ಭುವನೇಶ್ವರ್: ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಇನ್ಸುಟಿಟ್ಯೂಷನ್ ಆಫ್ ಲೈಫ್ ಸೈನ್ಸ್ (ಜೀವ ವಿಜ್ಞಾನ ಸಂಸ್ಥೆ- ಐಎಲ್ಎಸ್) ಮತ್ತೊಂದು ಮಹತ್ತರ ಸಾಧನೆ ಮಾಡಿದೆ. ಐಎಲ್ಎಸ್ ಎನ್ಸಿಒಆರ್ 1 ( NCoR 1- ನ್ಯೂಕ್ಲಿಯರ್ ರೆಸೆಪ್ಟೊರ್ ಕೊ-ರೆಪ್ರೆಸರ್ 1) ಎಂಬ ಅತಿಥೇಯ ಪ್ರೋಟಿನ್ ಅನ್ನು ಆವಿಷ್ಕರಿಸಿದ್ದು, ಇದು ಅನೇಕ ಸಂಕೀರ್ಣ ರೋಗವನ್ನು ಉಪಶಮನ ಮಾಡಲು ಸಮರ್ಥವಾಗಿದೆ. ಕ್ಷಯ ಮತ್ತು ವೈರಲ್ ಸೋಂಕಿನ ವಿರುದ್ಧ ಹೋರಾಡುವಲ್ಲಿ ಇದು ಸಾಮರ್ಥ್ಯದಾಯಕವಾಗಿದೆ. ಕ್ಯಾನ್ಸರ್ನಂತಹ ರೋಗಗಳಿಗೆ ಪ್ರೋಟಿನ್ ಸಂಶೋಧನೆ ಮಾಡುವಲ್ಲಿ ಐಎಲ್ಎಸ್ ಯಶಸ್ವಿಯಾಗಿದೆ. ಇನ್ನು ಈ ಕುರಿತು ಸಂಪೂರ್ಣ ವಿವರವನ್ನು ಪಿಎಲ್ಎಸ್ ಬಯೋಲಾಜಿ ಅಂಡ್ ಆಟೋಫಜಿಯಲ್ಲಿ ಪ್ರಕಟಿಸಲಾಗಿದೆ.
ಸಂಸ್ಥೆ ನೀಡುವ ಮಾಹಿತಿ ಅನುಸಾರ, ಪ್ರೋಟಿನ್ ಎನ್ಸಿಒಆರ್1 ಅನೇಕ ವಿಧದ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ಪ್ರೋಟಿನ್ ಮೌಲ್ಯ ಕಡಿಮೆ ಆದಾಗ, ದೇಹವು ವಿವಿಧ ಮಾರಣಾಂತಿಕ ವೈರಸ್‌ಗಳಿಂದ ಸೋಂಕಿಗೆ ಹೆಚ್ಚು ಒಳಗಾಗುತ್ತದೆ. ಈ ರೋಗಗಳು ದೇಹದಲ್ಲಿ ದೀರ್ಘಕಾಲವಾಗಿ ಇರುತ್ತದೆ.
ಸಂಶೋಧಕರು ಕ್ಷಯರೋಗದಿಂದ ಚೇತರಿಕೆ ಕಂಡ ರೋಗಿಗಳಲ್ಲಿ ಪ್ರೋಟಿನ್ ಮಟ್ಟ ಕಡಿಮೆಯಾಗಿರುವುದು ಕಂಡು ಬಂದಿದೆ. ಆದಾಗ್ಯೂ, ಐಎಲ್ಎಸ್ ಸಂಶೋಧಕರು ಈ ಬಗ್ಗೆ ಹೆಚ್ಚಿನ ಕಲಿಕೆ ಮುಂದುವರೆಸಿದ್ದಾರೆ. ವಿಜ್ಞಾನಿಗಳು ಪ್ರೋಟಿನ್ನ ಆ್ಯಂಟಿ ವೈರಲ್ ಸಾಮರ್ಥ್ಯದ ಸಂಶೋಧನೆಯನ್ನು ಮುಗಿಸಿದ್ದಾರೆ. ಸಂಶೋಧಕರು ದುರ್ಬಲ ರೋಗ ನಿರೋಧಕ ವ್ಯವಸ್ಥೆ ಹೊಂದಿರುವವರಿಗೆ ಪ್ರೋಟಿನ್ ಚಿಕಿತ್ಸೆಯ ಪಾತ್ರದ ಕುರಿತು ಗಮನಿಸಿದ್ದಾರೆ.
