ನವದೆಹಲಿ: ಶೇ 75ರಷ್ಟು ಹೆಚ್ಚು ಭಾರತೀಯರು ಅತಿ ಹೆಚ್ಚು ರಕ್ತದೊತ್ತಡ ಹೊಂದಿದ್ದು, ಈ ಸಂಖ್ಯೆ ನಿಯಂತ್ರಣಕ್ಕೂ ಮೀರಿದೆ ಎಂದು ಲ್ಯಾನ್ಸೆಟ್ ರಿಜಿನಲ್ ಹೆಲ್ತ್ ಜರ್ನಲ್ ಪ್ರಕಟಿಸಿದೆ. ಬೊಸ್ಟನ್ ಸ್ಕೂಲ್ ಆಫ್ ಹೆಲ್ತ್ ಮತ್ತು ದೆಹಲಿಯ ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರದ ಈ ಕುರಿತು ಜಂಟಿ ಅಧ್ಯಯನ ನಡೆಸಿದೆ.
2001-2020 ರಲ್ಲಿ ನಡೆದ 51 ಅಧ್ಯಯನ ವಿಶ್ಲೇಷಿಸಲಾಗಿದೆ. ಕೇಂದ್ರ ಆಡಳಿತ ಮತ್ತು 15 ರಾಜ್ಯಗಳಲ್ಲಿ 13. 90 ಲಕ್ಷ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ರಕ್ತದ ಒತ್ತಡ ನಿಯಂತ್ರದ ದರ ಆರಂಭದಲ್ಲಿ ಶೇ 17.5ರಷ್ಟು, 22.5ರಷ್ಟು ಸುಧಾರಿತವಾಗಿದೆ. ರಕ್ತದೊತ್ತಡ ಸಂಕೋಚನ 140 ಆಗಿದ್ದರೆ, ಡಯಾಸ್ಟೊಲಿಕ್ ರೀಡಿಂಗ್ 90 ಕ್ಕಿಂತ ಕಡಿಮೆಯಿದ್ದರೆ ಬಿಪಿ ನಿಯಂತ್ರಣದಲ್ಲಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಸ್ತುತ, ಕೇವಲ 24.2ರಷ್ಟು ರೋಗಿಗಳು ಮಾತ್ರ ರಕ್ತದೊತ್ತಡವನ್ನು ನಿಯಂತ್ರಣದಲ್ಲಿದ್ದಾರೆ. 46.8ರಷ್ಟು ಜನರಿಗೆ ಅಧಿಕ ಬಿಪಿ ಇದೆ ಎಂದು ಅಧ್ಯಯನ ತಿಳಿಸಿದೆ. ಕೇರಳ ಸರ್ಕಾರದ ಮೆಡಿಕಲ್ ಕಾಲೇಜ್ ಮತ್ತು ಕಿಮ್ಸ್ - ಆಲ್ - ಶಿಫಾ ಸ್ಪೆಷಾಲಿಟಿ ಆಸ್ಪತ್ರೆ ನಡೆಸಿದ ಅಧ್ಯಯನ ಅನುಸಾರ, ರಕ್ತದೊತ್ತಡ ಹೆಚ್ಚಳ ಕುರಿತು ಹೆಚ್ಚಿನ ಅರಿವು ಮೂಡಿಸುವುದರಿಂದ ಹೃದಯ ರೋಗ ಅಥವಾ ಇನ್ನಿತರ ಅಪಾಯ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.
ಇದನ್ನೂ ಓದಿ: ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂದ ಸೊಳ್ಳೆ; 30 ಸರ್ಜರಿ, ನಾಲ್ಕು ಬಾರಿ ಕೋಮಾ ಸ್ಥಿತಿ!