ETV Bharat / sukhibhava

ಲಾಹೋರ್‌ ಜಗತ್ತಿನಲ್ಲೇ ಅತಿ ಹೆಚ್ಚು ಮಲಿನ ನಗರ​​; ಇನ್ನೂ ಸುಧಾರಿಸದ ದೆಹಲಿ ವಾಯು ಗುಣಮಟ್ಟ

Lahore and Delhi Air quality: ಚಳಿಗಾಲದಲ್ಲಿ ಗಾಳಿಯ ವೇಗ ಬದಲಾಗುವಿಕೆ, ದಿಕ್ಕು ಮತ್ತು ತಾಪಮಾನದ ಕುಸಿತದಿಂದ ವಾಯು ಮಾಲಿನ್ಯ ಉಂಟಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

Lahore and delhi air quality remains bad

author img

By ETV Bharat Karnataka Team

Published : Nov 28, 2023, 11:03 AM IST

ಇಸ್ಲಾಮಾಬಾದ್/ದೆಹಲಿ​: ಪಾಕಿಸ್ತಾನದ ಲಾಹೋರ್​ ನಗರ ಜಗತ್ತಿನಲ್ಲೇ ಅತಿ ಮಲಿನ ನಗರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಅಲ್ಲಿನ ಮಾಲಿನ್ಯ ಸೂಚ್ಯಂಕ 415 ರಷ್ಟಿದೆ ಎಂದು ಪಾಕಿಸ್ತಾನದ ಎಆರ್​ವೈ ನ್ಯೂಸ್​ ವರದಿ ಮಾಡಿದೆ.

ಪಂಜಾಬ್​ ಪರಿಸರ ಸುರಕ್ಷಾ ವಿಭಾಗ ಹಂಚಿಕೊಂಡ ದತ್ತಾಂಶದಂತೆ, ಲಾಹೋರ್​ನ ಅಪ್ಪರ್​ ಮಾಲ್​ ವಾಯುಮಾಲಿನ್ಯ ಸೂಚ್ಯಂಕ 508 ದಾಖಲಾಗಿದೆ. ಪೊಲೋ ಗ್ರೌಂಡ್​ನಲ್ಲಿ ಎಕ್ಯೂಐ 491 ಇದ್ದರೆ, ಲಾಹೋರ್​​ ಕಾಲೇಜ್​ ಫಾರ್​ ವುಮೆನ್​ ಯುನಿವರ್ಸಿಟಿಯಲ್ಲಿ ಎಕ್ಯೂಐ 297 ಇದೆ. ಲಾಹೋರ್​ ಕಾಲೇಜ್​ ಆಫ್​ ಅರ್ಥ್ ಆ್ಯಂಡ್​ ಎನ್ವರಿನಾಮೆಂಟಲ್​ ಸೈನ್ಸ್​ನಲ್ಲಿ ಎಕ್ಯೂಐ 250 ಇದೆ ಎಂದು ವರದಿ ತಿಳಿಸಿದೆ.

151-300ರ ನಡುವೆ ಎಕ್ಯೂಐ ದರ ಇದ್ದರೆ ಅದು ಅನಾರೋಗ್ಯಕರವಾಗಿದೆ. 201-300ರ ನಡುವೆ ಇದ್ದರೆ ಹಾನಿಕಾರಕ ಮತ್ತು 300ಕ್ಕಿಂತ ಹೆಚ್ಚಿದ್ದರೆ ಅಪಾಯಕಾರಿಯಾಗಿದೆ. ಮಾಲಿನ್ಯದ ಐದು ವರ್ಗ, ಓಜೋನ್‌ನ ತಳಮಟ್ಟ, ಕಣಗಳ ಅಂಶ, ಕಾರ್ಬನ್​ ಮೊನೋಕ್ಸೈಡ್​​​, ಸಲ್ಫರ್​ ಡಾಆಕ್ಸೈಡ್​ ಮತ್ತು ನೈಟ್ರೋಜನ್​ ಡೈಯಾಕ್ಸೆಡ್​​ ಆಧಾರದಡಿ ಈ ಎಕ್ಯೂಐನ ಲೆಕ್ಕಾಚಾರ ನಡೆಸಲಾಗುತ್ತದೆ.

