ಮಲ್ಲಿಗೆ ಹಿತವಾದ ಸುಗಂಧ ಹೊಂದಿರುವುದರ ಜೊತೆಗೆ ಆರೋಗ್ಯಕ್ಕೆ ಪ್ರಯೋಜನವಾಗುವ ಹಲವಾರು ಗುಣಗಳನ್ನು ಹೊಂದಿದೆ. ಇದರ ಎಣ್ಣೆ ಚರ್ಮ, ಕೂದಲಿಗೆ ಅತ್ಯಂತ ಉಪಯೋಗಿ ಆಗಿದೆ. ಅಷ್ಟೇ ಅಲ್ಲ ಒಟ್ಟಾರೆ ಆರೋಗ್ಯಕ್ಕೂ ಇದು ಹೆಚ್ಚು ಪ್ರಯೋಜನಕಾರಿ. ಭಾರತದಲ್ಲಿ ಸಾಮಾನ್ಯವಾಗಿ 'ಸುಗಂಧ' ಎಂದು ಕರೆಯಲ್ಪಡುವ ಇದನ್ನು ಒತ್ತಡದಂತಹ ಕೆಲವು ಮಾನಸಿಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲು ಅರೋಮಾಥೆರಪಿಯಲ್ಲಿ ಬಳಸಲಾಗುತ್ತದೆ.
ನಿದ್ರಾಹೀನತೆಯನ್ನು ಗುಣಪಡಿಸಲು ಸಹ ಮಲ್ಲಿಗೆ ಎಣ್ಣೆ ಅಂದರೆ ಜಾಸ್ಮಿನ್ ಅನ್ನು ಬಳಸಲಾಗುತ್ತದೆ. ಆಯುರ್ವೇದದಲ್ಲಿ ಎಣ್ಣೆಯ ಜೊತೆಗೆ ಮಲ್ಲಿಗೆಯ ಹೂವುಗಳು, ಎಲೆಗಳು ಮತ್ತು ಬೇರುಗಳನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸಲಾಗುತ್ತಿದೆ.
ಇದು ನಮ್ಮ ಕೂದಲಿಗೆ ಹೇಗೆ ಪ್ರಯೋಜನಕಾರಿ?: ಕಾರ್ಬೋಹೈಡ್ರೇಟ್‌ಗಳು, ಫ್ಲೇವನಾಯ್ಡ್‌ಗಳು, ಟ್ಯಾನಿನ್‌ಗಳು ಮತ್ತು ಫೀನಾಲಿಕ್ ಸಂಯುಕ್ತಗಳು, ಗ್ಲೈಕೋಸೈಡ್‌ಗಳು ಮತ್ತು ಸಪೋನಿನ್‌ಗಳಂತಹ ಅಂಶಗಳು ಜಾಸ್ಮಿನ್ ಎಣ್ಣೆಯಲ್ಲಿ ಕಂಡುಬರುತ್ತವೆ ಎಂದು ಎಸೆನ್ಸಿಯಲ್ ಆಯಿಲ್ ತಜ್ಞ ಮತ್ತು ಅಮೆ ಆರ್ಗಾನಿಕ್ಸ್ ಲಿಮಿಟೆಡ್‌ನ CEO ವಿವರಣೆ ನೀಡಿದ್ದಾರೆ.
ಇದು ಕೂದಲಿಗೆ ನೈಸರ್ಗಿಕ ತೇವಾಂಶವನ್ನು ಒದಗಿಸುವುದರ ಜೊತೆಗೆ ಅವುಗಳನ್ನು ಬಲಪಡಿಸುತ್ತದೆ. ಇದರಿಂದಾಗಿಯೇ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವುದರಿಂದ ನೆತ್ತಿಯ ಮೇಲೆ ದಾಳಿ ಮಾಡುವ ಬ್ಯಾಕ್ಟೀರಿಯಾಗಳಿಂದ ಪರಿಹಾರವನ್ನು ಒದಗಿಸುತ್ತದೆ.
