ETV Bharat / sukhibhava

ಮೂಡ್​ ಮೇಲೂ ಪರಿಣಾಮ ಬೀರುತ್ತೆ; ಬೇಸರ, ಆತಂಕಕ್ಕೂ ಕಾರಣ ಅರ್ಧಂಬರ್ಧ ನಿದ್ರೆ - ನಿದ್ರೆ ಕೊರತೆಯ ಪರಿಣಾಮ

ನಿದ್ರೆಯ ಕೊರತೆಯಿಂದಾಗಿ ಜನರು ಮನೋವೈಜ್ಞಾನಿಕ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

Lack of sleep not only makes affect our emotional functioning

author img

By ETV Bharat Karnataka Team

Published : Dec 22, 2023, 5:00 PM IST

ನ್ಯೂಯಾರ್ಕ್​: ನಿದ್ರೆಯ ಕೊರತೆ ನಿಮ್ಮನ್ನು ಕೇವಲ ದೈಹಿಕವಾಗಿ ಮಾತ್ರವೇ ಬಳಲುವಂತೆ ಮಾಡುವುದಿಲ್ಲ. ಇದು ಭಾವಾನಾತ್ಮಕ ಕಾರ್ಯಾಚರಣೆ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದು ಸಕಾರಾತ್ಮಕ ಚಿಂತನೆಯನ್ನು ಕುಗ್ಗಿಸಿ, ಆತಂಕದ ಲಕ್ಷಣಗಳನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತದೆ.

ಜರ್ನಲ್​ ಸೈಕಾಲಾಜಿಕಲ್​ ಬುಲೆಟಿನ್​ನಲ್ಲಿ ಈ ಕುರಿತ ಅಧ್ಯಯನ ವರದಿ ಪ್ರಕಟವಾಗಿದೆ. ಶೇ.30ರಷ್ಟು ಪ್ರೌಢಾವಸ್ಥೆ ಮತ್ತು ಶೇ.90ರಷ್ಟು ಹದಿಹರೆಯದ ಮಂದಿ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ತೋರಿಸಿದೆ ಎಂದು ಮೊನಟನ ಸ್ಟೇಟ್​ ಯುನಿವರ್ಸಿಟಿ ಪ್ರಮುಖ ಲೇಖಕ ಕರ ಪಲ್ಮಾರ್​ ತಿಳಿಸಿದ್ದಾರೆ.

ಅಧ್ಯಯನವು ನಿದ್ರೆ ಮತ್ತು ಭಾವನೆಗಳ ನಡುವಿನ ಸಮಗ್ರ ಸಂಶ್ಲೇಷಣಾ ಪ್ರಯೋಗವನ್ನು ಪ್ರತಿನಿಧಿಸುತ್ತದೆ. ಸಂಶೋಧನೆಯ ದಿನಾಂಕ ಮತ್ತು ಎಚ್ಚರಗೊಳ್ಳುವಿಕೆಯ ಅವಧಿ, ಕಡಿಮೆ ನಿದ್ರೆಯ ಸಮಯ ಮತ್ತು ಮಧ್ಯ ಪದೇ ಪದೇ ಎಚ್ಚರಗೊಳ್ಳುವುದು ಮಾನವನ ಭಾವನಾ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುವ ಬಲವಾದ ಸಾಕ್ಷ್ಯವನ್ನು ಅಧ್ಯಯನ ನೀಡಿದೆ.

5,715 ಮಂದಿ ಅಧ್ಯಯನದ ಭಾಗಿಯಾಗಿದ್ದರು. ಒಂದು ಅಥವಾ ಅದಕ್ಕಿಂತ ಹೆಚ್ಚಿನ ರಾತ್ರಿಗಳು ನಿದ್ರೆಯ ಭಂಗ ಅನುಭವಿಸಿ ಅಧ್ಯಯನ ನಡೆಸಲಾಗಿದೆ. ಕೆಲವು ಪ್ರಯೋದಲ್ಲಿ ಕೆಲವು ಅವಧಿಗಳ ಕಾಲ ಭಾಗಿದಾರರನ್ನು ಎಚ್ಚರದಲ್ಲಿರಿಸಿ ಗಮನಿಸಲಾಗಿದೆ.

