ನವದೆಹಲಿ: ಭಾರತದ ಮಕ್ಕಳಲ್ಲಿ ಸ್ಥೂಲಕಾಯ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಾಂಕ್ರಾಮಿಕೇತರ ರೋಗಗಳ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಸೋಮವಾರ ಈ ಕುರಿತು ಮಾತನಾಡಿರುವ ಆರೋಗ್ಯ ತಜ್ಞರು, ಹಿಂದೆಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಮಕ್ಕಳು ಜಂಕ್ ಮತ್ತು ಅನಾರೋಗ್ಯಕರ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನ ಆಹಾರ ಸೇವನೆ ಮಾಡುತ್ತಿದ್ದಾರೆ. ಇದೇ ಈ ಏರಿಕೆಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ಐಎಎನ್ಎಸ್ಗೆ ಮಾತನಾಡಿರುವ ಅಪೋಲೋ ಆಸ್ಪತ್ರೆಯ ಡಾ. ಸತ್ಯ ಶ್ರೀರಾಂ, ಭಾರತದ ಮಕ್ಕಳಲ್ಲಿ ಗಮನಾರ್ಹ ಮಟ್ಟದಲ್ಲಿ ಸ್ಥೂಲಕಾಯ, ಪೂರ್ವ ಮಧುಮೇಹ, ಕೊಬ್ಬಿನ ಯಕೃತ್ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಪ್ರಕರಣಗಳು ಏರಿಕೆ ಕಾಣುತ್ತಿದೆ. ಕಳೆದ ಐದು ವರ್ಷದಲ್ಲಿ ಸ್ಥೂಲಕಾಯ ಪ್ರಕರಣಗಳು ಮೂರು ಪಟ್ಟು ಮತ್ತು ಅಧಿಕ ರಕ್ತದೊತ್ತಡಗಳು ನಾಲ್ಕು ಪಟ್ಟು ಹೆಚ್ಚಳ ಕಂಡಿದೆ.
ಈ ರೋಗಗಳು ಮುಂದಿನ ಹತ್ತು ವರ್ಷಗಳ ಕಾಲದ ಹಿಂದೆಯೂ ಇತ್ತು. ಇದೀಗ ಇವು ಬಾಲ್ಯದೊಂದಿಗೆ ಸಂಬಂಧ ಹೊಂದಿದೆ. ಈ ಹಿಂದೆ ಬಾಲ್ಯದ ಮಕ್ಕಳಲ್ಲಿ ಈ ರೋಗದ ಸಮಸ್ಯೆಗಳನ್ನು ಪರಿಗಣಿಸಿರಲಿಲ್ಲ. ಇದೀಗ 5 ರಿಂದ 17 ವರ್ಷದ ಮಕ್ಕಳಲ್ಲಿ ಎನ್ಸಿಡಿ ಪ್ರಕಟಣೆಗಳು ಕಳೆದೊಂದು ದಶಕದಿಂದ ದುಪ್ಪಟ್ಟಾಗಿದೆ ಎಂಬುದನ್ನು ಗಮನಿಸಿದ್ದೇವೆ ಎಂದರು.
5 -17 ವರ್ಷದ ಮಕ್ಕಳ ಗುಂಪಿನ ಮಕ್ಕಳು ತಾಂತ್ರಿಕವಾಗಿ ಮತ್ತು ಐತಿಹಾಸಿಕವಾಗಿ ತಮ್ಮ ಜೀವನಶೈಲಿ ಮೇಲೆ ಯಾವುದೇ ರೋಗದ ಪರಿಣಾಮವನ್ನು ಹೊಂದಿರಬಾರದು. ಆದಾಗ್ಯೂ ಈ ಸಂಬಂದ ಕ್ಯಾಂಪಸ್ ಮತ್ತು ವಾಕ್ ಇನ್ನಲ್ಲಿ ನಡೆದ 10 ಸಾವಿರ ಮಂದಿಯ ಸ್ಕ್ರೀನಿಂಗ್ ವಿಶ್ಲೇಷಣೆಯಲ್ಲಿ ಶೇ 17ರಷ್ಟು ಮಂದಿ ಪೂರ್ವ ಮಧುಮೇಹ ಹೊಂದಿದ್ದು, ಬಾಲ್ಯದಲ್ಲಿಯೇ ಮಧುಮೇಹದ ಸಾಮರ್ಥ್ಯ ತೋರಿದ್ದಾರೆ.
