ಪುರುಷರ ಚರ್ಮವು ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಗಟ್ಟಿಯಾಗಿರುತ್ತದೆ. ಅವರ ಚರ್ಮವು ಮಾಲಿನ್ಯ ಮತ್ತು ಸೂರ್ಯನ ಬೆಳಕಿನಂತಹ ಬಾಹ್ಯ ಅಂಶಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುತ್ತದೆ. ಕಳಪೆ ನಿದ್ರೆ, ಒತ್ತಡ ಮತ್ತು ಕಳಪೆ ಆಹಾರದ ಪರಿಣಾಮವಾಗಿ ಚರ್ಮವು ಇನ್ನಷ್ಟು ತೊಂದರೆಗಳನ್ನು ಎದುರಿಸುತ್ತದೆ. ಎಣ್ಣೆಯುಕ್ತ, ಶುಷ್ಕ, ಸಾಮಾನ್ಯ, ಸೂಕ್ಷ್ಮ ಅಥವಾ ಸಂಯೋಜಿತ ಚರ್ಮಕ್ಕೆ ನೀವು ಕನಿಷ್ಠ ಕಾಳಜಿ ವಹಿಸುವ ಅಗತ್ಯವಿದೆ.
1. ಕ್ಲೆನ್ಸಿಂಗ್ - ಮಾಲಿನ್ಯದಿಂದ ನಿಮ್ಮ ಚರ್ಮಕ್ಕೆ ಉಂಟಾದ ಸಮಸ್ಯೆಗಳಿಗೆ ಮತ್ತು ಎಣ್ಣೆ ಚರ್ಮವನ್ನು ಎದುರಿಸಲು ಶುದ್ಧೀಕರಣ ಪ್ರಮುಖ ಅವಶ್ಯಕತೆಯಾಗಿದೆ. ಕ್ಲೆನ್ಸರ್‌ನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸುವುದು ದಿನದ ಮೊದಲ ಹಂತವಾಗಿರಬೇಕು. ಬೆಳಗ್ಗೆ ಮತ್ತು ರಾತ್ರಿ, ಹೀಗೆ ದಿನಕ್ಕೆ ಎರಡು ಬಾರಿ ಕ್ಲೆನ್ಸರ್‌ನಿಂದ ನಿಮ್ಮ ಮುಖವನ್ನು ತೊಳೆಯುವುದರಿಂದ ನಿಮ್ಮ ಮುಖದ ಮೇಲಿನ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ನಿಮ್ಮ ಚರ್ಮದ ಪ್ರಕಾರಕ್ಕೆ ತಕ್ಕಂತೆ ಸರಿಯಾದ ಕ್ಲೆನ್ಸರ್ ಅನ್ನು ಆಯ್ಕೆ ಮಾಡುವುದರಿಂದ ನಿಮ್ಮ ರಂಧ್ರಗಳನ್ನು ಅನ್ಲಾಗ್ ಮಾಡಲು ಮತ್ತು ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಎಣ್ಣೆಯುಕ್ತ ಚರ್ಮಕ್ಕಾಗಿ AHA-BHA ಫೇಸ್‌ವಾಶ್ ಅನ್ನು ಶಿಫಾರಸು ಮಾಡಲಾಗಿದೆ. AHA ಎಂದರೆ ಆಲ್ಫಾ-ಹೈಡ್ರಾಕ್ಸಿ ಆಮ್ಲ, BHA ಎಂದರೆ ಬೀಟಾ-ಹೈಡ್ರಾಕ್ಸಿ ಆಮ್ಲ.
