ಹೈದರಾಬಾದ್: ಮಧ್ಯಾಹ್ನದ ಊಟವಾದ ಕೂಡಲೇ ಬಹುತೇಕರಿಗೆ ಒಂದು ಸಣ್ಣ ನಿದ್ರೆ ಮಾಡಿ ಬಿಡೋಣ ಎನ್ನಿಸುತ್ತದೆ. ಮತ್ತಷ್ಟು ಮಂದಿ ಎಷ್ಟೇ ತಡೆದರೂ ನಿದ್ರಾದೇವತೆ ಅವರನ್ನು ಆವರಿಸಿ ಬಿಡುತ್ತಾಳೆ. ಈ ರೀತಿ ಊಟವಾದ ಕೂಡಲೆ ನಿದ್ರೆ ಏಕೆ ನಮ್ಮನ್ನು ಕಾಡುತ್ತದೆ ಎಂದು ಅಲೋಚಿಸಿದ್ದಿರಾ. ಇದಕ್ಕೆ ಕಾರಣ ಅನ್ನ. ಅಚ್ಚರಿ ಆದರೂ ಹೌದು.
ಮಧ್ಯಾಹ್ನದ ಹೊತ್ತಿನಲ್ಲಿ ಸೇವಿಸುವ ಅನ್ನದಲ್ಲಿ ಗ್ಲೋಕೋಸ್ ಅಂಶ ಬಹುಬೇಗ ರಕ್ತದಲ್ಲಿ ಸೇರುತ್ತದೆ. ಅಷ್ಟೇ ಅಲ್ಲದೇ, ಅನ್ನ ಮೆಲಟೊನಿನ್ ಮತ್ತು ಸೆರೊಟೊನಿನ್ ಬಿಡುಗಡೆ ಮಾಡುತ್ತದೆ. ಇವು ಸ್ವಲ್ಪ ಹೊತ್ತು ಆರಾಮ ಮಾಡೋಣ ಎನ್ನುವ ಭಾವನೆ ಹೊರ ಹಾಕುತ್ತವೆ. ಅನ್ನ ಮಾತ್ರವಲ್ಲದೇ, ಅನೇಕ ಕಾರ್ಬೋಹೈಡ್ರೆಟ್ ಸೇವಿಸಿದಾಗಲೂ ಈ ರೀತಿ ಭಾವನೆ ಉಂಟಾಗುತ್ತದೆ. ಹಾಗಾದರೆ, ಈ ರೀತಿಯ ನಿದ್ರಾಲಸ್ಯದಿಂದ ಹೇಗೆ ಹೊರ ಬರುವುದು ಎನ್ನುವುದಕ್ಕೆ ಇಲ್ಲಿದೆ ಪರಿಹಾರ.
ಮಧ್ಯಾಹ್ನದ ಹೊತ್ತಿನಲ್ಲಿ ಮಾನಸಿಕ ಶಕ್ತಿ ಕೊಂಚ ಕಡಿಮೆ: ನೈಸರ್ಗಿಕವಾಗಿ ಮಧ್ಯಾಹ್ನದ ಹೊತ್ತಿನಲ್ಲಿ ಮಾನಸಿಕ ಶಕ್ತಿ ಕೊಂಚ ಕಡಿಮೆ ಇರುತ್ತದೆ. ಇದರ ಜೊತೆ ಅನ್ನದ ಆಹಾರ ಸೇವಿಸಿದಾಗ ನಿದ್ರೆ ಹೆಚ್ಚು ಕಾಡುತ್ತದೆ. ಈ ಹಿನ್ನೆಲೆ ಮಧ್ಯಾಹ್ನದ ಹೊತ್ತು ಪ್ರೋಟಿನ್ ಸಮೃದ್ಧ ಆಹಾರವನ್ನು ಸೇವಿಸುವುದು ಉತ್ತಮ ಮಾರ್ಗ. ಇದು ನಿಮ್ಮ ಮಿದುಳನ್ನು ಚುರುಕಾಗಿಸುವುದರ ಜೊತೆಗೆ ಡೊಪಮೈನ್ ಮತ್ತು ಎಫಿನೆಫಿರೈನ್ ಎಂಬ ರಸಾಯನಿಕವನ್ನು ಬಿಡುಗಡೆ ಮಾಡಿ ನಿಮ್ಮ ದೇಹದಲ್ಲಿ ಶಕ್ತಿ ಬಿಡುಗಡೆ ಮಾಡುತ್ತದೆ. ಇದರಿಂದ ನಿಮ್ಮ ಕೆಲಸದ ವೇಗ ಕೂಡ ಹೆಚ್ಚುತ್ತದೆ.
ಒಂದು ವೇಳೆ ಮಧ್ಯಾಹ್ನದ ವೇಳೆ ಅನ್ನ ತಿನ್ನದೆ ಇರಲು ಸಾಧ್ಯವೇ ಇಲ್ಲ ಎಂದಾದರೆ ನೀವು ಸಾಮಾನ್ಯ ಅಕ್ಕಿಗಿಂತ ಬಾಸ್ಮತಿ ಅಕ್ಕಿಯನ್ನು ಬಳಕೆ ಮಾಡಿ. ಬಾಸ್ಮತಿ ಅನ್ನದಲ್ಲಿ ಬಿಡುಗಡೆಯಾಗುವ ಗ್ಲೂಕೋಸ್ ನಿಮ್ಮ ರಕ್ತದೊಳಗೆ ಸುಲಭವಾಗಿ ಹೋಗುವುದಿಲ್ಲ.
ಅನ್ನದ ಬದಲು ಗೋಧಿ ಬ್ರೇಡ್, ಬೇಳೆ, ರಾಗಿ ಸೇವಿಸುವುದು ಉತ್ತಮ. ಬ್ರೇಡ್ ಜೊತೆ ಪನ್ನಿರ್ ಅಥವಾ ಸೋಯಾ ನಗೆಟ್ ಕೂಡ ಸೇವಿಸಬಹುದು. ನೀವು ಮಾಂಸಾಹಾರಿಗಳಾಗಿದ್ದರೆ, ಚಿಕನ್ ಜೊತೆ ತರಕಾರಿ ಸಲಾಡ್ ಸೇವಿಸಿ.
ಇದನ್ನು ಓದಿ: ಲ್ಯಾಬ್ನಲ್ಲಿ ಅಭಿವೃದ್ಧಿ ಪಡಿಸಿದ ರಕ್ತದ ಮೊದಲ ಕ್ಲಿನಿಕಲ್ ಪ್ರಯೋಗ.. ಸಕ್ಸಸ್ ಆದ್ರೆ ರಕ್ತಕ್ಕಿಲ್ಲ ಕೊರತೆ