ETV Bharat / sukhibhava

ಐಸೊಮೆಟ್ರಿಕ್ ಪ್ರತಿರೋಧ ತರಬೇತಿ (IRT) ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು - ಯೂನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್ (UNSW)

ಅಧಿಕ ರಕ್ತದೊತ್ತಡವು ವಿಶ್ವದಾದ್ಯಂತ 1.13 ಬಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ. ಅಂಕಿ-ಅಂಶಗಳ ಪ್ರಕಾರ, 2019ರಲ್ಲಿ 10.8 ಮಿಲಿಯನ್ ಜನರು ಈ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಜಾಗತಿಕವಾಗಿ ಇದು ಸಾವಿಗೆ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ಕೇವಲ ಆಸ್ಟ್ರೇಲಿಯಾದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದರೆ, ಸುಮಾರು 50 ಪ್ರತಿಶತದಷ್ಟು ಜನರಿಗೆ ಇದು ತಿಳಿದಿಲ್ಲ..

high-blood-pressure
ಅಧಿಕ ರಕ್ತದೊತ್ತಡ
author img

By

Published : Sep 7, 2021, 10:45 PM IST

ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಯೂನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್ (UNSW)ನ ಸಂಶೋಧಕರು ಇತ್ತೀಚೆಗೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ IRT ತರಬೇತಿಯ ಪಾತ್ರವನ್ನು ಅನ್ವೇಷಿಸಿದ್ದಾರೆ.

ಆ ಮೂಲಕ ಈ ಹಿಂದೆ ನಡೆಸಿದ ಅಧ್ಯಯನಗಳ ಹೊಸ ವಿಶ್ಲೇಷಣೆ ಮಾಡಿದ್ದಾರೆ. ಐಆರ್​ಟಿ ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಫಲಿತಾಂಶಗಳು ತೋರಿಸಿವೆ. ಹೀಗಿದ್ದರೂ ಅಧಿಕ ರಕ್ತದೊತ್ತಡದ ಚಿಕಿತ್ಸೆಗಾಗಿ ಅನೇಕ ಅಂತಾರಾಷ್ಟ್ರೀಯ ಮಾರ್ಗಸೂಚಿಗಳಿಂದ ಐಆರ್‌ಟಿಯನ್ನು ಶಿಫಾರಸು ಮಾಡಲಾಗಿಲ್ಲ.

ಐಆರ್‌ಟಿ ರಕ್ತದೊತ್ತಡವನ್ನು ಕಡಿಮೆ ಮಾಡುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಇದು ಸಮಯ-ಪರಿಣಾಮಕಾರಿ ಸಾಧನವಾಗಿದೆ ಎಂದು ಅಧಿಕ ರಕ್ತದೊತ್ತಡ ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಮೆಟಾ-ವಿಶ್ಲೇಷಣೆಯ ಅಧ್ಯಯನದ ಹಿರಿಯ ಲೇಖಕ ಡಾ. ಮ್ಯಾಥ್ಯೂ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇವರು ಯುಎನ್‌ಎಸ್‌ಡಬ್ಲ್ಯೂನ ವ್ಯಾಯಾಮ ಶರೀರ ಶಾಸ್ತ್ರಜ್ಞ ಮತ್ತು ಸ್ಕೂಲ್ ಆಫ್ ಹೆಲ್ತ್ ಸೈನ್ಸಸ್‌ನ ಮೆಡಿಸಿನ್ ಮತ್ತು ಹೆಲ್ತ್‌ನ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಶೋಧನೆಯ ವಿಮರ್ಶೆಯು ಒಬ್ಬ ವ್ಯಕ್ತಿಯು ದಿನಕ್ಕೆ 12 ನಿಮಿಷಗಳು ಹಾಗೂ ವಾರಕ್ಕೆ 2 ರಿಂದ 3 ದಿನ ಮಾತ್ರ ವ್ಯಾಯಾಮ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.

