ನ್ಯೂರಾಲಜಿಯ ಆನ್‌ಲೈನ್ ಜರ್ನಲ್ ಸಂಚಿಕೆಯು ಮರೆವಿನ ಕಾಯಿಲೆಗೆ ಸಂಬಂಧಿಸಿದಂತೆ ವರದಿಯೊಂದನ್ನು ಪ್ರಕಟಿಸಿದೆ. ಸರಾಸರಿ 80 ವರ್ಷದ 1,978 ಮಂದಿಯನ್ನು 7 ವರ್ಷಗಳ ಕಾಲ ಅಧ್ಯಯನ ನಡೆಸಿದ್ದು, ಮರೆವಿನ ಕುರಿತಂತೆ ವರದಿ ಪ್ರಕಟಿಸಿದೆ.
ಹೆಚ್ಚು ಚಟುವಟಿಕೆಯಲ್ಲಿ ತೊಡಗಿದ್ದ ಹಿರಿಯರಿಗೆ ಸರಾಸರಿ 94 ವರ್ಷದಲ್ಲಿ ಮರೆವಿನ ಕಾಯಿಲೆ ಕಾಣಿಸಿದೆ. ಇತ್ತ ಕಡಿಮೆ ಚಟುವಟಿಕೆಯಿಂದ ಕೂಡಿದ್ದ ಗುಂಪಿಗೆ ಸುಮಾರು 89ನೇ ವರ್ಷದಲ್ಲೇ ಮರೆವಿನ ಕಾಯಿಲೆ ಕಾಣಿಸಿದೆ. ಇದು ಆ ಗುಂಪಿನ ನಡುವೆ 5 ವರ್ಷಗಳ ಅಂತರದ ವ್ಯತ್ಯಾಸ ಕಂಡು ಬಂದಿದೆ.
ಈ ಕುರಿತು ಚಿಕಾಗೋದ ರಷ್ ವೈದ್ಯಕೀಯ ವಿಶ್ವವಿದ್ಯಾಲಯ ಕೇಂದ್ರದ ರಾಬರ್ಟ್ ಎಸ್ ವಿಲ್ಸನ್ ಪ್ರತಿಕ್ರಿಯಿಸಿ, ನಮ್ಮ ಅಧ್ಯಯನದಲ್ಲಿ ನಾವು ನೋಡಿರುವಂತೆ. ಸಣ್ಣ ಪ್ರಮಾಣದ ಚಟುವಟಿಕೆಗಳನ್ನ ಮಾಡಲು ಮತ್ತು ಅದನ್ನು ಪ್ರಾರಂಭಿಸಲು ಎಂದಿಗೂ ತಡವಾಗಿಲ್ಲ ಎಂಬುದು ಒಳ್ಳೆಯ ಸುದ್ದಿ. ನಾವು ಕಂಡುಕೊಂಡ ಈ ವಿಚಾರಗಳನ್ನು ನಿಮ್ಮ 80ನೇ ವಯಸ್ಸಿನಲ್ಲಿಯೂ ಸಹ ಆರಂಭಿಸಿದರೂ ನಿಮಗೆ ಮರೆವಿನ ಕಾಯಿಲೆ ಒಂದಿಷ್ಟು ದೂರ ಮಾಡಬಹುದು ಎಂದಿದ್ದಾರೆ.
ಕಡಿಮೆ ಬುದ್ಧಿಮತ್ತೆ ಹೊಂದಿರುವುದು ಸಹ ಬಹುಬೇಗ ಮರೆವಿನ ಕಾಯಿಲೆಗೆ ಒಳಗಾಗುವುದರ ಲಕ್ಷಣವಾಗಬಹುದು. ಇದಲ್ಲದೆ ಈ ಅಧ್ಯಯನದ ವೇಳೆ ಮೃತಪಟ್ಟಿದ್ದ 695 ಮಂದಿಯ ಮೆದುಳಿನ ರಚನೆಯ ಕುರಿತಂತೆಯೂ ಸಂಶೋಧಕರು ಅಧ್ಯಯನ ಕೈಗೊಂಡಿದ್ದಾರೆ.
ಮೆದುಳಿನ ಚಟುವಟಿಕೆಯ ಕೊನೆಯ ಹಂತದ ಮಟ್ಟವನ್ನು ನಾವು ಲೆಕ್ಕ ಹಾಕಿದ ನಂತರ ಗಮನಿಸಬೇಕಾದ ಅಂಶವೆಂದರೆ, ಒಬ್ಬ ವ್ಯಕ್ತಿಯು ಅಲ್ಜೈಮರ್ ರೋಗಕ್ಕೆ ಅಥವಾ ಮರೆವಿಗೆ ಆತನ ಶಿಕ್ಷಣ ಅಥವಾ ಆರಂಭಿಕ ಜೀವನದಲ್ಲಿನ ಮೆದುಳಿನ ಚಟುವಟಿಕೆ ಸಂಬಂಧಿಸಿರುವುದಿಲ್ಲ. ಆದರೆ, ವಯಸ್ಸಾಗುತ್ತಾ ಬಂದಾಗ ಯಾವ ವ್ಯಕ್ತಿ ಹೆಚ್ಚು ಸಕ್ರಿಯವಾಗಿ ಚಟುವಟಿಕೆ ನಡೆಸುತ್ತಾರೋ ಅಂತವರಲ್ಲಿ ಮರೆವು ತಡವಾಗಿ ಕಾಣಿಸಿಕೊಳ್ಳುವುದು ದೃಢವಾಗಿದೆ.
ಇದನ್ನೂ ಓದಿ: ಮುಪ್ಪಿನ ಕಾಲದಲ್ಲಿ ಕಾಡಲಿದೆ ಉಸಿರಾಟ ಸಮಸ್ಯೆ: ಚಿಂತೆ ಬೇಡ ಇದಕ್ಕಿದೆ ಸೂಕ್ತ ಚಿಕಿತ್ಸೆ