ನವದೆಹಲಿ: ಮನುಷ್ಯ ಎಚ್ಚರವಾಗುವುದಕ್ಕೂ, ಕ್ರಿಯಾಶೀಲರಾಗಿರುವುದಕ್ಕೂ ಬಹಳ ವ್ಯತ್ಯಾಸವಿದೆ. ಇವೆರಡನ್ನೂ ಕೆಫೀನ್ ಮಾಡಲು ಸಾಧ್ಯವಿಲ್ಲ. ಇದಕ್ಕೆ ಕಾಫಿ ಹೀರುವುದು ಅವಶ್ಯಕ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕಾಫಿ vs ಕೆಫೀನ್ ಸೇವನೆಯ ಪರಿಣಾಮಗಳ ಕುರಿತು ಅವರು ಅಧ್ಯಯನ ನಡೆಸಿದ್ದಾರೆ. ವಿಜ್ಞಾನಿಗಳು ಎಚ್ಚರಗೊಳ್ಳುವ ಪರಿಣಾಮ ಕೆಫೆಯಿಂದ ಆಗುತ್ತದೆಯಾ ಅಥವಾ ಇದು ಕಾಫಿ ಸೇವನೆಯಿಂದ ಆಗುತ್ತದೆಯೇ ಎಂಬುದನ್ನು ಅರ್ಥೈಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಕಾಫಿ ಕ್ರಿಯಾಶೀಲವಾಗಿರುವುದಕ್ಕೆ ಸಹಾಯ ಮಾಡಿದರೆ, ಕೆಫೀನ್ ಎಚ್ಚರಗೊಳ್ಳುವುದಕ್ಕೆ ಕಾರಣವಾಗುತ್ತದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ.
ಎಚ್ಚರ ಮತ್ತು ಕ್ರಿಯಾಶೀಲತೆ ಎಂದರೇನು?: ಕಾಫಿ ಎಚ್ಚರಗೊಳಿಸುವ ಮತ್ತು ಸೈಕೋಮೋಟರ್ ಕಾರ್ಯಾಚರಣೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಪೊರ್ಚುಗಲ್ನ ಮಿನೊಹೊ ಯುನಿವರ್ಸಿಟಿಯ ನುನೊ ಸೌಸಾ ತಿಳಿಸಿದ್ದಾರೆ. ಜೈವಿಕ ವಿದ್ಯಮಾನದ ಆಧಾರವಾಗಿರುವ ಕಾರ್ಯವಿಧಾನಗಳನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಾಗ, ಅದನ್ನು ಮಾರ್ಪಡಿಸುವ ಅಂಶಗಳು ಮತ್ತು ಆ ಕಾರ್ಯವಿಧಾನದ ಸಂಭಾವ್ಯ ಪ್ರಯೋಜನಗಳನ್ನು ಅನ್ವೇಷಿಸುವ ಮಾರ್ಗಗಳನ್ನು ತೆರೆಯುತ್ತೀರಿ ಎಂದು ಅವರು ಹೇಳುತ್ತಾರೆ.
ಇದಕ್ಕಾಗಿ ವಿಜ್ಞಾನಿಗಳು ದಿನದಲ್ಲಿ ಕನಿಷ್ಠ ಒಂದು ಕಪ್ ಕಾಫಿ ಸೇವಿಸುವ ಅಥವಾ ಕೆಫೀನ್ಯುಕ್ತ ಪಾನೀಯ ಸೇವಿಸುವವರನ್ನು ನೇಮಕ ಮಾಡಿಕೊಂಡಿದ್ದಾರೆ. ಭಾಗೀದಾರರ ಸೋಶಿಯೊಡೆಮೊಗ್ರಾಫಿಕ್ ದತ್ತಾಂಶವನ್ನು ಸಂದರ್ಶನದ ಮೂಲಕ ಪಡೆಯಲಾಗಿದೆ. ಕೆಫೀನ್ ಅಥವಾ ಕಾಫಿ ಸೇವಿಸುವ 30 ನಿಮಿಷದ ಮುಂಚೆ ಮತ್ತು ನಂತರ ಅವರ ಮಿದುಳನ್ನು ಎಂಆರ್ಐ ಮೂಲಕ ಸ್ಕ್ಯಾನಿಂಗ್ಗೆ ಒಳಪಡಿಸಲಾಗಿದೆ. ಸ್ಕ್ಯಾನಿಂಗ್‌ನಲ್ಲಿ ಭಾಗೀದಾರರಿಗೆ ವಿಶ್ರಾಂತಿ ಪಡೆಯುವಂತೆ ಹೇಳಲಾಗಿದ್ದು, ಮನಸ್ಸಿನ ಆಲೋಚನೆಯ ಓಡಾಟಕ್ಕೆ ಬ್ರೇಕ್ ಬೇಡ ಎಂದು ತಿಳಿಸಲಾಗಿದೆ. ಕಾಫಿ ಸೇವನೆಯ ಬಳಿಕ ನ್ಯೂರೊಕೆಮಿಕಲ್ ಪರಿಣಾಮಗಳ ಬಗ್ಗೆ ಅರಿವು ಹೊಂದಲಾಗಿದೆ.
