ETV Bharat / sukhibhava

ಹೆಚ್ಚು ವ್ಯಾಯಾಮ ಮಾಡಿದ್ರೆ ನಿಮ್ಮ ಲೈಂಗಿಕ ಜೀವನವೂ ಉತ್ತಮವಾಗಿರತ್ತೆ... - Aerobic exercise improving cardiovascular fitness

ನಿಮ್ಮ ರಕ್ತದ ಹರಿವು ಆರೋಗ್ಯಕರವಾಗಿದ್ದರೆ ನಿಮ್ಮ ಲೈಂಗಿಕ ಪ್ರಚೋದನೆಯೂ ಉತ್ತಮವಾಗಿರುತ್ತದೆ. ಮಹಿಳೆಯರಲ್ಲಿ ರಕ್ತದ ಹರಿವು ನಿರ್ಣಾಯಕವಾಗಿದೆ. ಇದು ಉಬ್ಬುವಿಕೆ, ಸಂವೇದನೆ ಮತ್ತು ನಯಗೊಳಿಸುವಿಕೆಗೆ ಸಹಾಯ ಮಾಡಿದರೆ, ಪುರುಷರಲ್ಲಿ ನಿಮಿರುವಿಕೆಗೆ ಸಹಾಯ ಮಾಡುತ್ತದೆ..

Intense Workout Can Improve Sex Life
ಲೈಂಗಿಕ ಜೀವನ
author img

By

Published : Dec 19, 2021, 4:26 PM IST

ಉತ್ತಮ ಲೈಂಗಿಕ ಜೀವನವನ್ನು ಹೊಂದುವಲ್ಲಿ ಅನೇಕರು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ, ನಿಮ್ಮ ಲೈಂಗಿಕ ಜೀವನ ಸುಧಾರಿಸುವ ಕೀಲಿಯು ತೀವ್ರವಾದ ವರ್ಕ್‌ಔಟ್​ ಮಾಡುವುದರಲ್ಲಿ ಅಡಗಿದೆ ಎಂದು ಹೊಸ ಅಧ್ಯಯನವೊಂದು ಹೇಳುತ್ತದೆ.

ಏರೋಬಿಕ್ ವ್ಯಾಯಾಮವು ವಿಶೇಷವಾಗಿ ಹೃದಯರಕ್ತನಾಳದ ಫಿಟ್‌ನೆಸ್ ಅನ್ನು ಸುಧಾರಿಸುವಲ್ಲಿ ಕೆಲಸ ಮಾಡುತ್ತದೆ. ಇದು ಜನನಾಂಗದ ಪ್ರದೇಶವನ್ನು ಒಳಗೊಂಡಂತೆ ದೇಹದಾದ್ಯಂತ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಹೃದಯರಕ್ತನಾಳದ ವ್ಯವಸ್ಥೆಯನ್ನು ಬೆಂಬಲಿಸುವ ಯಾವುದಾದರೂ ಚಟುವಟಿಕೆಯು ಪುರುಷ ಅಥವಾ ಮಹಿಳೆಯ ಲೈಂಗಿಕ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ" ಎಂದು ಲೈಂಗಿಕ ಚಿಕಿತ್ಸಕಿ ಮತ್ತು ಲೈಂಗಿಕ ಶಿಕ್ಷಣತಜ್ಞೆ ಲಾರಾ ಬರ್ಮನ್ ಹೇಳುತ್ತಾರೆ.

ನಿಮ್ಮ ರಕ್ತದ ಹರಿವು ಆರೋಗ್ಯಕರವಾಗಿದ್ದರೆ ನಿಮ್ಮ ಲೈಂಗಿಕ ಪ್ರಚೋದನೆಯೂ ಉತ್ತಮವಾಗಿರುತ್ತದೆ. ಮಹಿಳೆಯರಲ್ಲಿ ರಕ್ತದ ಹರಿವು ನಿರ್ಣಾಯಕವಾಗಿದೆ. ಇದು ಉಬ್ಬುವಿಕೆ, ಸಂವೇದನೆ ಮತ್ತು ನಯಗೊಳಿಸುವಿಕೆಗೆ ಸಹಾಯ ಮಾಡಿದರೆ, ಪುರುಷರಲ್ಲಿ ನಿಮಿರುವಿಕೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಲೈಂಗಿಕ ಸಮಸ್ಯೆ ಇದೆಯಾ? ಈ ಆಹಾರ ಪದಾರ್ಥಗಳು ಕಾಮಾಸಕ್ತಿ ಹೆಚ್ಚಿಸಲು ರಾಮಬಾಣ..

