ETV Bharat / sukhibhava

ಲ್ಯಾಬ್​ನಲ್ಲಿ ಅಭಿವೃದ್ಧಿ ಪಡಿಸಿದ ರಕ್ತದ ಮೊದಲ ಕ್ಲಿನಿಕಲ್​ ಪ್ರಯೋಗ.. ಸಕ್ಸಸ್​ ಆದ್ರೆ ರಕ್ತಕ್ಕಿಲ್ಲ ಕೊರತೆ - ಪ್ರಯೋಗಾಲಯದಲ್ಲಿ ತಯಾರಿಸಿದ ದ್ವಿಪ್ರತಿ ರಕ್ತ

ಪ್ರಪಂಚದ ಮೊದಲ ಕ್ಲಿನಿಕಲ್ ಪ್ರಯೋಗದಲ್ಲಿ ಲ್ಯಾಬ್​ನಲ್ಲಿ ಅಭಿವೃದ್ಧಿ ಪಡಿಸಿದ ರಕ್ತವನ್ನು ಜನರಿಗೆ ನೀಡಲಾಗಿದೆ. ಒಂದು ವೇಳೆ ಈ ರಕ್ತದ ಕಣಗಳು ಯಶಸ್ಸಾದ್ರೆ ಮುಂದೆ ರಕ್ತ ಕೊರತೆ ಉಂಟಾಗುವುದಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Lab grown blood given to people  world first clinical trial  Lab grown blood first clinical trial  Lab grown blood news  ಪ್ರಪಂಚದ ಮೊದಲ ಕ್ಲಿನಿಕಲ್ ಪ್ರಯೋಗ  ಅಭಿವೃದ್ಧಿ ಪಡಿಸಿದ ರಕ್ತದ ಮೊದಲ ಕ್ಲಿನಿಕಲ್​ ಪ್ರಯೋಗ  ಯಶಸ್ಸಾದ್ರೆ ಇನ್ಮುಂದೆ ರಕ್ತದ ಕೊರತೆಯಿಲ್ಲ  ರಕ್ತದ ಬಗ್ಗೆ ವಿಜ್ಞಾನಿಗಳ ಹೊಸ ಆವಿಷ್ಕಾರ  ಪ್ರಯೋಗಾಲಯದಲ್ಲಿ ತಯಾರಿಸಿದ ದ್ವಿಪ್ರತಿ ರಕ್ತ  ರಕ್ತದ ಮೊದಲ ಕ್ಲಿನಿಕಲ್ ಪರೀಕ್ಷೆ
ಲ್ಯಾಬ್​ನಲ್ಲಿ ಅಭಿವೃದ್ಧಿ ಪಡಿಸಿದ ರಕ್ತದ ಮೊದಲ ಕ್ಲಿನಿಕಲ್​ ಪ್ರಯೋಗ
author img

By

Published : Nov 8, 2022, 12:04 PM IST

ರಕ್ತದ ಬಗ್ಗೆ ವಿಜ್ಞಾನಿಗಳ ಹೊಸ ಆವಿಷ್ಕಾರವು ಯಾವುದೇ ಅದ್ಭುತಕ್ಕಿಂತ ಕಡಿಮೆಯಿಲ್ಲ. ವಿಶ್ವದಲ್ಲೇ ಪ್ರಥಮ ಬಾರಿಗೆ ಪ್ರಯೋಗಾಲಯದಲ್ಲಿ ತಯಾರಿಸಿದ ದ್ವಿಪ್ರತಿ ರಕ್ತವನ್ನು ಇಬ್ಬರಿಗೆ ನೀಡಲಾಗಿದೆ. ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾದ ರಕ್ತದ ಮೊದಲ ಕ್ಲಿನಿಕಲ್ ಪರೀಕ್ಷೆ ಇದಾಗಿದ್ದು, ಇದು ಯಶಸ್ವಿಯಾದರೆ ರಕ್ತ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ರಕ್ತದ ಗುಂಪು ಅಪರೂಪವಾಗಿರುವ ಜನರಿಗೆ ಇದು ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.

