ETV Bharat / sukhibhava

ಪ್ಲೇಟ್ಲೆಟ್​​ ಸಂಖ್ಯೆಯಲ್ಲಿ ಹೆಚ್ಚಳ ಜೀವಕ್ಕೆ ಆಸರೆ: ಕಡಿಮೆಯಾದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ..! - ಥ್ರಂಬೋಸೈಟೋಸಿಸ್

ರಕ್ತದಲ್ಲಿ ಪ್ಲೇಟ್ಲೆಟ್​ಗಳು ಸಾಮಾನ್ಯ ಪ್ರಮಾಣದಲ್ಲಿರುವುದು ತುಂಬಾ ಅವಶ್ಯಕ. ರಕ್ತದಲ್ಲಿನ ಪ್ಲೇಟ್ಲೆಟ್‌ಗಳ ಪ್ರಮಾಣ ತುಂಬಾ ಹೆಚ್ಚಾದರೆ ಅಥವಾ ತುಂಬಾ ಕಡಿಮೆಯಾದರೆ, ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ಈ ಎರಡು ಸಮಸ್ಯೆಗಳಿಂದ ಕೆಲವೊಮ್ಮೆ ಜನರು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಪ್ಲೇಟ್ಲೆಟ್ ಸಂಖ್ಯೆಯಲ್ಲಿ ವ್ಯತ್ಯಾಸ ಉಂಟಾವುದನ್ನು ರಕ್ತದ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ.

Platelets
ರಕ್ತದಲ್ಲಿ ಪ್ಲೇಟ್ಲೆಟ್​ಗಳು
author img

By

Published : Feb 6, 2023, 7:19 PM IST

ಹೈದರಾಬಾದ್: ರಕ್ತದಲ್ಲಿನ ಪ್ಲೇಟ್ಲೆಟ್‌ಗಳ ಸಂಖ್ಯೆಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಅಥವಾ ಹೆಚ್ಚಾದರೆ, ಆರೋಗ್ಯದ ಗಂಭೀರ ಪರಿಣಾಮ ಉಂಟಾಗಲಿದೆ. ರಕ್ತದಲ್ಲಿನ ಪ್ಲೇಟ್ಲೆಟ್ ಸಂಖೆಯಲ್ಲಿ ವ್ಯತ್ಯಾಸ ಉಂಟಾದರೂ ಕೂಡಾ ರೋಗಿಯ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಕಡಿಮೆ ಅಥವಾ ಹೆಚ್ಚಾದರೆ, ಥ್ರಂಬೋಸೈಟೋಸಿಸ್, ಥ್ರಂಬೋಸೈಟೋಪೆನಿಯಾ ಹಾಗೂ ಇಮ್ಯೂನ್ ಥ್ರಂಬೋಸೈಟೋಪೆನಿಯಾದಂತಹ ರಕ್ತದ ಕಾಯಿಲೆಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ.

ಡಾ.ಆರ್.ಎಸ್.ಪಾಟೀಲ್ ಮಾಹಿತಿ: ಥ್ರಂಬೋಸೈಟೋಸಿಸ್ ಮತ್ತು ಥ್ರಂಬೋಸೈಟೋಪೆನಿಯಾದಂತಹ ರಕ್ತದ ಅಸ್ವಸ್ಥತೆಗಳ ಕಾರಣಗಳು ಮತ್ತು ಪರಿಣಾಮಗಳ ಬಗ್ಗೆ ಬೆಂಗಳೂರಿನ ಹೆಮಟಾಲಜಿಸ್ಟ್ ಡಾ.ಆರ್.ಎಸ್.ಪಾಟೀಲ್ ಮಾಹಿತಿ ನೀಡಿದ ಅವರು, ರಕ್ತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಪ್ಲೇಟ್‌ಲೆಟ್‌ಗಳಿದ್ದರೆ, ಅದನ್ನು 'ಥ್ರಂಬೋಸೈಟೋಸಿಸ್ ರಕ್ತದ ಅಸ್ವಸ್ಥತೆ' ಎಂದು ಕರೆಯಲಾಗುತ್ತದೆ. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಸಾಮಾನ್ಯಕ್ಕಿಂತ ಕಡಿಮೆಯಿದ್ದರೆ ಅದನ್ನು 'ಥ್ರಂಬೋಸೈಟೋಪೆನಿಯಾ ರಕ್ತದ ಅಸ್ವಸ್ಥತೆ' ಎಂದು ಹೇಳಲಾಗುತ್ತದೆ ಎಂದು ಡಾ.ಪಾಟೀಲ್ ವಿವರಿಸುತ್ತಾರೆ.

