ETV Bharat / sukhibhava

ಹವಾಮಾನ ಬದಲಾವಣೆಯಿಂದ ಕೋವಿಡ್​ ಸೋಂಕು ಹೆಚ್ಚಳ: ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆ ಇರಲಿ - ನವದೆಹಲಿಯಲ್ಲಿ ಸೋಂಕಿನಿಂದ ಸಾವು

ಕಡಿಮೆಯಾಗಿದ್ದ ಕೋವಿಡ್​ ಸೋಂಕು ಇದೀಗ ಮತ್ತೆ ಏರಿಕೆ ಕಂಡಿದ್ದು, ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಇದಕ್ಕೆ ಹವಾಮಾನ ವೈಪರೀತ್ಯದ ಜೊತೆಗೆ ನಿರ್ಲಕ್ಷ್ಯ ಕೂಡ ಕಾರಣವಾಗಿದೆ.

Increase in  Covid infections due to weather: Don't be careless, be careful

author img

By

Published : Apr 4, 2023, 12:09 PM IST

ನವದೆಹಲಿ: ಕಳೆದ ಮೂರು ವರ್ಷದ ಹಿಂದೆ ಜಗತ್ತು ಕಂಡಿದ್ದ ಕೊರೋನಾ ವೈರಸ್​ ಸೋಂಕು ಮತ್ತೆ ಇದೀಗ ಉಲ್ಬಣವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಕಡಿಮೆ ಇದ್ದ ಸೋಂಕು ಇದೀಗ ಏರಿಕೆ ಕಂಡಿದ್ದು, ಮಹಾರಾಷ್ಟ್ರ ಮತ್ತು ನವದೆಹಲಿಯಲ್ಲಿ ಸೋಂಕಿನಿಂದ ಸಾವುಗಳು ಕೂಡ ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಜನರು ಸೋಂಕಿನ ಬಗ್ಗೆ ನಿರ್ಲಕ್ಷ್ಯವಹಿಸದೇ, ಮುನ್ನೆಚ್ಚರಿಕೆವಹಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಋತುಮಾನದ ಬದಲಾವಣೆ ಹಿನ್ನೆಲೆಯಲ್ಲಿ ಸೋಂಕು ಇದೀಗ ಶೀಘ್ರವಾಗಿ ಹರಡುತ್ತಿದೆ. ಕಳೆದ ಕೆಲವ ದಿನಗಳಿಂದ ಈ ಪ್ರಕರಣಗಳಲ್ಲಿ ಹೆಚ್ಚಳ ಕಂಡಿದೆ. ದೇಶದಲ್ಲಿ ಇದೀಗ ದಿನವೊಂದಕ್ಕೆ 3 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ದೆಹಲಿಯಲ್ಲಿ ಕೋವಿಡ್​ ಪ್ರಕರಣದಲ್ಲಿ ಭಾರೀ ಏರಿಕೆ ಕಂಡಿದ್ದು, ದಿನಕ್ಕೆ 400 ಪ್ರಕರಣಗಳು ದಾಖಲಾಗುತ್ತಿದೆ.

ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ: ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಮ್ಮು, ಶೀತ ಮತ್ತು ಜ್ವರ ಮತ್ತಿತ್ತರ ಕಾರಣಗಳಿಂದಾಗಿ ಬಿಎಲ್​ಕೆ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಬಿಎಲ್​ಕೆ ಆಸ್ಪತ್ರೆಗೆ ಎದೆ ಮತ್ತು ಶ್ವಾಸಕೋಶ ವಿಭಾಗದ ಮುಖ್ಯಸ್ಥರಾದ ಡಾ ಸಂದೀಪ್​ ನಯರ್​ ಮಾತನಾಡಿ, ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದಿದ್ದಾರೆ.

