ನವದೆಹಲಿ: ಕಳೆದೊಂದು ತಿಂಗಳಿನಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಕಂಡು ಬಂದಿತ್ತು. ಡಿಸೆಂಬರ್ನಲ್ಲಿ ಸಾಲು ಸಾಲು ಹಬ್ಬಗಳು ಆರಂಭವಾಗಿದ್ದವು ಮತ್ತು ಹವಾಮಾನ ಬದಲಾವಣೆ, ಹೊಸ ಸೋಂಕಿನ ತಳಿಯುವ ಸೋಂಕಿನ ಏರಿಕೆಗೆ ಕಾರಣವಾಗಿತ್ತು. ಇದೀಗ ಸೋಂಕಿನ ಅಲೆ ದೇಶದಲ್ಲಿ ತಗ್ಗಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೇವಲ 441 ಪ್ರಕರಣ ದಾಖಲಾಗಿದ್ದು, ಯಾವುದೇ ಸಾವಿನ ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ತಿಳಿಸಿದೆ.
ಸದ್ಯ ದೇಶದಲ್ಲಿ ಒಟ್ಟಾರೆ ಸಕ್ರಿಯ ಸೋಂಕಿನ ಪ್ರಕರಣಗಳು 3,238 ಪ್ರಕರಣಗಳು ದಾಖಲಾಗಿದೆ. ಈ ವಾರದ ಆರಂಭದಲ್ಲಿ ಅಂದರೆ ಕಳೆದ ಸೋಮವಾರ ಈ ಸೋಂಕಿನ ಸಂಖ್ಯೆ 3,919 ಇತ್ತು. ಇನ್ನು ದೇಶದಲ್ಲಿ ಸಾವಿನ ಸಂಖ್ಯೆ 5,33,412 ದಾಖಲಾಗಿದೆ. ಕಳೆದ ನಾಲ್ಕು ವರ್ಷದಿಂದ ಅಂದರೆ 2020ರ ಜನವರಿಯಿಂದ ಕೋವಿಡ್ ಉಲ್ಬಣವಾದಾಗಿನಿಂದ ಇಲ್ಲಿಯವರೆಗೆ 4,50,20,942 ಆಗಿದ್ದು, ಸಾವಿನ ಸಂಖ್ಯೆ 5,33,412 ಆಗಿದೆ. ದೇಶದಲ್ಲಿ ಕೋವಿಡ್ ಚೇತರಿಕೆ ದರ 98.81 ಆಗಿದ್ದು, ಸಾವಿನ ದರ 1.18 ಆಗಿದೆ
ಜನವರಿ 11ರವರೆಗ ಕೋವಿಡ್ ಉಪ ತಳಿಯ ಜೆಎನ್ 1 ಸೋಂಕು ಭಾರತದ 12 ರಾಜ್ಯದಲ್ಲಿ ಕಂಡು ಬಂದಿದ್ದು, ಒಟ್ಟು 1,104 ಪ್ರಕರಣಗಳು ದಾಖಲಾಗಿದೆ, ಅತಿ ಹೆಚ್ಚು ಜೆಎನ್.1 ಸೋಂಕು ಕರ್ನಾಟಕದಲ್ಲಿ (214) ಆಗಿದೆ. ಮಹಾರಾಷ್ಟ್ರ (170), ಕೇರಳ (154), ಆಂಧ್ರಪ್ರದೇಶ (189), ಗುಜರಾತ್ (76) ಮತ್ತು ಗೋವಾ (66) ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಇದರ ಹೊರತಾಗಿ ಕೋವಿಡ್ ಉಪತಳಿ ಗೋವಾ, ಆಂಧ್ರಪ್ರದೇಶದ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ದೆಹಲಿ, ಒಡಿಶಾ ಮತ್ತು ಹರಿಯಾಣದಲ್ಲೂ ಜೆಎನ್.1 ಸೋಂಕು ದಾಖಲಾಗಿದೆ. ದೇಶದಲ್ಲಿ ಕೋವಿಡ್ ಲಸಿಕೆಯನ್ನು 220.67 ಕೋಟಿ ಲಸಿಕೆ ನೀಡಲಾಗಿದೆ. ಹರಿಯಾಣ, ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಉತ್ತರಖಂಡದಲ್ಲಿ ಕ್ರಮವಾಗಿ ಐದು, ಮೂರು, ಎರಡು ಮತ್ತು ಒಂದು ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲೂ ಕೂಡ ಕೋವಿಡ್ 19 ಸೋಂಕಿನ ಪ್ರಕರಣಗಳಲ್ಲಿ ಇಳಿಕೆ ಕಂಡಿದೆ. ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 163 ಜೆಎನ್.1 ಪ್ರಕರಣಗಳಿ ದಾಖಲಾಗಿದೆ. ಇದಕ್ಕಿಂತ ಹಿಂದಿನ ದಿನ 240 ಕೋವಿಡ್ ಸೋಂಕು ದಾಖಲಾಗಿದೆ. ದೇಶದಲ್ಲಿ ಕರ್ನಾಟಕದಲ್ಲಿ ಸೋಂಕು ಹೆಚ್ಚಿರುವ ಹಿನ್ನೆಲೆ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿ ಅನುಸಾರ ನಡೆಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಜೆಎನ್ 1 ಕೊರೊನಾ ರೂಪಾಂತರದ ದೊಡ್ಡ ಅಲೆ ಬರಬಹುದು; ತಜ್ಞರ ಹೇಳಿಕೆ