ಕೋವಿಡ್ ಇಂದು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿಲ್ಲ. ಮೂರು ವರ್ಷಗಳ ಹಿಂದೆ ಇದ್ದ ಇದರ ಭಯ ಕಣ್ಮರೆಯಾಗಿದೆ. ಸಹಜ ಜನಜೀವನಕ್ಕೆ ಮರಳಲಾಗಿದೆ. ಸೋಂಕು ಗಣನೀಯ ಮಟ್ಟದಲ್ಲಿ ಕಡಿಮೆಯಾದರೂ, ಸೋಂಕಿನ ಪರಿಣಾಮ ಮಾತ್ರ ಹಾಗೇ ಉಳಿದಿದೆ.
ಅದರಲ್ಲೂ ಸಾರ್ಸ್-ಕೋವ್-2ನಂತಹ ದೀರ್ಘಾವಧಿ ಕೋವಿಡ್ನಿಂದ ಜಗತ್ತು ಬಳಲುತ್ತಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈ ದೀರ್ಘಾವಧಿ ಸೋಂಕು ವ್ಯಕ್ತಿಯ ಆರೋಗ್ಯ ಮಟ್ಟವನ್ನು ಕುಗ್ಗಿಸಿದೆ. ಇನ್ನು ಈ ದೀರ್ಘಾವಧಿಯ ಸೋಂಕಿನ ಲಕ್ಷಣಗಳು ಏನು ಎಂಬ ಬಗ್ಗೆ ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಎಚ್) ರಿಸರ್ಚಿಂಗ್ ಕೋವಿಡ್ ತಿ ಎನ್ಹ್ಯಾನ್ಸಸ್ ರಿಕವರಿ (ರಿಕವರಿ ಅಡಲ್ಟ್) ಕಾರ್ಯಕ್ರಮವನ್ನು ಪ್ರಾರಂಭಿಸಿತು.
ಕೋವಿಡ್ ಲಕ್ಷಣ ಮತ್ತು ತೀವ್ರತೆ ತಿಳಿಯುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗಿದೆ. ಇದಕ್ಕಾಗಿ ಸಂಶೋಧನಾ ತಂಡ ದೀರ್ಘ ಕೋವಿಡ್ನ ಅಂದರೆ ಕೋವಿಡ್ ಸೋಂಕು ತಗುಲಿದ ಬಳಿಕ 30 ದಿನಗಳ ಕಾಲ ಇದರಿಂದ ಬಾಧಿತರದಲ್ಲಿ ಕಂಡು ಬಂದ 12 ಲಕ್ಷಣವನ್ನು ತಿಳಿಸಿದೆ. ಸಾರ್ಸ್-ಕೋವ್-2 ಸೋಂಕು ಜಾಗತಿಕವಾಗಿ 650 ಮಿಲಿಯನ್ ಜನರು ದೀರ್ಘಾವಧಿ ಸೋಂಕಿಗೆ ತುತ್ತಾಗಿದ್ದು, ಇದರಿಂದ ಸೋಂಕಿತರ ಆರೋಗ್ಯ ಸೇರಿದಂತೆ ಜೀವನದ ಗುಣಮಟ್ಟ, ಸಂಪಾದನೆ, ವೈದ್ಯಕೀಯ ವೆಚ್ಚದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.
ಹೀಗಿದೆ ಲಕ್ಷಣ: ದೀರ್ಘಾವಧಿ ಕೋವಿಡ್ ಹೊಂದಿಲ್ಲದವರಿಗೆ ಗಮನಿಸಿದಾಗ ಈ 12 ಲಕ್ಷಣಗಳು ದೀರ್ಘಾವಧಿ ಕೋವಿಡ್ ಹೊಂದಿರುವವರಲ್ಲಿ ಸಂಶೋಧಕರು ಪತ್ತೆ ಮಾಡಿದ್ದಾರೆ. ಕೆಲಸದ ನಂತರ ಅಸ್ವಸ್ಥತೆ ಅಂದರೆ ಸಣ್ಣ ದೈಹಿಕ ಚಟುವಟಿಕೆಯಿಂದಲೂ ಬಳಲುವುದು ಅಥವಾ ಮಾನಸಿಕ ಅಸ್ವಸ್ಥತೆ, ಆಯಾಸ, ಬ್ರೈನ್ ಫಾಗ್, ಆಲಸ್ಯ, ಜೀರ್ಣಾಂಗವ್ಯೂಹದ ಸಮಸ್ಯೆ, ಹೃದಯ ಬಡಿತ, ಲೈಂಗಿಕ ಬಯಕೆ ಅಥವಾ ಸಾಮರ್ಥ್ಯದ ಸಮಸ್ಯೆ, ವಾಸನೆ ಅಥವಾ ರುಚಿ ನಷ್ಟ, ಬಾಯಾರಿಕೆ, ದೀರ್ಘಕಾಲದ ಕೆಮ್ಮು, ಎದೆ ನೋವು ಮತ್ತು ಅಸಹಜ ಚಲನೆಗಳಾಗಿವೆ.
