ETV Bharat / sukhibhava

ಗರ್ಭಾವಸ್ಥೆಯಲ್ಲಿನ ಸಮಸ್ಯೆಗಳಿಗೂ ತಲೆನೋವಿಗೂ ಸಂಬಂಧ ಇದೆಯಾ?

ತಲೆನೋವು ಗರ್ಭಿಣಿ ಮಹಿಳೆಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ತಾಯಿಯ ದೇಹದ ಸಮಸ್ಯೆಯು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬುದರ ಬಗ್ಗೆ ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ ಅಧ್ಯಯನವೊಂದನ್ನು ನಡೆಸಿದೆ.

ತಲೆನೋವು ಗರ್ಭಿಣಿ ಮಹಿಳೆಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ

author img

By

Published : Feb 28, 2022, 7:19 PM IST

'ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ' ಬಿಡುಗಡೆ ಮಾಡಿದ ಪ್ರಾಥಮಿಕ ಅಧ್ಯಯನದ ವರದಿ ಪ್ರಕಾರ, ಗರ್ಭಾವಸ್ಥೆಯಲ್ಲಿ ಮೈಗ್ರೇನ್ ಹೊಂದಿರುವ ಮಹಿಳೆಯರು ಅವಧಿಪೂರ್ವ ಹೆರಿಗೆ, ಅಧಿಕ ರಕ್ತದೊತ್ತಡ ಮತ್ತು ಪ್ರಿಕ್ಲಾಂಪ್ಸಿಯಾದಂತಹ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಮೈಗ್ರೇನ್ ಹೊಂದಿರುವ ಮಹಿಳೆಯರಿಗಿಂತ, ಔರಾ ಮೈಗ್ರೇನ್ ಹೊಂದಿರುವ ಮಹಿಳೆಯರಲ್ಲಿ ಪ್ರಿಕ್ಲಾಂಪ್ಸಿಯಾ ಸಮಸ್ಯೆಯ ಅಪಾಯ ಹೆಚ್ಚಿರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಔರಾ ತಲೆನೋವಿನ ಮೊದಲು ಬರುವ ಸಂವೇದನೆಯಾಗಿದೆ. ಆಗಾಗ್ಗೆ ದೃಷ್ಟಿ ಸಮಸ್ಯೆಯಾಗುವುದು, ಸಡನ್​ ಆಗಿ ಮಿಂಚಿನಂತ ಬೆಳಕು ಬಂದ ಹಾಗೆ ಅನಿಸುವುದು ಔರಾದ ಸೂಚನೆಗಳಾಗಿವೆ. ಪ್ರಿಕ್ಲಾಂಪ್ಸಿಯಾವು ಅಧಿಕ ರಕ್ತದೊತ್ತಡವನ್ನು ಹೆಚ್ಚುವರಿ ರೋಗಲಕ್ಷಣಗಳೊಂದಿಗೆ ಒಳಗೊಂಡಿರುತ್ತದೆ. ಗರ್ಭಾವಸ್ಥೆಯಲ್ಲಿ ಇದು ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ.

ಸುಮಾರು 20 ಪ್ರತಿಶತದಷ್ಟು ಮಹಿಳೆಯರು ಹೆರಿಗೆಯ ಸಮಯದಲ್ಲಿ ಮೈಗ್ರೇನ್ ಹೊಂದಿರುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಮೈಗ್ರೇನ್​​ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಇಂದಿಗೂ ತಿಳಿಯಲು ಸಾಧ್ಯವಾಗಿಲ್ಲ ಎಂದು ಬೋಸ್ಟನ್‌ನ ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಅಲೆಕ್ಸಾಂಡ್ರಾ ಪರ್ಡ್ಯೂ-ಸ್ಮಿಥೆ ಹೇಳಿದ್ದಾರೆ.

ಮೈಗ್ರೇನ್ ಮತ್ತು ಗರ್ಭಾವಸ್ಥೆಯಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ನಾವು ಸಂಶೋಧನೆ ನಡೆಸಿದ್ದೇವೆ. ಇದರಿಂದ ಮೈಗ್ರೇನ್​ ಹೊಂದಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಯಾವ ಯಾವ ಸಮಸ್ಯೆಗಳನ್ನು ಅಧ್ಯಯನಕ್ಕಾಗಿ, ಸಂಶೋಧಕರು 20 ವರ್ಷಗಳ ಅವಧಿಯಲ್ಲಿ ಸುಮಾರು 19,000 ಮಹಿಳೆಯರಲ್ಲಿ 30,000ಕ್ಕೂ ಹೆಚ್ಚು ಗರ್ಭಧಾರಣೆಗಳನ್ನು ನೋಡಿದ್ದಾರೆ. ಆ ಗರ್ಭಧಾರಣೆಗಳಲ್ಲಿ, 11 ಪ್ರತಿಶತದಷ್ಟು ಮಹಿಳೆಯರು ಗರ್ಭಾವಸ್ಥೆಯ ಮೊದಲು ಮೈಗ್ರೇನ್ ಹೊಂದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ವರದಿ ಮಾಡಿದ್ದಾರೆ. ಈ ರೀತಿ ತಲೆನೋವು ಹೊಂದಿರುವ ಮಹಿಳೆಯರಲ್ಲಿ ಅವಧಿಪೂರ್ವ ಮಗು ಜನನ, ಗರ್ಭಾವಸ್ಥೆಯಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಪ್ರಿಕ್ಲಾಂಪ್ಸಿಯಾ ಮತ್ತು ಮಗು ಕಡಿಮೆ ತೂಕ ಹೊಂದಿರುವ ಸಮಸ್ಯೆಗಳು ಎದುರಾಗಿವೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಮೈಗ್ರೇನ್ ಇಲ್ಲದ ಮಹಿಳೆಯರಿಗೆ ಹೋಲಿಸಿದರೆ, ಮೈಗ್ರೇನ್ ಹೊಂದಿರುವ ಮಹಿಳೆಯರು ಅವಧಿಪೂರ್ವ ಹೆರಿಗೆಯ ಅಪಾಯವನ್ನು 17 ಪ್ರತಿಶತದಷ್ಟು ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಅಪಾಯ ಅವರಲ್ಲಿ 28 ಪ್ರತಿಶತದಷ್ಟು ಹೆಚ್ಚಿದೆ. ಗರ್ಭಾವಸ್ಥೆಯ ವೇಳೆ ಅಧಿಕ ರಕ್ತದೊತ್ತಡ, ಮೈಗ್ರೇನ್ ಹೊಂದಿರುವ 7 ಪ್ರತಿಶತದಷ್ಟು ಮಹಿಳೆಯರಿಗೆ ಅವಧಿಪೂರ್ವ ಗರ್ಭಧಾರಣೆಯಾಗಿದೆ. ಮೈಗ್ರೇನ್ ಇಲ್ಲದ ಮಹಿಳೆಯರಲ್ಲಿ 5 ಪ್ರತಿಶತದಷ್ಟು ಗರ್ಭಧಾರಣೆಯಾಗಿದೆ.

