ಹೈದರಾಬಾದ್ : ಯಾವುದೇ ಅನಿರೀಕ್ಷಿತ ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ನಮ್ಮ ಶಿಕ್ಷಣ ಅಥವಾ ಸಮಾಜವು ಸಿದ್ಧಪಡಿಸುವುದಿಲ್ಲ. ಮೆದುಳು ಆತಂಕವನ್ನು ಅನುಭವಿಸುತ್ತದೆ ಮತ್ತು ಅದು ಭಾವನೆಗಳನ್ನು ಅನುಭವಿಸಲು ಕಾರಣವಾಗುತ್ತದೆ.
ನಾವೆಲ್ಲರೂ ನಮ್ಮ ಸಂಬಂಧಗಳು ಹೇಗೆ ಇರಬೇಕು ಎಂಬುದರ ಕುರಿತು ಕೆಲ ಪ್ರಮುಖ ನಂಬಿಕೆಗಳೊಂದಿಗೆ ಬೆಳೆಯುತ್ತೇವೆ ಮತ್ತು ಕುಟುಂಬವು ಆಟಿಸಂ ಹೊಂದಿರುವ ಮಗುವನ್ನು ಹೊಂದಿದರೆ, ಅವರು ಅದಕ್ಕೆ ಸಿದ್ಧರಾಗಿರುವುದಿಲ್ಲ. ಪೋಷಕರು ಕಾಲಕಾಲಕ್ಕೆ ಹಲವಾರು ರೀತಿಯ ಭಾವನೆಗಳನ್ನು ಎದುರಿಸುತ್ತಾರೆ. ಅವರು ನಿರೀಕ್ಷಿಸಿದಂತೆ ಮಗು ಹುಟ್ಟದಿದ್ದಲ್ಲಿ ಶೋಕಿಸುತ್ತಾರೆ.
ಈಟಿವಿ ಭಾರತ ಸುಖೀಭವ ತಂಡವು ಕ್ಲಿನಿಕಲ್ ಸೈಕಾಲಜಿಸ್ಟ್ ಶ್ರೀಮತಿ ಸಮೃದ್ಧಿ ಪಟ್ಕರ್ ಅವರೊಂದಿಗೆ ಮಾತನಾಡಿದ್ದು, ಅವರು ಆಟಿಸಂ ಹೊಂದಿರುವ ಮಕ್ಕಳಿಗೆ ಥೆರಪಿ ನೀಡುವಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.
ಆಟಿಸಂ ಮಕ್ಕಳ ಪೋಷಕರು ಸಾಮಾನ್ಯವಾಗಿ ಆಘಾತ, ನಿರಾಕರಣೆ, ಅಪರಾಧಿ ಮನೋಭಾವನೆ, ಕೋಪ, ದುಃಖ, ಹತಾಶತೆ, ಮುಜುಗರ ಸೇರಿದಂತೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಾರೆ.
ಆಟಿಸಂ ಒಂದು ನಿರಂತರ ಪ್ರಕ್ರಿಯೆ ಮತ್ತು ವಿಕಾಸದ ಹಂತವಾಗಿದೆ. ಅದು ಅಂಗವೈಕಲ್ಯ ಮತ್ತು ಅವರ ಮಗುವನ್ನು ನೋಡುವ ಕುರಿತು ವಿಭಿನ್ನ ದೃಷ್ಟಿಕೋನಗಳನ್ನು ನೀಡುತ್ತದೆ. ಆದರೆ, ಆಟಿಸಂ ಮಕ್ಕಳ ಕುರಿತು ಪೋಷಕರು ಕಾಳಜಿವಹಿಸುವುದು ಅತ್ಯಗತ್ಯ.