ವಿಜ್ಞಾನಿಗಳು ಈ ರಕ್ತವನ್ನು ಪ್ರಯೋಗಾಲಯದಲ್ಲಿ ತಯಾರಿಸಲು ರಕ್ತದಾನಿಗಳ ಕಾಂಡಕೋಶಗಳನ್ನು (stem cells) ಬಳಸಿದ್ದಾರೆ. ರಕ್ತವನ್ನು ಸಿದ್ಧಪಡಿಸಿದ ನಂತರ ಮೊದಲ ಪ್ರಯೋಗವಾಗಿ ಇಬ್ಬರು ಸ್ವಯಂಸೇವಕರಿಗೆ ಕೇವಲ 5 ರಿಂದ 10 ಮಿಲಿ ರಕ್ತವನ್ನು ನೀಡಿದ್ದಾರೆ. ಪ್ರಯೋಗದ ಮೂಲಕ, ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾದ ರಕ್ತ ಕಣಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಪ್ರಯೋಗಾಲಯದಲ್ಲಿ ಬೆಳೆದ ರಕ್ತ ಕಣಗಳು ಸಾಮಾನ್ಯ ಕೆಂಪು ಕಣಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ವಿಜ್ಞಾನಿಗಳು ಭರವಸೆ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು NIHR ರಕ್ತ ಮತ್ತು ಕಸಿ ನಿರ್ದೇಶಕ ಆಶ್ಲೇ ಟಾಯ್ ಈ ಕುರಿತು ಮಾತನಾಡಿ, ಈ ಪ್ರಯೋಗವು ಕಾಂಡಕೋಶಗಳನ್ನು ರಕ್ತ ಕಣಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಪ್ರಯೋಗಾಲಯದಲ್ಲಿ ತಯಾರಾದ ರಕ್ತವನ್ನು ಸ್ವಯಂ ಸೇವಕರಿಗೆ ನೀಡುತ್ತಿರುವುದು ಇದೇ ಮೊದಲು. ಪ್ರಯೋಗದ ಅಂತ್ಯದ ವೇಳೆಗೆ ಈ ರಕ್ತ ಕಣಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಎಂದು ಪ್ರೊಫೆಸರ್ ಆಶ್ಲೇ ಹೇಳಿದರು.

Lab grown blood given to people  world first clinical trial  Lab grown blood first clinical trial  Lab grown blood news  ಪ್ರಪಂಚದ ಮೊದಲ ಕ್ಲಿನಿಕಲ್ ಪ್ರಯೋಗ  ಅಭಿವೃದ್ಧಿ ಪಡಿಸಿದ ರಕ್ತದ ಮೊದಲ ಕ್ಲಿನಿಕಲ್​ ಪ್ರಯೋಗ  ಯಶಸ್ಸಾದ್ರೆ ಇನ್ಮುಂದೆ ರಕ್ತದ ಕೊರತೆಯಿಲ್ಲ  ರಕ್ತದ ಬಗ್ಗೆ ವಿಜ್ಞಾನಿಗಳ ಹೊಸ ಆವಿಷ್ಕಾರ  ಪ್ರಯೋಗಾಲಯದಲ್ಲಿ ತಯಾರಿಸಿದ ದ್ವಿಪ್ರತಿ ರಕ್ತ  ರಕ್ತದ ಮೊದಲ ಕ್ಲಿನಿಕಲ್ ಪರೀಕ್ಷೆ
ಲ್ಯಾಬ್​ನಲ್ಲಿ ಅಭಿವೃದ್ಧಿ ಪಡಿಸಿದ ರಕ್ತದ ಮೊದಲ ಕ್ಲಿನಿಕಲ್​ ಪ್ರಯೋಗ

ಈ ರಕ್ತವನ್ನು ನೀಡಿದ ಇಬ್ಬರು ಸ್ವಯಂ ಸೇವಕರನ್ನು ನೋಡಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಗಮನಕ್ಕೆ ಬಂದಿಲ್ಲ. ಇಬ್ಬರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಜ್ಞಾನಿಗಳ ಮಾತಾಗಿದೆ.

