ETV Bharat / sukhibhava

ಕೋಝಿಕ್ಕೋಡ್​ನಲ್ಲಿ ನಿಫಾ ಆತಂಕ ದೂರ-ತೆರೆದ ಶಾಲೆಗಳು; ಮಾಸ್ಕ್​​, ಸ್ಯಾನಿಟೈಸರ್​ ಬಳಕೆ ಕಡ್ಡಾಯ - ನಿಫಾ ಪ್ರಕರಣಗಳ ಆತಂಕದಿಂದ ಇದೀಗ ಕೇರಳ

ಜಿಲ್ಲಾ ಅಧಿಕಾರಿಗಳು ಕೋವಿಡ್​​ ಸಮಯದಲ್ಲಿ ಜಾರಿಯಾದ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದಾರೆ. ಶಾಲೆಗೆ ಬರುವ ಮಕ್ಕಳು ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಕೈಗಳಿಗೆ ಸಾನಿಟೈಸರ್​​ ಬಳಕೆ ಮಾಡಬೇಕಿದೆ.

Nipah scare over at Kozhikode but masks and sanitizer back as educational institutions open

author img

By ETV Bharat Karnataka Team

Published : Sep 25, 2023, 2:28 PM IST

ಕೋಝೀಕ್ಕೋಡ್​: ದೇಶದೆಲ್ಲೆಡೆ ಆತಂಕ ಮೂಡಿಸಿದ್ದ ನಿಫಾ ಪ್ರಕರಣಗಳ ಆತಂಕದಿಂದ ಇದೀಗ ಕೇರಳ ದೂರವಾಗಿದೆ. ವೈರಸ್​ ನಿಯಂತ್ರಣಕ್ಕೆ ನಡೆಸಲಾದ ಕಟ್ಟುನಿಟ್ಟಿನ ಕ್ರಮಗಳನ್ನು ಇದೀಗ ಕೊಂಚ ಸಡಿಲಿಸಲಾಗಿದೆ. ಜನಜೀವನ ಸಾಮಾನ್ಯಕ್ಕೆ ಬರುತ್ತಿದೆ. ನಿಫಾ ಪ್ರಕರಣ ವರದಿಯಾದ 11 ದಿನಗಳ ಬಳಿಕವೂ ಯಾವುದೇ ಸೋಂಕು ದೃಢಪಡದ ಹಿನ್ನೆಲೆಯಲ್ಲಿ ನಿಧಾನವಾಗಿ ಕಂಟೈನ್ಮೆಂಟ್​ ವಲಯವನ್ನು ಮುಕ್ತ ಮಾಡಲಾಗಿದೆ.

ಅದರಲ್ಲೂ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ವಲಯದಲ್ಲಿ ಹೇರಿದ್ದ ಕಂಟೈನ್​ಮೆಂಟ್​ ಅನ್ನು ತೆರವು ಮಾಡಲಾಗಿದೆ. ಆದರೆ, ಜಿಲ್ಲಾ ಅಧಿಕಾರಿಗಳು ಕೋವಿಡ್​​ ಸಮಯದಲ್ಲಿ ಜಾರಿಯಾದ ಕಟ್ಟು ನಿಟ್ಟಿನ ನಿಯಮವನ್ನು ಜಾರಿ ಮಾಡಿದ್ದಾರೆ. ಶಾಲೆಗೆ ಬರುವ ಮಕ್ಕಳ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಕೈಗಳಿಗೆ ಸಾನಿಟೈಸರ್​ ಬಳಕೆ ಮಾಡಬೇಕು ಎಂದು ಸೂಚಿಸಿದ್ದಾರೆ.

