ಹೈದರಾಬಾದ್: ಹೊಸ ಅಧ್ಯಯನದ ಪ್ರಕಾರ ಕೋವಿಡ್ -19 ಸಾಂಕ್ರಾಮಿಕವು ಯುಎಸ್ನಲ್ಲಿ ಗರ್ಭಿಣಿಯರಿಗೆ ಮತ್ತು ಪ್ರಸವಾನಂತರದ ಮಹಿಳೆಯರಿಗೆ ಗರ್ಭಧಾರಣೆಯ ಒತ್ತಡವನ್ನು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
ಮಗು ರೋಗಕ್ಕೆ ತುತ್ತಾಗಬಹುದು ಎಂಬುವುದು ತಾಯಂದಿರ ಅತಿದೊಡ್ಡ ಚಿಂತೆಯಾಗಿದೆ. ಕೆಲವು ಮಹಿಳೆಯರು ಹೆರಿಗೆಗೆ ಆಸ್ಪತ್ರೆಗೆ ಹೋಗುವುದರಿಂದ ಅವರಿಗೆ ವೈರಸ್ ಬರಬಹುದು ಮತ್ತು ನಂತರ ತಮ್ಮ ಮಗುವಿಗೂ ಹರಡಬಹುದು ಅಥವಾ ಮಕ್ಕಳನ್ನು ಪ್ರತ್ಯೇಕವಾಗಿ ಇಡಬೇಕಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.
"ಗರ್ಭಿಣಿ ಮಹಿಳೆಯರು ಕೋವಿಡ್ -19 ತುತ್ತಾಗುವ ಭಯ ಹೊಂದಿದ್ದಾರೆ" ಎಂದು ಯುಎಸ್ನ ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ ಹೆಲ್ತ್ ಸೈನ್ಸಸ್ ಸ್ಪೋಕೇನ್ನ ಪ್ರಮುಖ ಲೇಖಕಿ ಸೆಲೆಸ್ಟಿನಾ ಬಾರ್ಬೊಸಾ-ಲೀಕರ್ ಹೇಳಿದ್ದಾರೆ.
"ಅವರ ಆರೋಗ್ಯ ರಕ್ಷಣೆ ಕುರಿತು ಅವರು ಬಹಳಷ್ಟು ಪ್ರಶ್ನೆಗಳನ್ನು ಹೊಂದಿದ್ದಾರೆ. ಇದು ಅಮ್ಮಂದಿರಿಗೆ ವಿಶೇಷವಾಗಿ ಒತ್ತಡವನ್ನುಂಟುಮಾಡುತ್ತದೆ" ಎಂದು ಬಾರ್ಬೊಸಾ-ಲೀಕರ್ ತಿಳಿಸಿದ್ದಾರೆ.
ಅಧ್ಯಯನವನ್ನು ಬಿಎಂಸಿ ಪ್ರೆಗ್ನೆನ್ಸಿ ಮತ್ತು ಹೆರಿಗೆಯ ಜರ್ನಲ್ನಲ್ಲಿ ಪ್ರಕಟಿಸಿದ್ದು, 160ಕ್ಕೂ ಹೆಚ್ಚು ಗರ್ಭಿಣಿ ಮತ್ತು ಪ್ರಸವಾನಂತರದ ಮಹಿಳೆಯರಿಂದ ಸಮೀಕ್ಷೆಯ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಲಾಗಿದೆ.
ಅಧ್ಯಯನದಲ್ಲಿ, ಶೇಕಡಾ 52ರಷ್ಟು ಗರ್ಭಿಣಿಯರು ಮತ್ತು ಪ್ರಸವಾನಂತರದ ಮಹಿಳೆಯರಲ್ಲಿ 49 ಪ್ರತಿಶತದಷ್ಟು ತಾಯಂದಿರು ತಮ್ಮ ಮಕ್ಕಳು ಕೋವಿಡ್ -19ಗೆ ತುತ್ತಾಗಬಹುದೆಂದು ಚಿಂತಿತರಾಗಿದ್ದಾರೆ.