NHSBT ಗೆ ಸಂಬಂಧಿಸಿದ ದಾನಿಗಳ ರಕ್ತವನ್ನು ಈ ಸಂಶೋಧನೆಗಾಗಿ ತೆಗೆದುಕೊಳ್ಳಲಾಗಿದೆ. ಈ ರಕ್ತದಾನ ಮಾಡಿದವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ಕೇರ್ ರಿಸರ್ಚ್ (NIHR) ಜೈವಿಕ ಸಂಪನ್ಮೂಲದ ಆರೋಗ್ಯವಂತ ಸದಸ್ಯರು. ರಕ್ತವನ್ನು ತೆಗೆದುಕೊಂಡ ನಂತರ ಪ್ರಯೋಗಾಲಯದಲ್ಲಿ ಕಾಂಡಕೋಶಗಳನ್ನು ಅವುಗಳ ರಕ್ತದಿಂದ ಪ್ರತ್ಯೇಕಿಸಲಾಯಿತು. ಕ್ಲಿನಿಕಲ್ ಪ್ರಯೋಗಗಳಿಗಾಗಿ ಕನಿಷ್ಠ ನಾಲ್ಕು ತಿಂಗಳಲ್ಲಿ 10 ಜನರಿಗೆ ಎರಡು ಬಾರಿ ರಕ್ತವನ್ನು ಏರಿಸಲಾಗುವುದು. ಇವುಗಳಲ್ಲಿ ಒಂದು ಸಾಮಾನ್ಯ ಕೆಂಪು ರಕ್ತ ಕಣಗಳಿಂದ ತಯಾರಿಸಲಾಗಿರುವುದು ಮತ್ತು ಇನ್ನೊಂದು ಪ್ರಯೋಗಾಲಯದಲ್ಲಿ ರಕ್ತವನ್ನು ತಯಾರಿಸಲಾಗಿರುವುದು ಎಂದು ಪ್ರೊಫೆಸರ್​ ಹೇಳಿದ್ದಾರೆ.

ಪ್ರಯೋಗ ಯಶಸ್ವಿಯಾದರೆ ವೈದ್ಯಕೀಯ ವಿಜ್ಞಾನಕ್ಕೆ ದೊಡ್ಡ ಸಾಧನೆ: ಈ ಪ್ರಪಂಚದ ಮೊದಲ ಪ್ರಯೋಗವು ಯಶಸ್ವಿಯಾದರೆ ದೀರ್ಘ ಕಾಲದವರೆಗೆ ರಕ್ತವನ್ನು ಬದಲಾಯಿಸಬೇಕಾದ ರೋಗಿಗಳಿಗೆ ಲ್ಯಾಬ್‌ನಲ್ಲಿ ತಯಾರಿಸಿದ ರಕ್ತವನ್ನು ನೀಡಬಹುದು. ಇದರಿಂದಾಗಿ ಭವಿಷ್ಯದಲ್ಲಿ ಕಡಿಮೆ ರಕ್ತದ ಬೇಡಿಕೆಯಾಗುತ್ತದೆ. ಈ ರಕ್ತವು ಸಾಮಾನ್ಯ ರೋಗಿಗಳಿಗೆ ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ವಾಸ್ತವವಾಗಿ, ಅದರ ಮೊದಲ ಕ್ಲಿನಿಕಲ್ ಪ್ರಯೋಗ ನಡೆದಿದೆ ಮತ್ತು ವಿಜ್ಞಾನಿಗಳು ತೀರ್ಮಾನಕ್ಕೆ ಬರಲು ಈಗ ಹೆಚ್ಚಿನ ಪ್ರಯೋಗಗಳನ್ನು ಕೈಗೊಳ್ಳಬೇಕಾಗುತ್ತದೆ.

