ನವದೆಹಲಿ: ಬುದ್ಧಿಮಾಂದ್ಯ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಭಾರತದಾದ್ಯಂತ ಉಚಿತ ಸಮಾಲೋಚನೆ ಮತ್ತು ಮಾರ್ಗದರ್ಶನ ನೀಡಲು ಹೆಲ್ಟ್‌ಲೈನ್ ಸಂಖ್ಯೆ 9100-181-181 ನ್ನು ಲೀಡಿಂಗ್ ಆಟಿಸಂ ಥೆರಪಿ ಸೆಂಟರ್ ನೆಟ್‌ವರ್ಕ್ 'ಪಿನಾಕಲ್ ಬ್ಲೂಮ್ಸ್ ನೆಟ್‌ವರ್ಕ್' ಪ್ರಾರಂಭಿಸಿದೆ.
ಈ ಸಹಾಯವಾಣಿ ಮೂಲಕ ಬುದ್ಧಿಮಾಂದ್ಯ ಮಕ್ಕಳನ್ನು ಹೊಂದಿರುವ ಕುಟುಂಬಗಳು ತಮ್ಮ ಮಗುವಿನ ಆರೋಗ್ಯ ಪರಿಸ್ಥಿತಿಗಳು, ಅವರ ಪಾಲನೆಯ ಬದಲಾವಣೆಗಳು ಮತ್ತು ನ್ಯೂನತೆಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ಉಚಿತ ಸಲಹೆ ಮತ್ತು ಮಾರ್ಗದರ್ಶನ ಪಡೆಯಬಹುದು.
ಆಟಿಸಂ ಎನ್ನುವುದು ಮಕ್ಕಳ ಮೇಲೆ ಪರಿಣಾಮ ಬೀರುವ ಮಾನಸಿಕ ಮತ್ತು ನರವೈಜ್ಞಾನಿಕ ಕಾಯಿಲೆಯಾಗಿದೆ. 104 ವರ್ಷಗಳಿಂದ, ನಮ್ಮ ವಿಜ್ಞಾನಕ್ಕೆ ಈ ಸಮಸ್ಯೆಗೆ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಇಂತಹ ಮಕ್ಕಳ ಪೋಷಕರು ಭಾವನಾತ್ಮಕವಾಗಿ ತೊಂದರೆಗೀಡಾಗಿದ್ದಾರೆ. ಅವರು ತಮ್ಮ ಮಕ್ಕಳನ್ನು ರಕ್ಷಿಸಲು ಮತ್ತು ಅವರ ನಂತರ ತಮ್ಮ ಮಕ್ಕಳ ಪರಿಸ್ಥಿತಿ ಹೇಗಿರುತ್ತದೆ ಎಂಬ ಯೋಚನೆಯೊಂದಿಗೆ ನೋವನ್ನು ಅನುಭವಿಸುತ್ತಿದ್ದಾರೆ" ಎಂದು ಹೇಳಿದೆ.
"ಬುದ್ಧಿಮಾಂದ್ಯ ಲಕ್ಷಣಗಳಿಂದ ಜನಿಸಿದ ಮಕ್ಕಳನ್ನು ಶಪಿಸಬಾರದು" ಎಂದು ಈ ಸಂದರ್ಭದಲ್ಲಿ ಪಿನಾಕಲ್ ಬ್ಲೂಮ್ಸ್ ನೆಟ್‌ವರ್ಕ್‌ನ ಮೂಲ ಕಂಪನಿಯಾದ ಭಾರತ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಡಾ.ಶ್ರೀಜಾ ರೆಡ್ಡಿ ಸಾರಿಪಲ್ಲಿ ಹೇಳಿದರು.
"ಪೋಷಕರು ತಮ್ಮ ಬುದ್ಧಿಮಾಂದ್ಯ ಮಕ್ಕಳು ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಂತೆ ಪ್ರೇರೇಪಿಸಬೇಕು. ಅವರ ಬುದ್ಧಿಮಾಂದ್ಯತೆಗೆ ಸಂಬಂಧಿಸಿದ ಸಂವೇದನಾ ಸಮಸ್ಯೆಗಳನ್ನು ನಿವಾರಿಸಬೇಕು ಮತ್ತು ಗುಣಮಟ್ಟದ ಚಿಕಿತ್ಸಾ ಸೇವೆಗಳನ್ನು ಒದಗಿಸುವ ಮೂಲಕ ಜೀವನವನ್ನು ರಚಿಸಿಕೊಳ್ಳಬೇಕು" ಎಂದು ಅವರು ಹೇಳಿದರು.