ಗ್ರೀನ್ ಮೆಡಿಟರೇನಿಯನ್ ಡಯಟ್ ನಿಮ್ಮ ಮೆದುಳನ್ನು ಇನ್ನು ಯೌವನ ಭರಿತವಾಗಿಡಲು ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಪ್ರತಿ ನಿತ್ಯ ವಾಲ್ನಟ್, ಗ್ರೀನ್ ಟೀ ಮತ್ತು ಕಡಿಮೆ ಪ್ರಮಾಣದ ಕೆಂಪು, ಅಥವಾ ಸಂಸ್ಕರಿತ ಮಾಂಸ ಸೇವನೆ ಮಾಡುವುದರಿಂದ ಮಿದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಕಾಣಬಹುದು. ಇದರಿಂದ ಮೆದುಳಿಗೆ ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಹುದು ಎಂದು ಹೊಸ ಸಂಶೋಧನೆ ತಿಳಿಸಿದೆ.
ಗ್ರೀನ್ ಮೆಡಿಟರೇನಿಯನ್ ಡಯಟ್ನಲ್ಲಿ ಪ್ರತಿ ನಿತ್ಯದ ಆಹಾರ ಪದ್ಧತಿ ಇದರಂತೆ ಇರುತ್ತದೆ. 28 ಗ್ರಾಂ ವಾಲ್ನಟ್, 3-4 ಕಪ್ ಗ್ರೀನ್ ಟೀ ಮತ್ತು ಒಂದು ಕಪ್ ವೊಲ್ಫಿಯಾ ಗ್ಲೊಬೊಸಾ (ಮಂಕಾಯಿ) ಹಸಿರು ಸಸ್ಯಾಧಾರಿತ ಡ್ಯೂಕ್ವೀಡ್ ಪ್ರತಿನಿತ್ಯ ಸೇವಿಸಬೇಕು. ಹೀಗೆ 18 ತಿಂಗಳ ಕಾಲ ಸೇವನೆ ಮಾಡುವುದರಿಂದ ಲಾಭವಿದೆ. ಹಸಿರು ಸದ್ಯ ಮಂಕಾಯಿಯಲ್ಲಿ ಹೆಚ್ಚಿನ ಕಬ್ಬಿಣ, ಬಿ12, ಮತ್ತು 200 ವಿಧದ ಪೊಲಿಪೆನೊಲ್ಸ್ ಮತ್ತು ಪ್ರೊಟೀನ್ ಇರುತ್ತದೆ.
ಸ್ಥೂಲಕಾಯವೂ ಮೆದುಳಿನ ವಯಸ್ಸಾಗುವಿಕೆ ಮೇಲೆ ಹೆಚ್ಚಿನ ಸಂಬಂಧ ಹೊಂದಿದೆ. ಸ್ಥೂಲಕಾಯ ನಿರೀಕ್ಷೆಗೆ ಮೀರಿ ಬಲು ಬೇಗ ಮೆದುಳಿಗೆ ವಯಸ್ಸಾಗುವಂತೆ ಮಾಡುತ್ತದೆ. ಈ ಅಧ್ಯಯನವನ್ನು ಜರ್ನಲ್ ಇ ಲೈಫ್ನಲ್ಲಿ ಪ್ರಕಟಿಸಲಾಗಿದೆ. ಫಲಿತಾಂಶದಲ್ಲಿ ಗ್ರೀನ್ ಮೆಡಿಟರೇನಿಯನ್ ಡಯಟ್ ದೇಹದ ತೂಕವನ್ನು ಶೇ 1ರಷ್ಟು ಕಡಿಮೆ ಮಾಡಿದೆ. 18 ತಿಂಗಳ ಡಯಟ್ನಲ್ಲಿ ಮೆದುಳಿನ ವಯಸ್ಸನ್ನು 9 ತಿಂಗಳು ಕಡಿಮೆ ಮಾಡಿದೆ ಎಂದು ತಿಳಿಸಿದೆ.
