ಬೇಸಿಗೆಯಲ್ಲಿ ಹೊಟ್ಟೆ ನೋವು ಅಥವಾ ಇತರ ಸಂಬಂಧಿತ ಸಮಸ್ಯೆಗಳ ಎದುರಾಗುತ್ತದೆ. ಶಿಲೀಂದ್ರಗಳ ಸೋಂಕು ಮತ್ತು ಮೂತ್ರನಾಳದ ಸೋಂಕು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಾಗಿ ಇಂತಹ ಸಮಸ್ಯೆ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಶಿಲೀಂದ್ರಗಳ ಸೋಂಕು (Fungal infection): ಬೇಸಿಗೆ ಕಾಲದಲ್ಲಿ ನಮ್ಮ ದೇಹವನ್ನು ತಂಪಾಗಿರಿಸಲು ನಮ್ಮ ಬೆವರು ಗ್ರಂಥಿಗಳು ಹೆಚ್ಚು ಕ್ರಿಯಾಶೀಲವಾಗುತ್ತವೆ. ಇದರಿಂದಾಗಿ ನಾವು ಹೆಚ್ಚು ಬೆವರುತ್ತೇವೆ. ಈ ಸಮಯದಲ್ಲಿ ನಮ್ಮ ಕೈಗಳು, ಪಾದಗಳು, ಮೊಣಕಾಲುಗಳು ಹಾಗೂ ಇತ್ಯಾದಿಗಳ ಒಳಗಿನ ಕೀಲುಗಳು ಸೇರಿದಂತೆ ದೇಹದ ಭಾಗಗಳು ನೇರ ಗಾಳಿಗೆ ಒಡ್ಡಿಕೊಳ್ಳದ ಕಾರಣ ಶಿಲೀಂಧ್ರಗಳ ಸೋಂಕಿಗೆ ಒಳಗಾಗುತ್ತವೆ. ಆದ್ದರಿಂದ, ಶುಚಿತ್ವ ಮತ್ತು ನೈರ್ಮಲ್ಯವನ್ನು ಕಾಳಜಿ ವಹಿಸುವುದು ಬಹಳ ಮುಖ್ಯ ಎನ್ನುತ್ತಾರೆ ಡಾ.ಮನೋಜ್. ಇದಕ್ಕಾಗಿ ಈ ಕೆಳಗಿನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು..
- ನಿತ್ಯ ಸ್ನಾನ ಮಾಡಬೇಕು ಮತ್ತು ದೇಹದ ಭಾಗಗಳನ್ನು ಸೋಪಿನಿಂದ ಸರಿಯಾಗಿ ಸ್ವಚ್ಛಗೊಳಿಸಬೇಕು
- ಸ್ನಾನದ ನಂತರ ನಿಮ್ಮ ದೇಹವನ್ನು ಸ್ವಚ್ಛವಾದ ಟವೆಲ್ ಅಥವಾ ಹತ್ತಿ ಬಟ್ಟೆಯಿಂದ ಒರೆಸಿಕೊಳ್ಳಬೇಕು
- ಅತಿಯಾದ ದೈಹಿಕ ಶ್ರಮದಿಂದ ಹೆಚ್ಚು ಬೆವರುವ ಜನರು ಅಥವಾ ಕಲುಷಿತ ಪ್ರದೇಶಗಳಲ್ಲಿ ವಾಸಿಸುವವರು ಬೇಸಿಗೆಯಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿದರೆ ಉತ್ತಮ
- ಕೆಲವು ವೈದ್ಯಕೀಯ ಕಾರಣಗಳಿಂದ ಹೆಚ್ಚು ಬೆವರು ಸಾಧ್ಯತೆ ಇರುತ್ತದೆ. ವೈದ್ಯರ ಸಲಹೆಯ ಮೇರೆಗೆ ಆಂಟಿಫಂಗಲ್ ಪೌಡರ್, ಕ್ರೀಮ್ ಮತ್ತು ಇತರ ಔಷಧಗಳನ್ನು ಬಳಸಬಹುದು
- ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ, ಇದರಿಂದ ಬೆವರು ಸುಲಭವಾಗಿ ಒಣಗುತ್ತದೆ.
