ನವದೆಹಲಿ: ಪ್ರತಿ ವರ್ಷ ಹೃದಯ ರಕ್ತನಾಳ (ಸಿವಿಡಿ), ಹೃದಯ ರೋಗದಿಂದಾಗಿ ಮಿಲಿಯನ್ಗಟ್ಟಲೆ ಜನರು ಅಕಾಲಿಕ ಸಾವನ್ನಪ್ಪುತ್ತಿದ್ದಾರೆ ಎಂದು ಹೊಸ ವರದಿ ಮಾಹಿತಿ ಬಹಿರಂಗ ಪಡಿಸಿದೆ. ಅಲ್ಲದೇ ಹೃದಯ ಆರೋಗ್ಯ ಸಂಬಂಧ ಜಗತ್ತಿನಾದ್ಯಂತ ತುರ್ತು ಕ್ರಮಕ್ಕೆ ಕರೆ ನೀಡಿದೆ.
ದಿ ನ್ಯೂ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಎಂಬ ಹೆಸರಿಯನಲ್ಲಿ ಜರ್ನಲ್ ಆಫ್ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಾಜಿಯನ್ನು ವಿಶೇಷ ಲೇಖನ ಪ್ರಕಟಿಸಲಾಗಿದೆ. ಈ ಲೇಖನದಲ್ಲಿ ಆರೋಗ್ಯದ ಅಂದಾಜಿನ ಮಾಹಿತಿ ಒದಗಿಸಲಾಗಿದೆ. 1990- 2022ರವರೆಗೆ 21 ಜಾಗತಿಕ ಪ್ರದೇಶದಲ್ಲಿ ಹೃದಯ ರಕ್ತನಾಳದ ಅಪಾಯದ ಅಂಶಗಳ ಪರಿಣಾಮ ಕುರಿತು ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶ್ಲೇಷಣೆ ನಡೆಸಲಾಗಿದೆ.
ವರದಿಯಲ್ಲಿ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಆಹಾರದ ಅಪಾಯ ಮತ್ತು ವಾಯು ಮಾಲಿನ್ಯ ಅಧಿಕ ಪ್ರಮಾಣದ ಸಿವಿಡಿ ಪ್ರಕರಣಕ್ಕೆ ಕಾರಣವಾದ ಅಂಶವಾಗಿದೆ ಎಂದು ತಿಳಿಸಲಾಗಿದೆ. ಸಿವಿಡಿಯಿಂದ ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಮಿಡಲ್ ಈಸ್ಟ್ಗಳ ಹೆಚ್ಚಿನ ಪ್ರಮಾಣದ ಹೊರೆ ಹೊಂದಿರುವುದಾಗಿ ತಿಳಿಸಿದೆ.
ಹೃದಯ ರಕ್ತನಾಳ ಸಮಸ್ಯೆ ನಿರಂತರ ಸವಾಲನ್ನು ಹೊಂದಿದ್ದು, ಇದು ಅಕಾಲಿ ಮತ್ತು ತಡೆಗಟ್ಟಬಹುದಾದ ಸಾವಿನ ಪ್ರಕರಣವನ್ನು ಹೊಂದಿದೆ ಎಂದು ವಾಷ್ಟಿಂಗ್ಟನ್ ಯುನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಗ್ರೇಗೊರಿ ಎ ರೊತ್ ತಿಳಿಸಿದ್ದಾರೆ. ಹಲವು ದುಬಾರಿಯಲ್ಲದ, ಪರಿಣಾಮಕಾರಿ ಚಿಕಿತ್ಸೆ ಇದೆ. ನಾವು ಅಪಾಯದ ಅಂಶವನ್ನು ಪತ್ತೆ ಮತ್ತು ಚಿಕಿತ್ಸೆಯ ಬಗ್ಗೆ ತಿಳಿದಿರಬೇಕು. ಜನರು ತಮ್ಮ ಆರೋಗ್ಯ ಸುಧಾರಣೆ ಮಾಡಲು ಸರಳ ಆರೋಗ್ಯಕರ ಆಯ್ಕೆ ಮಾಡಬೇಕಾಗುತ್ತದೆ. ದೇಶವೂ ಹೃದಯರಕ್ತನಾಳದ ರೋಗವನ್ನು ತಡೆಯಬಹುದಾದ ಮತ್ತು ಚಿಕಿತ್ಸೆ ನೀಡುವ ಪ್ರಯತ್ನ ಕೂಡಾ ಹೊಂದಿದೆ.
ಇನ್ನು ರಕ್ತದ ಕೊರತೆಯ ಹೃದಯ ರೋಗವೂ ಜಾಗತಿಕ ಸಿವಿಡಿ ಸಾವಿನ ಸಂಖ್ಯೆಯಲ್ಲಿ ಪ್ರಮುಖ ಕಾರಣವಾಗಿದೆ. ಇದು 1,00,000 ವಯೋ ಗುಣಮಟ್ಟ ದರದಲ್ಲಿ 108.8 ಸಾವಿನ ದರವನ್ನು ಹೊಂದಿದೆ. ಇದರ ಬಳಿಕ ಮತ್ತೊಂದು ಕಾರಣ ಎಂದರೆ ಹ್ಯಾಮರೇಜ್ ಮತ್ತು ರಕ್ತ ಕೊರತೆಯ ಪಾರ್ಶ್ವವಾಯು.
ಅಧಿಕ ಸಿಸ್ಟೊಲಿಕ್ ರಕ್ತದೊತ್ತಡವೂ ಕೂಡ ಅತಿ ದೊಡ್ಡ ಕೊಡುಗೆಯನ್ನು ಸಿವಿಡಿ ಸಾವಿನ ದರದಲ್ಲಿ ಹೊಂದಿದೆ. ಆಹಾರದ ಅಪಾಯವೂ ಕೂಡ ವಯಸ್ಸಿನ ಪ್ರಮಾಣಿತದ ನಡುವಳಿಕೆ ಅಪಾಯದ ಕೊಡುಗೆ ನೀಡುತ್ತದೆ. ವಿಶೇಷವಾಗಿ ವಾಯು ಮಾಲಿನ್ಯದ ಕಣಗಳು ಪರಿಸರದ ಅಪಾಯವನ್ನು ಹೊಂದಿದೆ.
1990ರಿಂದ 2022ರವರೆಗೆ ಸಿವಿಡಿಯಿಂದ ಜಾಗತಿಕ ಸಾವಿನ ಸಂಖ್ಯೆ ಹೆಚ್ಚಿದೆ. 1990ರಲ್ಲಿ 12.4 ಮಿಲಿಯನ್ ಪ್ರಕರಣಗಳು 2022ರಲ್ಲಿ 19.8 ಮಿಲಿಯನ್ ಪ್ರಕರಣಗಳು ಕಂಡು ಬಂದಿದ್ದು, ಇದು ಜನಸಂಖ್ಯೆ ಬೆಳವಣಿಗೆ ಮತ್ತು ವಯಸ್ಸಾಗುವಿಕೆ ಕೊಡುಗೆ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಶಸ್ತ್ರಚಿಕಿತ್ಸೆಗೂ ಮುನ್ನ ಧಾರ್ಮಿಕ ಗ್ರಂಥಗಳನ್ನು ಓದಲು ಹೇಳುವ ವೈದ್ಯರು!