ಹೈದರಾಬಾದ್: ಹಠಾತ್ತನೆ ದೇಹ ಬಿಸಿಯಾಗಿ ಕುತ್ತಿಗೆ, ಮುಖ, ತಲೆ ತುಂಬಾ ಉರಿ ಶುರುವಾಗುತ್ತದೆ. ಇದೆಲ್ಲವೂ ಹಾಟ್ಫ್ಲ್ಯಾಷ್ನ ಲಕ್ಷಣಗಳು. ಇದು ಮಹಿಳೆಯರು ಮಾತ್ರವಲ್ಲದೇ ಪುರುಷರು ಕೂಡ ಅನುಭವಿಸುತ್ತಾರೆ. ಈ ಹಾಟ್ಫ್ಲ್ಯಾಷ್ ಹಾರ್ಮೋನುಗಳ ವ್ಯತ್ಯಾಸದಿಂದಲೂ ಬರುತ್ತದೆ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ.
ಋತುಬಂಧದ ಸಮಯದಲ್ಲಿ ಮಹಿಳೆಯರು ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅವುಗಳಲ್ಲಿ ಈ ಹಾಟ್ಫ್ಲ್ಯಾಷ್ ಕೂಡ ಒಂದಾಗಿದೆ. ದೇಹ ಏಕಾಏಕಿ ಬಿಸಿಯಾಗಿ ಬೆವರು, ಹೆದರಿಕೆ, ಬೇಸಿಗೆಯ ವೇಳೆ ಅನುಭವಿಸುವ ಶಕೆ ಚಳಿಗಾಲದಲ್ಲೂ ಅನುಭವಕ್ಕೆ ಬರುತ್ತದೆ. ತೀವ್ರವಾಗಿ ಬೆವರಿ ಬಟ್ಟೆ ಕೂಡ ಒದ್ದೆಯಾಗುತ್ತದೆ.
ಮಹಿಳೆಯರಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿ ಋತುಚಕ್ರ ಆರಂಭವಾದ ಬಳಿಕ ಋತುಬಂಧದ ನಂತರವೂ ಕಂಡುಬರುತ್ತದೆ. ಋತುಬಂಧದ ವೇಳೆಯೂ ಹಾಟ್ಫ್ಲ್ಯಾಷ್ ಉಂಟಾದಲ್ಲಿ ಅದು ಹಾರ್ಮೋನ್ಗಳ ಅಸಮತೋಲನದಿಂದಾದ ಕಾರಣವಾಗಿದೆ. ಇದು ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಇದು ಕಾಡುತ್ತದೆ.
ಮಹಿಳೆಯರಲ್ಲಿ ಹಾಟ್ಫ್ಲ್ಯಾಷ್ ಎಫೆಕ್ಟ್: ಮಹಿಳೆಯರಲ್ಲಿ ಋತುಬಂಧದ ವೇಳೆ ದೇಹದಲ್ಲಿ ಉಂಟಾಗುವ ಆಂತರಿಕ ರಕ್ತಸ್ರಾವ ಮತ್ತು ಈಸ್ಟ್ರೊಜೆನ್ಗಳಂತಹ ಕೆಲವು ಹಾರ್ಮೋನುಗಳ ಮಟ್ಟದಲ್ಲಿ ಅಸಮತೋಲನ ಉಂಟಾದಾಗ ದೇಹದ ಉಷ್ಣತೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಅತಿಯಾಗಿ ಬೆವರುವಿಕೆ, ಹೆದರಿಕೆ, ಶುಷ್ಕತೆ ಉಂಟಾಗುತ್ತದೆ. ಇದರಿಂದ ತಕ್ಷಣವೇ ಕೋಪಗೊಳ್ಳುವುದು, ಒತ್ತಡಕ್ಕೆ ಒಳಗಾಗುವುದನ್ನು ಮಹಿಳೆಯರಲ್ಲಿ ಈ ವೇಳೆ ಕಾಣಬಹುದು.
ಪುರುಷರಲ್ಲಿ ಯಾವಾಗ ಕಾಣುತ್ತೆ: ಹಾಟ್ಫ್ಲ್ಯಾಷ್ ಎಫೆಕ್ಟ್ ಮಹಿಳೆಯರಲ್ಲದೇ ಪುರುಷರಲ್ಲಿಯೂ ಇದು ಕಂಡುಬರುತ್ತದೆ. ಹಾರ್ಮೋನುಗಳಲ್ಲಾಗೋ ವ್ಯತ್ಯಾಸ ಇದಕ್ಕೆ ಕಾರಣವಾಗುತ್ತದೆ. ಅದರಲ್ಲೂ ಪುರುಷರಲ್ಲಿ ಸೆಕ್ಸ್ ಹಾರ್ಮೋನ್ ಆದ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾದಾಗ ಹಾಟ್ಫ್ಲ್ಯಾಷ್ ಹೆಚ್ಚಾಗಿ ಬಾಧಿಸುತ್ತದೆ.
