ನ್ಯೂ ಯಾರ್ಕ್: ಜಾಗತ್ತಿನಾದ್ಯಂತ ಅರ್ಧ ಬಿಲಿಯನ್ಗೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಪ್ರತಿ ದೇಶದಲ್ಲೂ ಪುರುಷರು, ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಎಲ್ಲ ವಯೋಮಿತಿಯ ಜನರು ಈ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ತೊಂದರೆ ಮೂವತ್ತು ವರ್ಷದ ಬಳಿಕ ದುಪ್ಪಟ್ಟಾಗುವ ಸಾಧ್ಯತೆ ಇದ್ದು, 1.3 ಬಿಲಿಯನ್ ಜನರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಇದರ ಜೊತೆಗೆ ಪ್ರತಿ ದೇಶದಲ್ಲಿಯೂ ಡಯಾಬಿಟೀಸ್ ರೋಗಿಗಳು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ದಿ ಲ್ಯಾನ್ಸೆಟ್ ಜರ್ನಲ್ ವರದಿ ಹೇಳುತ್ತದೆ.
ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವರದಿ ಬೆನ್ನಲ್ಲೇ ಇದೀಗ ಜಾಗತಿಕ ಫಲಿತಾಂಶ ಹೊರಬಂದಿದೆ. ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಐಸಿಎಂಆರ್ ವರದಿಯನುಸಾರ, ಭಾರತದಲ್ಲಿ 101 ಮಿಲಿಯನ್ ಜನರಿಗೆ ಮಧುಮೇಹ ಬಾಧಿಸಿದೆ. 136 ಮಿಲಿಯನ್ ಮಂದಿ ಪೂರ್ವ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.
ಹೊಸ ಅಧ್ಯಯನಕ್ಕಾಗಿ, ಸಂಶೋಧಕರು 1990 ಮತ್ತು 2021 ರ ನಡುವೆ ವಯಸ್ಸು ಮತ್ತು ಲಿಂಗದ ಪ್ರಕಾರ 204 ದೇಶಗಳು ಮತ್ತು ಪ್ರಾಂತ್ಯಗಳಿಗೆ ಮಧುಮೇಹ ಹರಡುವಿಕೆ, ಅಸ್ವಸ್ಥತೆ ಮತ್ತು ಮರಣವನ್ನು ಪರೀಕ್ಷಿಸಲು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (GBD) 2021 ಸಂಶೋಧನೆಗಳನ್ನು ಬಳಸಿದ್ದಾರೆ. 2050 ರವರೆಗೆ ಮಧುಮೇಹ ಹರಡುವಿಕೆಯನ್ನು ಅವರು ಮುನ್ಸೂಚಿಸಿದ್ದಾರೆ.
ಈ ಲೆಕ್ಕಾಚಾರವೂ ಪ್ರಸ್ತುತ ಜಾಗತಿಕ ಹರಡುವಿಕೆ ದರ ಶೇ 6.1ರಷ್ಟಿದೆ. ಅಲ್ಲದೇ, ಜಾಗತಿಕ ಸಾವು ಮತ್ತು ಅನಾರೋಗ್ಯಕ್ಕೆ ಕಾರಣವಾಗುವ ಪ್ರಮುಖ 10 ಕಾರಣದಲ್ಲಿ ಮಧುಮೇಹವೂ ಒಂದು. ಉತ್ತರ ಆಫ್ರಿಕಾ ಮತ್ತು ಮಧ್ಯ ಪೂರ್ವ ಮಧುಮೇಹದ ಅತಿ ಹೆಚ್ಚಿನ ದರ 9.3 ರಷ್ಟಿದೆ. ಈ ಸಂಖ್ಯೆ 2050ರಲ್ಲಿ 16.8ರಷ್ಟಿರಲಿದೆ. ಲ್ಯಾಟಿನ್ ಅಮೆರಿಕ ಮತ್ತು ಕೆರೀಬಿಯನ್ನ ದರ 11.3ಕ್ಕೆ ಹೆಚ್ಚಳವಾಗಲಿದೆ.
