ETV Bharat / sukhibhava

ಹೊಟ್ಟೆಯ ಕೊಬ್ಬು ಕರಗಿಸಲು ಆಯುರ್ವೇದ ಪರಿಹಾರ ಇಲ್ಲಿದೆ...

ಹೊಟ್ಟೆಯ ಕೊಬ್ಬನ್ನು ಮಿತಿಗೊಳಿಸಲು ಆರೋಗ್ಯಕರ ದಿನಚರಿ ಅತ್ಯಗತ್ಯ. ಹೊಟ್ಟೆಯ ಕೊಬ್ಬು ಅಧಿಕವಾದಲ್ಲಿ, ಕಾಲಾನಂತರದಲ್ಲಿ ಈ ಸ್ಥಿತಿಯು ಆಸ್ತಮಾ, ಆಲ್​ಝೈಮರ್, ಬುದ್ಧಿಮಾಂದ್ಯತೆ ಮತ್ತು ಮೇದೋಜೀರಕ ಗ್ರಂಥಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

fat
fat
author img

By

Published : Mar 25, 2021, 8:11 PM IST

ಹೈದರಾಬಾದ್: ಅನಗತ್ಯ ಹೊಟ್ಟೆಯ ಕೊಬ್ಬು ಒಂದು ದೊಡ್ಡ ಅಪಾಯಕಾರಿ ಅಂಶವಾಗಿದ್ದು, ಅದು ಹೆಚ್ಚಿನ ರೋಗಗಳನ್ನು ಪ್ರಚೋದಿಸುತ್ತದೆ. ಹೊಟ್ಟೆಯ ಸುತ್ತಲೂ ಅತೀ ಬೇಗನೆ ಕೊಬ್ಬು ಬರುತ್ತದೆ. ಆದರೆ ಅದನ್ನು ಕಳೆದುಕೊಳ್ಳುವುದು ತುಂಬಾ ಕಷ್ಟ.

ಡಾ.ಪಿ.ವಿ.ರಂಗನಾಯಕುಲು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಆಯುರ್ವೇದ ಪರಿಹಾರಗಳ ಕುರಿತು ಮಾತನಾಡಿದ್ದಾರೆ.

ಸೊಂಟದ ರೇಖೆಯನ್ನು ಅಳೆಯುವ ಮೂಲಕ ನಾವು ಸೊಂಟದಲ್ಲಿ ಹೆಚ್ಚುವರಿ ಕೊಬ್ಬು ಇದೆಯೇ, ಇದು ನಮ್ಮ ಆರೋಗ್ಯದ ಮೆಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದಯೇ ಎಂದು ಕಂಡುಕೊಳ್ಳಬಹುದು. ಇದಕ್ಕಾಗಿ ಅಳತೆ ಟೇಪ್ ತೆಗೆದುಕೊಂಡು ಸೊಂಟದ ಮೂಳೆಗಳ ಮೇಲಿರುವ ಸೊಂಟದ ಭಾಗವನ್ನು ನಿಖರವಾಗಿ ಅಳೆಯಿರಿ.

ಮಹಿಳೆಯರಲ್ಲಿ, ಸೊಂಟದ ರೇಖೆ 32 ಇಂಚುಗಳಿಗಿಂತ ಕಡಿಮೆ ಅಥವಾ 80 ಸೆಂ.ಮೀ. ಹಾಗೂ ಪುರುಷರಲ್ಲಿ ಇದು 37 ಇಂಚು ಅಥವಾ 94 ಸೆಂ.ಮೀ ಗಿಂತ ಹೆಚ್ಚಿರಬಾರದು. ಬಾಡಿ ಮಾಸ್ ಇಂಡೆಕ್ಸ್ ಮಿತಿಯಲ್ಲಿರಬೇಕು, ಇಲ್ಲದಿದ್ದರೆ ಇದು ನಮ್ಮ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಹೊಟ್ಟೆಯ ಕೊಬ್ಬನ್ನು ಮಿತಿಗೊಳಿಸಲು ಆರೋಗ್ಯಕರ ದಿನಚರಿ ಅತ್ಯಗತ್ಯ. ಜಂಕ್ ಫುಡ್, ಅತಿಯಾದ ಆಲ್ಕೋಹಾಲ್, ವ್ಯಾಯಾಮದ ಕೊರತೆ ಹಾಗೂ ಒತ್ತಡವು ಹೊಟ್ಟೆಯ ಕೊಬ್ಬಿಗೆ ಕಾರಣವಾಗುತ್ತದೆ.

