ಹೈದರಾಬಾದ್: ತಮ್ಮ ದೇಹಾಕೃತಿ ಹೇಗಿರುತ್ತದೆಯೋ ಹಾಗೇ ಸ್ವೀಕರಿಸುವುದು ಬಹುತೇಕರಿಗೆ ಮುಜುಗರದ ಸಂಗತಿ. ಇದೇ ಕಾರಣಕ್ಕೆ ಕಟ್ಟುನಿಟ್ಟಿನ ಡಯಟ್ ಮೊರೆ ಹೋಗುವುದನ್ನು ಕಾಣಬಹುದು. ಇದರಿಂದ ತಮ್ಮಿಷ್ಟದ ಆಹಾರವನ್ನು ಮನಸ್ಸು ಪೂರ್ತಿಯಾಗಿ ಆಹ್ಲಾದಿಸುವುದನ್ನೇ ಮರೆಯುತ್ತಾರೆ. ಈ ರೀತಿಯ ಕೀಳರಿಮೆ ಹೋಗಲಾಡಿಸಿ, ತಮ್ಮ ದೇಹದ ಬಗ್ಗೆ ಸ್ವಯಂ ಪ್ರೀತಿ ಮತ್ತು ದೇಹದ ಬಗ್ಗೆ ಸಕಾರಾತ್ಮಕತೆ ಪ್ರೇರೇಪಿಸುವ ಸಲುವಾಗಿ ಡಯಟ್ ಅನ್ನು ಬದಿಗಿರಿಸಿ ಪ್ರೇರಣೆ ನೀಡಲು ಮೇ 6ರಂದು 'ಇಂಟರ್ನ್ಯಾಷನ ನೋ ಡಯಟ್' ದಿನವನ್ನಾಗಿ ಆಚರಿಸಲಾಗುವುದು. ಈ ಮೂಲಕ ಯಾವುದೇ ದೇಹಾಕಾರ ಇದ್ದರೂ ನಿಮ್ಮನ್ನು ನೀವು ಪ್ರೀತಿಸಿ, ಜೀವನ ಅನುಭವಿಸಿ ಎಂಬ ಸಂದೇಶ ಸಾರಲಾಗುತ್ತದೆ.
ಸ್ಥೂಲಕಾಯವೇ ರೋಗಗಿಳಿಗೆ ಮೂಲ: ಕಳಪೆ ಜೀವನ ಶೈಲಿ ಮತ್ತು ಅನಾರೋಗ್ಯಕರ ಆಹಾರ ಹವ್ಯಾಸದಿಂದ ಜನರಲ್ಲಿ ಸ್ಥೂಲಕಾಯದ ಸಮಸ್ಯೆ ಹೆಚ್ಚುತ್ತಿದೆ. ಎಲ್ಲಾ ರೋಗಗಳಿಗೆ ಮೂಲ ಕಾರಣ ಈ ಸ್ಥೂಲಕಾಯ ಎಂದು ಪರಿಗಣಿಸಲಾಗಿದೆ. ಇಂತಹ ಸನ್ನಿವೇಶದಲ್ಲಿ ಅಕಾಲಿಕ ಬೊಜ್ಜಿನಿಂದ ಮಧುಮೇಹ, ಹೆಚ್ಚಿನ ರಕ್ತದ ಒತ್ತಡ, ಹೃದಯ ಸಮಸ್ಯೆ, ಕೊಲೆಸ್ಟ್ರಾಲ್ ಹೆಚ್ಚಳ, ಕೀಲು ನೋವು ಮುಂತಾದವು ಕಾಡುತ್ತದೆ.
ಸ್ಥೂಲಕಾಯ ಸೇರಿದಂತೆ ಇನ್ನಿತರ ಸಮಸ್ಯೆ ನಿಯಂತ್ರಣಕ್ಕೆ ಅಚ್ಚುಕಟ್ಟಾದ ಡಯಟ್ ಸಹಾಯವಾಗಲಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಹಿನ್ನೆಲೆ ಜನರು ಇಂತಹ ಡಯಟ್ ನಿಯಮಗಳಿಗೆ ಆಕರ್ಷಿತರಾಗಿದ್ದು, ತಮ್ಮ ಜೀವನದ ಅನುಭವಿಸುವುದನ್ನು ಮರೆತಿದ್ದಾರೆ. ಈ ಇಂಟರ್ನಾಷನಲ್ ನೋ ಡಯಟ್ ಡೇ, ತಿನ್ನುವ ಮತ್ತು ಕುಡಿಯುವ ನಿಯಮಗಳಿಂದ ಬ್ರೇಕ್ ಪಡೆದು ಜೀವನದ ಸಂತೋಷ ಆಚರಿಸಲು ಪ್ರೇರೇಪಿಸುತ್ತದೆ. ದೇಹದ ಆಕೃತಿ ಹೀಗೆ ಇರಬೇಕು ಎನ್ನುವ ಆಲೋಚನೆ ಬಿಟ್ಟು, ನಿಮ್ಮನ್ನು ನೀವು ಸ್ವೀಕರಿಸಿ ಮತ್ತು ಸಕಾರಾತ್ಮಕತೆಯನ್ನು ಅನುಭವಿಸಿ ಎಂದು ತಿಳಿಸಲಾಗಿದೆ. ಈ ದಿನದಂದು ಅನೇಕ ಸಂಘಟನೆಗಳು ಅನೇಕ ಚಟುವಟಿಕೆಗಳ ಮೂಲಕ ತಮ್ಮ ಆಪ್ತರಿಗೆ ಅವರಿಗೆ ಇಷ್ಟಬಂದ ಆಹಾರ ತಿನ್ನಲು ಅಹ್ವಾನಿಸುತ್ತದೆ.