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ವಾರಕ್ಕೆ ಕನಿಷ್ಠ ಮಧ್ಯಮ-ತೀವ್ರತೆಯ 150 ನಿಮಿಷಗಳ ಕಾಲ ವ್ಯಾಯಾಮ ಅಥವಾ 75 ನಿಮಿಷಗಳ ಕಾಲ ತೀವ್ರವಾದ ಏರೋಬಿಕ್ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ. 'ಜರ್ನಲ್ ಆಫ್ ಸೆಕ್ಷುಯಲ್ ಮೆಡಿಸಿನ್‌'ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೆಚ್ಚಿನ ಮಟ್ಟದ ಏರೋಬಿಕ್ ವ್ಯಾಯಾಮವು ಸಕ್ರಿಯ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಕಾರ್ಯಕ್ಷಮತೆ, ತ್ರಾಣ ಮತ್ತು ಬಯಕೆಯನ್ನು ಇನ್ನಷ್ಟು ಸುಧಾರಿಸುತ್ತದೆ ಎಂದು ಹೇಳುತ್ತದೆ.

ಓಟ, ಈಜು ಮತ್ತು ಸೈಕ್ಲಿಂಗ್​ ಅಲ್ಲದೇ ಇತರ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ, ಸಕ್ರಿಯರಾಗಿರುವ ಹವ್ಯಾಸಿ ಕ್ರೀಡಾಪಟುಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಆಸಕ್ತಿದಾಯಕ ಸಂಗತಿಯೆಂದರೆ, ನಾವು ಡೋಸ್-ಸಂಬಂಧವನ್ನು ಕಂಡುಕೊಂಡಿದ್ದೇವೆ. ಹೀಗಿರುವಾಗ ಹೆಚ್ಚಿನ ವ್ಯಾಯಾಮವು, ವಿಶೇಷವಾಗಿ ಮಹಿಳೆಯರಲ್ಲಿ ಹೆಚ್ಚಿನ ಪ್ರಯೋಜನವನ್ನು ಉಂಟು ಮಾಡುತ್ತದೆ ಎಂದು ಜುಕರ್‌ಬರ್ಗ್ ಸ್ಯಾನ್ ಫ್ರಾನ್ಸಿಸ್ಕೋ ಜನರಲ್ ಹಾಸ್ಪಿಟಲ್ ಮತ್ತು ಟ್ರಾಮಾ ಸೆಂಟರ್‌ನ ಮೂತ್ರಶಾಸ್ತ್ರದ ಮುಖ್ಯಸ್ಥ ಹಾಗೂ ಪ್ರಮುಖ ಲೇಖಕ ಡಾ. ಬೆಂಜಮಿನ್ ಬ್ರೇಯರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಾನವನ ದೀರ್ಘಾಯುಷ್ಯಕ್ಕೆ ನಿಯಮಿತ ಸಂಭೋಗ ಸಹಕಾರಿಯಂತೆ.. ಅಧ್ಯಯನದಲ್ಲಿ ಬಹಿರಂಗ..

7 ನಿಮಿಷಕ್ಕೆ ಒಂದು ಕಿಲೋಮೀಟರ್​ನಂತೆ ವಾರಕ್ಕೆ ನಾಲ್ಕೂವರೆ ಗಂಟೆಗಳ ಕಾಲ ಓಡಿದ ಪುರುಷರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಲ್ಲಿ ಶೇ.23ರಷ್ಟು ಕಡಿತವನ್ನು ಕಂಡರು. ಆದರೆ, ಫಲಿತಾಂಶಗಳು ಮಹಿಳೆಯರಲ್ಲಿ ಇನ್ನಷ್ಟು ಚಕಿತಗೊಳಿಸಿದವು. ವಾರದಲ್ಲಿ ಕೇವಲ 4 ಗಂಟೆಗಳ ಕಾಲ ಅದೇ 7-ನಿಮಿಷದ ಮೈಲಿ ವೇಗವನ್ನು ತಲುಪುವ ಸ್ತ್ರೀ ಲೈಂಗಿಕ ಅಪಸಾಮಾನ್ಯ ಕ್ರಿಯೆಯನ್ನು ಶೇ.30ರಷ್ಟು ಕಡಿಮೆ ಮಾಡಿದೆ. ಅತ್ಯಂತ ಫಿಟ್ ಆಗಿರುವ ಮಹಿಳೆಯರು ಕಡಿಮೆ ಲೈಂಗಿಕ ಅಪಸಾಮಾನ್ಯ ಕ್ರಿಯೆಯನ್ನು ವರದಿ ಮಾಡಿದ್ದಾರೆ ಎಂದು ಬ್ರೇಯರ್ ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.