ಜಾಸ್ಮಿನ್ ಎಣ್ಣೆಯಿಂದ ತಲೆ ಮಸಾಜ್ಗೆ ಕೆಳಗಿನ ವಿಧಾನಗಳು ಪ್ರಯೋಜನಕಾರಿ
- ಜಾಸ್ಮಿನ್ ಎಣ್ಣೆಯು ಕೂದಲಿನ ನೈಸರ್ಗಿಕ ತೇವಾಂಶವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಶುಷ್ಕತೆ ಕಡಿಮೆ ಮಾಡುತ್ತದೆಯಲ್ಲದೇ ಹೊಳಪನ್ನೂ ನೀಡುತ್ತದೆ.
- ಜಾಸ್ಮಿನ್ ಹೇರ್ ಪ್ಯಾಕ್, ಕೂದಲು ಉದುರುವ ಹಾಗೂ ಇತರ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ.
- ಮಲ್ಲಿಗೆ ಎಣ್ಣೆಯಿಂದ ತಲೆ ಮಸಾಜ್ ಮಾಡಿಕೊಂಡರೆ, ರಕ್ತ ಪರಿಚಲನೆ ಹೆಚ್ಚಿಸುತ್ತದಲ್ಲದೇ ಕೂದಲು ಮತ್ತು ನೆತ್ತಿಗೆ ಸರಿಯಾದ ಪೋಷಣೆ ನೀಡುತ್ತದೆ.
- ಅದರ ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದಾಗಿ, ಮಲ್ಲಿಗೆ ಎಣ್ಣೆಯು ತಲೆಹೊಟ್ಟು ಮತ್ತು ಇತರ ನೆತ್ತಿಯ ಸೋಂಕಿನ ಸಂದರ್ಭದಲ್ಲಿ ಬಹಳ ಪರಿಣಾಮಕಾರಿಯಾಗಿದೆ.
- ಜಾಸ್ಮಿನ್ ಎಣ್ಣೆಯು ಧೂಳು, ಕೊಳಕು ಮತ್ತು ಮಾಲಿನ್ಯದ ಪರಿಣಾಮ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅವುಗಳಿಂದ ಉಂಟಾಗುವ ಹಾನಿಯನ್ನು ದೊಡ್ಡ ಪ್ರಮಾಣದಲ್ಲಿ ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಇದು ಕೂದಲಿಗೆ ನೈಸರ್ಗಿಕ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವುದರಿಂದ ಕಂಡಿಷನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
- ಎಣ್ಣೆಯಲ್ಲಿರುವ ಬೆಂಜೈಲ್ ಆಲ್ಕೋಹಾಲ್ ಪರೋಪಕಾರಿ ಜೀವಿಗಳು ಅಂದರೆ ಹೇನುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಇದು ಕಟುವಾದ ವಾಸನೆ ಹೊಂದಿರುವ ಕಾರಣ, ಅನೇಕ ಜನರು ಕೂದಲಿಗೆ ಹಚ್ಚಲು ಹಿಂಜರಿಯುತ್ತಾರೆ ಅಂತಾರೆ ನಂದಿತಾ. ಪರಿಮಳ ಆಗದವರು, ಮಲ್ಲಿಗೆ ಎಣ್ಣೆಯನ್ನು ತೆಂಗಿನಕಾಯಿ, ಆಲಿವ್ ಅಥವಾ ಜೊಜೊಬಾದಂತಹ ಯಾವುದೇ ಎಣ್ಣೆಯೊಂದಿಗೆ ಬೆರೆಸಿ ಉಪಯೋಗಿಸಬಹುದು ಅಂತಾರೆ ಕೂದಲು ಆರೈಕೆ ತಜ್ಞರು.