ಕಳೆದ ಐದು ವರ್ಷದಲ್ಲಿ ಮಧುಮೇಹ ಹೊಂದಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಸ್ಯಾಂಪಲ್ ಗಾತ್ರದಲ್ಲಿ 2018ರಲ್ಲಿ ಶೇ 1.37 ಮಂದಿ ಈ ಲಕ್ಷಣ ಹೊಂದಿದ್ದರೆ 2023ರಲ್ಲಿ 3.68ರಷ್ಟು ಹೊಂದಿದ್ದಾರೆ. ಇದೇ ರೀತಿ 7 ವರ್ಷದ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಿದೆ ಎಂದು ದತ್ತಾಂಶ ತೋರಿಸಿದ್ದು, ಇದು ಶೇ 6ರಷ್ಟು ಕಂಡು ಬಂದಿದೆ. ವಿದ್ಯಾರ್ಥಿಗಳ ಜೀವನೈಲಿ ಮತ್ತು ಅನುವಂಶಿಕತೆಗಳು ಕೂಡ ಅಪಾಯದ ಅಂಶದಲ್ಲಿ ಪ್ರಮುಖವಾಗಿದೆ.
ಆದರೆ, ಇತ್ತೀಚಿನ ದಿನದಲ್ಲಿ ಹೆಚ್ಚುತ್ತಿರುವ ಬಾಲ್ಯದ ಸ್ಥೂಲಕಾಯಕ್ಕೆ ಪ್ರಮುಖ ಕಾರಣ ಜಂಕ್ ಫುಡ್ ಅಥವಾ ಅಲ್ಟ್ರಾ ಪ್ರೊಸೆಸ್ಡ್ ಫುಡ್ ಸೇವನೆ ಹೆಚ್ಚಿರುವುದು ಆಗಿದೆ ಎಂದು ರಾಷ್ಟ್ರಮಟ್ಟದ ಥಿಂಕ್ ಟಾಕ್ ನ್ಯೂಟ್ರಿಷಿಯನ್ ಡಾ ಅರುಣ್ ಗುಪ್ತಾ ತಿಳಿಸಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್) ಮಕ್ಕಳು, ಹದಿ ಹರೆಯದ ಹುಡುಗರು ಮತ್ತು ಹುಡುಗಿಯರಲ್ಲಿ ಸ್ಥೂಲಕಾಯ ಹೆಚ್ಚುತ್ತಿರುವುದು ತೋರಿಸಿದೆ. ಇದರ ಜೊತೆಗೆ ಭಾರತದಲ್ಲಿ ಅಲ್ಟ್ರಾ ಪ್ರೊಸೆಸ್ಡ್ ಫುಡ್ ಉದ್ಯಮದ ಬೆಳವಣಿಗೆ ಕಾಣಬಹುದಾಗಿದೆ ಎಂದಿದ್ದಾರೆ ಗುಪ್ತಾ.
ಸಾಂಕ್ರಾಮೇತರ ರೋಗದ ಹೊರತಾಗಿ ಅವಧಿಪೂರ್ವ ಮಾನಸಿಕ ಆರೋಗ್ಯ ಸಮಸ್ಯೆಗಳು, ವಿಟಮಿನ್ ಮತ್ತು ಪೋಷಕಾಂಶದ ಕೊರತೆ, ಕಾರ್ಯಾಚರಣೆ ಬದಲಾವಣೆ, ದೃಷ್ಟಿ ಮತ್ತು ಶ್ರವಣ ಸಮಸ್ಯೆಗಳು ಕೂಡ ಮಗುವಿನ ಭವಿಷ್ಯದ ಆರೋಗ್ಯಕ್ಕೆ ಅಗತ್ಯವಾಗಿದೆ. ಈ ಪರಿಸ್ಥಿತಿಗಳು ಅದಕ್ಕೆ ಹೊಂದಾಣಿಕೆಯಾಗದೇ ಹೋದರೆ, ಅದು ಜೀವನ ಗುಣಮಟ್ಟಕ್ಕೆ ಹಾನಿ ಮಾಡುತ್ತದೆ. ಈ ನಿಟ್ಟಿನಲ್ಲಿ ಅಲ್ಟ್ರಾ ಪ್ರೊಸೆಸ್ಡ್ ಫುಡ್ ಮೇಲೆ ಕಟ್ಟುನಿಟ್ಟಿನ ಮತ್ತು ಸ್ಪಷ್ಟ ನಿಯಂತ್ರಣ ಅವಶ್ಯಕ ಎಂದಿದ್ದಾರೆ.
ಅಲ್ಲದೇ ಪೋಷಕರು ಕೂಡ ಮಕ್ಕಳು ಅನಾರೋಗ್ಯಕ್ಕೆ ಒಳಗಾಗದಂತೆ ದೈನಂದಿನ ಆರೋಗ್ಯ ಚೆಕ್ ಅಪ್ಗಳನ್ನು ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ದಂಪತಿಗಳಲ್ಲಿ ಒಬ್ಬರಿಗೆ ಬಿಪಿ ಇದ್ದರೂ ಮತ್ತೊಬ್ಬರು ವಹಿಸಬೇಕು ಎಚ್ಚರಿಕೆ; ಕಾರಣ ಇದು