ಈ ಮೇಲಿನ ರಕ್ತದ ಅಸ್ವಸ್ಥತೆಗಳು ಅಥವಾ ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಹೆಚ್ಚಳ ಅಥವಾ ಇಳಿಕೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಮೊದಲು, ನಮ್ಮ ರಕ್ತದಲ್ಲಿನ ಪ್ಲೇಟ್ಲೆಟ್‌ಗಳ ಕಾರ್ಯವನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಿದೆ ಎಂದು ಡಾ ಪಾಟೀಲ್ ತಿಳಿಸುತ್ತಾರೆ. ಥ್ರಂಬೋಸೈಟ್ಸ್ ಎಂದೂ ಕರೆಯಲ್ಪಡುವ ಪ್ಲೇಟ್ಲೆಟ್​ಗಳು ನಮ್ಮ ಮೂಳೆ ಅಸ್ಥಿಮಜ್ಜೆಯಲ್ಲಿ ಹೆಪ್ಪುಗಟ್ಟುವಿಕೆಗೆ ಪೂರಕವಾದ ಸಣ್ಣ ರಕ್ತ ಕಣಗಳಾಗಿವೆ.

ಗಾಯಗಳು ಆದ ಸಂದರ್ಭದಲ್ಲಿ ರಕ್ತ ಹರಿವುದನ್ನು ನಿಲ್ಲಿಸುವುದು ಮತ್ತು ರಕ್ತನಾಳಗಳನ್ನು ಹಾನಿಯಿಂದ ರಕ್ಷಿಸುವುದು ಅದರ ಪ್ರಮುಖ ಕಾರ್ಯವಾಗಿದೆ. ಉದಾಹರಣೆಗೆ, ರಕ್ತವು ಹರಿಯಲು ಪ್ರಾರಂಭಿಸುವ ಗಾಯವನ್ನು ಒಣಗಲು ಸಹಕಾರಿಯಾಗುತ್ತವೆ. ಥ್ರಂಬೋಸೈಟ್​ಗಳು ನಮ್ಮ ಚರ್ಮವು ಅಥವಾ ಗಾಯಗಳ ಮೇಲೆ ಜಿಗುಟಾದ ಹೆಪ್ಪುಗಟ್ಟುವಿಕೆಯನ್ನು ರೂಪಿಸುವ ಮೂಲಕ ರಕ್ತವು ಹರಿದು ಹೋಗುವುದನ್ನು ನಿಲ್ಲಿಸಲು ಸಹಾಯ ಮಾಡುತ್ತವೆ.

ಥ್ರಂಬೋಪೊಯೆಟಿನ್ ಹಾರ್ಮೋನ್ ಪಾತ್ರ ಪ್ರಮುಖ: ''ಪ್ಲೇಟ್‌ಲೆಟ್‌ಗಳು ತಮ್ಮದೇ ಆದ ಜೀವಿತಾವಧಿಯನ್ನು ಹೊಂದಿವೆ. ಈ ಜೀವಕೋಶಗಳು ರೂಪುಗೊಳ್ಳುತ್ತಲೇ ಇರುತ್ತವೆ ಮತ್ತು ನಾಶವಾಗಿ ಹೋಗುತ್ತವೆ. ಸಾಮಾನ್ಯವಾಗಿ ಅವುಗಳ ವಯಸ್ಸು ಐದರಿಂದ ಒಂಬತ್ತು ದಿನಗಳು ಇರುತ್ತದೆ. ನಂತರ ಅವು ತಮ್ಮ ಶಕ್ತಿಯನ್ನು ಕಳೆದುಕೊಳ್ಳತ್ತವೆ. ಥ್ರಂಬೋಸೈಟ್​ಗಳ ರಚನೆ ಮತ್ತು ವಿಭಜನೆಯ ಪ್ರಕ್ರಿಯೆಯು ನಮ್ಮ ರಕ್ತದಲ್ಲಿ ನಿರಂತರವಾಗಿ ನಡೆಯುತ್ತದೆ.

ರಕ್ತದಲ್ಲಿನ ಥ್ರಂಬೋಸೈಟ್ ಕೋಶಗಳ ವಿಭಜನೆಯಲ್ಲಿ ಥ್ರಂಬೋಪೊಯೆಟಿನ್ ಎಂಬ ಹಾರ್ಮೋನ್ ಪಾತ್ರವು ಬಹಳ ಮುಖ್ಯವಾಗಿದೆ. ಈ ಹಾರ್ಮೋನ್ ರಕ್ತದಲ್ಲಿನ ಪ್ಲೇಟ್ಲೆಟ್​ಗಳ ಸಂಖ್ಯೆಯನ್ನು ಸಾಮಾನ್ಯವಾಗಿಡಲು ಸಹ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ರಕ್ತದಲ್ಲಿ ಪ್ರತಿ ಮೈಕ್ರೋಲೀಟರ್‌ಗೆ 1,50,000ರಿಂದ 4,50,000 ಪ್ಲೇಟ್ಲೆಟ್‌ಗಳಿರುತ್ತವೆ. ಆದರೆ, ಪ್ಲೇಟ್ಲೆಟ್‌ಗಳ ಸಂಖ್ಯೆ ಇದಕ್ಕಿಂತ ಕಡಿಮೆ ಅಥವಾ ಹೆಚ್ಚಾದರೆ ಅದು ರಕ್ತದ ಕಾಯಿಲೆ ಆಗುತ್ತದೆ'' ಎಂದು ಡಾ.ಪಾಟೀಲ್ ವಿವರಿಸುತ್ತಾರೆ.

ಥ್ರಂಬೋಸೈಟೋಸಿಸ್: ಥ್ರಂಬೋಸೈಟೋಸಿಸ್​ನಲ್ಲಿ ಅಂದ್ರೆ ರಕ್ತದಲ್ಲಿನ ಪ್ಲೇಟ್ಲೆಟ್​ಗಳ ಸಂಖ್ಯೆಯು ಸಾಮಾನ್ಯಕ್ಕಿಂತ ಹೆಚ್ಚಾದಾಗ, ರಕ್ತವು ದಪ್ಪವಾಗಲು ಪ್ರಾರಂಭವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಹೆಪ್ಪುಗಟ್ಟಲು ಪ್ರಾರಂಭಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಪಾರ್ಶ್ವವಾಯು, ಹೃದಯಾಘಾತ ಮತ್ತು ಮೂತ್ರಪಿಂಡದ ಹಾನಿಯಂತಹ ಅನೇಕ ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಥ್ರಂಬೋಸೈಟೋಸಿಸ್​​ ಅನ್ನು ಸಾಮಾನ್ಯವಾಗಿ ಎರಡು ವಿಧಗಳಲ್ಲಿ ಪರಿಗಣಿಸಲಾಗುತ್ತದೆ. ಅಗತ್ಯ ಥ್ರಂಬೋಸೈಟೋಸಿಸ್ ಮತ್ತು ಪ್ರತಿಕ್ರಿಯಾತ್ಮಕ ಥ್ರಂಬೋಸೈಟೋಸಿಸ್.

ಸಾಮಾನ್ಯವಾಗಿ ದೇಹದಲ್ಲಿನ ರಕ್ತಹೀನತೆ, ಕೆಲವು ರೀತಿಯ ಸೋಂಕುಗಳು, ದೇಹದಲ್ಲಿ ಉರಿಯೂತ, ಅನಾರೋಗ್ಯಕರ ಮೂತ್ರಪಿಂಡಗಳು ಮತ್ತು ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಕೆಲವು ಔಷಧಿಗಳ ಅಡ್ಡಪರಿಣಾಮಗಳು ಎದುರಾಗುತ್ತವೆ. ರೋಗಗಳು ಮಾತ್ರವಲ್ಲ, ವೃದ್ಧಾಪ್ಯವೂ ಥ್ರಂಬೋಸೈಟೋಸಿಸ್​ಗೆ ಕಾರಣವಾಗಬಹುದು. ಸಾಮಾನ್ಯವಾಗಿ ಈ ಸಮಸ್ಯೆಯು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ಥ್ರಂಬೋಸೈಟೋಸಿಸ್​ನ ಸಾಮಾನ್ಯ ಮತ್ತು ತೀವ್ರವಾದ ವಿಧಗಳಲ್ಲಿ ಕಂಡುಬರುವ ಕೆಲವು ರೋಗಲಕ್ಷಣಗಳು ಕಂಡುಬರುತ್ತವೆ.

