ಸಂಗೀತ ಮನುಷ್ಯನಿಗೆ ಎಷ್ಟು ಉಪಕಾರಿಯೋ ಅಷ್ಟೇ ಕುಣಿತವೂ ಸಹ. ನೃತ್ಯವು ನಾವು ಪಡುವ ಸಂತೋಷಗಳಲ್ಲಿ ಪ್ರಮುಖವಾದುದಾಗಿದೆ. ಡ್ಯಾನ್ಸ್ ಪ್ರಿಯರಂತೂ ಸಂಗೀತ ಕಿವಿಗೆ ಬಿದ್ದರೆ ಸಾಕು ತಮಗರಿವಿಲ್ಲದಂತೆಯೇ ತಮ್ಮ ದೇಹವನ್ನು ಕುಂತಲ್ಲೇ ಕುಣಿಯುವಂತೆ ಮಾಡುತ್ತಿರುತ್ತಾರೆ. ಬನ್ನಿ ಈ ಕುಣಿತದಿಂದಾಗುವ ಉಪಯೋಗಗಳು ಏನು ಎಂಬುದನ್ನು ಇಲ್ಲಿ ಕಂಡುಕೊಳ್ಳೋಣ.
ಪ್ರಮುಖವಾಗಿ ನಾವು ಆರಂಭದಲ್ಲಿ ಯಾವ ಅಂಶಗಳು ಎಷ್ಟು ಕ್ಯಾಲೋರಿ ಬರ್ನಿಂಗ್ ಮಾಡುತ್ತವೆ ಎಂಬುದನ್ನು ತಿಳಿಯೋಣ.
ನಡೆದಾಡುವುದು: 30 ನಿಮಿಷಗಳಲ್ಲಿ 100 ರಿಂದ 200 ಕ್ಯಾಲೋರಿಗಳು
ನೃತ್ಯ: 30 ನಿಮಿಷಗಳಲ್ಲಿ 200-400 ಕ್ಯಾಲೋರಿಗಳು
ಓಟ : 30 ನಿಮಿಷಗಳಲ್ಲಿ 200-400 ಕ್ಯಾಲೋರಿಗಳು
ಈಜು : 30 ನಿಮಿಷಗಳಲ್ಲಿ 200-250 ಕ್ಯಾಲೋರಿಗಳು
ಸೈಕ್ಲಿಂಗ್ : 30 ನಿಮಿಷಗಳಲ್ಲಿ 200-300 ಕ್ಯಾಲೋರಿಗಳು
30 ನಿಮಿಷಗಳ ಕಾಲ ನಡೆಯುವುದರ ಮೂಲಕ 100 ರಿಂದ 200 ಕ್ಯಾಲೊರಿ ಬರ್ನ್ ಆಗುವುದನ್ನು ನಾವು ನಿರೀಕ್ಷಿಸಬಹುದು. ಅದರಂತೆ ಓಡಲು ಅಥವಾ ಈಜಲು ಮುಂದಾದರೆ ಇದರ ಪ್ರಮಾಣ ಹೆಚ್ಚಾಗಲಿದೆ. ಅದಕ್ಕೂ ಮಿಗಿಲಾಗಿ ನಿರಂತರ ನೃತ್ಯವನ್ನು ಆರಿಸಿಕೊಂಡಾಗ ಬರೋಬ್ಬರಿ 400 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು ಎಂದು ಕಂಡುಕೊಳ್ಳಲಾಗಿದೆ. ನೃತ್ಯವು ಉತ್ತಮ ಫಲಿತಾಂಶಗಳನ್ನು ಹೊಂದಿದೆ. ಏಕೆಂದರೆ ಇದು ಎಲ್ಲ ದಿಕ್ಕುಗಳಲ್ಲಿ ಸ್ವಯಂಪ್ರೇರಿತ ಚಲನೆಯನ್ನು ಒಳಗೊಂಡಿರುತ್ತದೆ.
ನಮ್ಯತೆ, ಸಹಿಷ್ಣುತೆ ಮತ್ತು ಸಾಮರ್ಥ್ಯದ ಮೇಲೆ ಧನಾತ್ಮಕ ಪರಿಣಾಮ: ಕ್ಯಾಲೊರಿಗಳನ್ನು ಸುಡುವುದು ಮಾತ್ರವೇ ಅಲ್ಲ ಇದು ದೇಹದ ನಮ್ಯತೆ, ಸಹಿಷ್ಣುತೆ ಮತ್ತು ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಮೇಲಕ್ಕೆ - ಕೆಳಗೆ ಮತ್ತು ಅಕ್ಕಪಕ್ಕದ ಚಲನೆಗೆ ಅವಕಾಶ ಇರುವುದರಿಂದ ನೃತ್ಯವು ಕೆಳ ದೇಹದ ಕೀಲುಗಳು, ಸ್ನಾಯುಗಳು ಸಹ ಸಕ್ರಿಯಗೊಳಿಸುತ್ತದೆ. ಓಮ್ನಿಡೈರೆಕ್ಷನಲ್ ಚಲನೆಗಳು ಅನೇಕ ಸ್ನಾಯುರಜ್ಜುಗಳು ಮತ್ತು ಸಣ್ಣ ಸ್ನಾಯುಗಳಿಗೆ ಕೆಲಸ ನೀಡುತ್ತವೆ ಮತ್ತು ಅವುಗಳನ್ನು ಸಕ್ರಿಯಗೊಳಿಸುತ್ತವೆ.