ಸಿಹಿ ಪಾನೀಯಗಳನ್ನು ಸೇವಿಸುವುದು, ಅತಿಯಾದ ಆಹಾರ ಸೇವನೆ, ಚಾಲನೆ ಮತ್ತು ಸವಾರಿಯಲ್ಲಿ ಹೆಚ್ಚು ಸಮಯ ಕಳೆಯುವುದು, ಹಗಲಿನ ವೇಳೆಯಲ್ಲಿ ನಿದ್ರೆ ಮಾಡುವುದು ಮತ್ತು ಆಲಸ್ಯದ ಜೀವನ ಶೈಲಿ ಹೊಟ್ಟೆಯ ಕೊಬ್ಬು ಹೆಚ್ಚಿಳಕ್ಕೆ ಅತ್ಯಂತ ಅಪಾಯಕಾರಿ.

ಕಾಲಾನಂತರದಲ್ಲಿ ಈ ಸ್ಥಿತಿಯು ಆಸ್ತಮಾ, ಆಲ್​ಝೈಮರ್, ಬುದ್ಧಿಮಾಂದ್ಯತೆ ಮತ್ತು ಮೇದೋಜ್ಜೀರಕ ಗ್ರಂಥಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಕಿಬ್ಬೊಟ್ಟೆಯ ಕೊಬ್ಬಿನ ವಿರುದ್ಧ ಹೋರಾಡುವ ಮಾರ್ಗಗಳು:

  • ಆಹಾರದಲ್ಲಿ ಕಾರ್ಬ್​ಗಳನ್ನು ಕಡಿಮೆ ಮಾಡುವುದು ಮತ್ತು ಪ್ರೋಟೀನ್ ಹೆಚ್ಚಿಸುವುದು.
  • ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು.
  • ಆಲ್ಕೋಹಾಲ್ ಪ್ರಮಾಣವನ್ನು ಮಿತಿಗೊಳಿಸಿ.
  • ಮಧ್ಯಂತರ ಉಪವಾಸ.
  • ಒತ್ತಡವನ್ನು ನಿಯಂತ್ರಿಸಿ.
  • ಎಣ್ಣೆಯುಕ್ತ ಭಕ್ಷ್ಯಗಳನ್ನು ಕಡಿಮೆ ಮಾಡಿ.
  • ಗುಗ್ಗುಲು, ತ್ರಿಫಲ ಮತ್ತು ಬೆಳ್ಳುಳ್ಳಿಯಂತಹ ಆಯುರ್ವೇದ ಗಿಡಮೂಲಿಕೆಗಳನ್ನು ಆಹಾರದಲ್ಲಿ ಬಳಸಿ.

ಸೊಂಟದ ರೇಖೆಯನ್ನು ಕಡಿಮೆ ಮಾಡಲು ಈ ಸಲಹೆಗಳನ್ನು ಅನುಸರಿಸಿ:

  • ಪ್ರತಿದಿನ 15 ಮಿಲಿ ಗ್ರಾಂ ಜೇನುತುಪ್ಪವನ್ನು 100 ಮಿಲಿ ಲೀಟರ್ ಬೆಚ್ಚಗಿನ ನೀರಿನೊಂದಿಗೆ ಸೇವಿಸಿ.
  • ಬೆಚ್ಚಗಿನ ನೀರಿನಿಂದ 2 ಗ್ರಾಂ ಫಾಲ್ಸ್ ಪೆಪ್ಪರ್ ಪೌಡರ್ (ವಿದಂಗ) ತೆಗೆದುಕೊಳ್ಳಿ.
  • ದಿನಕ್ಕೆ ಎರಡು ಬಾರಿ ಅಮೃತಾದಿ ಗುಗ್ಗುಲು 1 ಟ್ಯಾಬ್ ತೆಗೆದುಕೊಳ್ಳಿ.
  • ದಿನಕ್ಕೆ ಎರಡು ಬಾರಿ ನವಾಕಾ ಗುಗ್ಗುಲು 1 ಟ್ಯಾಬ್ ತೆಗೆದುಕೊಳ್ಳಿ.
  • ದಿನಕ್ಕೆ ಎರಡು ಬಾರಿ ತ್ರಿಫಲಾ ಗುಗ್ಗುಲು 1 ಟ್ಯಾಬ್ ತೆಗೆದುಕೊಳ್ಳಿ.
  • ಹಳೆಯ ಅಕ್ಕಿ ಮತ್ತು ಬಾರ್ಲಿಯನ್ನು ಸೇವಿಸಿ.
  • ಮಜ್ಜಿಗೆ ಕುಡಿಯಿರಿ.
  • ಕೆಲವು ತಿಂಗಳುಗಳ ಅವಧಿಯಲ್ಲಿ ಆಹಾರದ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಿ.

ಕಡಿಮೆ ಸಮಯದಲ್ಲಿ ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರಯತ್ನಿಸಬೇಡಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಒಂದು ಅಥವಾ ಎರಡು ವರ್ಷಗಳ ಅವಧಿಯಲ್ಲಿ ಕೊಬ್ಬನ್ನು ಕರಗಿಸಲು ಪ್ರಯತ್ನ ಮಾಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.