ಈ ಕುರಿತು ಎಎನ್​ಐ ಜೊತೆ ಮಾತನಾಡಿರುವ ಅವರು, ಅನೇಕ ರೋಗಿಗಳಲ್ಲಿ ಕೋವಿಡ್​ ಸೋಂಕಿನ ಲಕ್ಷಣ ಕಂಡು ಬರುತ್ತಿದೆ. ಹಲವು ದಿನಗಳಿಂದ ಅವರಲ್ಲಿ ಈ ಸೋಂಕಿನ ಲಕ್ಷಣ ಕಾಣಿಸುತ್ತಿದೆ. ಅವರನ್ನು ಪರೀಕ್ಷೆ ಮಾಡಿದಾಗ ಕೋವಿಡ್​ ಸೋಂಕು ದೃಢವಾಗುತ್ತಿದೆ. ಕೋವಿಡ್​ ಸೋಂಕು ದೃಢಗೊಂಡವರಿಗೆ ತಕ್ಷಣಕ್ಕೆ ಹೋಮ್​ ಐಸೋಲೇಷನ್​ ಆಗುವಂತೆ ಸಲಹೆ ನೀಡಲಾಗುತ್ತಿದೆ. ಜೊತೆಗೆ ಅವಶ್ಯಕತೆ ಇದ್ದವರಿಗೆ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗುತ್ತಿದೆ. ಅನೇಕ ರೋಗಿಗಳು ಮನೆಯಲ್ಲಿ ಪ್ರತ್ಯೇಕವಾಗಿರುವ ಮೂಲಕ ಗುಣಮುಖರಾಗುತ್ತಿದ್ದಾರೆ. ಸಾಂಕ್ರಾಮಿಕತೆ ಬಳಿಕ ಅನೇಕ ಮಂದಿ ಕೂಡ ಇದೀಗ ಆನ್​ಲೈನ್​ ಮೂಲಕವೇ ವೈದ್ಯಕೀಯ ಸಮಾಲೋಚನೆ ಪಡೆಯುತ್ತಿದ್ದಾರೆ. ಸದ್ಯ ಬಿಎಲ್​ಕೆ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಯನ್ನು ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕ್ಯಾನ್ಸರ್​, ಶ್ವಾಸಕೋಶ ಮತ್ತು ಹೃದಯ ಸಮಸ್ಯೆಯಂತಹ ಅಪಾಯ ಹೊಂದಿರುವ ಮಂದಿಗೆ ಬೇಗ ಸೋಂಕು ತಗುಲುತ್ತದೆ. ಸೋಂಕಿತರು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಾಗುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಹವಾಮಾನ ಬದಲಾವಣೆಯೂ ಕಾರಣ: ಹವಾಮಾನ ಬದಲಾವಣೆಯಿಂದಾಗಿ ಯಾವುದೇ ವೈರಸ್​ ಮತ್ತು ಸೋಂಕು ಬಲು ಬೇಗ ಹರಡುತ್ತದೆ. ಇದೇ ಕಾರಣಕ್ಕೆ ನಾವು ಅನೇಕ ವಿಧದ ಸೋಂಕು ಮತ್ತು ವೈರಸ್​ ಪ್ರಕರಣಗಳನ್ನು ಕಾಣುತ್ತಿದ್ದಾರೆ. ಜನರಲ್ಲಿ ಕೆಮ್ಮು, ಜ್ವರ ಮತ್ತು ನೆಗಡಿ ಕಾಣುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಜನರು ಮಾಸ್ಕ್ ಧರಿಸುವುದನ್ನು ಬಿಟ್ಟು ಬಿಟ್ಟಿದ್ದಾರೆ. ಈ ಕಾರಣದಿಂದ ಕೂಡ ಸೋಂಕು ಹೆಚ್ಚಳವಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಮಧ್ಯೆ ಕೇಂದ್ರ ಆರೋಗ್ಯ ಸಚಿವರಾದ ಡಾ ಮನ್ಸುಕ್​ ಮಾಂಡವಿಯಾ ಕೂಡ ಕೋವಿಡ್​ ಸೋಂಕು ತಡೆಯಲು ಜನರಿಗೆ ಎಚ್ಚರದಿಂದ ಇರುವಂತೆ ಸಲಹೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿರುವ ಅವರು, ಕೋವಿಡ್​ ಉಪ ತಳಿಗಳ ಪ್ರಕರಣ ಹೆಚ್ಚಳವಾಗಿದೆ. ಈ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಸೋಂಕಿತರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಪ್ರತ್ಯೇಕವಾಗಿರಬಹುದು ಎಂದಿದ್ದಾರೆ.

ಕೆಮ್ಮು ದೀರ್ಘಕಾಲವಾಗಿದ್ದರೆ ನಿರ್ಲಕ್ಷ್ಯ ಮಾಡಬಾರದು. ವೈರಾಣುಗಳು ಬಾಯಿ ಮತ್ತು ಮೂಗಿನ ಮೂಲಕ ಶ್ವಾಸಕೋಶ ಪ್ರವೇಶಿಸುತ್ತದೆ. ದೀರ್ಘಕಾಲ ಕೆಮ್ಮು ಕಾಡಿದರೆ, ಸಾಧ್ಯವಾದಷ್ಟು ಬೇಗ ವೈದ್ಯರನ್ನು ಭೇಟಿಯಾಗಬೇಕು. ಜನನಿಬಿಡ ಪ್ರದೇಶದಲ್ಲಿ ಎಲ್ಲ ವಯೋಮಾನದ ಮಂದಿ ಮಾಸ್ಕ್​ ಧರಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಮಹಾರಾಷ್ಟ್ರ, ದೆಹಲಿಯಲ್ಲಿ ಕೊರೊನಾ ಸಾವು ದಾಖಲು: ದೇಶದಲ್ಲಿ 3,641 ಹೊಸ ಕೇಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.