ಪ್ರತಿ ಪರೀಕ್ಷೆಯಲ್ಲಿ ನಿದ್ರೆಯ ರೂಪಾಂತರಗಳು ಹೇಗೆ ಭಾವನಾತ್ಮಕ ಸಂಬಂಧಗಳ ಏರಿಳಿತಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ಮೂಡ್​​ಗಳ ಬದಲಾವಣೆ ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಹೊಂದಿರುವುದು ಈ ವೇಳೆ ತಿಳಿದುಬಂದಿದೆ.

ಸಂಶೋಧಕರು ಮೂರು ವಿಧದ ನಿದ್ರೆ ಕೊರತೆಯನ್ನು ಅಭ್ಯಾಸ ಮಾಡಿದ್ದು, ನಿದ್ರೆಯ ಕೊರತೆ ಅನುಭವಿಸಿದ ವ್ಯಕ್ತಿ ಉತ್ತಮ ನಿದ್ದೆ ಮಾಡಿದ ವ್ಯಕ್ತಿಗಳಿಗೆ ಹೋಲಿಕೆ ಮಾಡಿದಾಗ ಕಡಿಮೆ ಸಕಾರಾತ್ಮಕತೆ ಹೊಂದಿದ್ದು, ಕಡಿಮೆ ಖುಷಿ, ಸಂತೋಷವನ್ನು ಹೊಂದಿರುವುದು ಕಂಡುಬಂದಿದೆ. ಅಲ್ಲದೇ ಇವರಲ್ಲಿ ಆತಂಕ ಮತ್ತು ಶೀಘ್ರ ಹೃದಯ ಬಡಿತ ಏರಿಕೆ, ಚಿಂತೆ ಮಾಡುವಿಕೆ ಹೆಚ್ಚಳ ಕಂಡುಬಂದಿದೆ.

ಇದು ಕೇವಲ ದೀರ್ಘ ನಿದ್ರೆಯಲ್ಲಿ ಮಾತ್ರವಲ್ಲ, ಕಡಿಮೆ ನಿದ್ರೆ ಅವಧಿಯಲ್ಲಿ ಕೂಡ ಒಂದೆರಡು ಗಂಟೆಗಳ ಕಾಲ ತಡವಾಗಿ ನಿದ್ದೆ ಮಾಡಿದಾಗಲೂ ಪತ್ತೆಯಾಗಿದೆ. ಖಿನ್ನತೆಯ ಲಕ್ಷಣಗಳು ಸಣ್ಣದಿರಬಹುದು ಅಥವಾ ಕಡಿಮೆ ಇರಬಹುದು. ಬೇಸರ, ಚಿಂತೆ ಮತ್ತು ಒತ್ತಡದಂತಹ ನಕಾರಾತ್ಮಕತೆ ಹೊಂದಿದೆ ಎಂದು ಅಧ್ಯಯನದ ಫಲಿತಾಂಶ ಹೇಳುತ್ತದೆ.

ಅಧ್ಯಯನದಲ್ಲಿ ಭಾಗಿಯಾದವರ ವಯಸ್ಸು ಸರಿಸುಮಾರು 23 ವರ್ಷ. ವಿವಿಧ ವಯಸ್ಸಿನ ಗುಂಪಿನ ಜನರಲ್ಲಿ ಹೇಗೆ ನಿದ್ರೆ ಕೊರತೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದಿದ್ದಾರೆ ಸಂಶೋಧಕರು. (ಐಎಎನ್​ಎಸ್​)

ಇದನ್ನೂ ಓದಿ: ನಿದ್ರೆ ಬಗ್ಗೆ ತಪ್ಪು ಕಲ್ಪನೆ ಬೇಡ; ಅಸಲಿ ವಿಷಯ ತಿಳಿಯಿರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.