ETV Bharat / sukhibhava

ದೈಹಿಕ ಸಮಸ್ಯೆಯಿಂದ ತಾಯಂದಿರು ಮಗುವಿಗೆ ಹಾಲುಣಿಸುವುದನ್ನು ಬೇಗ ನಿಲ್ಲಿಸಬಹುದು; ಅಧ್ಯಯನದಲ್ಲಿ ಬಯಲು

ಶೇ 25ರಷ್ಟು ತಾಯಂದಿರು ಅಧಿಕ ಹಾಲುಣಿಸುತ್ತಾರೆ - ದೈಹಿಕ ಸಮಸ್ಯೆ ಬೇಗ ಹಾಲುಣಿಸುವಿಕೆ ನಿಲ್ಲಿಸಲು ಕಾರಣವಾದ ಅಂಶ - ಬೊಜ್ಜು ತಾಯಂದಿರನ್ನು ಕಾಡುವ ಪ್ರಮುಖ ಸಮಸ್ಯೆ

ದೈಹಿಕ ಸಮಸ್ಯೆಯಿಂದ ಮಗುವಿಗೆ ಬೇಗ ಹಾಲೂಣಿಸುವುದನ್ನು ನಿಲ್ಲಿಸಬಹುದು ತಾಯಂದಿರು; ಅಧ್ಯಯನದಲ್ಲಿ ಬಯಲು
Mothers may stop breastfeeding early due to physical problems study
author img

By

Published : Dec 26, 2022, 11:49 AM IST

ಪೆನ್ನಿಸೆಲ್ವಿನಿಯಾ: ನವಜಾತ ಶಿಶುಗಳಿಗೆ ಶೇ 80ರಷ್ಟು ತಾಯಂದಿರು ಹಾಲುಣಿಸುತ್ತಾರೆ. ಇದರಲ್ಲಿ ಶೇ 25ರಷ್ಟು ಜನರು ಯುನೈಟೆಡ್​ ಸ್ಟೇಟ್​ ಡಯಟರಿ ಮಾರ್ಗ ಸೂಚಿ ಅನುಸಾರ ತಮ್ಮ ಮಕ್ಕಳಿಗೆ ಅಧಿಕವಾಗಿ ಹಾಲುಣಿಸುತ್ತಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ತಿಳಿಸಿದೆ. ಸಾಮಾಜಿಕ ಪ್ರತ್ಯೇಕತೆ ಮತ್ತು ಔದ್ಯೋಗಿಕ ಒತ್ತಡವು ಹಾಲುಣಿಸುವಿಕೆ ಕಡಿಮೆ ಮಾಡಲು ಇರುವ ಪ್ರಮುಖ ಎರಡು ಕಾರಣ ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ.

ಹಾಲಿನ ಉತ್ಪಾದನೆ ಜೊತೆಗೆ ದೈಹಿಕ ಸಮಸ್ಯೆಗಳು ಕೂಡ ಬಹುಬೇಗ ಹಾಲುಣಿಸಲು ನಿಲ್ಲಿಸುವ ಕಾರಣಗಳಲ್ಲಿ ಒಂದಾಗಿದೆ. ಪೆನ್ನೆ ಸ್ಟೇಟ್​ ಮತ್ತು ಸಿನ್​ಸಿನ್ನಟಿ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ ಹಾಲುಣಿಸುವ ತಾಯಂದಿರ ಬೊಜ್ಜು ಕೂಡ ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ.

ದೀರ್ಘಕಾಲದ ಉರಿಯೂತದ ಸಮಸ್ಯೆ: ಹಾಲುಣಿಸುವ ತಾಯಂದಿರಲ್ಲಿ ಬೊಜ್ಜು ಅಪಾಯಕಾರಿ ಅಂಶವಾಗಿದೆ. ಬೊಜ್ಜು, ದೀರ್ಘಕಾಲದ ಉರಿಯೂತವು ದೇಹದ ಕೊಬ್ಬಿನಲ್ಲಿ ಪ್ರಾರಂಭವಾಗುತ್ತದೆ. ದೇಹದಾದ್ಯಂತ ಅಂಗಗಳು ಮತ್ತು ವ್ಯವಸ್ಥೆಗಳಿಗೆ ಪರಿಚಲನೆಯ ಮೂಲಕ ಹರಡುತ್ತದೆ. ಸಂಶೋಧನಾ ತಂಡದ ಪ್ರಕಾರ. ಉರಿಯೂತವು ದೇಹದ ಅಂಗಾಂಶಗಳಿಗೆ ರಕ್ತದಿಂದ ಕೊಬ್ಬಿನಾಮ್ಲಗಳನ್ನು ಹೀರಿಕೊಳ್ಳುವುದನ್ನು ಅಡ್ಡಿಪಡಿಸುತ್ತದೆ ಎಂದು ಹಿಂದಿನ ಸಂಶೋಧನೆಯಲ್ಲಿ ತಿಳಿಸಲಾಗಿದೆ.

