ETV Bharat / sukhibhava

ಅಧಿಕ ತೂಕ ಹೊಂದಿರುವ ಮಹಿಳೆಯರು ದೀರ್ಘ ಕೋವಿಡ್​ನಿಂದ ಬಳಲುವ ಸಂಭವ ಹೆಚ್ಚು

ಅಧಿಕ ತೂಕ ಹೊಂದಿರುವ ಮಹಿಳೆಯರು ದೀರ್ಘ ಕೋವಿಡ್​ನಿಂದ ಬಳಲುವ ಸಂಭವ ಹೆಚ್ಚು.

Etv Bharatlong-covid-is-more-common-in-obese-women
'ಅಧಿಕ ತೂಕ ಹೊಂದಿರುವ ಮಹಿಳೆಯರು ದೀರ್ಘ ಕೋವಿಡ್​ನಿಂದ ಬಳಲುವ ಸಂಭವ ಹೆಚ್ಚು'
author img

By

Published : Dec 2, 2022, 3:25 PM IST

ಪುರುಷರಿಗಿಂತ ಅಧಿಕ ತೂಕ ಹೊಂದಿರುವ ಮಹಿಳೆಯರು ದೀರ್ಘಾವಧಿಯ ಕೋವಿಡ್‌ನಿಂದ ಬಳಲುವ ಸಂಭವ ಹೆಚ್ಚು ಎಂದು ಯುಕೆಯಲ್ಲಿನ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ.

"ದೀರ್ಘ ಕೋವಿಡ್ ಒಂದು ಸಂಕೀರ್ಣ ಸ್ಥಿತಿಯಾಗಿದ್ದು, ಕೋವಿಡ್ ಹೊಂದಿರುವ ಸಮಯದಲ್ಲಿ ಅಥವಾ ನಂತರ ಬೆಳವಣಿಗೆಯಾಗುತ್ತದೆ. ರೋಗಲಕ್ಷಣಗಳು 12 ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದಾಗ ಇದನ್ನು ವರ್ಗೀಕರಿಸಲಾಗುತ್ತದೆ" ಎಂದು ಯುಇಎಯ ನಾರ್ವಿಚ್ ವೈದ್ಯಕೀಯ ಶಾಲೆಯ ಪ್ರೊಫೆಸರ್ ವಾಸಿಲಿಯೊಸ್ ವಾಸಿಲಿಯೊ ಹೇಳಿದ್ದಾರೆ.

ಉಸಿರಾಟದ ತೊಂದರೆ, ಕೆಮ್ಮು, ತಲೆನೋವು ಮತ್ತು ತೀವ್ರ ಆಯಾಸವು ದೀರ್ಘ ಕೋವಿಡ್​​ನ ಅತ್ಯಂತ ಪ್ರಚಲಿತ ಲಕ್ಷಣಗಳಾಗಿವೆ. ಇತರ ಲಕ್ಷಣಗಳೆಂದರೆ ಎದೆ ನೋವು, ನಿದ್ರಾಹೀನತೆ, ತಲೆತಿರುಗುವಿಕೆ, ಕೀಲು ನೋವು, ಖಿನ್ನತೆ, ಹಸಿವಿನ ಕೊರತೆ, ತಲೆನೋವು, ವಾಸನೆ ಅಥವಾ ರುಚಿಯಲ್ಲಿ ಬದಲಾವಣೆ ಇವುಗಳಾಗಿವೆ.

2020ರ ಕೋವಿಡ್ ಪಾಸಿಟಿವ್ ಪಿಸಿಆರ್ ಪರೀಕ್ಷೆಯ ಫಲಿತಾಂಶದ ಮೇಲೆ ನಾರ್ಫೋಕ್‌ನಲ್ಲಿನ ರೋಗಿಗಳನ್ನು ಸಂಶೋಧನಾ ತಂಡವು ಸಮೀಕ್ಷೆ ನಡೆಸಿತು. ಒಟ್ಟು 1,487 ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಅರ್ಧಕ್ಕಿಂತ ಹೆಚ್ಚು ಜನರು ಸುದೀರ್ಘ ಕೋವಿಡ್ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರಲ್ಲಿ ದೀರ್ಘ ಕೋವಿಡ್ ಲಕ್ಷಣಗಳು ಕಂಡುಬಂದಿದೆ.

ಇದನ್ನೂ ಓದಿ: ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.. ಪ್ರಕೃತಿ ಮಾತೆಯ ರಕ್ಷಿಸೋಣ, ನಾವು ಬದುಕೋಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.