ಲಂಡನ್: ಶೇ 15ರಷ್ಟು ವಯಸ್ಕರು ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾರೆ. ಅವರಲ್ಲಿ ಖಿನ್ನತೆ, ಆತಂಕ ಮತ್ತು ಇತರೆ ದೌರ್ಜನ್ಯಗಳು ಸಾಮಾನ್ಯವಾಗಿ ಕಂಡುಬರುತ್ತಿವೆ ಎಂದು ಲ್ಯಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿ ತಿಳಿಸಿದೆ. ಐರ್ಲೆಂಡ್ ಮೂಲದ ಯುನಿವರ್ಸಿಟಿ ಆಫ್ ಕಾಲೇಜ್ ಕೊರ್ಗ್ ಸಂಶೋಧಕರು ಉದ್ಯೋಗ ಮತ್ತು ಉದ್ಯೋಗಿಗಳ ಆರೋಗ್ಯದ ಮೇಲೆ ಸರಣಿ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ಪತ್ರಿಕೆಯು ಕೆಲಸದ ಸ್ಥಳದಲ್ಲಿ ಉದ್ಯೋಗಿಗಳ ಮಾನಸಿಕ ಆರೋಗ್ಯದ ಪ್ರಗತಿಗೆ ಒತ್ತು ನೀಡುತ್ತದೆ.
ಸುರಕ್ಷಿತ ಕೆಲಸದ ಸ್ಥಳ: ಕೆಲಸದ ಸ್ಥಳಗಳು ಮಾನಸಿಕ ಆರೋಗ್ಯ ಸುಧಾರಣೆಗೆ ಸಕಾರಾತ್ಮಕ ಮತ್ತು ಸುರಕ್ಷಿತದ ಕಡೆಗೆ ಉತ್ತೇಜನ ನೀಡುವ ಸಾಮರ್ಥ್ಯ ಹೊಂದಿರಬೇಕು. ಯಾವುದೇ ತಾರತಮ್ಯವಿಲ್ಲದೆ ಮಾನಸಿಕ ಆರೋಗ್ಯ ಸಮಸ್ಯೆ ಲಕ್ಷಣ ತೋರುವವರಿಗೆ ಬೆಂಬಲ ಸೂಚಿಸಬೇಕು ಎಂದು ಯುಸಿಸಿಯ ಬಿರ್ಗಿಟ್ ಗ್ರೇನಿಯರ್ ತಿಳಿಸಿದ್ದಾರೆ.
ಈ ಅಧ್ಯಯನ ವರದಿ ಉದ್ಯೋಗ ಸ್ಥಳದಲ್ಲಿ ವಿವಿಧ ಉದ್ಯೋಗಿಗಳಲ್ಲಿ ಆರೋಗ್ಯಕರ ಮತ್ತು ಸುರಕ್ಷಿತ ಕೆಲಸಕ್ಕೆ ಬೆಂಬಲ ನೀಡುವಂತೆ ನಿರ್ಧಾರ ರೂಪಿಸುವ ನಾಯಕರಿಗೆ ಶಿಫಾರಸು ಮಾಡಿದೆ. ಸರ್ಕಾರಗಳು ಉದ್ಯೋಗ ಸ್ಥಳದಲ್ಲಿ ಮಾನಸಿಕ ಆರೋಗ್ಯ ನಿರ್ವಹಣೆ ತಂತ್ರವನ್ನು ಅಂತರ್ಗತ ಭಾಗವಾಗಿಸುವ ಭರವಸೆಗಳನ್ನು ನೀಡಬೇಕು. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ನಿಯಮ ರೂಪಕರು, ಕೆಲಸದ ಸ್ಥಳದ ಪರಿಸ್ಥಿತಿ ನಿಯಂತ್ರಣವನ್ನು ನಿರ್ವಹಣೆ ಮಾಡಬೇಕು. ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ಮಾನಸಿಕ ಆರೋಗ್ಯ ಮುಂದಿನ ಪರಿಸ್ಥಿತಿಗಳ ಅಪಾಯ ಹೆಚ್ಚಾಗದಂತೆ ಗಮನ ಹರಿಸಬೇಕು ಎಂದರು.
ಮಾನಸಿಕ ಆರೋಗ್ಯಕ್ಕೆ ಒತ್ತು: ನೀತಿ ನಿರೂಪಕರು ಮಾನಸಿಕ ಆರೋಗ್ಯದ ಉದ್ಯೋಗಗಳು ವಿಶೇಷವಾಗಿ ಕಡಿಮೆ ಕೂಲಿಯ ಪರಿಸ್ಥಿತಿಯ ಕೆಲಸ ಅಥವಾ ವಲಸಿಗರ ಕೆಲಸದ ಸ್ಥಳಗಳಲ್ಲಿ ಈ ಕುರಿತು ನಿಯಮಗಳ ಅಬಿವೃದ್ಧಿ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಒತ್ತು ನೀಡಬೇಕು. ಸಂಸ್ಥೆಗಳಲ್ಲಿ ಎಲ್ಲಾ ಮಟ್ಟದಲ್ಲಿ ಯಾವ ರೀತಿ ಮಾನಸಿಕ ಆರೋಗ್ಯ ನಿರ್ವಹಣೆಗೆ ಕ್ರಮ ಸೃಷ್ಟಿಸಬೇಕು ಎಂಬ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಸೇರಿದಂತೆ ಎಂಬ ಅಭಿವೃದ್ಧಿ ಮಾರ್ಗದರ್ಶನ ರೂಪಿಸಬೇಕು.
ಸರ್ಕಾರಗಳು ಉದ್ಯೋಗಿಗಳ ಕೆಲಸದ ಪರಿಸ್ಥಿತಿಗಳನ್ನು ಬೆಂಬಲಿಸಿ, ಅಭಿವೃದ್ಧಿ ಮಾಡಬೇಕು. ಸಂಸ್ಥೆಗಳು ಕೆಲಸದ ಪರಿಸ್ಥಿತಿಗಳ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ನಡೆಸಬೇಕು. ಇದು ಕೇವಲ ನೈತಿಕವಾಗಿ ಮಾತ್ರವಲ್ಲದೆ, ಕೆಲಸದ ಸ್ಥಳದಲ್ಲಿ ಕಾನೂನು ಮತ್ತು ನಿಯಮಬದ್ಧ ಮನೋವೈಜ್ಞಾನಿಕ ಸುರಕ್ಷತಾ ಕೆಲಸದ ಸ್ಥಳವನ್ನು ಕಲ್ಪಿಸಬೇಕಿದೆ ಎಂದು ಪ್ರೊ.ಆರೆನ್ಸ್ಮನ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಶೇ 80ರಷ್ಟು ಭಾರತೀಯರು ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವುದಿಲ್ಲ: ವೈದ್ಯರು