ETV Bharat / sukhibhava

ಋತುಬಂಧವು ಒಂದು ಹಂತ, ರೋಗವಲ್ಲ : ಆಯುರ್ವೇದ ತಜ್ಞರ ಸಲಹೆಗಳು ಇಲ್ಲಿವೆ..

ದೈಹಿಕ ಮಾತ್ರವಲ್ಲ, ಮಾನಸಿಕ ಸಮಸ್ಯೆಗಳೂ ಉಂಟಾಗುತ್ತವೆ. ಋತುಬಂಧದ ಸಮಯದಲ್ಲಿ ಮಹಿಳೆಯು ಒತ್ತಡ, ಖಿನ್ನತೆ, ಮನಸ್ಥಿತಿ ಬದಲಾವಣೆಗಳು ಮತ್ತು ನಿದ್ರಾಹೀನತೆ ಅನುಭವಿಸುತ್ತಾಳೆ. ಎಲ್ಲಾ ರೋಗಲಕ್ಷಣಗಳನ್ನು ಆಯುರ್ವೇದ ಔಷಧಿಗಳ ಸಹಾಯದಿಂದ 3-4 ತಿಂಗಳುಗಳಲ್ಲಿ ನಿವಾರಿಸಬಹುದು ಎಂದು ತಜ್ಞರು ಹೇಳುತ್ತಾರೆ..

menopause
menopause
author img

By

Published : Mar 24, 2021, 9:06 PM IST

Updated : Mar 24, 2021, 9:13 PM IST

ಹೈದರಾಬಾದ್ : ಪ್ರತಿ ಮಹಿಳೆ ಸಾಮಾನ್ಯವಾಗಿ 45-55 ವರ್ಷ ವಯಸ್ಸಿಗೆ ತಲುಪಿದಾಗ ಮೆನೋಪಾಸ್(Menopause) ಅಥವಾ ಋತುಬಂಧ ಎಂಬ ಸಾಮಾನ್ಯ ಸ್ಥಿತಿಯ ಮೂಲಕ ಹಾದು ಹೋಗುತ್ತಾಳೆ. ಇದು ಮಹಿಳೆಯ ಋತುಚಕ್ರವು ಕೊನೆಗೊಳ್ಳುವ ಸ್ಥಿತಿಯಾಗಿದ್ದು, ಇದರ ಬಳಿಕ ಆಕೆ ಗರ್ಭ ಧರಿಸಲು ಸಾಧ್ಯವಿಲ್ಲ.

ಈ ಸಮಯದಲ್ಲಿ ದೇಹದಲ್ಲಿನ ಹಾರ್ಮೋನುಗಳಲ್ಲಿನ ಬದಲಾವಣೆಯಿಂದಾಗಿ, ಮಹಿಳೆಯು ಕೆಲವು ಇತರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಅದು ರೋಗದ ಲಕ್ಷಣಗಳಂತೆ ಕಾಣಿಸಬಹುದು. ಆದರೆ, ಅದು ಯಾವುದೇ ರೋಗವಲ್ಲ.

ಆದ್ದರಿಂದ ಅಂತಹ ಸಮಸ್ಯೆಗಳನ್ನು ಎದುರಿಸಲು, ಆಯುರ್ವೇದದಲ್ಲಿ ಪಿಹೆಚ್‌ಡಿ ಮಾಡಿರುವ ತಜ್ಞ ಡಾ. ಪಿ ವಿ ರಂಗನಾಯಕುಲು, ಆಯುರ್ವೇದದಲ್ಲಿ ಸಾಕಷ್ಟು ಪರಿಣಾಮಕಾರಿ ಔಷಧಿಗಳು ಮತ್ತು ಇತರ ಪರಿಹಾರಗಳಿವೆ ಎಂದು ತಿಳಿಸಿದ್ದಾರೆ. ಇದು ಮಹಿಳೆಯು ಋತುಬಂಧದ ಸಮಯದಲ್ಲಿ ಎದುರಿಸುವ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಋತುಬಂಧ ಎಂದರೇನು? : ಒಬ್ಬ ಮಹಿಳೆ 45-55 ವರ್ಷ ವಯಸ್ಸಿನಲ್ಲಿ ಒಂದಿಡೀ ವರ್ಷ ಮುಟ್ಟಾಗದಿದ್ದರೆ, ಇದನ್ನು ಋತುಬಂಧ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಹಾರ್ಮೋನುಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಮತ್ತು ಅವಳು ಅಂಡೋತ್ಪತ್ತಿ ಮಾಡುವುದನ್ನು ನಿಲ್ಲಿಸುತ್ತಾಳೆ.

