ETV Bharat / sukhibhava

ಕಿಡ್ನಿ ಕಲ್ಲಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ, ಕ್ಯಾನ್ಸರ್​ಗೆ ಕಾರಣ! - ಗಂಭೀರ ಸಮಸ್ಯೆಗಳು ಎದುರಾಗುತ್ತ

ಅನೇಕ ಬಾರಿ ಕಿಡ್ನಿ ಕಲ್ಲುಗಳನ್ನು ಹಲವು ಜನ ನಿರ್ಲಕ್ಷ್ಯ ಮಾಡುತ್ತಾರೆ. ಈ ರೀತಿಯ ನಿರ್ಲಕ್ಷ್ಯದಿಂದ ಕ್ಯಾನ್ಸರ್​ಗೆ ವ್ಯಕ್ತಿಯೊಬ್ಬರು ತುತ್ತಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

If kidney stone is not treated at the right time, it can lead to cancer

author img

By

Published : May 9, 2023, 4:40 PM IST

ಲಕ್ನೋ: ಮೂತ್ರಪಿಂಡದಲ್ಲಿನ ದೊಡ್ಡ ಮಟ್ಟದ ಕಲ್ಲುಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಇದು ಕ್ಯಾನ್ಸರ್​​ಗೆ ಕಾರಣವಾದರೂ ಅಚ್ಚರಿ ಇಲ್ಲ ಎಂದು ಪ್ರಕರಣವೊಂದು ತಿಳಿಸಿದೆ.

ಲಕ್ನೋನ ಕಿಂಗ್​ ಜಾರ್ಜ್​ ಮೆಡಿಕಲ್​ ಯುನಿವರ್ಸಿಟಿ ವೈದ್ಯರಿಗೆ ಈ ರೀತಿ ಪ್ರಕರಣವೊಂದು ಎದುರಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರ ಮೂತ್ರಪಿಂಡದಲ್ಲಿ ಕಲ್ಲಿನಿಂದಾಗಿ ಕ್ಯಾನ್ಸರ್​ ಅಭಿವೃದ್ಧಿಗೊಂಡಿದೆ. 5-10 ವರ್ಷದಲ್ಲಿ ಈ ರೀತಿಯ ಪ್ರಕರಣ ಕಾಣಿಸಿಕೊಳ್ಳುತ್ತದೆ. ಇದು ರೋಗಿಯ ಜೀವಕ್ಕೆ ಅಪಾಯ ತಂದೊಡ್ಡುತ್ತದೆ ಎಂದಿದ್ದಾರೆ.

ನಿರ್ಲಕ್ಷ್ಯದ ಪರಿಣಾಮ ಕ್ಯಾನ್ಸರ್​: ಇದನ್ನು ಬಿಲಟೆರಲ್​ ಸ್ಟಗ್ಹೊರ್ನ್​ (ಕಿಡ್ನಿ) ಕಲ್ಲುಗಳು ಸಾಮಾನ್ಯವಾಗಿ ದೊಡ್ಡದಾಗಿರುತ್ತದೆ. ಸದ್ಯ ಪತ್ತೆಯಾಗಿರುವ ಪ್ರಕರಣದಲ್ಲಿ ಬ್ಯಕ್ತಿಯ ಮೂತ್ರಪಿಂಡದಲ್ಲಿ ಈ ಕಲ್ಲುಗಳು 6-7 ಸೆಂ. ಮೀ ದೊಡ್ಡದಾಗಿದೆ. ಇವರು ತಕ್ಷಣ ಚಿಕಿತ್ಸೆ ಪಡೆಯದೇ ಹಲವು ವರ್ಷಗಳ ಕಾಲ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಅವರಲ್ಲಿ ಇದು ಕ್ಯಾನ್ಸರ್​​ಗೆ ಕಾರಣವಾಗಿದೆ ಎಂದು ನೆಫ್ರಾಲೊಜಿ ವಿಭಾಗದ ಮುಖ್ಯಸ್ಥರಾದ ವಿಶ್ವಜೀತ್​ ಸಿಂಗ್​ ತಿಳಿಸಿದ್ದಾರೆ.