ಯಾಕೆ ಬಂತು ಈ ದಿನಾಚರಣೆ: 1992ರಲ್ಲಿ ಮೊದಲ ಬಾರಿಗೆ ಈ ಇಂಟರ್ನ್ಯಾಷನಲ್ ನೋ ಡಯಟ್ ಡೇ ಪ್ರಚಲಿತಕ್ಕೆ ಬಂದಿತು. ಬ್ರಿಟನ್ನಲ್ಲಿ (ಯುನೈಟೆಡ್ ಕಿಂಗ್ಡಮ್) ಮೇರಿ ಇವನ್ಸ್ ಯಂಗ್ ಇದನ್ನು ಜಾರಿಗೆ ತಂದರು. ಮೇರಿ ಉದ್ದೇಶ ಜನರು ತಮ್ಮ ದೇಹದ ಆಕೃತಿ ಬಗ್ಗೆ ಅಸಹ್ಯಗೊಳ್ಳದಂತೆ ಮತ್ತು ಅವರ ದೇಹ ಹೇಗೆ ಇರುತ್ತದೆಯೋ ಹಾಗೇ ಸ್ವೀಕರಿಸುವಂತೆ ಕರೆ ನೀಡಿದರು. ಅಲ್ಲದೇ ಅತಿ ಹೆಚ್ಚಿನ ಡಯಟ್ನಿಂದ ಮಾರಣಾಂತಿಕ ಪರಿಣಾಮದ ಕುರಿತು ಅವರು ಜಾಗೃತಿ ಮೂಡಿಸಿದರು.
ಮೇರಿ ಇವನ್ಸ್ ಯಂಗ್ ಸ್ವತಃ ಅನೊರೆಕ್ಸಿಯಾದಿಂದ ಬಳಲುತ್ತಿದ್ದರು. ಇದು ಒಂದು ತಿನ್ನುವ ರೋಗವಾಗಿದೆ. ಇದರಿಂದ ತೂಕದ ಹೆಚ್ಚಳ ಅಪಾಯ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಈ ತೂಕದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿರುತ್ತಾರೆ. ಅನೊರೆಕ್ಸಿಯಾದಿಂದ ಬಳಲುವ ಮಂದಿ ಹಸಿವಿನ ನಷ್ಟ ಅನುಭವಿಸಿ, ತಮ್ಮ ತೂಕ ಮತ್ತು ದೇಹಾಕೃತಿ ನಿಯಂತ್ರಣಕ್ಕೆ ಮುಂದಾಗುತ್ತಾರೆ. ಇದೇ ಕಾರಣಕ್ಕೆ ಮೇರಿ ಡಯಟ್ ಬ್ರೇಕರ್ ಎಂಬ ಸಂಘಟನೆ ಶುರು ಮಾಡಿದರು. ಈ ಸಂಘಟನೆ ಮೂಲಕ ಮೊದಲ ಇಂಟರ್ನ್ಯಾಷನಲ್ ನೋ ಡಯಟ್ ಡೇ ಜಾರಿಗೆ ತರಲಾಯಿತು. ಈ ದಿನದಂದು ನಿಮ್ಮ ದೇಹಾಕೃತಿ ಬಗ್ಗೆ ಹೆಮ್ಮೆ ಪಡುತ್ತ ಜೀವನವನ್ನು ಸಂಪೂರ್ಣವಾಗಿ ಆನಂದಿಸಿ ಎಂದು ಕರೆ ನೀಡಿದರು.
ಇದನ್ನೂ ಓದಿ: ಸಕ್ಕರೆ ಸೇವನೆಯ ಕಡು ಬಯಕೆ ನಿವಾರಣೆಗೆ ಇಲ್ಲಿದೆ ಪರಿಹಾರ!