  • ತಲೆ ನೋವು ಕಾಣಿಸುವುದು.
  • ಸಣ್ಣಪುಟ್ಟ ಗಾಯಗಳಲ್ಲಿಯೂ ಕೀವು ಕಾಣಿಸಿವುದು.
  • ನಿತ್ರಾಣವಾಗುವುದು ಅಥವಾ ತಲೆ ಸುತ್ತು ಬರುವುದು.
  • ಮೂಗು, ಬಾಯಿ ಮತ್ತು ಒಸಡುಗಳಿಂದ ರಕ್ತಸ್ರಾವ.
  • ನಿಯಮಿತ ರಕ್ತದೊತ್ತಡ.
  • ಚರ್ಮದಲ್ಲಿ ತುರಿಕೆ ಕಾಣಿಸುತ್ತದೆ.
  • ಕೈಗಳು ತುಂಬಾ ತಂಪಾದಂತೆ ಆಗುವುದು.
  • ಹೊಟ್ಟೆ ಅಥವಾ ಕರುಳಿನಲ್ಲಿ ರಕ್ತಸ್ರಾವ.
  • ಕೈ ಮತ್ತು ಕಾಲುಗಳು ಕೆಂಪು ಆಗುವುದು, ನೋವು, ಊತ ಕಾಣಿಸುತ್ತದೆ.
  • ಕೈಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ.
  • ಮಾತನಾಡುವಲ್ಲಿ ಗೊಂದಲ ಅಥವಾ ಸಮಸ್ಯೆಗಳು.
  • ಎದೆ ನೋವು.
  • ಉಸಿರಾಟದ ತೊಂದರೆ, ಇತರೆ ಸಮಸ್ಯೆಗಳು ಕಾಣಿಸುತ್ತವೆ.

ಥ್ರಂಬೋಸೈಟೋಪೆನಿಯಾ: ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾಗುವ ಸ್ಥಿತಿಯನ್ನು ಥ್ರಂಬೋಸೈಟೋಪೆನಿಯಾ ಎಂದು ಕರೆಯಲಾಗುತ್ತದೆ. ವೈರಸ್ ಹರಡುವ ಸೋಂಕು, ರಕ್ತಹೀನತೆ, ಕೆಲವು ರೀತಿಯ ಕ್ಯಾನ್ಸರ್, ಕೀಮೋಥೆರಪಿ ಮತ್ತು ಇತರ ಕೆಲವು ರೀತಿಯ ಚಿಕಿತ್ಸೆಗಳು, ಅತಿಯಾದ ಮದ್ಯಪಾನದ ಅಭ್ಯಾಸ, ನಿರ್ಜಲೀಕರಣ, ಫೋಲಿಕ್ ಆಮ್ಲದ ಕೊರತೆ ಮತ್ತು ವಿಟಮಿನ್ ಬಿ12 ಮುಂತಾದ ಹಲವು ಕಾರಣಗಳಿಂದ ಈ ರಕ್ತ ಅಸ್ವಸ್ಥತೆಯು ಸಂಭವಿಸಬಹುದು.

ದೇಹದಲ್ಲಿ ಮತ್ತು ಕೆಲವು ರೀತಿಯ ರೋಗಲಕ್ಷಣಗಳು ಕಂಡಬರುತ್ತವೆ. ಆನುವಂಶಿಕ ಕಾರಣಗಳಿಂದಲೂ ಈ ಸಮಸ್ಯೆ ಸಂಭವಿಸಬಹುದು. ಇದು ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಲ್ಲಿ ಕಂಡುಬರುತ್ತದೆ. ಆದರೆ, ಹೆಚ್ಚಿನ ಮಹಿಳೆಯರಲ್ಲಿ ಹೆರಿಗೆಯ ನಂತರ, ಇದು ಸ್ವಯಂಚಾಲಿತವಾಗಿ ಗುಣವಾಗುತ್ತದೆ. ಥ್ರಂಬೋಸೈಟೋಪೆನಿಯಾದ ಸಾಮಾನ್ಯ ಮತ್ತು ತೀವ್ರ ಪ್ರಕಾರಗಳಲ್ಲಿ ಕಂಡುಬರುವ ಕೆಲವು ರೋಗಲಕ್ಷಣಗಳು ಕಂಡಬರುತ್ತವೆ.

  • ಗಾಯವಾದಾಗ ನಿಲ್ಲದ ರಕ್ತದ ಹರಿಯುವಿಕೆ.
  • ಮೂಗು ಮತ್ತು ಒಸಡುಗಳಲ್ಲಿ ರಕ್ತಸ್ರಾವ.
  • ಮಲ ಅಥವಾ ಮೂತ್ರದಲ್ಲಿ ರಕ್ತ.
  • ಗುದನಾಳ ಮತ್ತು ಕೆಲವು ಆಂತರಿಕ ಅಂಗಗಳಲ್ಲಿ ರಕ್ತಸ್ರಾವ.
  • ಹೆಚ್ಚು ಆಯಾಸ ವಾಗುವುದು, ಇತರೆ ಲಕ್ಷಣಗಳ ಕಾಣಿಸಿಕೊಳ್ಳುತ್ತವೆ.

ಇಮ್ಯೂನ್ ಥ್ರಂಬೋಸೈಟೋಪೆನಿಯಾ: ಥ್ರಂಬೋಸೈಟೋಪೆನಿಯಾದಂತೆಯೇ 'ಇಮ್ಯೂನ್ ಥ್ರಂಬೋಸೈಟೋಪೆನಿಯಾ' ಎಂಬ ಮತ್ತೊಂದು ರಕ್ತದ ಕಾಯಿಲೆ ಇದೆ ಎಂದು ಡಾ.ಪಾಟೀಲ್ ತಿಳಿಸಿದರು. ಇಮ್ಯೂನ್ ಥ್ರಂಬೋಸೈಟೋಪೆನಿಯಾವು ಸ್ವಯಂ ನಿರೋಧಕ ಕಾಯಿಲೆಯಾಗಿರುವುದರಿಂದ ಹೆಚ್ಚು ತೀವ್ರವಾಗಿರುತ್ತದೆ. ಇಮ್ಯೂನ್ ಥ್ರಂಬೋಸೈಟೋಪೆನಿಯಾ (ಐಟಿಪಿ) ಬಹಳ ಸಂಕೀರ್ಣವಾದ ಆದರೆ, ಅಪರೂಪದ ರಕ್ತಸ್ರಾವದ ಅಸ್ವಸ್ಥತೆಯಾಗಿದೆ ಎಂದು ಅವರು ಹೇಳಿದರು. ಇದು ಸ್ವಯಂ ನಿರೋಧಕ ಕಾಯಿಲೆಗಳ ವರ್ಗಕ್ಕೆ ಬರುತ್ತದೆ. ಏಕೆಂದರೆ, ಈ ಸ್ಥಿತಿಯಲ್ಲಿ ದೇಹದ ಪ್ರತಿಕಾಯಗಳು ಸ್ವತಃ ರಕ್ತದಲ್ಲಿರುವ ಪ್ಲೇಟ್‌ಲೆಟ್‌ಗಳನ್ನು ನಾಶಮಾಡಲು ಪ್ರಾರಂಭಿಸುತ್ತವೆ.

ಈ ಅಸ್ವಸ್ಥತೆಯನ್ನು 'ಇಮ್ಯೂನ್ ಥ್ರಂಬೋಸೈಟೋಪೆನಿಕ್ ಪರ್ಪುರಾ' ಅಥವಾ 'ಇಡಿಯೋಪಥಿಕ್ ಥ್ರಂಬೋಸೈಟೋಪೆನಿಕ್ ಪರ್ಪುರಾ' ಎಂದೂ ಕರೆಯಲಾಗುತ್ತದೆ. ಈ ಸ್ಥಿತಿಯನ್ನು ಎರಡು ವಿಧಗಳಾಗಿ ಪರಿಗಣಿಸಲಾಗುತ್ತದೆ, ಮೊದಲ ತೀವ್ರ ಐಟಿಪಿ ಮತ್ತು ಎರಡನೇ ದೀರ್ಘಕಾಲದ ಅಂದರೆ, ದೀರ್ಘಾವಧಿಯ ಐಟಿಪಿ. ತೀವ್ರ ಐಟಿಪಿ ಸ್ಥಿತಿಯು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಆದರೆ. ಇದು ಅವರಲ್ಲಿ ಅಲ್ಪಾವಧಿಯ ಸಮಸ್ಯೆಯಾಗಿದೆ. ಇದು ಹೆಚ್ಚೆಂದರೆ, ಸುಮಾರು ಆರು ತಿಂಗಳವರೆಗೆ ಅಥವಾ ಕೆಲವೊಮ್ಮೆ ಸೌಮ್ಯವಾದ ಚಿಕಿತ್ಸೆಯ ಸಹಾಯದಿಂದ ಮತ್ತು ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಯಂಚಾಲಿತವಾಗಿ ಗುಣವಾಗುತ್ತದೆ ಎಂದು ಡಾ.ಪಾಟೀಲ್ ಮಾಹಿತಿ ನೀಡಿದರು.

ಇದನ್ನೂ ಓದಿ: ನಿಮ್ಮ ಡಯಟ್‌ನಲ್ಲಿ ಈ ಆಹಾರ ಸೇರಿಸಿ, ಕ್ಯಾನ್ಸರ್‌ ಅಪಾಯ ಕಡಿಮೆ ಮಾಡಿಕೊಳ್ಳಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.