ಅದೇ ರೀತಿ, ಸಂಶೋಧಕರು ಈ ಪ್ರೋಟಿನ್ ಕೀಲು ನೋವು ಹೊಂದಿರುವ ರೋಗಿಗಳಿಗೆ ಕೂಡ ಪರಿಹಾರ ಕಾಣಬಹುದು ಎಂದಿದ್ದಾರೆ. ಸಂಶೋಧನೆಯ ಪ್ರಾಥಮಿಕ ವರದಿಯು ಉತ್ತಮವಾಗಿದೆ ಎಂದು ಐಎಲ್ಎಸ್ ತಿಳಿಸಿದೆ. ಆದಾಗ್ಯೂ, ಐಎಲ್ಎಸ್ನ ಹಿರಿಯ ವಿಜ್ಞಾನಿ ಸುನೀಲ್ ಕುಮಾರ್ ರಾಘವ್ ಮತ್ತು ಅವರ ಸಹೋದ್ಯೋಗಿಗಳು ಸಂಶೋಧನೆಯ ದೀರ್ಘಾವಧಿಯ ಯಶಸ್ಸು ಸಾಧಿಸಿದ್ದಾರೆ. ಮತ್ತೊಂದು ಕಡೆ ಐಎಲ್ಎಸ್ ಈಗಾಗಲೇ ಅನೇಕ ಸಂಶೋಧನೆಗಳನ್ನು ಮಾಡಿದೆ. ಐಎಲ್ಎಸ್ ಕ್ಯಾನ್ಸರ್ನಂತಹ ಮಾರಣಾಂತಿಕ ರೋಗದ ಸಂಶೋಧನೆಯನ್ನು ಯಶಸ್ವಿಯಾಗುವಂತೆ ಮಾಡಿದೆ.
ಇನ್ನು ಈ ಕುರಿತು ಮಾತನಾಡಿರುವ ವಿಜ್ಞಾನಿ ಸುನೀಲ್ ಕುಮಾರ್ ರಾಘವ್, ಈ ಪ್ರೋಟಿನ್ ಆಟೋಇಮ್ಯೂನ್ ರೋಗ ಮತ್ತು ಕ್ಷಯ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಯಾವ ರೋಗಕ್ಕೆ ಹೆಚ್ಚು ಸಾಮರ್ಥ್ಯದಾಯಕವಾಗಿ ಹೋರಾಡುತ್ತದೆ ಎಂಬುದನ್ನು ತಿಳಿಯಬೇಕಿದೆ. ನಮ್ಮ ಪ್ರಯೋಗದಲ್ಲಿ ಈ ಪ್ರೋಟಿನ್ ಟಿವಿ ಸೋಂಕು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂಬುದನ್ನು ಪತ್ತೆ ಮಾಡಿದ್ದೇವೆ. ಟಿಬಿಗೆ ಸಂಬಂಧಿಸಿದಂತಹ ಪ್ರೋಟಿನ್ ಅವಿಷ್ಕಾರ ಮಾಡಿದವರಲ್ಲಿ ನಾವೇ ಮೊದಲಿಗರು ಎಂದಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ನಿಗೂಢ ವೈರಸ್: ನ್ಯುಮೋನಿಯಾ ರೋಗಲಕ್ಷಣಗಳಿಂದ ಬಳಲುತ್ತಿರುವ ಶಾಲಾ ಮಕ್ಕಳು