ಐಸೊಮೆಟ್ರಿಕ್ ಪ್ರತಿರೋಧ ತರಬೇತಿ ಎಂದರೇನು? : ಐಸೊಮೆಟ್ರಿಕ್ ರೆಸಿಸ್ಟೆನ್ಸ್ ಟ್ರೈನಿಂಗ್ ಎಂದರೆ ಬಲ-ಆಧಾರಿತ ತರಬೇತಿ. ಅಂದರೆ, ಸ್ಕ್ವಾಟ್ಸ್ ಅಥವಾ ಪುಶ್-ಅಪ್‌ಗಳು. ಇದರಲ್ಲಿ ಸ್ನಾಯುಗಳು ಹೆಚ್ಚಿನ ಶಕ್ತಿಯನ್ನು ಬೇಡುತ್ತವೆ. ಪ್ರಸ್ತುತ, ಅಧಿಕ ರಕ್ತದೊತ್ತಡದ ಚಿಕಿತ್ಸೆಗಾಗಿ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಐಆರ್‌ಟಿಯನ್ನು ಶಿಫಾರಸು ಮಾಡಲಾಗಿಲ್ಲ. ಇದು ಅದರ ಸುರಕ್ಷತೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಯಾಕೆಂದರೆ, IRTಯ ಸ್ಥಿರ ಸ್ವಭಾವವು ವ್ಯಾಯಾಮದ ಸಮಯದಲ್ಲಿ ರಕ್ತದೊತ್ತಡವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ವಾಕಿಂಗ್, ಸೈಕ್ಲಿಂಗ್ ಅಥವಾ ಶಕ್ತಿ ತರಬೇತಿಯಂತಹ 'ಸಾಂಪ್ರದಾಯಿಕ' ವರ್ಕೌಟ್‌ಗಳನ್ನು ಮಾಡಲು ಕಷ್ಟಪಡುವ ಜನರಿಗೆ ಇದು ಸೂಕ್ತ ಎಂದು ಡಾ. ಜೋನ್ಸ್ ವಿವರಿಸುತ್ತಾರೆ. ಸಂಶೋಧನೆಯ ಸಮಯದಲ್ಲಿ ಹಿರಿಯ ವಯಸ್ಕರಲ್ಲಿ ಈ ವ್ಯಾಯಾಮಗಳಿಂದ ಯಾವುದೇ ಅಡ್ಡಪರಿಣಾಮಗಳು ಆಗದೇ ಇದ್ದದ್ದನ್ನು ಕಂಡು ಸಂಶೋಧಕರು ಆಶ್ಚರ್ಯಚಕಿತರಾದರು. ಆದರೆ, ಐಆರ್‌ಟಿಗಳ ವಿವಿಧ ಪ್ರಕಾರಗಳು ಮತ್ತು ಆವರ್ತನಗಳು ಫಲಿತಾಂಶಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಮತ್ತು ಅವು ಸುರಕ್ಷಿತವಾಗಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಹೇಳುತ್ತಾರೆ.

ಜಾಗತಿಕ ಮರಣಕ್ಕೆ ಪ್ರಮುಖ ಅಪಾಯಕಾರಿ ಅಂಶಗಳು : ಅಧಿಕ ರಕ್ತದೊತ್ತಡವು ವಿಶ್ವದಾದ್ಯಂತ 1.13 ಬಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ. ಅಂಕಿ-ಅಂಶಗಳ ಪ್ರಕಾರ, 2019ರಲ್ಲಿ 10.8 ಮಿಲಿಯನ್ ಜನರು ಈ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಜಾಗತಿಕವಾಗಿ ಇದು ಸಾವಿಗೆ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ಕೇವಲ ಆಸ್ಟ್ರೇಲಿಯಾದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದರೆ, ಸುಮಾರು 50 ಪ್ರತಿಶತದಷ್ಟು ಜನರಿಗೆ ಇದು ತಿಳಿದಿಲ್ಲ.

ಈ ಜಾಗತಿಕ ಆರೋಗ್ಯ ಸವಾಲಿನ ಪರಿಣಾಮವನ್ನು ಗಮನಿಸಿದರೆ, ಅಧಿಕ ರಕ್ತದೊತ್ತಡದ ಸಂಭವ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ತಂತ್ರಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಸಂಶೋಧನೆಯು ಒತ್ತಿ ಹೇಳುತ್ತದೆ. ಅಧಿಕ ರಕ್ತದೊತ್ತಡವು ಹೃದಯಾಘಾತ ಅಥವಾ ಪಾರ್ಶ್ವವಾಯು (ಹೃದಯರಕ್ತನಾಳದ ಕಾಯಿಲೆಗಳು) ಗೆ ಹೆಚ್ಚಿನ ಅಪಾಯದ ವರ್ಗದಲ್ಲಿ ಬರುತ್ತದೆ. ಅದಕ್ಕಾಗಿಯೇ ರಕ್ತದೊತ್ತಡದ ಮಟ್ಟವನ್ನು ಗಮನಿಸುವುದು ಮುಖ್ಯ. 18 ವರ್ಷಕ್ಕಿಂತ ಮೇಲ್ಪಟ್ಟ ಜನರು ಪ್ರತಿ ಎರಡು ವರ್ಷಕ್ಕೊಮ್ಮೆಯಾದರೂ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಪ್ರಸ್ತುತ ಸಂಶೋಧನೆಯ ವಿಶ್ಲೇಷಣೆ : ಸಂಶೋಧನೆಯ 24 ಗಂಟೆಗಳ ಅವಧಿಯಲ್ಲಿ ಐಆರ್‌ಟಿ ರಕ್ತದೊತ್ತಡದ ಅಳತೆಗಳನ್ನು ಸಹ ಸುಧಾರಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಡಾ. ಜೋನ್ಸ್ ವಿವರಿಸುತ್ತಾರೆ. ವಾಡಿಕೆಯ ಕ್ಲಿನಿಕಲ್ ಅಭ್ಯಾಸದ ಭಾಗವಾಗಿ ತೆಗೆದುಕೊಳ್ಳಲಾದ ಅಳತೆಗಳನ್ನು ನೋಡಿದಾಗ, ಐಆರ್‌ಟಿ ಗುಂಪಿನಲ್ಲಿ ಸಿಸ್ಟೊಲಿಕ್ ರಕ್ತದೊತ್ತಡ (ಎಸ್‌ಬಿಪಿ) ನಿಯಂತ್ರಣಗಳೊಂದಿಗೆ ಹೋಲಿಸಿದರೆ ಸರಾಸರಿ 6.97 ಎಂಎಂ ಹೆಚ್‌ಜಿ ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಡಯಾಸ್ಟೊಲಿಕ್ ರಕ್ತದೊತ್ತಡ (ಡಿಬಿಪಿ) ಕೂಡ ಸರಾಸರಿ 3.86 ಎಂಎಂ ಕಡಿಮೆಯಾಗಿದೆ.