ಈ ವಯಸ್ಸಾಗುವಿಕೆ ಯಕೃತ್ತಿನ ಕೊಬ್ಬು ಮತ್ತು ಯಕೃತ್ತಿನ ಕಿಣ್ವಗಳ ಇಳಿಕೆಯಂತಹ ಇತರ ಜೈವಿಕ ಕ್ರಮಗಳಲ್ಲಿನ ಬದಲಾವಣೆಗೆ ಸಂಬಂಧಿಸಿದೆ. ಯಕೃತ್ ಕೊಬ್ಬು ಹೆಚ್ಚಳ ಮತ್ತು ಯಕೃತ್ ಕಿಣ್ವಗಳ ಉತ್ಪಾದನೆ ಮೆದುಳಿನ ಆರೋಗ್ಯದ ಮೇಲೆ ವಿಶೇಷವಾಗಿ ಅಲ್ಝೈಮರ್ ರೋಗದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇಸ್ರೇಲ್ನ ಬೆನ್ ಗುರಿಒನ್ ಯುನಿವರ್ಸಿಟಿ ಸಂಶೋಧಕರು ಈ ಅಧ್ಯಯನಕ್ಕೆ 102 ಭಾಗಿದಾರರನ್ನು ಅಧ್ಯಯನಕ್ಕೆ ಒಳಪಡಿಸಿದ್ದು, ಇವರೆಲ್ಲಾ ಸ್ಥೂಲಕಾಯದ ಸಮಸ್ಯೆ ಹೊಂದಿದ್ದರು. ಅಧ್ಯಯನ ಆರಂಭದಿಂದ ಅಂತ್ಯದವರೆಗೆ ಪರಿಶೀಲನೆ ಮಾಡಲು ಮೆದುಳಿನ ಸ್ಕ್ಯಾನ್ ನಡೆಸಿದ್ದಾರೆ. ಈ ವೇಳೆ ಜೀವನಶೈಲಿಯ ಬದಲಾವಣೆ, ವಯಸ್ಸಾಗುವಿಕೆ ಮೇಲೆ ಪರಿಣಾಮ ಗಮನಿಸಲಾಗಿದೆ.
ನಮ್ಮ ಅಧ್ಯಯನ ಕಡಿಮೆ ಸಂಸ್ಕರಿತ ಆಹಾರ, ಸಿಹಿ ಮತ್ತು ಪಾನೀಯಗಳು ಆರೋಗ್ಯಯುತ ಜೀವನಶೈಲಿ ಮೆದುಳಿನ ಆರೋಗ್ಯದ ಮೇಲೆ ಬೀರುವ ಪರಿಣಾಮ ಗಮನಿಸಲಾಗಿದೆ ಎಂದು ಡಾ ಗಿಡೊನ್ ಲೆವಕ್ವೊ ತಿಳಿಸಿದ್ದಾರೆ.
ಶೇ 1ರಷ್ಟು ತೂಕದ ನಷ್ಟ ಕೂಡ ಮೆದುಳಿನ ಆರೋಗ್ಯಕ್ಕೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದು ಮೆದುಳಿನ ಆಯಸ್ಸನ್ನು 9 ತಿಂಗಳು ಕಡಿಮೆ ಮಾಡುತ್ತದೆ. ಇದರ ಪತ್ತೆಗೆ ನಮ್ಮ ಉತ್ತೇಜನವಿದೆ ಎಂದು ಪ್ರೋ ಗಲಿಯಾ ಅವಿದನ್ ತಿಳಿಸಿದ್ದಾರೆ.
ಜಾಗತಿಕವಾಗಿ ಸ್ಥೂಲಕಾಯ ಹೆಚ್ಚುತ್ತಿರುವುದರಿಂದ ಮಿದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮಗಳ ಮಧ್ಯಸ್ಥಿಕೆ ಪತ್ತೆ ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ವಿವರಿಸಿದೆ.
ಇದನ್ನೂ ಓದಿ: ಪ್ರಾಸ್ಪೇಟ್ ಕ್ಯಾನ್ಸರ್ ತಡೆಗೆ ಮೆಡಿಟರೇನಿಯನ್ ಡಯಟ್ ಪರಿಣಾಮಕಾರಿ