ಅಂಡಾಶಯದ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ಹೊಸ ಬಯೋಮಾರ್ಕ್ಗಳನ್ನು ಜಪಾನ್ ಸಂಶೋಧಕರ ತಂಡ ಪತ್ತೆ ಮಾಡಿದೆ. ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಕಷ್ಟವಾಗುವ ಇದಕ್ಕೆ ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿದೆ. ನಗೊಯಾ ಯುನಿವರ್ಸಿಟಿ ಸಂಶೋಧಕರು ಈ ಅಂಡಾಶಯ ಕ್ಯಾನ್ಸರ್ ಪತ್ತೆ ಹಚ್ಚುವ ಹೊಸ ಮಾದರಿಯನ್ನು ಕಂಡುಹಿಡಿದಿದ್ದಾರೆ. ಅಂಡಾಶಯ ಕ್ಯಾನ್ಸರ್ನಲ್ಲಿ ಈ ಹಿಂದಿನ ಮೂರು ಅಪರಿಚಿತ ಪೊರೆಯ ಪ್ರೋಟಿನ್ ಪತ್ತೆ ಮಾಡಲಾಗಿದೆ. ಪಾಲಿಕೆಟೋನ್ ಲೇಪನದೊಂದಿಗೆ ನ್ಯಾನೊವೈರ್‌ಗಳನ್ನು ಒಳಗೊಂಡಿರುವ ವಿಶಿಷ್ಟ ತಂತ್ರಜ್ಞಾನವನ್ನು ಬಳಸಿಕೊಂಡು ಅವುಗಳನ್ನು ಅಳವಡಿಸಲಾಗಿದೆ.
ಈ ಅಂಡಾಶಯ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ಒಂದು ವಿಧಾನ ಎಂದರೆ, ಎಕ್ಸ್ಟ್ರಾಸೆಲ್ಯೂಲರ್ ವೆಸಿಕ್ಲೆಸ್ (ಇವಿಎಸ್) ವಿಶೇಷವಾಗಿ ಸಣ್ಣ ಪ್ರೋಟಿನ್ ಅನ್ನು ಎಕ್ಸೊಮಸ್ ಎಂದು ಕರೆಯುವ ಟ್ಯೂಮರ್ ಬಿಡುಗಡೆ ಮಾಡುತ್ತದೆ. ಈ ಪ್ರೋಟಿನ್ ಅನ್ನು ಕ್ಯಾನ್ಸರ್ ಕೋಶದ ಹೊರಗೆ ಕಾಣಬಹುದಾಗಿದೆ. ಅವು ದೇಹದ ರಕ್ತ, ಮೂತ್ರ ಅಥವಾ ಲಾಲಾರಸದಂತಹ ದ್ರವದಲ್ಲಿ ಮರೆಮಾಚಿಕೊಂಡಿರಬಹುದು. ಆದಾಗ್ಯೂ ಅಂಡಾಶಯದ ಕ್ಯಾನ್ಸರ್ ಪತ್ತೆಗೆ ವಿಶ್ವಾಸಾರ್ಹವಾದ ಕೊರತೆಯಿಂದ ಈ ಬಯೋಮಾರ್ಕರ್‌ಗಳ ಬಳಕೆಯು ಅಡ್ಡಿಯಾಗುತ್ತದೆ. ತಂಡವೂ ಅಂಡಾಶಯ ಕ್ಯಾನ್ಸರ್ನ ಸಾಮಾನ್ಯ ವಿಧವಾದ ಹೈ ಗ್ರೇಡ್ ಸೆರೊಸ್ ಕ್ಯಾರ್ಸಿನೊಮಾ (ಎಚ್ಜಿಎಸ್ಸಿ)ಯಂದ ಸಣ್ಣ, ಮಧ್ಯಮ ಮತ್ತು ದೊಡ್ಡದಾದ ಇವಿಎಸ್ ಅನ್ನು ತಂಡ ಹೊರತೆಗೆದಿದೆ. ಪ್ರೋಟೀನ್‌ಗಳನ್ನು ವಿಶ್ಲೇಷಿಸಲು ಲಿಕ್ವಿಡ್ ಕ್ರೊಮ್ಯಾಟೋಗ್ರಫಿ-ಮಾಸ್ ಸ್ಪೆಕ್ಟ್ರೋಮೆಟ್ರಿಯನ್ನು ಬಳಸಿಕೊಂಡು ಅವುಗಳನ್ನು ವಿಶ್ಲೇಷಿಸಿದರು.