ನೃತ್ಯಗಾರರು ಮತ್ತು ನೃತ್ಯಗಾರರಲ್ಲದವರ ನಡುವಿನ ಸಮತೋಲನ ಮತ್ತು ನಮ್ಯತೆಯ ಕುರಿತು ತುಲನಾತ್ಮಕ ಅಧ್ಯಯನ ನಡೆಸಲಾಗಿ, ನೃತ್ಯವು ಫಿಟ್‌ನೆಸ್ ಸಮತೋಲನ ಮತ್ತು ನಮ್ಯತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕಂಡುಕೊಳ್ಳಲಾಗಿದೆ. ಆಂಟೀರಿಯರ್ ಕ್ರೂಸಿಯೇಟ್ ಲಿಗಮೆಂಟ್ (ACL) ಗಾಯವು ಇತರ ಕ್ರೀಡಾ ಆಟಗಾರರಿಗಿಂತ ನೃತ್ಯಗಾರರಲ್ಲಿ ಕಡಿಮೆ ಎಂಬ ಮತ್ತೊಂದು ನಿರ್ಣಾಯಕ ಅಂಶವನ್ನು ಇದರಿಂದ ಅರಿಯಲಾಗಿದೆ.
ಮನಸ್ಸಿಗೆ ಹಲವು ಪ್ರಯೋಜನಗಳು: ಇತರ ದೈಹಿಕ ಚಟುವಟಿಕೆಯಂತೆ ನೃತ್ಯವು ನಿಮ್ಮ ಮನಸ್ಥಿತಿ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸುತ್ತದೆ. 2021 ರಲ್ಲಿ ಪ್ರಕಟವಾದ UCLA ಆರೋಗ್ಯ ಸಂಶೋಧನಾ ಅಧ್ಯಯನದ ಪ್ರಕಾರ, ನೃತ್ಯ ಮಾಡಲು ಮುಂದಾಗುವ ವ್ಯಕ್ತಿಗಳಿಗೆ ಉತ್ತಮ ಮಾನಸಿಕ ಆರೋಗ್ಯದ ಪರಿಣಾಮಗಳನ್ನು ಉಂಟುಮಾಡುತ್ತವೆ. ಆತಂಕ, ಖಿನ್ನತೆ ಮತ್ತು ಆಘಾತದಿಂದ ಬಳಲುತ್ತಿರುವ ಒಟ್ಟು 1,000 ರೋಗಿಗಳನ್ನು ಅಧ್ಯಯನದಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತು.
ಸುಮಾರು 98 ಪ್ರತಿಶತ ನೃತ್ಯಗಾರರ ಮಾನಸಿಕ ಆರೋಗ್ಯ ಅವರು ನೃತ್ಯವನ್ನು ಅಭ್ಯಾಸ ಮಾಡಿದ ನಂತರ ಸುಧಾರಿಸಿತು ಮತ್ತು ಅವರ ದೇಹವನ್ನು ಹರಿವಿನೊಂದಿಗೆ ಚಲಿಸುವಂತೆ ಮಾಡಿತು. ನೃತ್ಯವು ಸುಧಾರಿತ ಶಕ್ತಿ, ಉತ್ಸಾಹಭರಿತ ಮನಸ್ಥಿತಿ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಕೊಳ್ಳಲಾಗಿದೆ.
ಮೆದುಳಿನ ವೈಟ್ ಮ್ಯಾಟರ್ ಮೇಲೆ ಪ್ರಭಾವ: 'ಫ್ರಾಂಟಿಯರ್ಸ್ ಇನ್ ಏಜಿಂಗ್ ನ್ಯೂರೋಸೈನ್ಸ್' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಯಸ್ಸಾದ ಮಿದುಳಿನ ಬಿಳಿ ವಸ್ತುವಿನ ಮೇಲೆ ನಡೆದಾಡುವಿಕೆ, ಸ್ಟ್ರೆಚಿಂಗ್ ಮತ್ತು ನೃತ್ಯದ ಪರಿಣಾಮಗಳು ತಮ್ಮದೇ ಆದ ಪ್ರಭಾವ ಬೀರುತ್ತವೆ ಎಂದು ವರದಿ ಮಾಡಿದೆ. ವಯಸ್ಸಾದ ಜನರ ಮಿದುಳಿನಲ್ಲಿ ಬಿಳಿ ದ್ರವ್ಯ ಹೆಚ್ಚುತ್ತದೆ. ಮೆದುಳಿನಲ್ಲಿರುವ ಬಿಳಿ ದ್ರವ್ಯವು ಸಂಯೋಜಕ ಅಂಗಾಂಶಗಳಿಂದ ಮಾಡಲ್ಪಟ್ಟಿದ್ದು, ಅದು ಕಾಲಾನಂತರದಲ್ಲಿ ಹದಗೆಡಬಹುದು. ಇದರ ಪರಿಣಾಮ ಏನೆಂದರೆ ಸಂಸ್ಕರಣೆಯ ವೇಗ, ತಾರ್ಕಿಕತೆ ಮತ್ತು ನೆನಪಿಡುವ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಪರಿಣಾಮ ನೃತ್ಯದಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ನೃತ್ಯದ ಚಲನೆಗಳು ದೇಹ ಮತ್ತು ಮನಸ್ಸಿನ ಮೇಲೆ ಪ್ರಭಾವ ಬೀರಿತ್ತದೆ. 6 ವಾರಗಳ ಕಠಿಣ ನೃತ್ಯ ಸಂಯೋಜನೆಯ ನಂತರ ನೃತ್ಯದಲ್ಲಿ ಭಾಗವಹಿಸಿದ ವಯಸ್ಸಾದ ಜನರ ಬಿಳಿ ದ್ರವ್ಯವು ಸುಧಾರಿಸಿತು ಎಂದು ವರದಿಯಿಂದ ತಿಳಿದು ಬಂದಿದೆ.
