ETV Bharat / sukhibhava

ಇಂಗಾಲವನ್ನು ಕಡಿಮೆ ಮಾಡುತ್ತೆ ರಿಮೋಟ್​ ಮತ್ತು ಹೈಬ್ರಿಡ್​ ಕೆಲಸ; ಮೈಕ್ರೋಸಾಫ್ಟ್​ ಅಧ್ಯಯನ

ಕಚೇರಿಗೆ ಹೋಗುವ ವಾಹನಗಳು ಬಿಡುವ ಇಂಗಾಲದ ಪ್ರಮಾಣ ಹೆಚ್ಚಿರುವ ಹಿನ್ನೆಲೆ ಈ ಕುರಿತು ಅಧ್ಯಯನ ಮಾಡಲಾಗಿದೆ.

How remote and hybrid work is important in reducing carbon

author img

By ETV Bharat Karnataka Team

Published : Sep 19, 2023, 3:29 PM IST

ಸ್ಯಾನ್​ ಪ್ರಾನ್ಸಿಸ್ಕೋ: ಆನ್​ಸೈಟ್​​​ (ಕಚೇರಿಯಲ್ಲೇ ಕಾರ್ಯನಿರ್ವಣೆ) ಕೆಲಸಕ್ಕಿಂತ ರಿಮೋಟ್​ ವರ್ಕ್​ನಿಂದ (ಕಚೇರಿಗೆ ಬರದೇ ಎಲ್ಲಿಂದಲಾದರೂ ಕೆಲಸ ಮಾಡುವ ಸೌಲಭ್ಯ) ಶೇ 54ರಷ್ಟು ಕಡಿಮೆ ಇಂಗಾಲದ ಉತ್ಪಾದನೆ ಆಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಈ ಕುರಿತು ನ್ಯಾಷನಲ್​ ಅಕಾಡೆಮಿ ಆಫ್​ ಸೈನ್ಸ್​ನಲ್ಲಿ ಪ್ರಕಟಿಸಲಾಗಿದೆ. ಹೈಬ್ರಿಡ್​​ ಕೆಲಸದಿಂದ ವಾರದಲ್ಲಿ ಎರಡರಿಂದ ನಾಲ್ಕು ದಿನ ಮನೆಯಲ್ಲಿ ಕೆಲಸ ಮಾಡುವುದರಿಂದ ಶೇ 11ರಿಂದ 29ರಷ್ಟು ಇಂಗಾಲವನ್ನು ಕಡಿಮೆ ಮಾಡಬಹುದು. ಕೇವಲ ಒಂದು ದಿನ ಮಾತ್ರ ಮನೆಯಿಂದಲೇ ಕಾರ್ಯ ನಿರ್ವಹಣೆ ಮಾಡುವುದರಿಂದ ಕೇವಲ 2ರಷ್ಟು ಇಂಗಾಲದ ಉತ್ಪಾದನೆ ಕಡಿಮೆ ಮಾಡಬಹುದು ಎಂದು ತೋರಿಸಿದೆ.

ಕೊರ್ನೆಲ್​ ಯುನಿವರ್ಸಿಟಿ ಮತ್ತು ಮೈಕ್ರೋಸಾಫ್ಟ್​​ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದಾರೆ. ಸಮೀಕ್ಷೆಗಳ ದತ್ತಾಂಶ ಮತ್ತು ಸಮಯ-ಬಳಕೆಯ ಹಂಚಿಕೆ, ಪ್ರಯಾಣ-ಅಲ್ಲದ ದೂರ ಮತ್ತು ಸಾರಿಗೆ ಆಯ್ಕೆ, ವಸತಿ ಶಕ್ತಿಯ ಬಳಕೆ, ಸಂವಹನ ಸಾಧನ ಬಳಕೆ, ಮನೆಯ ಸದಸ್ಯರ ಸಂಖ್ಯೆ ಮತ್ತು ಆಸನ ಹಂಚಿಕೆ ಮತ್ತು ಕಟ್ಟಡದ ಗಾತ್ರದ ಮಾದರಿಗಳನ್ನು ಅಧ್ಯಯನಕ್ಕೆ ಬಳಸಲಾಗಿದೆ.

