ಹೈದರಾಬಾದ್: ಗರ್ಭಿಣಿ ಮತ್ತು ಪ್ರಸವ ವೇಳೆ ತಾಯಂದಿರುವ ಸಾವನ್ನಪ್ಪುತ್ತಿರುವ ಜಾಗತಿಕ ಅಂಕಿ ಅಂಶಗಳು ವಿಶ್ವ ಆರೋಗ್ಯ ಸಂಸ್ಥೆ ಕಳವಳಕ್ಕೆ ಕಾರಣವಾಗಿದೆ. ಅದರಲ್ಲೂ ಭಾರತದಲ್ಲಿ ಗರ್ಭಿಣಿಯರು ಮತ್ತು ತಾಯಂದಿರ ಸಾವಿನ ಸಂಖ್ಯೆ ಎಚ್ಚರಿಕೆಯ ಗಂಟೆಯನ್ನು ನೀಡಿದೆ. ವಿಶ್ವದಲ್ಲಿ ಸಂಭವಿಸುವ ಸಾವಿನಲ್ಲಿ ಶೇ 12ರಷ್ಟು ಭಾರತದಲ್ಲಿ ಸಂಭವಿಸುತ್ತಿದೆ ಎಂಬುದು ಕಳವಳಕಾರಿಯಾಗಿದೆ. ಭಾರತದಲ್ಲಿ ಸಕಾಲಕ್ಕೆ ಗರ್ಭಿಣಿಯರಿಗೆ ಆರೈಕೆ ಸಿಗದ ಕಾರಣ 45 ಸಾವಿರ ಮಹಿಳೆಯರು ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗರ್ಭಿಣಿಯರಿಗೆ ಮತ್ತು ತಾಯಂದಿರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಏಪ್ರಿಲ್ 11ರಂದು ರಾಷ್ಟ್ರೀಯ ಸುರಕ್ಷಾ ತಾಯ್ತನ ದಿನವನ್ನು ಭಾರತದಕಲ್ಲಿ ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ.
ಜಗತ್ತಿನೆಲ್ಲೆಡೆ ಗರ್ಭಿಣಿಯರ ಸಾವು ಆತಂಕವನ್ನು ಉಂಟು ಮಾಡುತ್ತಿದೆ. ವೈಟ್ ರಿಬ್ಬನ್ ಅಲೈಯನ್ಸ್ ಎಂಬ ಸರ್ಕಾರೇತರ ಸಂಸ್ಥೆಯು ಈ ವಿಷಯದ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಲು ಭಾರತ ಸರ್ಕಾರವನ್ನು ಮನವಿ ಮಾಡಿದ್ದಾರೆ. ಆದ್ದರಿಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪರವಾಗಿ, ಭಾರತ ಸರ್ಕಾರವು 2003 ರಲ್ಲಿ ಕಸ್ತೂರಿ ಬಾ ಗಾಂಧಿಯವರ ಜನ್ಮದಿನವಾದ ಏಪ್ರಿಲ್ 10 ರಂದು ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನವನ್ನು ಘೋಷಿಸಿತು.
ಪ್ರತಿ ವರ್ಷ ಭಾರತದಲ್ಲಿ ಪ್ರಸೂತಿ ವೇಳೆ 45 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ. ಅಂದರೆ ಲಕ್ಷದಲ್ಲಿ 167 ಮಹಿಳೆಯರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಂಖ್ಯೆಯನ್ನು ಕಡಿಮೆ ಮಾಡಬೇಕಿದ್ದು, ಇದಕ್ಕೆ ಅವಶ್ಯಕವಾದ ಆರೋಗ್ಯ ವ್ಯವಸ್ಥೆಯನ್ನು ಗರ್ಭಣಿಯರಿಗೆ ನೀಡಬೇಕಿದೆ. ಅಷ್ಟೇ ಅಲ್ಲದೇ, ಪ್ರಸೂತಿ ಬಳಿಕವೂ ಮಹಿಳೆಯರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಭಾರತ ಸರ್ಕಾರ 2003ರಲ್ಲಿ ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನವನ್ನು ಆಚರಿಸಿಕೊಂಡು ಬಂದಿದೆ. ಈ ಮೂಲಕ ಸಾವಿರಾರು ಗರ್ಭಿಣಿ ಮಹಿಳೆಯರಿಗೆ ಹಲವು ಆರೋಗ್ಯ ಸೌಲಭ್ಯ ನೀಡುವ ಪ್ರಯತ್ನ ನಡೆಸಲಾಗುತ್ತಿದೆ.