ನೃತ್ಯದ ಮಾನಸಿಕ ಪ್ರಯೋಜನ: ನೃತ್ಯವು ದೈಹಿಕವಾಗಿ ಅಷ್ಟೇ ಅಲ್ಲ ಮಾನಸಿಕವಾಗಿಯೂ ಇದು ಸಹಕಾರಿ. ಹಲವು ವರ್ಷಗಳಿಂದ ಮತ್ತು ದಶಕಗಳಿಂದ ಚಿಕಿತ್ಸಕರು ಭಯಯವನ್ನು ದೂರ ಮಾಡಲು ನೃತ್ಯವನ್ನು ಅತ್ಯುತ್ತಮ ಚಿಕಿತ್ಸೆಯಾಗಿ ಶಿಫಾರಸು ಮಾಡಿದ್ದಾರೆ. ನೃತ್ಯವನ್ನು ಪ್ರಸ್ತಾಪಿಸುವ ತಾರ್ಕಿಕ ಅಂಶವೆಂದರೆ ಅಪರಿಚಿತರ ಸಾರ್ವಜನಿಕ ವಿಷಯಕ್ಕೆ ಬಂದಾದ ಅಥವಾ ಅವರ ಎದುರಿಗೆ ಬಂದಾಗ ಕಡಿಮೆ ಸ್ವಯಂ ಪ್ರಜ್ಞೆಯನ್ನು ಹೊಂದಿರುವವರು ಈ ನೃತ್ಯದಿಂದ ಅವರ ಮನಸ್ಸನ್ನು ಗೆಲ್ಲಬಹುದು. ನೃತ್ಯವು ಇತರರೊಂದಿಗೆ ಬೆರೆಯಲು ಮತ್ತು ಸಂಬಂಧವನ್ನು ಬೆಳೆಸಲು ಉತ್ತೇಜಿಸುತ್ತದೆ.
ಭೌತಿಕ ಸಂಪರ್ಕವನ್ನು ಹೆಚ್ಚಿಸುತ್ತದೆ: ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಹಾಗೆ ನೃತ್ಯವು ದೈಹಿಕ ಸಂಪರ್ಕವನ್ನು ಸುಧಾರಿಸುತ್ತದೆ. ಪಾಲುದಾರರೊಂದಿಗೆ ನೃತ್ಯ ಮಾಡಲು ಬಂದಾಗ ವಿಶಿಷ್ಟವಾದ ಪ್ರಯೋಜನಗಳನ್ನು ತರುವ ಸ್ಪರ್ಶವೂ ಹೆಚ್ಚಾಗಿ ಹಲವು ಪ್ರಯೋಜನಗಳನ್ನು ನೀಡಲಿದೆ. ಕೈಗಳನ್ನು ಹಿಡಿದಿಟ್ಟುಕೊಳ್ಳುವುದು, ಸೊಂಟವನ್ನು ಸ್ಪರ್ಶಿಸುವುದು ಮತ್ತು ಇತರ ನೃತ್ಯ ಸನ್ನೆಗಳು ಮನುಷ್ಯನ ದೈಹಿಕ ಸಂಪರ್ಕವನ್ನು ಕಾಪಾಡಿಕೊಳ್ಳಲು ಮತ್ತು ಸುಧಾರಿಸಲು ಸಹಾಯಕ. ಇದು ಉದ್ವೇಗ ಮತ್ತು ಆತಂಕವನ್ನು ನಿವಾರಿಸುತ್ತದೆ ಮತ್ತು ಉತ್ತಮ ಸಂಬಂಧಗಳ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.
ಇದನ್ನೂ ಓದಿ : ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣ : ಸಾಫ್ಟ್‌ವೇರ್ ಸಿದ್ಧಪಡಿಸಿದ್ದು 17 ವರ್ಷದ ಬಾಲಕ?