ETV Bharat / sukhibhava

ನಿಮ್ಮ ಡಯಟ್‌ನಲ್ಲಿ ಈ ಆಹಾರ ಸೇರಿಸಿ, ಕ್ಯಾನ್ಸರ್‌ ಅಪಾಯ ಕಡಿಮೆ ಮಾಡಿಕೊಳ್ಳಿ!

ಕ್ಯಾನ್ಸರ್​ ಕಾಯಿಲೆಯಿಂದ ಪಾರಾಗಲು ಈ ಕೆಳಗಿನ ಕೆಲವು ಆಹಾರ ಪದಾರ್ಥಗಳನ್ನು ಬಳಸುವುದು ಉತ್ತಮ.

Nutritious foods that can prevent cancer
ಕ್ಯಾನ್ಸರ್​ನ್ನು ತಡೆಗಟ್ಟಬಲ್ಲ ಪೌಷ್ಟಿಕಾಂಶ ಆಹಾರಗಳು
author img

By

Published : Feb 5, 2023, 12:21 PM IST

ಅಂದಾಜು 100 ಜನರಲ್ಲಿ 75 ಮಂದಿ ಆರೋಗ್ಯದ ವಿಚಾರದಲ್ಲಿ ತುಂಬಾ ಕಾಳಜಿವಹಿಸುತ್ತಾರೆ ಎಂದಿಟ್ಟುಕೊಳ್ಳೋಣ. ಇವರು ತಮ್ಮ ದೇಹ ಸಮತೋಲನ ಗಮನಿಸಿ ಅದಕ್ಕೆ ಪೂರಕ ಆಹಾರದ ಕ್ರಮವನ್ನೇ ಅನುಸರಿಸುತ್ತಾರೆ. ಆದರೆ ಉಳಿದ 25 ಮಂದಿ ಇದ್ಯಾವುದಕ್ಕೂ ಕ್ಯಾರೆನ್ನದೆ ಬಾಯಿ ರುಚಿಗೆ ತಕ್ಕಂತೆ ಆಹಾರ​ ಸೇವಿಸುತ್ತಾರೆ. ಇದು ಉತ್ತಮ ಆರೋಗ್ಯ ಪದ್ಧತಿ ಅಲ್ಲ.

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆ ಕನಿಷ್ಠ ತಿಳುವಳಿಕೆ ಬೇಕು. ಇದರಿಂದ ನೀವು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬಹುದು. ಕೆಲವು ಹಾನಿಕಾರಕ ರೋಗಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಮುಖ್ಯವಾಗಿ ಸರಿಯಾದ ಪೌಷ್ಟಿಕಾಂಶ ತೆಗೆದುಕೊಳ್ಳುವುದರಿಂದ ಕ್ಯಾನ್ಸರ್​ ಕಾಯಿಲೆಯಿಂದಲೂ ಪಾರಗಬಹುದಾಗಿದೆ. ಕ್ಯಾನ್ಸರ್​ ತಡೆಗೆ ಸಂಶೋಧಕರು ಹೊಸ ವಿಧಾನ, ತಂತ್ರಜ್ಞಾನ, ಔಷಧಿ ಮತ್ತು ಚುಚ್ಚು ಮದ್ದಿನ ಮೂಲಕ ಪರಿಹಾರೋಪಾಯಗಳನ್ನು ಅಭಿವೃದ್ದಿಪಡಿಸಿದ್ದಾರೆ.

ಆದರೂ ಜಗತ್ತಲ್ಲಿ ಕ್ಯಾನ್ಸರ್​ ಕಾಯಿಲೆಗೆ ತುತ್ತಾದವರಲ್ಲಿ ಸಾವನ್ನಪ್ಪಿದವರ ಸಂಖ್ಯೆ ಜಾಸ್ತಿ ಇದೆ. ರೋಗದ ಲಕ್ಷಣಗಳು ರೋಗಿಯಲ್ಲಿ ಅಂತಿಮ ಹಂತದಲ್ಲಿ ಪತ್ತೆಯಾಗುವುದರಿಂದ ಅದನ್ನು ಗುಣಪಡಿಸುವುದು ಸವಾಲಾಗುತ್ತಿದೆ. ಕ್ಯಾನ್ಸರ್​ಗೆ ಸಂಬಂಧಪಟ್ಟ ಎಲ್ಲಾ ಔಷಧಗಳು ಮತ್ತು ಚಿಕಿತ್ಸೆಗಳು ಎಲ್ಲಾ ವರ್ಗದವರಿಗೂ ಕೈಗೆಟುಕದೇ ಇರುವುದು ಇನ್ನೊಂದು ಕಾರಣ. ಹಾಗಾಗಿ ನಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕ್ಯಾನ್ಸರ್​ ತಡೆಗಟ್ಟುವ ಕ್ರಮಗಳ ಬಗ್ಗೆ ಸಾಧ್ಯವಾದಷ್ಟು ಜಾಗೃತಿ ಹರಡಿಸಲು ಪ್ರಯತ್ನಿಸಬೇಕು.

