ETV Bharat / sukhibhava

ಕೊರೊನಾ ಲಸಿಕೆ: ಸುಳ್ಳು ಸುದ್ದಿ, ತಪ್ಪು ಮಾಹಿತಿ, ಅನುಮಾನ ಪರಿಹರಿಸಲಿದ್ದಾರೆ 100+ ವಿಜ್ಞಾನಿಗಳು! - ಲಸಿಕೆ ಅಪನಂಬಿಕೆ ತೊಲಗಿಸಲು ವಿಶ್ವಸಂಸ್ಥೆ ಸಹಭಾಗಿತ್ವ

ಇಂಪೀರಿಯಲ್ ಕಾಲೇಜ್​ ಲಂಡನ್, ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಸಾವೊ ಪಾಲೊ ವಿಶ್ವವಿದ್ಯಾಲಯ, ಬಾರ್ಸಿಲೋನಾ ವಿಶ್ವವಿದ್ಯಾಲಯ ಮತ್ತು ಇತರ ಹಲವು ಉನ್ನತ ಸಂಸ್ಥೆಗಳು ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿಯ ಓಟದಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು ಈ ಅಭಿಯಾನ ಬೆಂಬಲಿಸಲಿದ್ದಾರೆ.

COVID vaccine
ಕೋವಿಡ್​ ಲಸಿಕೆ
author img

By

Published : Nov 17, 2020, 4:19 PM IST

ನವದೆಹಲಿ: ಕೋವಿಡ್ -19 ಲಸಿಕೆಗಳ ಸುತ್ತಲು ಹಬ್ಬುವ ತಪ್ಪು ಮಾಹಿತಿ, ಸುಳ್ಳು ಸುದ್ದಿಯಂತಹ ಸಮಸ್ಯೆ ನಿಭಾಯಿಸಲು ಹಾಗೂ ಜನರಲ್ಲಿನ ಅಪನಂಬಿಕೆ ತೊಡೆದು ಹಾಕಲು ಸಾಮಾಜಿಕ ಮಾಧ್ಯಮಗಳ ಮುಖೇನ ಅವುಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು 100ಕ್ಕೂ ಅಧಿಕ ವಿಜ್ಞಾನಿಗಳು ಕೈಜೋಡಿಸಿದ್ದಾರೆ.

ಕೋವಿಡ್ -19 ಲಸಿಕೆಗಳ ಸುತ್ತಲಿನ ತಪ್ಪು ಮಾಹಿತಿ ಎದುರಿಸುವ ಗುರಿಯನ್ನು ಟೀಮ್ ಹ್ಯಾಲೊವನ ವಹಿಸಿಕೊಳ್ಳಲಿದೆ. ವಿಶ್ವಸಂಸ್ಥೆಯು ಲಂಡನ್ ವಿಶ್ವವಿದ್ಯಾಲಯದ ಲಸಿಕೆ ಬಗ್ಗೆ ವಿಶ್ವಾಸ ಹೊಂದಿದ್ದು, ಈ ಯೋಜನೆಗೆ ಸಹಕರಿಸಿದೆ.

ಇಂಪೀರಿಯಲ್ ಕಾಲೇಜ್ ಲಂಡನ್, ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಸಾವೊ ಪಾಲೊ ವಿಶ್ವವಿದ್ಯಾಲಯ, ಬಾರ್ಸಿಲೋನಾ ವಿಶ್ವವಿದ್ಯಾಲಯ ಮತ್ತು ಇತರ ಹಲವು ಉನ್ನತ ಸಂಸ್ಥೆಗಳು ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿ ಓಟದಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು ಈ ಅಭಿಯಾನ ಬೆಂಬಲಿಸಲಿದ್ದಾರೆ.

ಭಾರತದಲ್ಲಿ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಕೆಲವು ಆಸ್ಪತ್ರೆಗಳ ಪ್ರಸಿದ್ಧ ಸಂಸ್ಥೆಗಳ 22ಕ್ಕೂ ಹೆಚ್ಚು ವಿಜ್ಞಾನಿಗಳ ತಂಡ ಹ್ಯಾಲೊ ಸೇರ್ಪಡೆ ಆಗಲಿದ್ದಾರೆ. ಪಿಜಿಐಎಂಆರ್, ನಿಜಾಮ್ಸ್ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಐಐಟಿ ಇಂದೋರ್, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್, ಎಸ್ಆರ್​ಎಂ ರಿಸರ್ಚ್ ಇನ್​ಸ್ಟಿಟ್ಯೂಟ್ ಹಾಗೂ ಡೀಪ್ ಚಿಲ್ಡ್ರನ್ಸ್ ಹಾಸ್ಪಿಟಲ್ ಆ್ಯಂಡ್​ ರಿಸರ್ಚ್ ಸೆಂಟರ್ ಇದರಲ್ಲಿವೆ.

ಭಾರತ ಹೊರತಾಗಿ ಬ್ರಿಟನ್​, ಅಮೆರಿಕ, ದಕ್ಷಿಣ ಆಫ್ರಿಕಾ, ಕತಾರ್, ಯುಎಇ, ಫ್ರಾನ್ಸ್, ಸ್ಪೇನ್, ಪೆರು, ಕೆನಡಾ, ಬ್ರೆಜಿಲ್​ ಸೇರಿದಂತೆ ಇತರೆ ವಿಜ್ಞಾನಿಗಳು ಸಹ ಕೈಜೋಡಿಸಲಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.