ಬೆಳ್ಳುಳ್ಳಿಗೆ ಆಯುರ್ವೇದ ಚಿಕಿತ್ಸೆಯಲ್ಲಿ ಅಗ್ರಸ್ಥಾನ. ಇದರ ಪರಿಮಳ ಮತ್ತು ಅದರಿಂದ ದೊರೆಯುವ ಆರೋಗ್ಯ ಪ್ರಯೋಜನೆಗಳಿಂದಾಗಿಯೇ ಇದು ಹೆಸರುವಾಸಿ. ಹೀಗಾಗಿ ಪ್ರಾಚೀನ ಕಾಲದಿಂದಲೂ ಬೆಳ್ಳುಳ್ಳಿಯನ್ನು ಹಲವಾರು ಕಾಯಿಲೆಗಳ ಗುಣಮುಖದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅಲ್ಲದೇ, ಬೆಳ್ಳುಳ್ಳಿಯ ಶಕ್ತಿಯ ಬಗ್ಗೆ ಚರಕ ಸಂಹಿತೆ, ಸುಶ್ರುತ ಸಂಹಿತೆ, ಕಶ್ಯಪ ಸಂಹಿತೆಯಲ್ಲಿ ಕೂಡ ವಿವರಿಸಲಾಗಿದೆ..
ಉತ್ತರಾಖಂಡ ಮೂಲದ ಆಯುರ್ವೇದ ತಜ್ಞರಾದ ಡಾ. ರಾಜೇಶ್ವರ್ ಸಿಂಗ್ ಕಲಾ ಅವರು ಬೆಳ್ಳುಳ್ಳಿಯನ್ನು ಆಯುರ್ವೇದದಲ್ಲಿ 'ರಸೌನ್' ಎಂದು ಕರೆಯಲಾಗುತ್ತದೆ. ಬೆಳ್ಳುಳ್ಳಿಯಲ್ಲಿ 6 ವಿಧದ ರುಚಿ ಅಂದರೆ, ಸಿಹಿ, ಹುಳಿ, ಉಪ್ಪು, ಮಸಾಲೆ ಮತ್ತು ಕಹಿಯನ್ನು ಗುರುತಿಸಬಹುದು. ಇದರ ಅತಿಯಾದ ವಾಸನೆಯಿಂದಾಗಿ ಇದನ್ನು ಉಗ್ರಗಂಧ ಅಂತಲೂ ಹೆಸರಿಸುತ್ತಾರೆ ಎಂದು ತಿಳಿಸಿದ್ದಾರೆ.
ಬೆಳ್ಳುಳ್ಳಿಯನ್ನು ಯಾವುದೇ ರೂಪದಲ್ಲಿ ಬಳಸಿದರೂ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಹೃದಯ ಸಂಬಂಧಿ ಸಮಸ್ಯೆಗಳು, ಮೂತ್ರಪಿಂಡದ ಸಮಸ್ಯೆಗಳು, ಅಜೀರ್ಣ, ಮಲಬದ್ಧತೆ, ಗ್ಯಾಸ್ ಮತ್ತು ವಿವಿಧ ತೊಂದರೆಗಳಿಗೆ ಬೆಳ್ಳುಳ್ಳಿ ರಾಮಬಾಣದಂತೆ ಕಾರ್ಯ ಮಾಡಲಿದೆ ಎಂದು ಅವರು ವಿವರಿಸುತ್ತಾರೆ.
ಬೆಳ್ಳುಳ್ಳಿಯಲ್ಲಿ ಕಂಡುಬರುವ ಪೋಷಕಾಂಶಗಳಿವು.. ಬೆಳ್ಳುಳ್ಳಿಯಲ್ಲಿ ಖನಿಜಾಂಶಗಳು, ವಿಟಮಿನ್ಗಳು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳು ಹೇರಳವಾಗಿ ಕಂಡುಬರುತ್ತವೆ ಎನ್ನುತ್ತಾರೆ ಡಾ. ಕಲಾ. ಅಲ್ಲದೆ, ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ (NCBI) ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವು ಕಂಡುಬರುತ್ತದೆ. ಇದು ಔಷಧೀಯ ಗುಣಗಳಾದ ಆಂಟಿಬ್ಯಾಕ್ಟೀರಿಯಲ್, ಆ್ಯಂಟಿಟಿವೈರಲ್, ಆ್ಯಂಟಿಫಂಗಲ್ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೇರಳವಾಗಿ ಹೊಂದಿದೆ ಎಂದು ತಿಳಿಸಿದೆ.
ಇದಲ್ಲದೆ, ಬೆಳ್ಳುಳ್ಳಿ ವಿಟಮಿನ್ ಬಿ 1, ಬಿ 6, ವಿಟಮಿನ್ ಸಿ ಜೊತೆಗೆ ಮ್ಯಾಂಗನೀಸ್, ಕ್ಯಾಲ್ಸಿಯಂ, ತಾಮ್ರ, ಸೆಲೆನಿಯಮ್, ಪೊಟ್ಯಾಸಿಯಮ್, ರಂಜಕ, ಕಬ್ಬಿಣ, ಇತ್ಯಾದಿಗಳನ್ನು ಒಳಗೊಂಡಿದೆ. ಅಜೋನ್ ಮತ್ತು ಅಲಿನ್ ಸಂಯುಕ್ತಗಳೂ ಬೆಳ್ಳುಳ್ಳಿಯಲ್ಲಿವೆ. ಇವು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ನೀಡುತ್ತವೆ.
28 ಗ್ರಾಂ ಬೆಳ್ಳುಳ್ಳಿಯಲ್ಲಿ 42 ಕ್ಯಾಲೋರಿಗಳು, 1.8 ಗ್ರಾಂ ಪ್ರೋಟೀನ್, 9 ಗ್ರಾಂ ಕಾರ್ಬೋಹೈಡ್ರೇಟ್ಗಳನ್ನು ಹೊಂದಿದೆ. ಪ್ರತಿದಿನವೂ ಒಂದು ಚಿಕ್ಕ ಗಾತ್ರದ ಬೆಳ್ಳುಳ್ಳಿ ಮತ್ತು ಒಂದು ಲವಂಗವನ್ನು ತಿಂದರೆ ದೇಹಕ್ಕೆ 2 ಪ್ರತಿಶತ ಮ್ಯಾಂಗನೀಸ್, ಶೇಕಡಾ 2 ರಷ್ಟು ವಿಟಮಿನ್ B-6, ಪ್ರತಿಶತ 1 ರಷ್ಟು ವಿಟಮಿನ್ C, ಶೇ.1ರಷ್ಟು ಸೆಲೆನಿಯಮ್ ಅನ್ನು ಪಡೆಯಬಹುದು. ಇದಲ್ಲದೇ, 0.06 ಗ್ರಾಂನಷ್ಟು ಫೈಬರ್ ಕೂಡ ದೇಹಕ್ಕೆ ಸಿಗಲಿದೆ.
ಹಸಿ ಬೆಳ್ಳುಳ್ಳಿ ತಿಂದರೆ ಏನು ಪ್ರಯೋಜನ? ಹಸಿ ಬೆಳ್ಳುಳ್ಳಿಯ ಸೇವನೆಯು ಬೇಯಿಸಿದ ಬೆಳ್ಳುಳ್ಳಿಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಡಾ.ಕಲಾ ಅವರ ಅಭಿಪ್ರಾಯ. ಹಸಿ ಬೆಳ್ಳುಳ್ಳಿಯನ್ನು ಸೇವಿಸಿದಾಗ, ಅಲಿಸಿನ್, ಡಿಲ್ಲಿ ಡೈಸಲ್ಫೈಡ್, ಎಸ್-ಅಲೈಲ್ ಸಿಸ್ಟೈನ್ನಂತಹ ಸಂಯುಕ್ತಗಳು ಉತ್ಪತ್ತಿಯಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.
- ಕರುಳಿನ ಆರೋಗ್ಯಕ್ಕೆ ಒಳ್ಳೆಯದು.. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಒಂದು ಎಸಳನ್ನು ಅಗಿದು ತಿಂದರೆ ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ಅಜೀರ್ಣ, ಮಲಬದ್ಧತೆಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಬೆಳ್ಳುಳ್ಳಿ ಸೇವನೆಯು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ತೂಕ ಕಡಿಮೆ, ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ನಿವಾರಿಸುತ್ತದೆ.
- ಕೊಲೆಸ್ಟ್ರಾಲ್ ನಿಯಂತ್ರಣ, ಹೃದಯದ ಆರೋಗ್ಯಕ್ಕೆ ಆಪ್ತ.. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಗುಣವನ್ನು ಬೆಳ್ಳುಳ್ಳಿ ಹೊಂದಿದೆ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವುದರಿಂದ ಹೃದಯದ ಆರೋಗ್ಯ ಕ್ರಮಬದ್ಧವಾಗಿರಿಸುತ್ತದೆ. ಇದಕ್ಕಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ, ಲವಂಗವನ್ನು ಅಗಿಯಲು ಅಥವಾ ನುಂಗಲು ವೈದ್ಯರು ಸಲಹೆ ನೀಡುತ್ತಾರೆ.
- ಮಧುಮೇಹ ನಿಯಂತ್ರಣ, ಮೂತ್ರಪಿಂಡಗಳಿಗೆ ಆರೋಗ್ಯ.. ಕಾಂಪ್ಲಿಮೆಂಟರಿ ಮತ್ತು ಇಂಟಿಗ್ರೇಟಿವ್ ಹೆಲ್ತ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮಧುಮೇಹಿಗಳು ಬೆಳಗಿನ ಉಪಾಹಾರದಲ್ಲಿ ಅಥವಾ ಬೆಳಗ್ಗೆ ಹೊತ್ತಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದರೆ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಅಲ್ಲದೆ, ಬೆಳ್ಳುಳ್ಳಿಯಲ್ಲಿ ಕಂಡುಬರುವ ಆಲಿಸಿನ್, ಅಲೈಲ್ ಪ್ರೊಪೈಲ್ ಡೈಸಲ್ಫೈಡ್ ಮತ್ತು ಎಸ್-ಅಲೈಲ್ ಸಿಸ್ಟೈನ್ ಸಲ್ಫಾಕ್ಸೈಡ್ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಚಯಾಪಚಯ ಕ್ರಿಯೆಯಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರ ವಹಿಸುವುದರಿಂದ ಬೆಳ್ಳುಳ್ಳಿ ಇನ್ಸುಲಿನ್ ಕಾರ್ಯಗಳನ್ನು ಸುಧಾರಿಸುತ್ತದೆ. ಅನಿಯಂತ್ರಿತ ಮಧುಮೇಹದ ಅಪಾಯವನ್ನು ಕಡಿಮೆ ಮಾಡುವ ಗುಣ ಇದರಲ್ಲಿದೆ.
- ಸೋಂಕುಗಳು ಮತ್ತು ಅಲರ್ಜಿಯಿಂದ ಉಪಶಮನ.. ಬೆಳ್ಳುಳ್ಳಿಯಲ್ಲಿರುವ 'ಅಲಿಸಿನ್' ಅಂಶವು ದೇಹದ ಆಂತರಿಕ ರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಶೀತ, ಕೆಮ್ಮು, ಅಸ್ತಮಾ, ಮೂತ್ರ, ಯೋನಿ, ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿರುವಾಗ ಬೆಳಗ್ಗೆ ಒಂದು ಬೆಳ್ಳುಳ್ಳಿ ಎಸಳನ್ನು ಸೇವಿಸಿದಲ್ಲಿ ಸೋಂಕಿನಿಂದ ಪಾರಾಗಬಹುದು ಎಂಬುದು ವೈದ್ಯರ ಸಲಹೆಯಾಗಿದೆ.