ಕಾಫಿ ಚುರುಕು ಮೂಡಿಸಲು ಬೇಕು: ಕಾಫಿ ಕುಡಿಯುವವರು ಮತ್ತು ಕೆಫೀನ್ ತೆಗೆದುಕೊಳ್ಳುವವರಲ್ಲಿ, ಆತ್ಮಾವಲೋಕನ ಜಾಲದ ಸಂಪರ್ಕ ಕಡಿಮೆಯಾಗಿದೆ ಎಂಬುದು ಪತ್ತೆಯಾಗಿದೆ. ಕಾಫಿ ಮತ್ತು ಕೆಫೀನ್ ಸೇವನೆಯು ಜನರನ್ನು ಹೆಚ್ಚು ಸಕ್ರಿಯವಾಗಿರಲು ಮತ್ತು ಕೆಲಸ ಮಾಡಲು ಉತ್ತೇಜಿಸುತ್ತದೆ. ಅಲ್ಲದೆ, ಕಾಫಿ ಕುಡಿಯುವವರಲ್ಲಿ ಮಾತ್ರ ಕೆಲಸ ಮಾಡುವ ಸ್ಮರಣೆ, ಅರಿವಿನ ನಿಯಂತ್ರಣ ಮತ್ತು ಗುರಿ ನಿರ್ದೇಶಿತ ನಡವಳಿಕೆ ಹೆಚ್ಚಾಗಿ ಕಂಡುಬಂದಿದೆ.
ಅಧ್ಯಯನದ ಫಲಿತಾಂಶ ಹೀಗಿದೆ..: ಈ ಅಂಶಗಳು ಕೆಫೀನ್ನಲ್ಲಿ ಕಂಡು ಬಂದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನೀವು ಕೇವಲ ಎಚ್ಚರವಾಗಿರದೇ, ಹೊರಡಲು ಸಿದ್ದವಾಗಬೇಕು ಎಂದರೆ ಕೆಫೀನ್ ಒಂದೇ ಸಾಕಾಗುವುದಿಲ್ಲ. ಕಾಫಿ ಸೇವನೆ ಅವಶ್ಯ. ಸರಳವಾಗಿ ಹೇಳುವುದಾದರೆ, ಕ್ರಿಯಾಚಟುವಟಿಕೆಗಳ ನಡೆಸಲು ಕಾಫಿ ನಿಮ್ಮನ್ನು ಸಿದ್ದಗೊಳಿಸುತ್ತದೆ ಎಂದು ಸ್ಪೇನ್ನ ಜ್ಯುಮೆ ಐ ಯೂನಿವರ್ಸಿಟಿಯ ಮಾರಿಯಾ ಪಿಕೊ ಪೆರೆಜ್ ತಿಳಿಸಿದ್ದಾರೆ. ಇವರು ಅಧ್ಯಯನದ ಪ್ರಥಮ ಲೇಖಕರು ಆಗಿದ್ದಾರೆ. ಕೆಫೀನ್ನ ಮರು ಉತ್ಪಾದನೆ ಪರಿಣಾಮದ ಕೆಲವು ಅಂಶಗಳು ಗಣನೆಗೆ ತೆಗೆದುಕೊಳ್ಳಲಾಗಿದೆ. ಇತರೆ ಕೆಫಿನೇಟೆಡ್ ಡ್ರಿಂಕ್ಸ್ಗಳು ಇದೇ ಪರಿಣಾಮವನ್ನು ಹೊಂದಿದೆ ಎಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹೆಚ್ಚು ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ; ಆದ್ರೆ, ಈ ಅನುಕೂಲಗಳೂ ಇವೆ!