ಹಲವು ಕಾಲಗಳಿಂದ ಈ ಕಲ್ಲುಗಳು ಕರಗದೇ, ಚಿಕಿತ್ಸೆ ನಿರ್ಲಕ್ಷ್ಯಿಸುವುದರಿಂದ ಕಿಡ್ನಿಯ ಗೋಡೆಗಳಿಗೆ ಹಾನಿಯಾಗುತ್ತದೆ. ಇದು ದೀರ್ಘಕಾಲ ಮುಂದುವರೆದರೆ ಅದು ಕ್ಯಾನ್ಸರ್​ ಕಾರಣವಾಗುತ್ತದೆ. ಸ್ವಾಮೊಸ್​ ಸೆಲ್​ ಕ್ಯಾರ್ಸಿನಿಮಾದಿಂದಾಗಿ ಕಿಡ್ನಿಯಲ್ಲಿ ಕಲ್ಲು ರೂಪುಗೊಳ್ಳುತ್ತದೆ. ಇಂತಹ ಪ್ರಕರಣಗಳನ್ನು ನಾವು 5 ಅಥವಾ 10 ವರ್ಷದಲ್ಲಿ ಕಾಣಬಹುದು. ಈ ಕಿಡ್ನಿಯಿಂದ ಉಂಟಾಗಿರುವ ಕ್ಯಾನ್ಸರ್ ಇತರ ಅಂಗಗಳಿಗೂ ಹರಡಿರುವ ಕಾರಣ ವ್ಯಕ್ತಿ ಈಗ ಆಂಕೊಲಾಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಧ್ಯಯನ ಹೇಳುವುದೇನು: ಮೂತ್ರ ಪಿಂಡ ಕಲ್ಲುಗಳು ಕ್ಯಾನ್ಸರ್​​ಗೆ ಕಾರಣವಾಗುತ್ತದೆಯಾ ಎಂಬುದರ ಕುರಿತು ಈ ಹಿಂದೆ ಅನೇಕ ಅಧ್ಯಯನಗಳನ್ನು ಕೂಡ ನಡೆಸಲಾಗಿದೆ. ಈ ವೇಳೆ ಇದರ ಅಪಾಯ ಕುರಿತಾದ ಸಂಬಂಧದ ಬಗ್ಗೆ ವಿವರಿಸಲಾಗಿದೆ.

ಕಿಡ್ನಿ ಸ್ಟೋನ್​ ಎಂದರೆ: ಮೂತ್ರಪಿಂಡವನ್ನು ಮೂತ್ರಕೋಶಕ್ಕೆ ಸಂಪರ್ಕಿಸುವ ಮೂತ್ರನಾಳಕ್ಕೆ ಹಾದು ಹೋಗುವ ಮಾರ್ಗದಲ್ಲಿ ಈ ಕಿಡ್ನಿ ಕಲ್ಲುಗಳು ಕಂಡು ಬರುತ್ತವೆ. ಇವು ಕ್ಯಾಲ್ಸಿಯಂ ಫಾಸ್ಫೇಟ್​ ಅಥವಾ ಕ್ಯಾಲ್ಸಿಯಂ ಒಕ್ಸಾಲೇಟ್​ನಿಂದ ಆಗುತ್ತವೆ. ಈ ಕಲ್ಲುಗಳು ಅನೇಕ ಬಾರಿ ಚಿಕ್ಕದಾಗಿದ್ದು, ಅವುಗಳು ಅನೇಕ ಬಾರಿ ಮೂತ್ರದ ಮೂಲಕ ಹೊರ ಹೋಗುತ್ತವೆ. ಆದರೆ, ದೊಡ್ಡ ಮಟ್ಟದ ಕಲ್ಲುಗಳು ಸಮಸ್ಯೆಗೆ ಕಾರಣವಾಗುತ್ತವೆ. ಈ ಕಲ್ಲುಗಳಿಗೆ ತಕ್ಷಣಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಅದು ನೋವು ಸೇರಿದಂತೆ ಅನೇಕ ಸಮಸ್ಯೆ ಕಾರಣವಾಗುತ್ತದೆ.

ಕಿಡ್ನಿ ಕ್ಯಾನ್ಸರ್​: ಮೂತ್ರ ಪಿಂಡದಲ್ಲಿ ಕಂಡು ಬರುವ ಗಡ್ಡೆಗಳಿಂದ ಕ್ಯಾನ್ಸರ್​​ಗೆ ಕಾರಣವಾಗುತ್ತದೆ. ಆರಂಭದಲ್ಲಿ ಇದು ಪತ್ತೆಯಾಗದಿದ್ದರೂ, ಅಂತಿಮ ಹಂತದಲ್ಲಿ ಭಾರಿ ಬೆಲೆ ತೆರುವಂತೆ ಆಗುತ್ತದೆ. ಈ ಕಿಡ್ನಿ ಗಡ್ಡೆಗಳು ಮೂತ್ರ ಚೀಲದವರೆಗೆ ಹರಡಿದರೆ ಅಪಾಯಕ್ಕೆ ಕಾರಣವಾಗುತ್ತದೆ. ಇದಕ್ಕೆ ತಕ್ಷಣಕ್ಕೆ ಚಿಕಿತ್ಸೆ ಪಡೆಯದಿದ್ದರೆ ಈ ಕಿಡ್ನಿ ಕಾನ್ಸರ್​ನಿಂದ ಅನೇಕ ಬಾರಿ ಕಿಡ್ನಿ ತೆಗೆಯುವಿಕೆಗೆ ಕಾರಣವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ನಿದ್ರಾಹೀನತೆಯಿಂದ ಗಂಭೀರ ಆರೋಗ್ಯ ಸಮಸ್ಯೆ.. ಸುಖ ನಿದ್ರೆಗೆ ಇಲ್ಲಿದೆ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.