ಮೂತ್ರನಾಳದ ಸೋಂಕುಗಳು (UTI-Urinary Tract Infections)
ಈ ಋತುವಿನಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಹೆಚ್ಚು ಸಕ್ರಿಯವಾಗಿರುವುದರಿಂದ ಮಹಿಳೆಯರಲ್ಲಿ ಮೂತ್ರನಾಳದ ಸಮಸ್ಯೆ ಹೆಚ್ಚುವುದು ಸಾಮಾನ್ಯವಾಗಿದೆ. ಹೀಗಾಗಿ ಕೆಲಸದ ಸ್ಥಳಗಳಲ್ಲಿ ಸಾಮೂಹಿಕ ಶೌಚಾಲಯಗಳನ್ನು ಬಳಸುವ ಮಹಿಳೆಯರು ಇಂತಹ ಸೋಂಕು ಎದುರಿಸುವ ಅಪಾಯ ಇದೆ. ಇದಲ್ಲದೇ, ಸಾಕಷ್ಟು ನೀರು ಕುಡಿಯದಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅಲ್ಲದೇ, ನಿಯಮಿತವಾಗಿ ಈಜಲು ಹೋಗುವ ಮಹಿಳೆಯರು ಸಹ ನೀರಿನಲ್ಲಿ ಕ್ಲೋರಿನ್ ಅಂಶದಿಂದಾಗಿ ಇಂತಹ ಸಮಸ್ಯೆ ಎದುರಾಗುತ್ತದೆ.
ಆದ್ದರಿಂದ ಜನನಾಂಗದ ಸೋಂಕನ್ನು ತಪ್ಪಿಸಲು ಮಹಿಳೆಯರಷ್ಟೇ ಅಲ್ಲ, ಪುರುಷರೂ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂಬುವುದು ವೈದ್ಯರ ಸಲಹೆಯಾಗಿದೆ. ಇದರ ಪರಿಹಾರ ಮಾರ್ಗಗಳು ಹೀಗಿವೆ...
- ಉಡುಪುಗಳನ್ನು ತೊಡುವ ಮೊದಲು ಒಳಾಂಗಗಳನ್ನು ಶುದ್ಧ ನೀರಿನಿಂದ ಸರಿಯಾಗಿ ತೊಳೆಯಬೇಕು ಮತ್ತು ಸ್ವಚ್ಛವಾದ ಟವೆಲ್ ಅಥವಾ ಹತ್ತಿ ಬಟ್ಟೆಯಿಂದ ಒರೆಸಬೇಕು
- ತುಂಬಾ ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದನ್ನು ತಪ್ಪಿಸಬೇಕು
- ದಿನವಿಡೀ ಸಾಕಷ್ಟು ನೀರು ಮತ್ತು ದ್ರವ ಪದಾರ್ಥಗಳನ್ನು ಸೇವಿಸಬೇಕು
- ಒಳಾಂಗಗಳನ್ನು ಸ್ವಚ್ಛಗೊಳಿಸಲು ರಾಸಾಯನಿಕ ಸೋಪು ಅಥವಾ ಇಂಟಿಮೇಟ್ ವಾಶ್ ಬಳಸಬೇಡಿ. ಶುದ್ಧವಾದ ನೀರು ಇದ್ದರೆ ಸಾಕು. ಆದಾಗ್ಯೂ, ನಿಮ್ಮ ವೈದ್ಯರ ಸಲಹೆಯ ಮೇರೆಗೆ ನೀವು ಸೌಮ್ಯವಾದ ಸೋಪ್ ಸಹ ಬಳಸಬಹುದು.
- ಯುಟಿಐ ಅಥವಾ ಯೋನಿ/ಜೆಂಟಿಯಲ್ ಸೋಂಕುಗಳ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
ಇದನ್ನೂ ಓದಿ: ಮಳೆ ನಿಂತ ಮೇಲೆ ಶುರುವಾಯ್ತು ಅನಾರೋಗ್ಯ ಸಮಸ್ಯೆ: ವೈರಲ್ ಫೀವರ್ಗೆ ಮಕ್ಕಳೇ ಟಾರ್ಗೆಟ್