ಈ ಸಮಯದಲ್ಲಿ ದೇಹದಲ್ಲಿ ಸಂತಾನೋತ್ಪತ್ತಿ ಹಾರ್ಮೋನ್ ಈಸ್ಟ್ರೊಜೆನ್ ಮತ್ತು ಕಿರುಚೀಲಗಳ ಉತ್ಪಾದನೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಋತುಚಕ್ರಗಳು ಕೂಡ ನಿಲ್ಲುತ್ತವೆ ಮತ್ತು ಈ ಹಂತವನ್ನು ಋತುಬಂಧ ಎಂದು ಕರೆಯಲಾಗುತ್ತದೆ.

ಕೆಲ ಮಹಿಳೆಯರಲ್ಲಿ ಕೆಲ ದೈಹಿಕ ಪರಿಸ್ಥಿತಿಗಳು ಅಥವಾ ಇತರ ಕೆಲವು ಕಾರಣಗಳಿಂದಾಗಿ ಋತುಬಂಧದ ಲಕ್ಷಣಗಳು 29-34 ವರ್ಷ ವಯಸ್ಸಿನ ನಡುವೆ ಕಾಣಿಸಿಕೊಳ್ಳಲು ಪ್ರಾರಂಭಿಸಬಹುದು. ಅಂತಹ ಸ್ಥಿತಿಯಲ್ಲಿ ತಕ್ಷಣವೇ ವೈದ್ಯಕೀಯ ಸಹಾಯ ಪಡೆಯುವುದು ಬಹಳ ಮುಖ್ಯ.

ಆಯುರ್ವೇದ ಚಿಕಿತ್ಸೆ : ಋತುಬಂಧದ ಸಮಯದಲ್ಲಿ ದೇಹದಲ್ಲಿನ ಈ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ಆಯುರ್ವೇದದಲ್ಲಿ ಅನೇಕ ಗಿಡಮೂಲಿಕೆಗಳು ಮತ್ತು ಪರಿಹಾರಗಳಿವೆ ಎಂದು ಡಾ.ರಂಗನಾಯಕುಲು ವಿವರಿಸಿದ್ದಾರೆ. ಇದು ಋತುಬಂಧದಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

40 ವರ್ಷ ವಯಸ್ಸಿನ ಹೊತ್ತಿಗೆ ಹೆಚ್ಚಿನ ಮಹಿಳೆಯರು ನಿಯಮಿತ ಕೆಲಸಗಳನ್ನು ಮಾಡುವಾಗ ದುರ್ಬಲ ಮತ್ತು ದಣಿದ ಭಾವನೆಯನ್ನು ಅನುಭವಿಸುಲು ಪ್ರಾರಂಭಿಸುತ್ತಾರೆ. ಇದಲ್ಲದೆ, ಚರ್ಮದ ಮೇಲೆ ಸುಕ್ಕುಗಳು, ಕೂದಲು ಬಿಳಿಯಾಗುವುದು, ಕೂದಲು ಉದುರುವುದು, ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಮತ್ತು ಇತರ ಅನೇಕ ಸಮಸ್ಯೆಗಳೂ ಈ ಸಂದರ್ಭದಲ್ಲಿ ಕಾಡಲಾರಂಭಿಸುತ್ತವೆ.