ಈ ಫಲಿತಾಂಶಗಳು ರೋಗಿಗಳ ಮತ್ತು ತನಿಖೆಯ ಚಿಕಿತ್ಸೆಯ ಉತ್ತಮವಾಗಿ ವ್ಯಾಖ್ಯಾನಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಾವೀಗ ದೀರ್ಘಾವಧಿ ಕೋವಿಡ್ ಅನ್ನು ಸರಿಯಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಈ ಸಂಬಂಧ ಆಳವಾದ ಅಧ್ಯಯನ ಪ್ರಾರಂಭಿಸಬಹುದಾಗಿದ್ದು, ಈ ಮೂಲಕ ಇದರಲ್ಲಿನ ಜೈವಿಕ ಕಾರ್ಯವಿಧಾನವನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಅಧ್ಯಯನ ಲೇಖಕರು ತಿಳಿಸಿದ್ದಾರೆ.
ಆರು ತಿಂಗಳ ಅಧ್ಯಯನ: ದೀರ್ಘ ಕೋವಿಡ್ನ ಮತ್ತೊಂದು ವೈವಿಧ್ಯತೆ ಎಂದರೆ ದೀರ್ಘಾವಧಿ ಕೋವಿಡ್ ಒಂದು ಸಿಂಡ್ರೋಮ್ ಆಗಿದೆ. ಈ ಚಿಂತನೆಯನ್ನು ಅರ್ಥ ಮಾಡಿಕೊಳ್ಳುವುದು ಪ್ರಮುಖವಾಗಿದ್ದು ಪ್ರಮುಖ ಹೆಜ್ಜೆ ಎಂದರೆ ಹೆಚ್ಚಿನ ಅಧ್ಯಯನ ನಡೆಸುವುದಾಗಿದೆ ಎಂದಿದ್ದಾರೆ. 2021 ಅಕ್ಟೋಬರ್ನಿಂದ ಈ ಭಾಗಿದಾರರನ್ನು ಅಧ್ಯಯನ ನಡೆಸಲಾಯಿತು. 85 ಆಸ್ಪತ್ರೆ, ಆರೋಗ್ಯ ಕೇಂದ್ರ ಮತ್ತು 33 ರಾಜ್ಯಗಳ ರೋಗ ಲಕ್ಷಣಗಳ ಸಮೀಕ್ಷೆಯ ಫಲಿತಾಂಶ ವಿಶ್ಲೇಷಿಸಲಾಗಿದೆ.
ಸೋಂಕಿತರಲ್ಲದ ಮತ್ತು ಕೋವಿಡ್ ಸೋಂಕಿತರು ಸೇರಿದಂತೆ 9,500 ಮಂದಿಯನ್ನು ಆರು ತಿಂಗಳ ಕಾಲ ಅಧ್ಯಯನ ನಡೆಸಲಾಗಿದೆ. ಫಲಿತಾಂಶದಲ್ಲಿ ಮರು ಸೋಂಕು, ಸೋಂಕಿತರಲ್ಲಿ ಸಾರ್ಸ್ ಕೋವ್-2 ವೆರಿಯಂಟ್ ಮತ್ತು ಲಸಿಕೆ ಪಡೆಯದಿರುವುದು ಕೂಡ ಕಂಡುಬಂದಿದೆ. ಇವರಲ್ಲಿ ಹೆಚ್ಚಿನ, ಗಂಭೀರ ದೀರ್ಘ ಕೋವಿಡ್ ಹೊಂದಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಕೋವಿಡ್ ರೋಗಿಗಳಲ್ಲಿ ವ್ಯಾಯಾಮ ಮಾಡುವ ಸಾಮರ್ಥ್ಯ ಕ್ಷೀಣಿಸಿದೆ: ಅಧ್ಯಯನ