ಸಾವಿನ ಪ್ರಮಾಣ ಕಡಿಮೆ: ಹಲವು ಪ್ರಯತ್ನಗಳ ಬಳಿಕ ದೇಶದಲ್ಲಿ ತಾಯಂದಿರ ಸಾವಿನ ಪ್ರಮಾಣ ಕಡಿಮೆಯಾಗಿದೆ. 1990-2011-2013ರ ಅಂಕಿ ಅಂಶ ಪ್ರಕಾರ ಭಾರತದಲ್ಲಿ ತಾಯಂದಿರ ಸಾವಿನ ಪ್ರಮಾಣ ಶೇ 67ರಷ್ಟು ಕಡಿಮೆಯಾಗಿದೆ. ಕಳೆದ 20 ವರ್ಷಗಳಲ್ಲಿ ತಾಯಂದಿರ ಮರಣ ಪ್ರಮಾಣ ಶೇ 34.3 ರಷ್ಟು ಇಳಿಕೆಯಾಗಿದೆ. 2000ನೇ ಇಸವಿಯಲ್ಲಿ ಮಕ್ಕಳಿಗೆ ಜನ್ಮ ನೀಡುವ 1,00,000 ತಾಯಂದಿರ ಪೈಕಿ 339 ತಾಯಂದಿರು ಮೃತಪಡುತ್ತಿದ್ದರು. 2020ಕ್ಕೆ ಇದು 223ಕ್ಕೆ ಇಳಿಕೆಯಾಗಿದೆ. 2020 ರಲ್ಲಿ ಕಡಿಮೆ ಮತ್ತು ಕಡಿಮೆ ಮಧ್ಯಮ - ಆದಾಯದ ದೇಶಗಳಲ್ಲಿ ಸುಮಾರು ಶೇ 95ರಷ್ಟಯ ತಾಯಂದಿರ ಮರಣಗಳು ಸಂಭವಿಸಿವೆ.
ಇದರ ಮೂಲಕ ಪ್ರಸವ ನಂತರ ಮತ್ತು ಮುಂಚೆ ತುರ್ತು ಚಿಕಿತ್ಸಾ ಸೇವೆಯನ್ನು ನೀಡಬೇಕು ಎಂಬುದನ್ನು ತಿಳಿಸುತ್ತದೆ. ಸಮುದಾಯ ಕೇಂದ್ರಿತ ಆರೋಗ್ಯ ಕೇಂದ್ರಗಳು ಮಹಿಳೆ, ಮಕ್ಕಳನ್ನು ಭೇಟಿಯಾಗಿ ಅವರಿಗೆ ಪ್ರಸವ ಮುಂಚೆ ಮತ್ತು ನಂತರದಲ್ಲಿರುವ ಚುಚ್ಚುಮದ್ದು, ಪೋಷಕಾಂಶಗಳು ಮತ್ತು ಕುಟುಂಬ ಯೋಜನೆ ಸೇರಿದಂತೆ ಅಗತ್ಯವಿರುವ ಆರೋಗ್ಯ ಸೇವೆ ನೀಡಬೇಕಿದೆ. ಇನ್ನು ಸಮುದಾಯ ಕೇಂದ್ರಿತ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಉತ್ತಮ ತರಬೇತಿ ಹೊಂದಿದ ಆರೋಗ್ಯ ಕಾರ್ಯಕರ್ತರ ಕೊರತೆ ಮತ್ತು ಗರ್ಭಿಣಿ ಮಹಿಳೆಯರಿಗೆ ಔಷಧಗಳ ಉತ್ತಮ ಪೂರೈಕೆ ಇಲ್ಲದಿರುವಂತಹ ಅಪಾಯದ ಪ್ರಗತಿಗಳು ಕೂಡ ಕಾಣ ಬಹುದಾಗಿದೆ.
ಇದನ್ನೂ ಓದಿ: ವಿಶ್ವದ ಪ್ರತಿ 6 ಜನರಲ್ಲಿ ಒಬ್ಬರಿಗೆ ಬಂಜೆತನ ಸಮಸ್ಯೆ: WHO ವರದಿ