ಸೆಪ್ಟೆಂಬರ್​ 12ರಂದು ನಿಫಾ ಸೋಂಕು ಪತ್ತೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿನ ಶಾಲೆಗಳು ಸೆಪ್ಟೆಂಬರ್​ 11ರಿಂದಲೇ ಆಫ್​ಲೈನ್​ ಬದಲಾಗಿ ಆನ್​ಲೈನ್​ ಕ್ಲಾಸ್​ ನಡೆಸಲು ಮುಂದಾಗಿದ್ದವು. ಜಿಲ್ಲಾ ಆಡಳಿತ ಇದೀಗ ಶಾಲೆಗಳ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿದೆ. ಆದಾಗ್ಯೂ ಜ್ವರ, ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಶಾಲೆಗೆ ಬಾರದಂತೆ ಸೂಚಿಸಿದೆ. ಜೊತೆಗೆ ಶಾಲೆಯಲ್ಲಿ ಹಂಚಿ ತಿನ್ನುವುದಕ್ಕೆ ನಿಷೇಧ ಹೇರಿದೆ.

ಕೋಝಿಕ್ಕೋಡ್​ನಲ್ಲಿ ಈ ವರ್ಷ ಆರು ನಿಫಾ ಪ್ರಕರಣಗಳು ಪತ್ತೆಯಾಗಿದ್ದು, ಎರಡು ಮಂದಿ ಇದರಿಂದ ಸಾವನ್ನಪ್ಪಿದ್ದಾರೆ. ಸೋಂಕು ಪತ್ತೆಗೆ ಸೋಂಕಿನ ಸಂಪರ್ಕಕ್ಕೆ ಒಳಗಾದವರ 950 ಮಾದರಿಗಳನ್ನು ಕಳೆದ ವಾರದಿಂದ ಸಂಗ್ರಹಿಸಲಾಗಿದೆ. ಆದರೆ, ಯಾವುದೇ ಹೊಸ ನಿಫಾ ಪ್ರಕರಣ ದೃಢಪಟ್ಟಿಲ್ಲ.

ಈ ನಡುವೆ ಪುಣೆಯ ರಾಷ್ಟ್ರೀಯ ವೈರಾಲಾಜಿ ಸಂಸ್ಥೆ ಆಗಮಿಸಿದ್ದು, ಬಾವಲಿಗಳಿಂದ ನಿರಂತರವಾಗಿ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಫೆರೊಕೆ ನಗರಸಭೆ ವಾರ್ಡ್​ ಮತ್ತು ಕೋಝೀಕ್ಕೋಡ್​​ ಕಾರ್ಪೋರೇಷನ್​ ಮೇಲೆ ಕಂಟೈನ್​ಮೆಂಟ್​​ ವಲಯಗಳನ್ನು ಮುಕ್ತ ಮಾಡಲಾಗಿದೆ.

ಸೆಪ್ಟೆಂಬರ್​ 19ರಂದು ನಿಫಾ ಪ್ರಕರಣ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್​, ನಿಫಾ ಸೋಂಕು ನಿಯಂತ್ರಣದಲ್ಲಿದೆ. ಹಾಗೆಂದ ಮಾತ್ರಕ್ಕೆ ನಿಫಾ ಸೋಂಕು ಸಂಪೂರ್ಣವಾಗಿ ದೂರಾಗಿಲ್ಲ ಎಂದರು.

ಕೋಝಿಕ್ಕೋಡ್​ನಲ್ಲಿ ಇದು ಮೂರನೇ ಬಾರಿ ಸೋಂಕು ಪತ್ತೆಯಾಗಿದ್ದು, ಈ ಹಿಂದೆ 2018, 2021ರಲ್ಲಿ ಸೋಂಕು ಕಂಡು ಬಂದಿತು. ಈ ವೇಳೆ ಕೂಡ ಕಟ್ಟು ನಿಟ್ಟಿನ ಕ್ರಮವಹಿಸುವ ಮೂಲಕ ಸೋಂಕು ನಿಯಂತ್ರಣ ಮಾಡಲಾಗಿತ್ತು. (ಐಎಎನ್​ಎಸ್​)

ಇದನ್ನೂ ಓದಿ: ಕಾಂಬೋಡಿಯಾದಲ್ಲಿ 7 ವರ್ಷಗಳ ಬಳಿಕ ಝಿಕಾ ವೈರಸ್ ಪತ್ತೆ​: ಲಕ್ಷಣ, ಮುನ್ನೆಚ್ಚರಿಕೆ ವಿಧಾನಗಳು ಹೀಗಿವೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.