ನವದೆಹಲಿ: ಕಾಂತಿಯುತ ಕೂದಲನ್ನು ಕಾಪಾಡುವ ಒಂದೆಲ್ಲಾ ಎರಡೂ ಮಾದರಿಗಳು ಖಂಡಿತವಾಗಿಯೂ ತಿಳಿದಿರುತ್ತದೆ. ಆದರೆ, ಮಾಡೆಲ್ನಂತೆ ಸದಾ ಕೂದಲ ಆರೈಕೆ ಮಾಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇಂತಹ ಹೇರ್ ಕೇರ್ಗೆ ಸಂಬಂಧ ಫ್ಯಾಷನ್ವೀಕ್ಗಳಲ್ಲಿ ಅನೇಕ ಹೇರ್ಸ್ಟೈಲ್ ಸೆಷನ್ ಸೇರಿದಂತೆ ಅನೇಕ ಮಾದರಿಗಳ ಪ್ರಯೋಗಗಳನ್ನು ನಡೆಸಲಾಗುವುದು. ಅದ್ಬುತ ಕೂದಲ ಕಾಳಜಿ ದಿನಚರಿಗೆ ಉತ್ತಮ ಫಲಿತಾಂಶ ಪಡೆಯಲು ಅನೇಕ ಪ್ರಯೋಗಗಳನ್ನು ನಡೆಸಲಾಗುತ್ತದೆ. ಡೈಸೊನ್ ಇಂಡಿಯಾ ಅರ್ಪಿತಾ ಮೆಹ್ತಾ ಕೂದಲ ಕಾಳಜಿ ವಿಚಾರದಲ್ಲಿ ಕೆಲವು ಅದ್ಬುತ ಸಲಹೆಗಳನ್ನು ನೀಡಿದ್ದಾರೆ. ಈ ಕುರಿತ ಕೆಲವು ಮಾಹಿತಿ ಇಲ್ಲಿದೆ.
ಉತ್ತಮ ಗುಣಮಟ್ಟದ ಹೇರ್ಬ್ರಶ್: ಭಾರತದ ಮಾಡೆಲ್ಗಳಲ್ಲಿ ಒಬ್ಬರಾದ ಅನಿತಾ ಕುಮಾರ್ ಈ ಸಂಬಂಧ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಕೂದಲನ್ನು ಬಾಚುವ ಹೇರ್ ಬ್ರಶ್ಗಳು ಸಾಮಾನ್ಯವಾಗಿ ಕೂದಲಿಗೆ ಹಾನಿ ಮಾಡುತ್ತದೆ. ಅವು ಕೂದಲನ್ನು ಕಿತ್ತು, ತುಂಡಾಗುವಂತೆ ಮಾಡುತ್ತದೆ. ಈ ಹಿನ್ನೆಲೆ ಕೂದಲಿನ ಆರೈಕೆಗೆ ಮೊದಲು ಉತ್ತಮ ಬ್ರಶ್ ಕೊಳ್ಳುವುದು ಅವಶ್ಯಕವಾಗಿದೆ.
ಡೈಸನ್ ಪಡ್ಡಲ್ ಬ್ರಶ್ ಅತ್ಯುತ್ತಮವಾಗಿ ವಿನ್ಯಾಸ ಮಾಡಲಾಗಿರುತ್ತದೆ. ಇದು ಕೂದಲನ್ನು ಒಣಗಿಸುವಾಗ ಮೃದುವಾಗಿಸುತ್ತದೆ. ಜೊತೆಗೆ ಇದು ಲಘವಾಗಿದ್ದು, ಇದನ್ನು ಸುಲಭವಾಗಿ ಸಮತೋಲನ ಮಾಡಬಹುದಾಗಿದೆ. ಜೊತೆಗೆ ಬುಡವನ್ನು ಶುಚಿಯಾಗಿಡುವಂತೆ ಮಾಡುತ್ತದೆ.
ತೆಂಗಿನ ಎಣ್ಣೆ ಬಳಕೆ: ಸಂಪ್ರದಾಯಿಕ ತೆಂಗಿನ ಎಣ್ಣೆ ಬಳಕೆ ಕೂದಲ ಪೋಷಣೆ ನೀಡುತ್ತದೆ. ಈ ಕುರಿತು ಮಾತನಾಡಿರುವ ಪಲ್ಲವಿ ಸಿಂಗ್, ಪರಿಣಾಮಕಾರಿ ಟ್ರಿಕ್ ಎಂದರೆ, ಕೂದಲ ಬುಡಕ್ಕೆ ಎಣ್ಣೆಯನ್ನು ಹಚ್ಚಿ, ಚೆನ್ನಾಗಿ ಕೂದಲನ್ನು ಕಟ್ಟಿ ಶವರ್ ಕ್ಯಾಪ್ ಹಾಕಿ. ಮೂವತ್ತು ನಿಮಿಷದ ಬಳಿಕ ಶ್ಯಾಂಪೂವಿನಲ್ಲಿ ಕೂದಲನ್ನು ಚೆನ್ನಾಗಿ ತೊಳೆಯುವುದರಿಂದ ಸಹಜವಾಗಿ ಕೂದಲ ಹೊಳೆಯುತ್ತದೆ.