ಹಾಗಾದರೆ ಯಾವೆಲ್ಲ ಆಹಾರ ಪದಾರ್ಥಗಳು ದೇಹದಲ್ಲಿ ಕ್ಯಾನ್ಸರ್​ ತಡೆಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಅನ್ನೋದನ್ನು ನೋಡುವುದಾದರೆ,

Cruciferous vegetables
ಕ್ರೂಸಿಫರಸ್​ ತರಕಾರಿಗಳು

ಕ್ರೂಸಿಫರಸ್​ ತರಕಾರಿಗಳು: ಕ್ರೂಸಿಫರಸ್​ ತರಕಾರಿಗಳು ಎಂದರೆ ಎಲೆಕೋಸು, ಹೂಕೋಸು ಮತ್ತು ಕೋಸುಗೆಡ್ಡೆ ಸೇರಿದಂತೆ ಪೌಷ್ಟಿಕಾಂಶಭರಿತ ಆಹಾರಗಳು ಕ್ಯಾನ್ಸರ್​ ತಡೆಯುವಲ್ಲಿ ಸಹಾಯ ಮಾಡುತ್ತವೆ. ಅಧ್ಯಯನಗಳ ಪ್ರಕಾರ, ತರಕಾರಿಗಳಲ್ಲಿ ಕಂಡುಬರುವ ರಾಸಾಯನಿಕಗಳಿಂದ ಕೆಲವು ರೀತಿಯ ಕ್ಯಾನ್ಸರ್ ತಡೆಯಬಹುದು.

Berries
ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು: ಬೆರ್ರಿ ಹಣ್ಣುಗಳೆಂದರೆ ಸ್ಟ್ರಾಬೆರಿ, ರಾಸ್​ಬೆರ್ರಿಸ್ ಗಮನಾರ್ಹ ಮಟ್ಟದ ಆಂಥೋಸಯಾನಿನ್ಗಳನ್ನು ಒಳಗೊಂಡಿರುತ್ತವೆ. ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿರುವ ಸಸ್ಯ ವರ್ಣದ್ರವ್ಯಗಳು ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು.

Tomatoes
ಟೊಮೆಟೊ

ಟೊಮೆಟೊ: ಟೊಮೆಟೊದಲ್ಲಿ ಕಂಡುಬರುವ ಆಂಟಿಆಕ್ಸಿಡೆಂಟ್ ಲೈಕೋಪೀನ್ ಕ್ಯಾನ್ಸರ್ ತಡೆಗಟ್ಟಲು ಸಹಾಯಕ. ಕಚ್ಚಾ ಮತ್ತು ಬೇಯಿಸಿದ ಟೊಮೆಟೊಗಳೆರಡೂ ಪ್ರಬಲವಾದ ಉತ್ಕರ್ಷಣ ನಿರೋಧಕಗಳ ಸಮರ್ಥ ಮೂಲಗಳಾಗಿವೆ. ಇದರಿಂದ ವಿಶೇಷವಾಗಿ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬದುಕುಳಿಯಬಹುದು.

ಬೀಜಗಳು: ಬೀಜಗಳನ್ನು ತಿನ್ನುವುದು ಕೆಲವು ಕ್ಯಾನ್ಸರ್‌ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳನ್ನು ತಪ್ಪಿಸುವ ಆರೋಗ್ಯಕರ ಆಹಾರಗಳಲ್ಲಿ ಇವುಗಳನ್ನು ಪರಿಗಣಿಸಲಾಗಿದೆ. ಕಡಲೆಕಾಯಿ, ಬಾದಾಮಿ ಮತ್ತು ವಾಲ್‌ನಟ್‌ಗಳ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಕ್ಯಾನ್ಸರ್ ಬೆಳವಣಿಗೆಯ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯಕ.

Fatty fish
ಮೀನು ಮಾಂಸ

ಮೀನು: ಪ್ರತಿ ವಾರ ನಿಮ್ಮ ಆಹಾರದಲ್ಲಿ ಮೀನುಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಅಪಾಯ ತಗ್ಗಿಸಬಹುದು. ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಿನ ಆಹಾರ ಪದಾರ್ಥಗಳು ಉರಿಯೂತದ ಗುಣಲಕ್ಷಣ ಹೊಂದಿವೆ. ಸಾಲ್ಮನ್ ಮತ್ತು ಮ್ಯಾಕೆರೆಲ್‌ನಂತಹ ಹಲವಾರು ರೀತಿಯ ಮೀನುಗಳ ಬಳಕೆ ಉತ್ತಮ.

grain
ಓಟ್ಸ್‌

ಧಾನ್ಯಗಳು: ಹೋಲ್ ವೀಟ್ ಬ್ರೆಡ್, ಕ್ವಿನೋವಾ, ಬ್ರೌನ್ ರೈಸ್ ಮತ್ತು ಓಟ್ ಮೀಲ್ ನಲ್ಲಿ ನಾರಿನಂಶ ಅಧಿಕವಾಗಿದೆ ಮತ್ತು ಪ್ರಬಲವಾದ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಈ ಸೂಪರ್‌ಫುಡ್‌ಗಳಲ್ಲಿನ ರಾಸಾಯನಿಕಗಳು ಕೊಲೊರೆಕ್ಟಲ್, ಪ್ಯಾಂಕ್ರಿಯಾಟಿಕ್, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ಜೀವಕೋಶಗಳ ಬೆಳವಣಿಗೆ ತಡೆಯುತ್ತದೆ.

Vegetables containing allium
ಅಲಿಯಮ್ ಹೊಂದಿರುವ ತರಕಾರಿಗಳು

ಅಲಿಯಮ್ ಹೊಂದಿರುವ ತರಕಾರಿಗಳು: ಲೀಕ್ಸ್, ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ಆಹಾರಗಳಲ್ಲಿ ಕಂಡುಬರುವ ಒಂದು ವಸ್ತುವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: World Cancer Day 2023: ಕ್ಯಾನ್ಸರ್​ಗೆ ಮನೋಬಲವೇ ಮದ್ದು ಎಂದು ನಿರೂಪಿಸಿಕೊಟ್ಟ ಸೆಲೆಬ್ರಿಟಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.