್ ಹಾಸ್ಪಿಟಲ್ ಡೆವಲಪಿಂಗ್ ಬ್ರೈನ್ ಇನ್ಸ್ಟಿಟ್ಯೂಟ್ ತಂಡ ಅಧ್ಯಯನ ನಡೆಸಿದೆ. ಮಕ್ಕಳಲ್ಲಿನ ದೀರ್ಘಕಾಲದ ನರ ಅಭಿವೃದ್ಧಿಯ ಪರಿಣಾಮವನ್ನು ಇನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅಧ್ಯಯನ ತಿಳಿಸಿದೆ. ಈ ಕುರಿತು ಜರ್ನಲ್ ಸೈಂಟಿಪಿಕ್ ರಿಪೋರ್ಟ್ ವರದಿ ಪ್ರಕಟಿಸಿದೆ.
ಈ ಅಧ್ಯಯನಕ್ಕಾಗಿ ಚಿಲ್ಡ್ರನ್ಸ್ ನ್ಯಾಷನಲ್ ಭಾಗಿದಾರರನ್ನು ನೇಮಕ ಮಾಡಲಾಗಿದೆ. ಕೋವಿಡ್ ಸಾಂಕ್ರಾಮಿಕತೆ ಸಮಯದಲ್ಲಿ ಗರ್ಭಿಣಿಯರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾಗಿದಾರರನ್ನು ಕ್ಲಿನಿಕಲ್ ಟ್ರಯಲ್ಗೆ ಗುರಿಯಾಗಿಸಲಾಗಿದೆ. ಮಾರ್ಚ್ 2020ಮುನ್ನ 165 ಗರ್ಭಿಣಿಯರು ಮತ್ತು ಸಾಂಕ್ರಾಮಿಕತೆ ಸಮಯದಲ್ಲಿನ ಗರ್ಭಿಣಿಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸಾಂಕ್ರಾಮಿಕತೆ ಸಮಯದಲ್ಲಿನ ಮಹಿಳೆಯರು ಗೊತ್ತಿಲ್ಲದೆ ಕೋವಿಡ್ 19 ಒಡ್ಡಿಗೊಂಡಿಲ್ಲ. ಅಲ್ಲದೇ ಒತ್ತಡ ಮತ್ತು ಖಿನ್ನತೆ ಹಲವು ಪ್ರಶ್ನಾವಳಿಗಳನ್ನು ಹೊಂದಿದ್ದಾರೆ.
ಸಾಂಕ್ರಾಮಿಕತೆ ಸಮಯದಲ್ಲಿ, ಸಾಮಾಜಿಕ ಅಂತರ, ಸಾಯುವ ಭಯ, ಆರ್ಥಿಕ ಅಭದ್ರತೆ ಮತ್ತಿತ್ತರ ಕಾರಣದಿಂದ ತಾಯಂದಿರಲ್ಲಿ ನಕಾರಾತ್ಮಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಸಂಶೋಧನೆ ಮುಖ್ಯಸ್ಥರಾದ ಲಿಪೆರೊಪೌಲಸ್ ತಿಳಿಸಿದ್ದಾರೆ. 2020ಕ್ಕಿಂತ ಮುಂಚಿಗಿನ ತಾಯಂದಿರ ಎಂಆರ್ಐ ದತ್ತಾಂಶ ಮತ್ತು ಸಾಂಕ್ರಾಮಿಕತೆ ಸಮಯದಲ್ಲಿನ ಗರ್ಭಿಣಿಯರನ್ನು ಹೋಲಿಕೆ ಮಾಡಿದಾಗ ವಿಜ್ಞಾನಿಗಳು ಪ್ಲೆಸೆಂಟಾ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿನ ವ್ಯತ್ಯಾಸ ಗಮನಿಸಿದ್ದಾರೆ. ಅಲ್ಲದೇ, ಮಗುವಿನ ಹೆರಿಗೆ ಸಮಯದಲ್ಲಿನ ತೂಕದ ಜೊತೆಗೂ ಈ ಪ್ಲೆಸೆಂಟಾ ಅಭಿವೃದ್ಧಿ ಬದಲಾವಣೆಯನ್ನು ಕಾಣಬಹುದಾಗಿದೆ ಎಂದಿದ್ದಾರೆ.
ಮುಖ್ಯವಾಗಿ ತಾಯ್ತನದ ಒತ್ತಡ ಮತ್ತು ಖಿನ್ನತೆ ಲಕ್ಷಣದ ಸಂಪರ್ಕದೊಂದಿಗೆ ಬದಲಾವಣೆಯಲ್ಲಿ ಸಂಶೋಧಕರು ಪತ್ತೆ ಮಾಡಿದ್ದಾರೆ. ಫಲಿತಾಂಶದ ಅನುಸಾರ, ಗರ್ಭದಲ್ಲಿನ ಈ ಪ್ಲೆಸೆಂಟಾ ಅಭಿವೃದ್ಧಿಯಲ್ಲಿನ ಅಳತೆಯಲ್ಲಿನ ಈ ಬದಲಾವಣೆಗಳು ಹೊಟ್ಟೆಯಲ್ಲಿನ ಮಗುವಿನ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತವೆ.
ಪ್ರತಿ ತಾಯಂದಿರಿಂದ ತಾಯಿಗೆ ಪ್ರಮುಖ ಅಂಗಗಳಲ್ಲಿ ಬದಲಾವಣೆ ಕಾಣಬಹುದು. ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಹುಟ್ಟಿದ ಮಕ್ಕಳ ಮೇಲೆ ಇದು ಪರಿಣಾಮ ಬೀರಿದೆಯಾ ಎಂಬುದರ ತನಿಖೆಯನ್ನು ಮುಂದುವರೆಸುವುದು ಅಗತ್ಯವಾಗಿದೆ. ಈ ಹಿಂದಿನ ಅಧ್ಯಯನದಲ್ಲಿ ಈ ಪ್ಲೆಸೆಂಟಾಗಳು ನಕಾರಾತ್ಮಕ ಬದಲಾವಣೆಗಳು ತಾಯಂದಿರ ಪರಿಸರ, ಮಾಸಿಕ ಆರೋಗ್ಯ ಸ್ಥಿತಿಗತಿ ಮತ್ತು ಪ್ಲೆಸೆಂಟಾ ಕಾರ್ಯಾಚರಣೆ ಅಡೆತಡೆ ಪರಿಣಾಮಗಳು ಶಿಶುವಿನ ಮೆದುಳಿನ ಅಭಿವೃದ್ಧಿ ಮತ್ತು ಮಕ್ಕಳ ನರವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸಿತು. ಇದನ್ನೂ ಪೂರ್ವದಲ್ಲೇ ಪತ್ತೆ ಮಾಡುವುದು, ತಾಯಂದಿರ ಒತ್ತಡ, ಅಪಾಯದ ಅಂಶವನ್ನು ಸುಧಾರಣೆಯನ್ನು ಸೈಕೊಥೆರಪಿ, ಸಾಮಾಜಿಕ ಬೆಂಬಲ ಮತ್ತು ಇತರೆ ಮೂಲಕ ನಡೆಸಬಹುದು.
ಇದನ್ನೂ ಓದಿ: ಜನಸಂಖ್ಯೆಗೆ ಅನುಗುಣವಾಗಿ ದೀರ್ಘ ಕೋವಿಡ್ ಲಕ್ಷಣ ವ್ಯತ್ಯಾಸ