65 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು: ಮಧುಮೇಹ ವಿಶೇಷವಾಗಿ 65 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಜನರಲ್ಲಿ ಪ್ರತಿ ದೇಶದಲ್ಲಿಯೂ ಕಂಡು ಬರುತ್ತಿದೆ. ಜಾಗತಿಕವಾಗಿ ಪ್ರಾದೇಶಿಕ ಹರಡುವಿಕೆ ದರ ಶೇ 20ಕ್ಕಿಂತ ಹೆಚ್ಚಿದೆ. 75ರಿಂದ 79 ವಯೋಮಾನದ ಶೇ 24.4 ಮಂದಿಯಲ್ಲಿ ಅತಿ ಹೆಚ್ಚಿನ ಮಧುಮೇಹ ದರ ಇದೆ. ಈ ವಯೋಮಾನದ ಗುಂಪಿನಲ್ಲಿ ಅತಿ ಹೆಚ್ಚು ಮಧುಮೇಹ ದರ ಶೇ 39.4ರಷ್ಟು ಉತ್ತರ ಆಫ್ರಿಕಾ ಮತ್ತು ಮಿಡಲ್ ಈಸ್ಟ್ನಲ್ಲಿ ಕಂಡುಬಂದಿದೆ. ಕೇಂದ್ರ ಯುರೋಪ್, ಪೂರ್ವ ಯುರೋಪ್ ಮತ್ತು ಕೇಂದ್ರ ಏಷ್ಯಾದಲ್ಲಿ ಮಧುಮೇಹ ದರ ಶೇ 19.8ರಷ್ಟಿದೆ.
ಬಹುತೇಕ ಜಾಗತಿಕ ಪ್ರಕರಣದಲ್ಲಿ ಟೈಪ್ 2 ಮಧುಮೇಹ ಶೇ 96ರಷ್ಟಿದೆ. ಹೆಚ್ಚಿನ ದೇಹ ತೂಕ ಟೈಪ್ 2 ಡಯಾಬಿಟೀಸ್ ಪ್ರಾಥಮಿಕ ಅಪಾಯ ಹೊಂದಿದೆ. ಇದು ಶೇ 52.2ರಷ್ಟು ಅಂಗವೈಕ್ಯಲ್ಯ ಮತ್ತು ಸಾವಿಗೆ ಕಾರಣವಾಗಿದೆ. ಪರಿಸರ ಮತ್ತು ಔದ್ಯೋಗಿಕ ಅಪಾಯ, ತಂಬಾಕು ಬಳಕೆ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಆಲ್ಕೋಹಾಲ್ ಬಳಕೆ ಇದಕ್ಕೆ ಪ್ರಮುಖ ಕಾರಣವಾಗುತ್ತಿದೆ.
ಮಧುಮೇಹ ದರ ಹೆಚ್ಚಳ ಕೇವಲ ಎಚ್ಚರಿಕೆ ಗಂಟೆ ಅಲ್ಲದೆ, ಜಾಗತಿಕ ಆರೋಗ್ಯ ವ್ಯವಸ್ಥೆಗೂ ಸವಾಲಾಗಿದೆ. ವಿಶೇಷವಾಗಿ, ಈ ಸಮಸ್ಯೆ ಹೃದಯ ಮತ್ತು ಸ್ಟ್ರೋಕ್ ಸಮಸ್ಯೆಯ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಅಧ್ಯಯನದ ಪ್ರಮುಖ ಸಂಶೋಧಕ ಡಾ. ಲಿಯನ್ ಒಂಗ್ ತಿಳಿಸಿದ್ದಾರೆ.
ಸಾಮಾನ್ಯ ಜನರು ಈ ಟೈಪ್ 2 ಡಯಾಬಿಟೀಸ್ ಸ್ಥೂಲಕಾಯ, ಕಡಿಮೆ ವ್ಯಾಯಾಮ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೊಂದಿಗೆ ಸಂಬಂದ ಹೊಂದಿದೆ ಎಂದು ನಂಬಿದ್ದಾರೆ. ಈ ಮಧುಮೇಹವನ್ನು ನಿಯಂತ್ರಿಸುವುದು ಮತ್ತು ತಡೆಯುವುದು ಅನೇಕ ಅಂಶಗಳಿಂದ ಕಷ್ಟ ಸಾಧ್ಯವಾಗಿದೆ. ಇದು ವಂಶವಾಹಿನಿ ಜೊತೆಗೆ ದೇಶದ ರಚನಾತ್ಮಕ ವ್ಯವಸ್ಥೆಯಲ್ಲಿ, ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ- ಆದಾಯದ ದೇಶಗಳಲ್ಲಿ ಲಾಜಿಸ್ಟಿಕಲ್, ಸಾಮಾಜಿಕ ಮತ್ತು ಆರ್ಥಿಕ ಅಡೆತಡೆಗಳನ್ನು ಒಳಗೊಂಡಿದೆ.