ETV Bharat / sukhibhava

ನಿಮ್ಮ ಮಗು ತರಕಾರಿಗಿಂತ ಹೆಚ್ಚಾಗಿ ಹಣ್ಣು ಸೇವಿಸುತ್ತದೆಯೇ?; ಆರೋಗ್ಯಕ್ಕೆ ಒಳ್ಳೆಯದಾ? ಇಲ್ಲಿದೆ ಮಾಹಿತಿ - ಹಣ್ಣಿನಷ್ಟೇ ತರಕಾರಿಗಳನ್ನು ನೀಡುವುದು ಅಗತ್ಯ

ಮಕ್ಕಳು ಹಣ್ಣು ಸೇವನೆಗೆ ಹೆಚ್ಚು ಆದ್ಯತೆ ನೀಡುವುದು ಅಚ್ಚರಿಯ ವಿಷಯವಲ್ಲ. ಇದಕ್ಕೆ ಕಾರಣ ಹಣ್ಣಿನ ರುಚಿ, ವಿನ್ಯಾಸ, ಗರಿಗರಿಯಾದ, ಕುರುಕುಲಾಗಿ ಅಥವಾ ರಸಭರಿತವಾಗಿರುವುದು ಕಾರಣವಾಗಿದೆ.

is children eat more fruits than vegetable

author img

By ETV Bharat Karnataka Team

Published : Dec 23, 2023, 10:41 AM IST

ಆಸ್ಟ್ರೇಲಿಯಾ: ಬೆಳೆಯುವ ಮಕ್ಕಳಿಗೆ ಹಣ್ಣಿನಷ್ಟೇ ತರಕಾರಿಗಳನ್ನು ನೀಡುವುದು ಅಗತ್ಯ. ಆದರೆ, ಅನೇಕ ಬಾರಿ ಮಕ್ಕಳು ಈ ತರಕಾರಿ ಸೇವನೆಯಲ್ಲಿ ಹಿಂದೆ ಬೀಳುತ್ತಾರೆ. ಮಗು ಹಣ್ಣನ್ನು ಹೆಚ್ಚಾಗಿ ಸೇವಿಸುತ್ತದೆ. ತರಕಾರಿ ಸೇವಿಸುವುದಿಲ್ಲ ಇದು ಉತ್ತಮವೇ ಎಂಬ ಗೊಂದಲ ಅನೇಕ ಪೋಷಕರದ್ದು, ಅದಕ್ಕೆ ಇಲ್ಲಿದೆ ಉತ್ತರ.

ಆಸ್ಟ್ರೇಲಿಯನ್​ ಆಹಾರ ಮಾರ್ಗಸೂಚಿ ಶಿಫಾರಸು ಮಾಡಿರುವಂತೆ ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದು ಉತ್ತಮವಂತೆ. ಈ ಶಿಫಾರಸಿನ ಅನುಸಾರ ಎರಡು ವರ್ಷಕ್ಕಿಂತ ಮೇಲ್ಪಟ್ಟ ಶೇ 62.6ರಷ್ಟು ಮಕ್ಕಳು ಹಣ್ಣನ್ನು ಸೇವಿಸಿದರೆ, ಶೇ 9ರಷ್ಟು ಮಕ್ಕಳು ಮಾತ್ರ ತರಕಾರಿ ಸೇವಿಸುತ್ತಾರೆ.

ಮಕ್ಕಳು ಹಣ್ಣಿನ ಸೇವನೆಗೆ ಹೆಚ್ಚು ಆದ್ಯತೆ ನೀಡುವುದು ಅಚ್ಚರಿ ವಿಷಯವಲ್ಲ. ಇದಕ್ಕೆ ಕಾರಣ ಹಣ್ಣಿನ ರುಚಿ, ವಿನ್ಯಾಸ, ಗರಿಗರಿಯಾದ, ಕುರುಕುಲಾದ ಅಥವಾ ರಸಭರಿತವಾಗಿರುವುದು ಕಾರಣ. ಹಣ್ಣಿನ ವಿನ್ಯಾಸವೇ ಮಕ್ಕಳಲ್ಲಿ ಒಂದು ರೀತಿ ಸಕಾರಾತ್ಮಕ ಸಂವೇದನಾ ಅನುಭವವನ್ನು ನೀಡುತ್ತದೆ.

ತರಕಾರಿಗಳು ರುಚಿ ಅನೇಕ ಬಾರಿ ಅಷ್ಟು ಹಿತಕರವಾಗಿರುವುದಿಲ್ಲ. ಹೂಕೋಸಿನಂತಹ ಹಲವು ತರಕಾರಿಗಳು ಮಕ್ಕಳಿಗೆ ಮುಖಗಿವುಚುವಂತೆ ಮಾಡುತ್ತದೆ. ಅಲ್ಲದೇ ಮಕ್ಕಳು ತರಕಾರಿಗಿಂತ ಹಣ್ಣನ್ನು ಇಷ್ಟಪಡುವುದು ಪೋಷಕರ ಆದ್ಯತೆ ಮೇಲೆಯೂ ಅವಲಂಬಿತವಾಗಿರುತ್ತದೆ. ಜೊತೆಗೆ ತಾಯಿ ಗರ್ಭಾವಸ್ಥೆಯಲ್ಲಿ ಸೇವಿಸಿದ ಆಹಾರದ ಮೇಲೆ ಅವರ ಆಹಾರದ ಆದ್ಯತೆ ಅಭಿವೃದ್ಧಿ ಆಗುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ.