ಇದನ್ನೂ ಓದಿ: ಗರ್ಭಧಾರಣೆಯ ಆರಂಭಿಕ ಲಕ್ಷಣಗಳು ಯಾವುವು?

ಗರ್ಭಧಾರಣೆಯ 20 ವಾರಗಳ ಬಳಿಕ ಪ್ರಿಕ್ಲಾಂಪ್ಸಿಯಾ ಆರಂಭವಾಗುವುದು. ಸರಿಯಾದ ಚಿಕಿತ್ಸೆ ಸಿಗದೆ ಇದ್ದರೆ, ಆಗ ಇದರಿಂದ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಗರ್ಭಧಾರಣೆಯ ಆರಂಭಿಕ ಹಂತದಲ್ಲೇ ಪ್ರಿಕ್ಲಾಂಪ್ಸಿಯಾ ಉಂಟಾದರೆ ಆಗ ಮಗುವನ್ನು ಗರ್ಭದಿಂದ ಹೊರಗೆ ತೆಗೆಯುವುದು ಕೂಡ ಸಮಸ್ಯೆಯಾಗಲಿದೆ.

ರಕ್ತದ ಪ್ರಮಾಣ ಮತ್ತು ಹಾರ್ಮೋನ್ ಗಳು ಹೆಚ್ಚಾದ ಸಂದರ್ಭದಲ್ಲಿ ತಲೆನೋವು ಕಾಣಿಸಿಕೊಳ್ಳುವುದು. ಮೊದಲ 9 ವಾರಗಳಲ್ಲಿ ಇದು ನಿರಂತರವಾಗಿ ಇರುವುದು. ಆದರೆ ಗರ್ಭಧಾರಣೆ ಸಂದರ್ಭದಲ್ಲಿ ತಲೆನೋವು ಯಾವುದೇ ಸಂದರ್ಭದಲ್ಲೂ ಬರಬಹುದು. ತೀವ್ರ ರೀತಿಯ ತಲೆನೋವು ಕೂಡ ಕಾಡುವುದು ಇದೆ.

ಮೈಗ್ರೇನ್ ಇಲ್ಲದ ಮಹಿಳೆಯರಿಗಿಂತ ಔರಾ ಮೈಗ್ರೇನ್ ಹೊಂದಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಪ್ರಿಕ್ಲಾಂಪ್ಸಿಯಾವನ್ನು ಹೊಂದುವ ಸಾಧ್ಯತೆ 51 ಪ್ರತಿಶತದಷ್ಟು ಹೆಚ್ಚಿದೆ. ಮೈಗ್ರೇನ್ ಮಧುಮೇಹ ಅಥವಾ ಕಡಿಮೆ ಜನನ ತೂಕದೊಂದಿಗೆ ಸಂಬಂಧ ಹೊಂದಿಲ್ಲ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ನಿಮಗೆ ತಲೆನೋವು ಕಾಡಿದ ವೇಳೆ ದೊಡ್ಡ ಲೋಟದಲ್ಲಿ ಒಂದು ಲೋಟ ನೀರು ಕುಡಿಯಿರಿ. ಇದರಿಂದ ನಿರ್ಜಲೀಕರಣದಿಂದ ಕಾಡುವ ತಲೆನೋವಿಗೆ ಪರಿಹಾರ ಸಿಗುವುದು. ಗರ್ಭಿಣಿಯರು ಯಾವತ್ತಿಗೂ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಆದರೆ ಟೈಲೆನಾಲ್ ಗರ್ಭಿಣಿಯರಿಗೆ ತಲೆನೋವಿಗೆ ಸೇವನೆ ಮಾಡಬಹುದಾದ ಒಳ್ಳೆಯ ಔಷಧಿಯಾಗಿದೆ. ಮೂರನೇ ತ್ರೈಮಾಸಿಕದ ವೇಳೆ ಪ್ರಿಕ್ಲಾಂಪ್ಸಿಯಾದ ಅಪಾಯವು ಹೆಚ್ಚಾಗಿ ಇರುವುದು. ಹೀಗಾಗಿ ನಿಮಗೆ ಈ ಸಂದರ್ಭದಲ್ಲಿ ತಲೆನೋವು ಕಂಡುಬಂದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.