ಇದು ನಮ್ಮ ಚರ್ಮಕ್ಕೆ ಹೇಗೆ ಪ್ರಯೋಜನ ಉಂಟು ಮಾಡುತ್ತೆ?: ಉರಿಯೂತದ ಮತ್ತು ನಂಜುನಿರೋಧಕ ಅಂಶಗಳನ್ನು ತೊಡೆದು ಹಾಕಲು ಇದು ಸಹಕಾರಿಯಾಗುವ ವಿಟಮಿನ್ ಇ ಜಾಸ್ಮಿನ್ ಹೇರಳವಾಗಿ ಇದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಮಲ್ಲಿಗೆ ಎಣ್ಣೆಯು ಚರ್ಮಕ್ಕೆ ನೈಸರ್ಗಿಕ ತೇವಾಂಶವನ್ನು ಒದಗಿಸುವುದರೊಂದಿಗೆ ಮೊಡವೆ ಮತ್ತು ದದ್ದುಗಳಂತಹ ಸಮಸ್ಯೆಗಳಿಂದ ಪರಿಹಾರವನ್ನೂ ನೀಡುತ್ತದೆ.
ಇದು ಚರ್ಮದ ಮೇಲೆ ಅಕಾಲಿಕ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ. ಮೊಡವೆ ಗುರುತುಗಳು, ಗಾಯಗಳಿಂದ ಉಳಿದಿರುವ ಗುರುತುಗಳು ಮತ್ತು ಹಿಗ್ಗಿಸಲಾದ ಗುರುತುಗಳನ್ನು ಹಗುರಗೊಳಿಸಲು ಜಾಸ್ಮಿನ್ ಎಣ್ಣೆ ಸಹಾಯ ಮಾಡುತ್ತದೆ.
ಆಯುರ್ವೇದದಲ್ಲಿ ಜಾಸ್ಮಿನ್ನ ಪ್ರಯೋಜನಗಳು: ಆಯುರ್ವೇದದಲ್ಲಿ ಅದರ ಹೂವುಗಳು ಮಾತ್ರವಲ್ಲದೇ ಎಲೆಗಳು ಮತ್ತು ಬೇರುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ಭೋಪಾಲ್ ಮೂಲದ ಆಯುರ್ವೇದ ವೈದ್ಯ ಡಾ. ರಾಜೇಶ್ ಶರ್ಮಾ ಉಲ್ಲೇಖಿಸಿದ್ದಾರೆ.
ಹೊಟ್ಟೆಯಲ್ಲಿರುವ ಹುಳುಗಳು, ಆಮ್ಲೀಯತೆ, ಮೂಗಿನ ರಕ್ತಸ್ರಾವ, ಬಾಯಿಯ ಸಮಸ್ಯೆಗಳು, ಹಲ್ಲಿನ ಸಮಸ್ಯೆಗಳು, ಬಾಯಿ ಹುಣ್ಣು ಮತ್ತು ದುರ್ವಾಸನೆ, ತಲೆನೋವು, ಮೈಗ್ರೇನ್, ಕೆಮ್ಮು - ಕಫ, ಜ್ವರ, ಕಣ್ಣಿನ ಪೊರೆ, ಊತ, ವಾತ ದೋಷ ಮತ್ತು ಹೊಟ್ಟೆ ನೋವುಗಳಿಗೆ ಮಲ್ಲಿಗೆಯಿಂದ ತಯಾರಿಸಿದ ಔಷಧಗಳನ್ನು ಬಳಸಲಾಗುತ್ತದೆ ಅಂತಾರೆ ರಾಜೇಶ್ ಶರ್ಮಾ.
ನಂಜುನಿರೋಧಕ ಗುಣಗಳನ್ನು ಹೊಂದಿರುವುದರಿಂದ ಜಾಸ್ಮಿನ್ ಎಣ್ಣೆಯನ್ನು ಗಾಯಗಳಿಗೆ ಹಚ್ಚುವುದರಿಂದ ಅದು ಶೀಘ್ರವಾಗಿ ವಾಸಿಯಾಗುತ್ತದೆ. ನಿದ್ರಾಹೀನತೆ ಮತ್ತು ಒತ್ತಡ, ಖಿನ್ನತೆ, ಆಯಾಸ ಮತ್ತು ದೌರ್ಬಲ್ಯದಂತಹ ಇತರ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಜಾಸ್ಮಿನ್ ಬಳಕೆ ಮಾಡಲಾಗುತ್ತದೆ.
ಇದನ್ನು ಓದಿ: ಸೆಕ್ಸ್ನಿಂದ ದೂರವಿದ್ದೀರಾ? ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತೇ?