ETV Bharat / sukhibhava

Obesity Problem: ಭಾರತೀಯರಲ್ಲಿ ಹೆಚ್ಚುತ್ತಿದೆ ಸ್ಥೂಲಕಾಯದ ಸಮಸ್ಯೆ.. ಈ ಜನರು ಎಚ್ಚರ ವಹಿಸುವುದು ಅಗತ್ಯ

author img

By

Published : Jul 18, 2023, 4:16 PM IST

Updated : Jul 18, 2023, 4:45 PM IST

ಸ್ಥೂಲಕಾಯ ಇಂತಹದ್ದೇ ಪ್ರದೇಶದಲ್ಲಿ ಹೆಚ್ಚು ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಈ ಜನರಲ್ಲಿ ಈ ಪ್ರಮಾಣ ಹೆಚ್ಚಿದೆ.

obesity-causes-bp-diabetes-heart-diseases-bone-problems

ಬೆಂಗಳೂರು: ಅನಾರೋಗ್ಯಕರ ಆಹಾರ, ದೈಹಿಕ ಚಟುವಟಿಕೆ ಕೊರತೆ ಸ್ಥೂಲಕಾಯಕ್ಕೆ ಪ್ರಮುಖ ಕಾರಣವಾಗಿದ್ದು, ಇದು ಬಿಪಿ, ಮಧುಮೇಹದಂತಹ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇನ್ನು ಮೂರು-ನಾಲ್ಕು ದಶಕಗಳಲ್ಲಿ ಸ್ಥೂಲಕಾಯದ ವ್ಯಕ್ತಿಗಳ ಸಂಖ್ಯೆ ದುಪ್ಪಟ್ಟು ಆಗಲಿದೆ. ಇನ್ನು ಈ ಸ್ಥೂಲಕಾಯ, ಅಧಿಕ ತೂಕದ ವ್ಯಕ್ತಿಗಳ ಏರಿಕೆಯಲ್ಲಿ ಪ್ರಮುಖ ಕಾರಣ ಜೀವನ ಶೈಲಿಯಾಗಿದ್ದು, ಅದು ಎಲ್ಲಾ ವಯೋಮಾನದ ಜನರ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ ಈ ಸಮಸ್ಯೆ ಸಮಾಜದಲ್ಲಿನ ಮಧ್ಯಮ ಮತ್ತು ಮೇಲಿನ ವರ್ಗದಲ್ಲಿ ಹೆಚ್ಚಾಗಿದೆ.

ಪುಣೆಯ ಲ್ಯಾಪರೊ ಒಬೆಸೊ ಸೆಂಟರ್​ನ ಹಿರಿಯ ಬ್ಯಾರಿಯಾಟ್ರಿಕ್​ ಸರ್ಜನ್​ ಡಾ ಸುಶೀಲ್​ ಖಾರತ್​ ತಿಳಿಸುವಂತೆ, ಸ್ಥೂಲಕಾಲವೂ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತದೆ. ಇದು ರೋಗಿಗಳ ಜೀವನಕ್ಕೆ ಕಪ್ಪು ಚುಕ್ಕೆ ಮೂಡಿಸುತ್ತದೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ಇದು ಮಾರಣಾಂತಿಕವಾಗಬಹುದು., ಸ್ಥೂಲಕಾಯ ಎಂಬುದು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಅಂಡಿಕೊಂಡಿಲ್ಲ. ಆದರೂ ಇದು ಗುಜರಾತಿಗಳು ಮತ್ತು ರಾಜಸ್ಥಾನಿಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ.

ಈ ಜನರಲ್ಲಿ ಹೆಚ್ಚಿನ ಸ್ಥೂಲಕಾಯ: ಇನ್ನು ಸ್ಥೂಲಕಾಯ ಹೆಚ್ಚಳಕ್ಕೆ ಪ್ರಮುಖ ಕಾರಣ ಜಡತ್ವದ ಜೊತೆಗೆ ಅಧಿಕ ಸಮೃದ್ಧ ಆಹಾರ ಅದರಲ್ಲೂ ತುಪ್ಪ- ಎಣ್ಣೆ- ಸಕ್ಕರೆ ಅಂಶ, ಜಂಕ್​ ಫುಡ್​, ಅನಾರೋಗ್ಯಕರ ಸಂಸ್ಕರಿತ ಆಹಾರ ಸೇವನೆ ಆಗಿದೆ. ಈ ಸಂಬಂಧ ಯಾವುದೇ ವೈಜ್ಞಾನಿಕ ದಾಖಲೆಗಳು ಲಭ್ಯವಾಗಿಲ್ಲ. ಆದರೂ ಗುಜರಾತ್​ ಮತ್ತು ರಾಜಸ್ಥಾನದ ಮಧ್ಯಮ ಮತ್ತು ಮೇಲಿನ ಮಧ್ಯಮ ವರ್ಗದಲ್ಲಿ ಈ ಸ್ಥೂಲಕಾಯತೆ ಹೆಚ್ಚಿದೆ. ಇದು ಇನ್ನೂ ಕೆಲವು ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಸ್ಥೂಲಕಾಯ ಸಮಸ್ಯೆಗೆ ಚಿಕಿತ್ಸೆ ನೀಡಬಹುದಾಗಿದೆ. ಇದೀಗ ಅನೇಕ ಚಿಕಿತ್ಸೆ, ಸರ್ಜರಿ ಮೂಲಕ ಸಮಸ್ಯೆಯಿಂದ ಬಳಲುತ್ತಿರುವವರು ಪರಿಹಾರ ಪಡೆಯಬಹುದಾಗಿದೆ. ಆಧುನಿಕ ಕಾಲದಲ್ಲಿ ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರವರೆಗೆ ಈ ಸ್ಥೂಲಕಾಯ ಸಮಸ್ಯೆ ಹೆಚ್ಚಿದೆ. ಆದರೆ, ಹೆಚ್ಚು ಈ ಸಮಸ್ಯೆಗೆ ಒಳಗಾಗುತ್ತಿರುವವರು 20 ರಿಂದ 50 ವರ್ಷದ ವಯೋಮಾನದವರಾಗಿದ್ದಾರೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಚಿಕಿತ್ಸೆ ಅವಶ್ಯಕತೆ ಉಂಟಾಗಿದೆ.

ಇನ್ನು, ಈ ಸಮಸ್ಯೆ ಪುರುಷ ಮತ್ತು ಮಹಿಳೆಯರಿಬ್ಬರಲೂ ಕಾಣಬಹುದಾಗಿದ್ದು, ಇದು ಅನೇಕ ಕಾರಣದಿಂದ ಮಹಿಳೆಯರಲ್ಲಿ ಹೆಚ್ಚಾಗಿದೆ. ಈ ಸ್ಥೂಲಕಾಯದ ಸಮಸ್ಯೆಯಿಂದ ಮಹಿಳೆಯಲ್ಲಿ ಮೂಳೆ ಸಮಸ್ಯೆ, ಋತುಚಕ್ರದ ಅಡೆತಡೆ, ಹಾರ್ಮೋನ್​ ಸಮಸ್ಯೆ ಜೊತೆಗೆ ಸಂತಾನೋತ್ಪತ್ತಿಯ ತೊಡಕಿಗೂ ಕಾರಣವಾಗಿದೆ. ಅಲ್ಲದೆ, ಇದು ಮಾನಸಿಕ ಸಮಸ್ಯೆಗೂ ಕಾರಣವಾಗುತ್ತದೆ.

ಆಧುನಿಕ ಕಾಲದಲ್ಲಿ ಈ ಸಮಸ್ಯೆಗೆ ಮಾತ್ರೆಗಳಿಂದ ಸರ್ಜರಿವರೆಗೆ ಅನೇಕ ಚಿಕಿತ್ಸೆ ಪಡೆಯಬಹುದಾಗಿದೆ. ಇದು ರೋಗಿಗಳ ಮೇಲೆ ಆಧಾರಿತವಾಗಿದೆ. ಇನ್ನು ಈ ಚಿಕಿತ್ಸೆಗಳು ದೀರ್ಘಕಾಲಿಕವಾಗಿದ್ದು, ಯಶಸ್ವಿಯಾಗಿದೆ. 5 ಲಕ್ಷದವರೆಗೆ ಈ ಚಿಕಿತ್ಸೆ ಇದ್ದು, ಈ ಚಿಕಿತ್ಸೆಗೆ ಒಳಗಾಗುವ ರೋಗಿಗಳು ವೈದ್ಯರ ಸೂಚನೆಯನ್ನು ಪಾಲಿಸುವುದು ಕಡ್ಡಾಯವಾಗಿದೆ.

ಯುವ ಮತ್ತು ಮಧ್ಯಮ ವಯೋಮಾನವರು ಆರೋಗ್ಯಯುತ ಜೀವನಶೈಲಿ ಜೊತೆಗೆ ಸಮತೋಲಿತ ಆಹಾರ ಸೇವನೆ, ದೈಹಿಕ ಚಟುವಟಿಕೆ ರೂಢಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Food: ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು ಪದೇ ಪದೇ ಬಿಸಿ ಮಾಡಿ ತಿನ್ನುವುದರಿಂದ ಹಲವು ಸಮಸ್ಯೆಗಳು!

Last Updated : Jul 18, 2023, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.