ಇದರ ಜೊತೆಗೆ ತೂಕ ಹೆಚ್ಚಾಗುವುದು, ಯೋನಿಯಲ್ಲಿ ಕಿರಿಕಿರಿ ಮತ್ತು ಶುಷ್ಕತೆ, ಲೈಂಗಿಕ ಪ್ರಚೋದನೆ ಅಥವಾ ಕಾಮಾಸಕ್ತಿಯ ನಷ್ಟ, ರಾತ್ರಿಯಲ್ಲಿ ಅತಿಯಾಗಿ ಬೆವರುವುದು, ದೇಹದಲ್ಲಿನ ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಗಳಿಂದಾಗಿ ನೋವು ಮತ್ತು ಇತರ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ದೈಹಿಕ ಮಾತ್ರವಲ್ಲ, ಮಾನಸಿಕ ಸಮಸ್ಯೆಗಳೂ ಉಂಟಾಗುತ್ತವೆ. ಋತುಬಂಧದ ಸಮಯದಲ್ಲಿ ಮಹಿಳೆಯು ಒತ್ತಡ, ಖಿನ್ನತೆ, ಮನಸ್ಥಿತಿ ಬದಲಾವಣೆಗಳು ಮತ್ತು ನಿದ್ರಾಹೀನತೆ ಅನುಭವಿಸುತ್ತಾಳೆ. ಎಲ್ಲಾ ರೋಗಲಕ್ಷಣಗಳನ್ನು ಆಯುರ್ವೇದ ಔಷಧಿಗಳ ಸಹಾಯದಿಂದ 3-4 ತಿಂಗಳುಗಳಲ್ಲಿ ನಿವಾರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಈ ಸಂದರ್ಭದಲ್ಲಿ ಸಹಾಯಕವಾಗುವ ಕೆಲವು ಹೀಗಿವೆ..

ಆಯುರ್ವೇದ ಔಷಧಿಗಳು :

  • 25 ಮಿಲಿ ಲಿಟರ್ ಅಶೋಕರಿಷ್ಟವನ್ನು ಅದೇ ಪ್ರಮಾಣದ ನೀರಿನೊಂದಿಗೆ ಬೆರೆಸಿ 3 ತಿಂಗಳ ಕಾಲ ದಿನಕ್ಕೆ ಎರಡು ಬಾರಿ ಸೇವಿಸಿ.
  • ರಾತ್ರಿ ಮಲಗುವ ಮುನ್ನ 3 ಗ್ರಾಂ ಅಶ್ವಗಂಧ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿ.
  • ಊಟ ಮಾಡುವ ಮೊದಲು 250 ಮಿ.ಗ್ರಾಂ ಪ್ರವಲ್ ಪಿಶ್ತಿಯನ್ನು ದಿನಕ್ಕೆ ಎರಡು ಬಾರಿ ಹಾಲಿನೊಂದಿಗೆ ಸೇವಿಸಿ.

ಋತುಬಂಧದ ಸಮಯದಲ್ಲಿ ಮಹಿಳೆಯರು ತಮ್ಮ ದೈನಂದಿನ ಆಹಾರಕ್ರಮದಲ್ಲಿ ಅರ್ಜುನ ಗುಗ್ಗುಲು, ಬೆಳ್ಳುಳ್ಳಿ, ಸೋಂಪು ಬೀಜಗಳು, ಏಲಕ್ಕಿ ಸೇರಿಸಬೇಕು. ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರು ಯಾವುದೇ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು.

ಋತುಬಂಧಕ್ಕೊಳಗಾಗುವ ಮಹಿಳೆಯರು ವ್ಯಾಯಾಮ, ಯೋಗ ಮತ್ತು ಧ್ಯಾನದಂತಹ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಅದನ್ನು ತಮ್ಮ ದಿನಚರಿಯ ಒಂದು ಭಾಗವಾಗಿಸಿಕೊಳ್ಳಬೇಕು. ಅವರು ತಮ್ಮ ಆಹಾರದ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು ಎಂದು ಡಾ.ರಂಗನಾಯಕುಲು ವಿವರಿಸಿದ್ದಾರೆ.

Last Updated : Mar 24, 2021, 9:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.