2. ಹೈಡ್ರೇಷನ್ - ಪುರುಷರ ಚರ್ಮವು ಕಾಲಾನಂತರದಲ್ಲಿ ವಾಯು ಮಾಲಿನ್ಯ, ಸಿಗರೇಟ್ ಹೊಗೆ ಮತ್ತು ಯುವಿ ಕಿರಣಗಳಲ್ಲಿ ಕಂಡುಬರುವ ರಾಸಾಯನಿಕಗಳಿಂದ ಪರಿಣಾಮಗಳನ್ನು ಎದುರಿಸುತ್ತವೆ. ಹೀಗಾಗಿ ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುವುದು ಬಹಳ ಮುಖ್ಯ. ಸಕ್ರಿಯ ಪದಾರ್ಥಗಳನ್ನು ಹೊಂದಿರುವ ಸೀರಮ್, ಮಾಯಿಶ್ಚರೈಸರ್ ಅನ್ನು ಬಳಸಿದರೆ ಅವು ಚರ್ಮದ ದುರಸ್ತಿಗೆ ಸಹಾಯ ಮಾಡುತ್ತದೆ. ನಿಮ್ಮ ಚರ್ಮ ಮತ್ತು ಸಮಸ್ಯೆಯನ್ನು ಆಧರಿಸಿ ಸೀರಮ್ ಅನ್ನು ಆಯ್ಕೆ ಮಾಡಬೇಕು.
3. ರಕ್ಷಣೆ - ಹೊರಗೆ ಹೋಗುವ ಮೊದಲು ಸನ್‌ಸ್ಕ್ರೀನ್ ಲೋಶನ್ ಅನ್ನು ಪ್ರತಿದಿನ ಬೆಳಗ್ಗೆ ಚರ್ಮದ ಆರೈಕೆಯ ಭಾಗವಾಗಿ ಬಳಸಬೇಕು. ಚರ್ಮದ ಆರೈಕೆಯಲ್ಲಿ ಇದು ಅಂತಿಮ ಹಂತವಾಗಿದೆ. ಜೆಲ್ ಆಧಾರಿತ ಸನ್‌ಸ್ಕ್ರೀನ್‌ಗಳು ದೈನಂದಿನ ಬಳಕೆಗೆ ಸೂಕ್ತವಾಗಿರಬೇಕು.
ಇಲ್ಲಿ ನೆನಪಿಡುವ ಪ್ರಮುಖ ವಿಷಯವೆಂದರೆ ನಾವು ಹೊರಗೆ ಹೋಗದಿದ್ದರೂ ಸನ್‌ಸ್ಕ್ರೀನ್ ಅನ್ನು ಬಳಸಬಹುದು. ಏಕೆಂದರೆ ಅದು ಯುವಿ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ. ನೀವು ನಿರಂತರವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಂಡರೆ, ನೀವು ಪ್ರತಿ ಮೂರು ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್ ಲೋಶನ್ ಅನ್ನು ಬಳಸುವುದು ಸೂಕ್ತ.
ಇದನ್ನೂ ಓದಿ: ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಾದರೆ ವ್ಯಾಯಾಮದಿಂದ ದೇಹವನ್ನು ಹುರಿಗಟ್ಟಿಸಿ : ಅಧ್ಯಯನ
ನಿರಂತರವಾಗಿ ಮಾಲಿನ್ಯ, ಹೊಗೆ ಮತ್ತು ಮುಂತಾದವುಗಳಿಗೆ ಒಡ್ಡಿಳ್ಳುವ ಪುರುಷರು ಆಂಟಿ - ಆಕ್ಸಿಡೆಂಟ್ ಸೀರಮ್ ಅಥವಾ ಪಿಗ್ಮೆಂಟೇಶನ್ ಸೀರಮ್ ಅನ್ನು ಬಳಸಬಹುದು. ಯಾವುದೇ ಮಾಯಿಶ್ಚರೈಸರ್, ಸೀರಮ್ ಅಥವಾ ಸನ್‌ಸ್ಕ್ರೀನ್ ಬಳಸಿ - ಆದರೆ ಅವು ನಿಮ್ಮ ಚರ್ಮದ ಪ್ರಕಾರಗಳಿಗೆ ಅನುಗುಣವಾಗಿರಬೇಕೆಂಬುದನ್ನು ಮರೆಯದಿರಿ. ಇವುಗಳನ್ನು ನಿತ್ಯ ಅನುಸರಿಸುವ ಮೂಲಕ ಆರೋಗ್ಯಕರ ಚರ್ಮ ನಿಮ್ಮದಾಗಿಸಿಕೊಳ್ಳಿ.