ನಮ್ಮ ಪ್ರಯೋಗಾಲಯದಲ್ಲಿ ತಯಾರಿಸಿದ ಕೆಂಪು ರಕ್ತ ಕಣಗಳು ರಕ್ತದಾನಿಗಳಿಂದ ಬರುವ ಕೋಶಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ ಎಂಬುದು ಆಶಾದಾಯಕವಾಗಿದೆ ಅಂತಾ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಎನ್‌ಎಚ್‌ಎಸ್ ರಕ್ತ ಮತ್ತು ಕಸಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಪ್ರಧಾನ ತನಿಖಾಧಿಕಾರಿ ಸೆಡ್ರಿಕ್ ಘೆವಾರ್ಟ್ ಅಭಿಪ್ರಾಯಪಟ್ಟಿದ್ದಾರೆ.

ಇದು ಈ ರೀತಿ ಕಾರ್ಯನಿರ್ವಹಿಸುತ್ತದೆ..

  • ಈ ಪ್ರಯೋಗವು ಸಾಮಾನ್ಯ ರಕ್ತದಾನದಿಂದ ಪಡೆದ ರಕ್ತದಿಂದ ಪ್ರಾರಂಭವಾಗುತ್ತದೆ (ಸುಮಾರು 470 ಮಿಲಿ)
  • ಕೆಂಪು ರಕ್ತ ಕಣಗಳಾಗುವ ಸಾಮರ್ಥ್ಯವನ್ನು ಹೊಂದಿರುವ ಕಾಂಡಕೋಶಗಳನ್ನು ಹೊರತೆಗೆಯಲು ಮ್ಯಾಗ್ನೆಟಿಕ್ ಮಣಿಗಳನ್ನು ಬಳಸಲಾಗುತ್ತದೆ.
  • ಈ ಕಾಂಡಕೋಶಗಳನ್ನು ಪ್ರಯೋಗಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ
  • ತದನಂತರ ಕೆಂಪು ರಕ್ತ ಕಣಗಳು ಆಗಲು ನಿರ್ದೇಶಿಸಲಾಗುತ್ತದೆ
  • ಈ ಪ್ರಕ್ರಿಯೆಯು ಸುಮಾರು ಮೂರು ವಾರಗಳನ್ನು ತೆಗೆದುಕೊಳ್ಳುತ್ತದೆ
  • ಸುಮಾರು ಅರ್ಧ ಮಿಲಿಯನ್ ಕಾಂಡಕೋಶಗಳ ಆರಂಭಿಕ ಪೂಲ್ 50 ಶತಕೋಟಿ ಕೆಂಪು ರಕ್ತ ಕಣಗಳ ಹುಟ್ಟುವುದಕ್ಕೆ ಕಾರಣವಾಗುತ್ತದೆ..
  • ಸುಮಾರು 15 ಬಿಲಿಯನ್ ಕೆಂಪು ರಕ್ತ ಕಣಗಳನ್ನು ಪಡೆಯಲು ಇವುಗಳನ್ನು ಫಿಲ್ಟರ್ ಮಾಡಲಾಗುತ್ತದೆ.
  • ರೋಗಿಯ ದೇಹಕ್ಕೆ ಈ ರಕ್ತ ಕಣಗಳನ್ನು ಏರಿಸಬಹುದಾಗಿದೆ..

ಇದನ್ನೂ ಓದಿ: ಅಮೆರಿಕ ವಿಜ್ಞಾನಿಗಳಿಂದ ರಕ್ತಪರೀಕ್ಷೆ ಮೂಲಕ ಕ್ಯಾನ್ಸರ್​ ಪತ್ತೆ ವಿಧಾನ ಶೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.