ಚಳಿಗಾಲದಲ್ಲಿ ಗಾಳಿಯ ವೇಗ ಬದಲಾಗುವಿಕೆ, ದಿಕ್ಕು ಮತ್ತು ತಾಪಮಾನದ ಕುಸಿತದಿಂದ ವಾಯು ಮಾಲಿನ್ಯ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಬೇಸಿಗೆಗಿಂತ ಚಳಿಗಾಲದಲ್ಲಿ ಗಾಳಿ ಭಾರವಾಗಿರುತ್ತದೆ. ಚಳಿಗಾಲದಲ್ಲಿ ವಾತಾವರಣದಲ್ಲಿನ ವಿಷಕಾರಿ ಕಣಗಳು ಕೆಳಮುಖವಾಗಿ ಚಲಿಸಿ ಮಾಲಿನ್ಯ ಉಂಟುಮಾಡುತ್ತವೆ. ಇದರಿಂದ ದೊಡ್ಡ ಪ್ರಮಾಣದ ಇಂಗಾಲ ಮತ್ತು ಹೊಗೆ ಸೇರಿದಂತೆ ಕಲುಷಿತ ಕಣಗಳ ಪದರ ಪ್ರದೇಶವನ್ನು ಆವರಿಸುತ್ತದೆ.

ಸುಧಾರಿಸದ ದೆಹಲಿ: ದೇಶದ ಅತ್ಯಂತ ಕಳಪೆ ವಾಯುಮಾಲಿನ್ಯ ನಗರವಾಗಿ ಗುರುತಿಸಿಕೊಂಡಿರುವ ದೆಹಲಯಲ್ಲಿ ಮಾಲಿನ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ನಗರದ ವಾಯು ಗುಣಮಟ್ಟ ಕಳಪೆ ವರ್ಗದಲ್ಲಿ ಮುಂದುವರೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಸಂಜೆ ಎಕ್ಯೂಐ 369 ದಾಖಲಾಗಿದೆ ಎಂದು ಎಸ್​ಎಎಫ್​ಎಆರ್​ ತಿಳಿಸಿದೆ.

ಆನಂದ್​ ವಿಹಾರ್‌ನಲ್ಲಿ ಎಕ್ಯೂಐ 332 ದಾಖಲಾಗುವ ಮೂಲಕ ಕಳಪೆ ವರ್ಗ ಪ್ರವೇಶ ಪಡೆದಿದೆ. ಈ ಹಿಂದೆ ಇಲ್ಲಿ ಎಕ್ಯೂಐ 244 ಇತ್ತು. ಬನ್ವಾಲ್​ ನಗರದಲ್ಲಿ ಎಕ್ಯೂಐ 382 ಇದೆ. ದ್ವಾರಕಾ ಸೆಕ್ಟರ್​ 8ರಲ್ಲಿ ಎಕ್ಯೂಐ 362 ದಾಖಲಾಗಿದೆ.

ಉತ್ತರ ಪ್ರದೇಶದ ಲಕ್ನೋದಲ್ಲೂ ಕೂಡ ವಾಯು ಗುಣಮಟ್ಟ ಕುಸಿಯುತ್ತಿದ್ದು, ಶ್ವಾಸಕೋಶ ಮತ್ತು ಕಣ್ಣು ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

ಕೆಜಿಎಂಯು, ಎಸ್​ಪಿಎಂ ಸಿವಿಲ್​ ಆಸ್ಪತ್ರೆ, ಲೋಕ್​ಬಂಧು, ಬಲ್ರಾಮ್ಪುರ್​​ ಆಸ್ಪತ್ರೆಯ ವೈದ್ಯರು ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ದೃಢಪಡಿಸಿದ್ದಾರೆ. ತಾಪಮಾನದಲ್ಲಿನ ಇತ್ತೀಚಿನ ಕುಸಿತದ ನಂತರ ವಾತಾವರಣದಲ್ಲಿ ಪಿಎಂ2.5 ಮತ್ತು ಪಿಎಂ10 ಕಣಗಳ ಮಟ್ಟಗಳಲ್ಲಿ ಏರಿಕೆ ಕಂಡಿದೆ. (ಎಎನ್​ಐ/ಐಎಎನ್​ಎಸ್​)

ಇದನ್ನೂ ಓದಿ: ಚೀನಾದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ: ಕಾರಣವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.