ಉತ್ತಮ ಸಾಧನದಿಂದ ಸ್ವಯಂ ಸ್ಟೈಲ್ ಮಾಡಿ, ಕಡಿಮೆ ಹೀಟ್ ಬಳಕೆ ಅವಶ್ಯ: ಮಾಡೆಲ್ಗಳು ತಮ್ಮ ಫ್ಯಾಷನ್ ಶೋಗಳಿಗಾಗಿ ಹೆಚ್ಚು ಹೀಟ್ ಹೊಂದಿರುವ ಸ್ಟೈಲ್ಗೆ ಮೊರೆ ಹೋಗುವುದು ಅನಿವಾರ್ಯ. ಆದರೆ, ಸ್ವಯಂ ಸ್ಟೈಲ್ ಮಾಡುವಾಗ ಇದನ್ನು ತಡೆಯಬಹುದು. ಆದರೆ, ಕೆಲವು ಸಂದರ್ಭದಲ್ಲಿ ನಿಜಕ್ಕೂ ನಿಮಗೆ ಕೂದಲು ಅಧಿಕ ತಾಪಮಾನದ ಹೀಟ್ ಬಳಕೆ ಮಾಡಿ ಕೂದಲ ಸ್ಟೈಲ್ ಮಾಡಬೇಕು ಎಂದರೆ ಡೈಸನ್ ಏರ್ರ್ಯಾಪ್ಟಿಎಂ ಮಲ್ಟಿ-ಸ್ಟೈಲರ್ ಬಳಕೆ ಮಾಡಿ ಮಾಡಬಹುದಾಗಿದೆ. ಇದರಿಂದ ಅಧಿಕ ಹೀಟ್ನಿಂದ ಕೂದಲಿಗೆ ಯಾವುದೇ ಹಾನಿಯಾಗುವುದಿಲ್ಲ.
ಸಹಜವಾಗಿ ಕೂದಲು ಒಣಗಿಸಿ: ಕೂದಲನ್ನು ನೈಸರ್ಗಿಕವಾಗಿ ಸಹಜವಾಗಿ ಒಣಗುವಂತೆ ಮಾಡಿ. ನಿಶಾ ಯಾದವ್ ಹೇಳುವಂತೆ ಹೇರ್ ಸ್ಪ್ರೆ ಉಪಯೋಗ ಬೇಡ. ಬೆಣ್ಣೆ ಎಣ್ಣೆ ಅಥವಾ ಆಲಿವ್ ಎಣ್ಣೆ ನೈಸರ್ಗಿಕ ಮಾಸ್ಕ್ ಆಗಿದೆ. ಇದು ಕೂದಲಿಗೆ ಸಹಾಯ ಮಾಡುತ್ತದೆ.
ಮೆಕಾನಿಕಲ್ ಹಾನಿಯಿಂದ ಕೂದಲನ್ನು ರಕ್ಷಿಸಿ: ನಮ್ಮ ಕೂದಲೂ ಮೆಕಾನಿಕಲ್ ಆಗಿ ಹಾನಿಯಾದಾಗ ಅದನ್ನು ಸರಿಪಡಿಸುವುದು ಸಾಧ್ಯವಿಲ್ಲ. ಇಂತಹ ಹಾನಿ ತಡೆಯಲು ಮಾಡೆಲ್ಗಳು ತಲೆ ಸ್ನಾನವಾದ ಬಳಿಕ ಹಳೆ ಟೀಶರ್ಟ್ ಅಥವಾ ಮೈಕ್ರೋ ಫೈಬರ್ ಟವೆಲ್ ಮೂಲಕ ಕೂದಲನ್ನು ಕಟ್ಟುತ್ತಾರೆ. ಹಸಿ ಕೂದಲನ್ನು ಪ್ರಾಗಿಲ್ ಆಗಿ ಕೂದಲು ತುಂಡಾಗುತ್ತದೆ. ಜೊತೆಗೆ ಟವಲ್ಗಳಲ್ಲಿನ ಹಾನಿಯುತ ಫೈಬರ್ ಕೂಡ ಹೆಚ್ಚು ಪರಿಣಾಮ ಬೀರುತ್ತದೆ. ಮಲಗುವಾಗಲೂ ತಲೆ ದಿಂಬಿಗೆ ಸ್ಯಾಟಿನ್ ಕವರ್ ಬಳಸುವುದರಿಂದ ಕೂದಲು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಕಾಟನ್ ದಿಂಬಿನ ಕವರ್ಗಳು ಕಡಿಮ ಘರ್ಷಣೆ ಉಂಟು ಮಾಡಿದರೆ ಬಳಸುವುದು ಸೂಕ್ತ. ಇದು ಕೂಡ ತಲೆ ಕೂದಲು ತುಂಡಾಗುವುದು, ಒಣದಾಗುವುದನ್ನು ತಡೆಯುತ್ತದೆ.
ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆಯೇ? ಹೆಚ್ಚು ಖರ್ಚಿಲ್ಲ, ಮನೆಯಲ್ಲೇ ಇದೆ ಪರಿಹಾರ!