ವಿಶ್ಲೇಷಣೆಯಲ್ಲಿ ಸಂಶೋಧಕರು 24 ಯಾದೃಚ್ಛಿಕ ನಿಯಂತ್ರಣ ಪ್ರಯೋಗಗಳನ್ನು ಸೇರಿಸಿದ್ದಾರೆ. ಇದರಲ್ಲಿ ಭಾಗವಹಿಸಿದ 1,143 ಜನರಲ್ಲಿ ಸರಾಸರಿ 56 ವರ್ಷ ವಯಸ್ಸಿನವರಾಗಿದ್ದಾರೆ. ಒಟ್ಟು ಶೇ.56ರಷ್ಟು ಮಹಿಳೆಯರು ಭಾಗವಹಿಸಿದ್ದಾರೆ. ಅಧ್ಯಯನದಲ್ಲಿ ಭಾಗವಹಿಸಿದವರು ಸಾಮಾನ್ಯ ಸಿಸ್ಟೊಲಿಕ್ ರಕ್ತದೊತ್ತಡ (ಎಸ್‌ಬಿಪಿ) 130-139 ಮಿಲಿಮೀಟರ್ (ಎಂಎಂ ಎಚ್‌ಜಿ) ಇರುವ ಜನರನ್ನು ಒಳಗೊಂಡಿತ್ತು.

ರಕ್ತದೊತ್ತಡದ ಮೇಲೆ ಐಆರ್‌ಟಿಯ ಪರಿಣಾಮವನ್ನು ಉತ್ತಮವಾಗಿ ನಿರ್ಣಯಿಸಲು ದೊಡ್ಡ, ಉತ್ತಮ-ಗುಣಮಟ್ಟದ ಯಾದೃಚ್ಛಿಕ ನಿಯಂತ್ರಿತ ಪ್ರಯೋಗಗಳ ಸ್ಪಷ್ಟ ಅವಶ್ಯಕತೆ ಇದೆ ಎಂದು ಡಾ. ಜೋನ್ಸ್ ವಿವರಿಸುತ್ತಾರೆ. ವೈಜ್ಞಾನಿಕ ಸಾಹಿತ್ಯ ವಿಮರ್ಶೆಯಲ್ಲಿ ಒಳಗೊಂಡಿರುವ ಅಧ್ಯಯನಗಳಿಗೆ ಸಂಬಂಧಿಸಿದಂತೆ ಸಂಶೋಧನೆಯ ಮಿತಿಗಳು 'ಉತ್ತಮ ಗುಣಮಟ್ಟ'ವಲ್ಲ ಎಂದು ಅವರು ಒಪ್ಪಿದರು. ಇದರರ್ಥ ಸಂಶೋಧನಾ ತಂಡವು ಅವರ ಫಲಿತಾಂಶಗಳ ಬಗ್ಗೆ ಸಂಪೂರ್ಣ ಭರವಸೆಯನ್ನು ನೀಡಲ್ಲ ಎಂಬುದಾಗಿದೆ.

ಓದಿ: ಸಿರಿಧಾನ್ಯ ಹೃದಯ ಸಂಬಂಧಿ ಕಾಯಿಲೆ ಅಪಾಯ ದೂರಮಾಡಲಿದೆ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.