ರಿಮೋಟ್​ ವರ್ಕ್​ನಿಂದ ಶೂನ್ಯ ಇಂಗಾಲ ಉತ್ಪಾದನೆಯಾಗುತ್ತದೆ. ಹೈಬ್ರೀಡ್​​ ವರ್ಕ್​ ಕೂಡ ಸಂಪೂರ್ಣವಾಗಿ ಲಾಭ ತೋರಿಸುವುದಿಲ್ಲ ಎಂದು ಅಧ್ಯಯನದ ಹಿರಿಯ ಲೇಖಕ ಫೆಂಗ್ವಿಯು ತಿಳಿಸಿದ್ದಾರೆ. ಹೈಬ್ರಿಡ್​​ ಕೆಲಸಗಾರರು ಕಚೇರಿಗೆ ಆಗಮಿಸುವಾಗ ಸೀಟು ಹಂಚಿಕೆ ಮೂಲಕ ಕಚೇರಿಯ ಸಂಪೂರ್ಣ ಹಾಜರಾತಿ ಪಡೆದರೂ ಇಂಗಾಲದ ಪ್ರಮಾಣವನ್ನು ಶೇಕಡಾ 28 ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.​

ಆನ್​ಸೈಟ್​​ ಕೆಲಸಗಾರರಿಗಿಂತ ಹೈಬ್ರಿಡ್​​ ಕೆಲಸಗಾರರ ವಸತಿ ದೂರ ಇದ್ದು, ಅವರು ಹೆಚ್ಚು ಪ್ರಯಾಣಿಸುತ್ತಾರೆ. ಅಧ್ಯಯನ ಪ್ರಕಾರ, ಕಂಪ್ಯೂಟರ್​​, ಫೋನ್​, ಇಂಟರ್ನೆಟ್​ ಬಳಕೆಯಂತಹ ಸಂವಹನ ತಂತ್ರಜ್ಞಾನಗಳಲ್ಲಿನ ಕಾರ್ಯ ನಿರ್ವಹಣೆಯ ಹೈಬ್ರಿಡ್​​ ಮತ್ತು ರಿಮೋಟ್​​ ವರ್ಕ್​​ಗಳು ಇಂಗಾಲದ ಮೇಲೆ ಕಡಿಮೆ ಪರಿಣಾಮವನ್ನು ಹೊಂದಿದೆ.

ರಿಮೋಟ್​​ ಮತ್ತು ಹೈಬ್ರಿಡ್​​ ಕೆಲಸವು ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ, ಇದರ ಪ್ರಯೋಜನಗಳನ್ನು ಹೆಚ್ಚಿಸಬೇಕಾ ಎಂಬುದು ಕಂಪನಿಗಳು ಮತ್ತು ನೀತಿ ತಯಾರಕರಿಗೆ ಬಿಟ್ಟ ವಿಚಾರವಾಗಿದೆ ಎಂದು ಮೈಕ್ರೋಸಾಫ್ಟ್​​ನ ಪ್ರಿನ್ಸಿಪಾಲ್​ ಅಪ್ಲೈಡ್​ ರಿಸರ್ಚ್​​ ಮ್ಯಾನೇಜರ್​​ ಲಾಂಗ್​​ಕಿ ಯಾಂಗ್​​ ತಿಳಿಸಿದ್ದಾರೆ.

ಜಾಗತಿಕವಾಗಿ ಪ್ರತಿಯೊಬ್ಬ ವ್ಯಕ್ತಿ, ದೇಶ ಮತ್ತು ಪ್ರತಿಯೊಂದು ವಲಯವೂ ರಿಮೋಟ್​ ಕೆಲಸದ ಅವಕಾಶವನ್ನು ಹೊಂದಿದೆ. ಇದರ ಪ್ರಯೋಜನ ಪಡೆದು ಜಗತ್ತನ್ನು ಹೇಗೆ ಬದಲಾಯಿಸಬಹುದು ಎಂಬುದರ ಸಂಬಂದ ನಮ್ಮ ಅರಿವನ್ನು ಹೆಚ್ಚಿಸಲು ನಾವು ಬಯಸುತ್ತೇವೆ ಎಂದು ಅಧ್ಯಯನದ ಪ್ರಮುಖ ಲೇಖಕ ಯಾಂಕ್ಯು ಟಾವೊ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ದಿನನಿತ್ಯ ಮನೆಯಲ್ಲಿ ಶುಚಿತ್ವಕ್ಕೆ ಬಳಸುವ ಉತ್ಪನ್ನದಲ್ಲಿದೆ ವಿಷಕಾರಿ ರಾಸಾಯನಿಕಗಳು; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.