ಕೊಬ್ಬಿನಾಮ್ಲದ ಅಗತ್ಯತೆ: ದೇಹಕ್ಕೆ ಶಕ್ತಿ ಉತ್ಪಾದನೆಗೆ ಕೊಬ್ಬಿನಾಮ್ಲ​ ಅಗತ್ಯವಾಗಿದೆ. ಹಾಲುಣಿಸುವ ತಾಯಂದಿರಲ್ಲಿ ಕೊಬ್ಬಿನಾಮ್ಲಗಳು ಬೆಳೆಯುತ್ತಿರುವ ಶಿಶುವನ್ನು ಪೋಷಿಸಲು ಅಗತ್ಯವಾದ ಕೊಬ್ಬುಗಳಿಗೆ ಬಿಲ್ಡಿಂಗ್ ಬ್ಲಾಕ್ಸ್ ಆಗಿ ಕಾರ್ಯನಿರ್ವಹಿಸುತ್ತವೆ. ಹಾಲು ಉತ್ಪಾದಿಸುವ ಸಸ್ತನಿ ಗ್ರಂಥಿಗಳಲ್ಲಿ ಕೊಬ್ಬಿನಾಮ್ಲಗಳನ್ನು ಹೀರಿಕೊಳ್ಳುವುದನ್ನು ತಡೆಯುವ ಮೂಲಕ ಉರಿಯೂತವು ಹಾಲಿನ ಉತ್ಪಾದನೆ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸಂಶೋಧಕರು ಊಹಿಸಿದ್ದಾರೆ.

ಈ ಊಹೆ ಪರೀಕ್ಷಿಸಲು, ಪೆನ್ ಸ್ಟೇಟ್‌ನಲ್ಲಿ ಪೌಷ್ಟಿಕಾಂಶ ವಿಜ್ಞಾನದಲ್ಲಿ ಪೋಸ್ಟ್‌ಡಾಕ್ಟರಲ್ ಸಹವರ್ತಿ ರಾಚೆಲ್ ವಾಕರ್, ಉರಿಯೂತದ ಕೊಬ್ಬಿನಾಮ್ಲಗಳ ಸೇವನೆಯನ್ನು ತಡೆಯುತ್ತದೆಯೇ ಎಂದು ವಿಶ್ಲೇಷಿಸಿದ ಸಂಶೋಧಕರ ತಂಡವನ್ನು ಮುನ್ನಡೆಸಿದರು. ಸಿನ್ಸಿನಾಟಿ ಮಕ್ಕಳ ಆಸ್ಪತ್ರೆ ಮತ್ತು ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದಿಂದ ಸಂಶೋಧಕರು ರಕ್ತ ಮತ್ತು ಹಾಲನ್ನು ವಿಶ್ಲೇಷಿಸಿದ್ದಾರೆ.

ರಕ್ತ ಮತ್ತು ಎದೆಹಾಲಿನ ಸಂಬಂಧ: ಮೂಲ ಅಧ್ಯಯನದಲ್ಲಿ, ಸಂಶೋಧಕರು 23 ತಾಯಂದಿರನ್ನು ಸಂಶೋಧನೆಗೆ ಒಳಪಡಿಸಿದಾಗ ಆಗಾಗ್ಗೆ ಎದೆ ಹಾಲು ಖಾಲಿಯಾಗುವುದರ ಹೊರತಾಗಿಯೂ ಕಡಿಮೆ ಹಾಲು ಉತ್ಪಾದನೆ ಹೊಂದಿದ್ದರು. 20 ತಾಯಂದಿರು ಮಧ್ಯಮ ಹಾಲು ಉತ್ಪಾದನೆ ಹೊಂದಿದ್ದರೆ, 18 ತಾಯಂದಿರು ಅಧಿಕ ಹಾಲುಣಿಸುತ್ತಿದ್ದರು. ಅಧ್ಯಯನಕ್ಕಾಗಿ ನಿಯಂತ್ರಣ ಗುಂಪು. ಸಂಶೋಧಕರು ಕೊಬ್ಬಿನ ಆಮ್ಲ ಮತ್ತು ರಕ್ತ ಮತ್ತು ಎದೆ ಹಾಲು ಎರಡರಲ್ಲೂ ಉರಿಯೂತದ ಮಾರ್ಕರ್ ಪ್ರೊಫೈಲ್‌ಗಳನ್ನು ವಿಶ್ಲೇಷಿಸಿದ್ದಾರೆ. ಈ ಫಲಿತಾಂಶಗಳನ್ನು ದಿ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟಿಸಲಾಗಿದೆ.

ಪರಸ್ಪರ ಸಂಬಂಧ: ಮಧ್ಯಮ ಹಾಲು ಉತ್ಪಾದನೆ ಮತ್ತು ಪ್ರತ್ಯೇಕವಾಗಿ ಹಾಲುಣಿಸುವ ಗುಂಪುಗಳಿಗೆ ಹೋಲಿಸಿದರೆ, ಕಡಿಮೆ ಹಾಲು ಉತ್ಪಾದನೆಯನ್ನು ಹೊಂದಿರುವ ತಾಯಂದಿರು ಗಮನಾರ್ಹವಾಗಿ ಹೆಚ್ಚಿನ ಬೊಜ್ಜು ಮತ್ತು ವ್ಯವಸ್ಥಿತ ಉರಿಯೂತದ ಜೈವಿಕ ಗುರುತುಗಳನ್ನು ಹೊಂದಿದ್ದಾರೆ. ಅವರು ತಮ್ಮ ಎದೆಹಾಲಿನಲ್ಲಿ ಕಡಿಮೆ ಪ್ರಮಾಣದ ದೀರ್ಘ-ಸರಪಳಿ ಕೊಬ್ಬಿನಾಮ್ಲಗಳನ್ನು ಹೊಂದಿದ್ದರು. ರಕ್ತ ಮತ್ತು ಹಾಲಿನ ಕೊಬ್ಬಿನಾಮ್ಲಗಳ ನಡುವಿನ ಸಂಬಂಧವನ್ನು ಅಡ್ಡಿಪಡಿಸಿದರು. ಹಾಲು ಮತ್ತು ರಕ್ತದ ಕೊಬ್ಬಿನಾಮ್ಲಗಳು ನಿಯಂತ್ರಣಗಳಲ್ಲಿ ಬಲವಾಗಿ ಪರಸ್ಪರ ಸಂಬಂಧ ಹೊಂದಿವೆ, ಆದರೆ ಕಡಿಮೆ ಅಥವಾ ಮಧ್ಯಮ ಹಾಲು ಉತ್ಪಾದನಾ ಗುಂಪುಗಳಲ್ಲಿ ಇವು ಕಂಡು ಬಂದಿಲ್ಲ

ತಿನ್ನುವ ಕೊಬ್ಬಿನಾಮ್ಲಗಳು ಮತ್ತು ರಕ್ತದಲ್ಲಿನ ಕೊಬ್ಬಿನಾಮ್ಲಗಳ ನಡುವೆ ಬಲವಾದ ಸಂಪರ್ಕವಿದೆ ಎಂದು ವಾಕರ್ ಹೇಳಿದರು. ಯಾರಾದರೂ ಸಾಕಷ್ಟು ಸಾಲ್ಮನ್‌ಗಳನ್ನು ತಿಂದರೆ, ಅವರ ರಕ್ತದಲ್ಲಿ ನೀವು ಹೆಚ್ಚು ಒಮೆಗಾ-3 ಗಳನ್ನು ಕಾಣಬಹುದು. ಬೇರೆಯವರು ಬಹಳಷ್ಟು ಹ್ಯಾಂಬರ್ಗರ್‌ಗಳನ್ನು ಸೇವಿಸಿದರೆ, ಅವರ ರಕ್ತದಲ್ಲಿ ನೀವು ಹೆಚ್ಚು ಸ್ಯಾಚುರೇಟೆಡ್ ಕೊಬ್ಬನ್ನು ಕಾಣಬಹುದು.

ಇದನ್ನೂ ಓದಿ: ದೇಹದ ಸ್ಥೂಲಕಾಯ ತಡೆಯುತ್ತದೆ CRTC1 ಜೀನ್- ಸಂಶೋಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.