ವಾಷಿಂಗ್ಟನ್: ಅಮೆರಿಕದಲ್ಲಿ ವಾರಾಂತ್ಯಕ್ಕೆ 10 ಸಾವಿರ ಮಕ್ಕಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಅಮೆರಿಕನ್ ಅಕಾಡೆಮಿ ಆಫ್ ಪೀಢಿಯಾಟ್ರಿಕ್ಸ್ ಮತ್ತು ಚಿಲ್ಡ್ರನ್ ಹಾಸ್ಪಿಟಲ್ ಅಸೋಸಿಯೇಷನ್ ತಿಳಿಸಿದೆ. ಏಪ್ರಿಲ್ 27ರ ವಾರಾಂತ್ಯದ ವೇಳೆ ಸುಮಾರು 10 ಸಾವಿರ ಮಕ್ಕಳಲ್ಲಿ ಕೋವಿಡ್ ಸೋಂಕು ಕಂಡು ಬಂದಿದೆ ಎಂದು ಇದು ತಿಳಿಸಿದೆ. 2020ರಲ್ಲಿ ಜಗತ್ತನ್ನೇ ತಲ್ಲಣಗೊಳಿಸಿದ್ದ ಈ ಕೋವಿಡ್ ಸೋಂಕು ರೂಪಾಂತರ ಹೊಂದುತ್ತಿದೆ. ಲಸಿಕೆ ಬಳಿಕವೂ ಸೌಮ್ಯ ಸ್ವಭಾವದ ಸೋಂಕು ಪತ್ತೆಯಾಗುತ್ತಿದೆ. ಅಮೆರಿಕದಲ್ಲಿ 2020ರಿಂದ ಇಲ್ಲಿಯವರೆಗೆ 15.6 ಮಿಲಿಯನ್ ಮಕ್ಕಳಲ್ಲಿ ಈ ಕೋವಿಡ್ ಸೋಂಕು ದೃಢಪಟ್ಟಿದೆ.
ಇಳಿಕೆಯಾದ ಸೋಂಕು: ಕಳೆದ ಏಳು ತಿಂಗಳ ವರದಿ ಅನುಸಾರ, ವಾರದಲ್ಲಿ 27 ಸಾವಿರ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ಈ ಸೋಂಕಿನಲ್ಲಿ ಇಳಿಕೆ ಕಂಡು ಬಂದಿದೆ. ಇದೀಗ ವಾರದಲ್ಲಿ 10 ಸಾವಿರ ಮಕ್ಕಳಲ್ಲಿ ಈ ಸೋಂಕು ದೃಢ ಪಟ್ಟಿದೆ ಎಂದು ವರದಿ ತಿಳಿಸಿದೆ. ಈ ವರದಿ ಅನ್ವಯ, ಮಕ್ಕಳಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದಿದ್ದಾರೆ.
ಈ ಸಂಬಂಧ ಇನ್ನು ಹೆಚ್ಚು ನಿರ್ದಿಷ್ಟ ವಯಸ್ಸಿನ ದಾಖಲೆಗಳನ್ನು ಸಂಗ್ರಹಿಸಿದ ಪರಿಶೀಲಿಸಬೆಕಿದೆ. ಈ ಮೂಲಕ ರೋಗದ ತೀವ್ರತೆ ಮತ್ತು ಹೊಸ ರೂಪಾಂತರಿ ದೀರ್ಘಾವಧಿಯಲ್ಲಿ ಎಷ್ಟು ರೂಪಾಂತಾರಿಯಾಗಿದೆ ಎಂಬುದನ್ನು ತಿಳಿಯಬೇಕಿದೆ ಎಂದಿದ್ದಾರೆ. ಸಾಂಕ್ರಾಮಿಕವೂ ಮಕ್ಕಳ ಆರೋಗ್ಯದ ಮೇಲೆ ತತ್ಕ್ಷಣದ ಪರಿಣಾಮವನ್ನು ಕುರಿತು ಗುರುತಿಸುವುದು ಅತಿ ಮುಖ್ಯವಾಗಿದೆ. ಆದರೆ, ಇದರ ಜೊತೆಗೆ ಅವರ ದೈಹಿಕ ಮತ್ತು ಮಾನಸಿಕ ಹಾಗೂ ಅವರ ಸಾಮಾಜಿಕ ಯೋಗ ಕ್ಷೇಮದಲ್ಲಿ ಬೀರುವ ಪರಿಣಾಮವನ್ನು ಕುರಿತು ಕೂಡ ಪತ್ತೆ ಮಾಡಬೇಕಿದೆ ಎಂದಿದ್ದಾರೆ.