"ಲೈಂಗಿಕ ಹಾರ್ಮೋನುಗಳ ವ್ಯತ್ಯಾಸದಿಂದಾಗಿ ಪಿತ್ತ ಮತ್ತು ವಾತದ ಸಮಸ್ಯೆಯಿಂದಲೂ ಕಾಣಿಸಿಕೊಳ್ಳುತ್ತದೆ. ಇದು ತೀರಾ ಚಳಿ ಇದ್ದ ಪ್ರದೇಶದಲ್ಲಿದ್ದರೂ ಈ ಹಾಟ್ಫ್ಲ್ಯಾಷ್ ಕಾಡುತ್ತದೆ. ಇದರ ಪರಿಣಾಮ ಮಹಿಳೆಯರಲ್ಲಿ ಹೆಚ್ಚು ಗೋಚರಿಸುತ್ತದೆ. ಅಸ್ವಸ್ಥತೆ, ಚಡಪಡಿಕೆ ಜೊತೆಗೆ ಯೋನಿಯಲ್ಲಿ ಶುಷ್ಕತೆಯನ್ನು ಅನುಭವಿಸುತ್ತಾರೆ ಎಂದು ವೈದ್ಯರಾದ ಮನೀಶಾ ಕಾಲೆ ಹೇಳುತ್ತಾರೆ.
ಹಾರ್ಮೋನುಗಳ ವ್ಯತ್ಯಾಸಕ್ಕೆ ಕಾರಣಗಳು
- ಅತಿ ಶೀಘ್ರ ಫಲಿತಾಂಶ ನೀಡುವ ಔಷಧಿಗಳ ಸೇವನೆ, ಅತಿಯಾದ ಸ್ಟಿರಾಯ್ಡ್ಗಳ ಬಳಕೆ
- ಯಾವುದೇ ಗಂಭೀರ ಕಾಯಿಲೆ ಅಥವಾ ಅದರ ಚಿಕಿತ್ಸೆಗೆ ನೀಡಲಾದ ಕಿಮೊಥೆರಪಿ
- ಮಸಾಲೆ ಪದಾರ್ಥ, ಮೆಣಸಿನಕಾಯಿ, ಎಣ್ಣೆಯಲ್ಲಿ ಕರಿದ ಆಹಾರ, ತಿಂಡಿ ಸೇವನೆ
- ಯಾವುದೇ ರೀತಿಯ ಆಹಾರ ಅಲರ್ಜಿಯಿಂದಾಗಿ.
- ಅತಿಯಾದ ಕೋಪ, ಭಯ, ಆತಂಕ, ಚಿಂತೆ ಮತ್ತು ಹೆದರಿಕೆ.
- ಆಲ್ಕೋಹಾಲ್, ಕೆಫಿನ್ ಮತ್ತು ಧೂಮಪಾನದ ಅತಿಯಾದ ಸೇವನೆ
ಹಾರ್ಮೋನುಗಳಲ್ಲಾಗುವ ವ್ಯತ್ಯಾಸದಿಂದಾಗಿ ಹಾಟ್ಫ್ಲ್ಯಾಷ್ ಕಾಣಿಸಿಕೊಳ್ಳುವುದು ಸಹಜ. ಇದನ್ನು ಸಂಪೂರ್ಣವಾಗಿ ತೊಡೆದು ಹಾಕುವುದು ಸಾಧ್ಯವಿಲ್ಲ. ಹಾರ್ಮೋನ್ ಥೆರಪಿ ಮತ್ತು ಕೆಲ ಚಿಕಿತ್ಸಾ ವಿಧಾನದಿಂದ ಕಡಿಮೆ ಮಾಡಬಹುದು. ಅಲ್ಲದೇ, ಉತ್ತಮ ಆಹಾರ ಮತ್ತು ಜೀವನಶೈಲಿಯಿಂದಲೂ ಈ ಸಮಸ್ಯೆ ಕಡಿಮೆ ಮಾಡಬಹುದು ಎಂದು ವೈದ್ಯರಾದ ಮನೀಶಾ ವಿವರಿಸುತ್ತಾರೆ.
ಓದಿ: ಮಧುಮೇಹಿಗಳಿಗೆ ಡಯಟ್ಗೆ ತಕ್ಕಂತೆ ರುಚಿಕರ ಆರೋಗ್ಯಕರ ಊಟದ ರೆಸಿಪಿಗಳಿವು..