ಸಮತೋಲನಕ್ಕೆ ಒತ್ತು: ಹಣ್ಣಿಗೆ ಆದ್ಯತೆ ನೀಡುವುದು ಸಾಮಾನ್ಯ. ಆದರೆ, ಮಗುವು ತರಕಾರಿಗಿಂತ ಹೆಚ್ಚಾಗಿ ಹಣ್ಣು ಸೇವಿಸುವುದು ಒಳ್ಳೆಯದಾ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರ ಆಹಾರ ಮತ್ತು ಹಣ್ಣಿನ ಸಮತೋಲನ ಸೇವನೆ ಉತ್ತಮ. ಮಗು ತರಕಾರಿ ಸೇವಿಸುವ ಬದಲು ಕನಿಷ್ಠ ಹಣ್ಣಾದರೂ ಸೇವಿಸುತ್ತದೆ ಎಂದು ಸುಮ್ಮನಾಗಬೇಡಿ. ತರಕಾರಿಗಳು ಶಕ್ತಿ, ಅಗತ್ಯ ವಿಟಮಿನ್​ ಮತ್ತು ಮಿನರಲ್ಸ್​​, ನೀರಿನಾಂಶ ಮತ್ತು ಫೈಬರ್​ ಅನ್ನು ನೀಡುತ್ತದೆ. ಇದು ಶಕ್ತಿಶಾಲಿ ಪ್ರತಿರೋಧಕ ಶಕ್ತಿ ವ್ಯವಸ್ಥೆಯ ವೃದ್ಧಿಗೆ ಸಹಾಯ ಮಾಡುತ್ತದೆ. ನಿಮ್ಮ ಮಗುವು ಕೇವಲ ಹಣ್ಣು ಸೇವಿಸುತ್ತಿದ್ದರೆ, ಅವರು ತರಕಾರಿಯ ಪೋಷಕಾಂಶವನ್ನು ಪಡೆಯುವುದಿಲ್ಲ. ಕಾರಣ ಪೋಷಕಾಂಶವು ಕೇವಲ ತರಕಾರಿಗಳಲ್ಲಿ ಇರುತ್ತದೆ.

ಹಣ್ಣುಗಳು ದೇಹಕ್ಕೆ ವಿಟಮಿನ್​ ಮತ್ತು ಮಿನರಲ್ಸ್​ ಜೊತೆಗೆ ಪೈತೊಕೆಮಿಕಲ್ಸ್​​ ನೀಡಿ, ಊರಿಯುತ ಕಡಿಮೆಗೆ ಸಹಾಯಕಾರಿಯಾಗಿವೆ. ಹಣ್ಣು ಮತ್ತು ತರಕಾರಿಗಳು ಆರೋಗ್ಯಕರ ಸೇವನೆಯಿಂದ ರಕ್ತದೊತ್ತಡ, ಹೃದಯ ರೋಗ ಮತ್ತು ಪಾರ್ಶ್ವವಾಯುನಂತಹ ದೀರ್ಘಕಾಲದ ಸಮಸ್ಯೆಯಿಂದ ರಕ್ಷಣೆ ಪಡೆಯಬಹುದು. ಎರಡನ್ನೂ ಸಮತೋಲವಾಗಿ ಸೇವಿಸಿದಾಗ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯವಾಗುತ್ತದೆ.

ಮಗು ಹೆಚ್ಚಾಗಿ ಹಣ್ಣು ಸೇವಿಸಿದರೆ ಏನು ಮಾಡಬೇಕು? ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುತ್ತದೆ. ಮಗು ದಿನದಲ್ಲಿ ಕೊಂಚ ಅಧಿಕ ಎನ್ನುವಷ್ಟು ಹಣ್ಣು ಸೇವನೆ ಮಾಡುವುದರಿಂದ ಇದು ಕೊಂಚ ಸಮಸ್ಯೆ ಸೃಷ್ಟಿಸಬಹುದು. ಹಣ್ಣುಗಳಲ್ಲಿ ಯಾವುದೇ ಕೊಬ್ಬು, ಪ್ರೊಟೀನ್​ ಇರುವುದಿಲ್ಲ. ಆದರೆ ಇದು ಮಗುವಿನ ಬೆಳವಣಿಗೆಗೆ ಅಗತ್ಯ.

ತರಕಾರಿ ಸೇವನೆಗೆ ಉತ್ತೇಜಿಸಿ: ಮಗುವಿಗೆ ತರಕಾರಿಗಳ ಸೇವನೆ ಮಾಡುವಂತೆ ಪ್ರೇರೇಪಿಸಿ. ಆಹಾರದಲ್ಲಿ ತರಕಾರಿಗಳ ಮಿಶ್ರಣ, ಅದರಿಂದ ಅಲಂಕಾರ ಮಾಡಿ ಆಸಕ್ತಿ ಮೂಡಿಸುವಂತೆ ಮಾಡಿ. ಬಣ್ಣ ಬಣ್ಣದ ತರಕಾರಿಗಳ ಬಳಕೆ ಮಾಡಿ. ಮಗು ಕೆಲವು ತರಕಾರಿಗಳು ತಿನ್ನಲು ಹಿಂದೆ ಮುಂದೆ ನೋಡಿದರೆ, ಅಲ್ಲಿಗೆ ನಿಮ್ಮ ಪ್ರಯತ್ನ ನಿಲ್ಲಿಸಬೇಡಿ. ಹೊಸ ಆಹಾರದ ಮೂಲಕ ಅದರ ರುಚಿ ಹೆಚ್ಚಿಸುವಂತೆ ಮಾಡಿ.

ಇದನ್ನೂ ಓದಿ: ಶ್ವಾಸಕೋಶ ರೋಗಿಗಳಿಗೆ ಬೀಟ್​ರೂಟ್​ ಜ್ಯೂಸ್​ನ ಪೂರಕಗಳು ಪ್ರಯೋಜನಕಾರಿ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.