ಕೋವಿಡ್ ಲಸಿಕೆ ನಿಯಮ ಸಡಿಲಿಕೆ: ಇದೆ ವೇಳೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಲಸಿಕೆ ಅಗತ್ಯ ಎಂಬ ನಿಯಮ ರದ್ದು ಮಾಡಿದೆ. ಮೇ 11ರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರು, ಆಡಳಿತ ಮಂಡಳಿಗೆ ಇದ್ದ ಕೋವಿಡ್ ನಿಯಮ ಅಂತ್ಯಗೊಳಿಸುತ್ತಿದ್ದೇವೆ ಎಂದು ಅಮೆರಿಕದ ಶ್ವೇತ ಭವನ ತಿಳಿಸಿದೆ.
ಈ ಕುರಿತು ಅಮೆರಿಕ ಆರೋಗ್ಯ ಮತ್ತಯ ಮಾನವ ಸೇವೆ ಇಲಾಖೆ ಮತ್ತು ಹೋಮ್ಲ್ಯಾಂಡ್ ಸೆಕ್ಯೂರಿಟಿ ಪ್ರಕಟಣೆ ಹೊರಡಿಸಿದ್ದು, ದೇಶದಲ್ಲಿ ಲಸಿಕೆ ಅಭಿಯಾನ ಹೆಚ್ಚಾಗಿದ್ದು, 270 ಮಿಲಿಯನ್ ಅಮೆರಿಯದ ಜನರು ಕನಿಷ್ಟ 1 ಕೋವಿಡ್ ಲಸಿಕೆಗಳನ್ನು ಪಡೆದಿದ್ದಾರೆ. ಶೇ 98ರಷ್ಟು ಮಂದಿಗೆ ಲಸಿಕೆ ನೀಡುವಲ್ಲಿ ಫೆಡರಲ್ ಸರ್ಕಾರ ಯಶಸ್ವಿಯಾಗಿದೆ. ಈ ಹಿನ್ನೆಲೆ ಕೋವಿಡ್ ಬಿಗಿ ನಿಯಮಗಳನ್ನು ಸಡಿಲಗೊಳಿಸಲು ಮುಂದಾಗಿದೆ ಎಂದರು.
ಅಮೆರಿಕದಲ್ಲಿ ಕೋವಿಡ್ನಿಂದ 1 ಮಿಲಿಯನ್ಗಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಲಸಿಕೆ ಈ ಸಾವುಗಳ ಸಂಖ್ಯೆಯನ್ನು ಶೇ 95ರಷ್ಟು ಕಡಿಮೆ ಮಾಡಿದೆ. ಲಸಿಕೆ ಅಗತ್ಯತೆ ಅರಿತು ದೇಶಾದ್ಯಂತ ಲಸಿಕೆ ಅಭಿಯಾನವನ್ನು ಹೆಚ್ಚಿಸಿದ್ದರ ಪರಿಣಾಮ ಲಕ್ಷಾಂತರ ಜನರ ಜೀವ ಉಳಿಸಲಾಗಿದೆ ಎಂದಿದೆ.
ಇದನ್ನೂ ಓದಿ: ಬರಲಿದೆ ಕುಡಿಯಬಹುದಾದ ಕೋವಿಡ್ 19 ಲಸಿಕೆ!