ಗುರುತಿಸಲಾದ ಪ್ರೋಟೀನ್‌ಗಳ ದೃಢೀಕರಣದ ಹಂತಗಳು ಕಠಿಣವಾಗಿವೆ. ಏಕೆಂದರೆ ನಾವು ಉತ್ತಮ ಗುರಿಯನ್ನು ಕಂಡುಕೊಳ್ಳುವ ಮೊದಲು ಬಹಳಷ್ಟು ಪ್ರತಿಕಾಯಗಳನ್ನು ಪ್ರಯತ್ನಿಸಬೇಕಾಗಿತ್ತು ಎಂದು ಅಕಿರಾ ಯೊಕೊಯಿ ತಿಳಿಸಿದ್ದಾರೆ. ಫಲಿತಾಂಶದಲ್ಲಿ, ಸಣ್ಣ ಮತ್ತು ಮಧ್ಯಮ, ದೊಡ್ಡ ಇವಿಗಳು ಸ್ಪಷ್ಟವಾಗಿ ವಿಭಿನ್ನವಾದ ಅಣುಗಳಿಂದ ತುಂಬಿವೆ. ಹೆಚ್ಚಿನ ತನಿಖೆಯು ಮಧ್ಯಮ ಮತ್ತು ದೊಡ್ಡ ಪ್ರಕಾರಕ್ಕಿಂತ ಸಣ್ಣ ಇವಿಗಳು ಹೆಚ್ಚು ಸೂಕ್ತವಾದ ಜೈವಿಕ ಗುರುತುಗಳಾಗಿವೆ ಎಂದು ತಿಳಿದುಬಂದಿದೆ.
ಪ್ರೋಟೀನ್‌ಗಳನ್ನು ಗುರುತಿಸಿದ ನಂತರ, ತಂಡವು ಕ್ಯಾನ್ಸರ್ ಇರುವಿಕೆಯನ್ನು ಗುರುತಿಸಲು ಅನುವು ಮಾಡಿಕೊಡುವ ರೀತಿಯಲ್ಲಿ ಇವಿಗಳನ್ನು ಸೆರೆಹಿಡಿಯಬಹುದೇ ಎಂದು ತನಿಖೆ ನಡೆಸಿತು. ಬಳಿಕ ಪೊಲಿಕೆಟೊನ್ ಚೈನ್ ಲೇಪಿನ ನ್ಯಾನೊವೈರ್ ತಂತ್ರಜ್ಞಾನ ಸೃಷ್ಟಿಸಲಾಯಿತು. ಈ ತಂತ್ರಜ್ಞಾನವೂ ರಕ್ತದ ಮಾದರಿಗಳಿಂದ ಪ್ರತ್ಯೇಕ ಎಕ್ಸೊಸೊಮ್ಸ್ಗೆ ಉತ್ತಮವಾಗಿದೆ. ನಾವು 3-4 ವಿಭಿನ್ನ ಕೋಟಿಕ್ ನ್ಯಾನೊವೈರ್ಗಳ ಕೋಟಿಂಗ್ ಅನ್ನು ಪ್ರಯತ್ನಿಸಿದೆವು. ಆದಾಗ್ಯೂ ಪಾಲಿಕೆಟೊನ್ಸ್ ಸಂಪೂರ್ಣವಾಗಿ ಹೊಸ ವಸ್ತುವಾಗಿದ್ದು, ನ್ಯಾನೊವೇರ್ ಲೇಪನದಲ್ಲಿ ಬಳಕೆ ಮಾಡಬಹುದು. ಅಂತ್ಯದಲ್ಲಿ ಅವು ಉತ್ತಮವಾಗಿ ಹೊಂದಿಕೊಳ್ಳುತ್ತವೆ ಎಂದಿದ್ದಾರೆ.
ಗುರುತಿಸಲಾದ ಮೂರು ಪ್ರೋಟೀನ್‌ಗಳಲ್ಲಿ ಪ್ರತಿಯೊಂದೂ ಎಸ್ಜಿಎಸ್ಸಿಗಳಿಗೆ ಬಯೋಮಾರ್ಕರ್ ಆಗಿ ಉಪಯುಕ್ತವಾಗಿದೆ ಎಂದು ನಮ್ಮ ಸಂಶೋಧನೆಗಳು ತೋರಿಸಿವೆ. ಈ ಸಂಶೋಧನೆಯ ಫಲಿತಾಂಶಗಳು ಈ ರೋಗನಿರ್ಣಯದ ಬಯೋ ಮಾರ್ಕರ್‌ಗಳನ್ನು ನಿರ್ದಿಷ್ಟ ಚಿಕಿತ್ಸೆಗಳಿಗೆ ಮುನ್ಸೂಚಕ ಮಾರ್ಕರ್‌ಗಳಾಗಿ ಬಳಸಬಹುದು ಎಂದು ಸೂಚಿಸುತ್ತದೆ. ನಮ್ಮ ಫಲಿತಾಂಶಗಳು ಅಂಡಾಶಯದ ಕ್ಯಾನ್ಸರ್‌ಗೆ ತಮ್ಮ ಚಿಕಿತ್ಸಕ ತಂತ್ರವನ್ನು ಅತ್ಯುತ್ತಮವಾಗಿಸಲು ವೈದ್ಯರಿಗೆ ಅವಕಾಶ ನೀಡುತ್ತವೆ. ಆದ್ದರಿಂದ, ವೈಯಕ್ತೀಕರಿಸಿದ ಔಷಧವನ್ನು ಅರಿತುಕೊಳ್ಳಲು ಅವು ಉಪಯುಕ್ತವಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ: Heart Health: ಸುಧಾರಿತ ಉಷ್ಣ ಕೂಡ ಹೃದಯಕ್ಕೆ ಅಪಾಯಕಾರಿ; ಅಧ್ಯಯನದಿಂದ ಬಯಲು